For Quick Alerts
  ALLOW NOTIFICATIONS  
  For Daily Alerts

  ಧನುಷ್ ಮತ್ತು ಐಶ್ವರ್ಯಾ ವಿಚ್ಛೇದನಕ್ಕೆ ಆ ಬಾಲಿವುಡ್ ನಟಿ ಕಾರಣಾನಾ?

  |

  ಈ ಸೋಶಿಯಲ್ ಮೀಡಿಯಾ ಅದೆಷ್ಟೋ ಸಂಸಾರಗಳನ್ನು ಮುರಿದುಬಿಟ್ಟಿದೆ. ಎಲ್ಲಿಂದ ಎಲ್ಲಿಗೋ ಲಿಂಕ್‌ ಮಾಡಿ ಏನೇನೋ ಹೇಳಿ, ಹೊಸ ಹೊಸ ಕಥೆಗಳನ್ನು ಸೃಷ್ಟಿಸಿಬಿಡುತ್ತಾರೆ. ಕಾಲಿವುಡ್ ಪ್ರತಿಭಾನ್ವಿತ ನಟ ಧನುಷ್ ಈಗ ಬಾಲಿವುಡ್‌, ಹಾಲಿವುಡ್‌ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಧನುಷ್ ಡೈವೋರ್ಸ್ ವಿಚಾರದಿಂದ ಭಾರೀ ಸುದ್ದಿಯಲ್ಲಿದ್ದರು. ಜನವರಿ 17ರಂದು ನಟ ಧನುಷ್ ಮತ್ತು ರಜನಿಕಾಂತ್ ಪುತ್ರಿ ಐಶ್ವರ್ಯಾ ತಮ್ಮ ಡೈವೋರ್ಸ್‌ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದರು. 2004ರಲ್ಲಿ ಪ್ರೀತಿಸಿ ಮದುವೆ ಆಗಿದ್ದ ಜೋಡಿ 18 ವರ್ಷಗಳ ತಮ್ಮ ವೈವಾಹಿಕ ಜೀವನಕ್ಕೆ ಅಂತ್ಯ ಹಾಡಿದ್ದರು. ಆದರೆ ಡೈವೋರ್ಸ್‌ಗೆ ಕಾರಣ ಏನು ಅನ್ನುವುದನ್ನು ಯಾರೊಬ್ಬರು ಬಹಿರಂಗಪಡಿಸಿರಲಿಲ್ಲ.

  ಡೈವೋರ್ಸ್ ಘೋಷಣೆ ನಂತರ ತಾನಾಯ್ತು ತನ್ನ ಕೆಲಸ ಆಯ್ತು ಅಂತ ಧನುಷ್ ಸಿನಿಮಾಗಳಲ್ಲಿ ಬ್ಯುಸಿಯಾದರು. ಇದೀಗ ಧನುಷ್ ಮತ್ತು ಐಶ್ವರ್ಯ ದಾಂಪತ್ಯ ಮುರಿದು ಬೀಳಲು ಆ ನಟಿಯೇ ಕಾರಣ ಅನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ನಡೀತಿದೆ.

  ಹಾಲಿವುಡ್‌ 'ದಿ ಗ್ರೇ ಮ್ಯಾನ್'ನಲ್ಲಿ ಧನುಷ್ ಜೂನಿಯರ್ ಆರ್ಟಿಸ್ಟ್ ಪಾತ್ರ?ಹಾಲಿವುಡ್‌ 'ದಿ ಗ್ರೇ ಮ್ಯಾನ್'ನಲ್ಲಿ ಧನುಷ್ ಜೂನಿಯರ್ ಆರ್ಟಿಸ್ಟ್ ಪಾತ್ರ?

  ಸೆಲಬ್ರೆಟಿಗಳ ನಡುವೆ ಪ್ರೀತಿ ಎಷ್ಟು ಬೇಗ ಹುಟ್ಟುತ್ತೋ ಅಷ್ಟೇ ಬೇಗ ಮದುವೆ ಕೂಡ ಆಗುತ್ತಾರೆ. ಕೆಲವೊಮ್ಮೆ ಅಷ್ಟೇ ಬೇಗ ಡೈವೋರ್ಸ್‌ ಕೂಡ ಘೋಷಿಸಿ ಬಿಡುತ್ತಾರೆ. ಧನುಷ್‌ ಬಾಲಿವುಡ್ ನಟ ಅಕ್ಷಯ್ ಕುಮಾರ್ ಹಾಗೂ ಸಾರಾ ಅಲಿ ಖಾನ್ ಜೊತೆ 'ಅತ್ರಂಗಿರೇ' ಅನ್ನುವ ಸಿನಿಮಾದಲ್ಲಿ ನಟಿಸಿದ್ದರು. ಇತ್ತೀಚೆಗೆ 'ದಿ ಗ್ರೇ ಮ್ಯಾನ್' ಚಿತ್ರದ ಪ್ರಚಾರಕ್ಕಾಗಿ ಬಾಲಿವುಡ್ ನಿರ್ಮಾಪಕ ರಿತೇಶ್ ಸಿಧ್ವಾನಿ ಪ್ರಸ್ತುತ ಭಾರತದಲ್ಲಿರುವ ದಿ ರುಸ್ಸೋ ಬ್ರದರ್ಸ್ - ಜೋ ಮತ್ತು ಆಂಥೋನಿ ರುಸ್ಸೋ ಅವರಿಗೆ ಸ್ಟಾರ್-ಸ್ಟಡ್ ಪಾರ್ಟಿಯನ್ನು ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ನಟ ಧನುಷ್ ಸೇರಿದಂತೆ ಬಾಲಿವುಡ್‌ನ ಸಾಕಷ್ಟು ನಟನಟಿಯರು ಭಾಗಿ ಆಗಿದ್ದರು. ಪಾರ್ಟಿಯಲ್ಲಿ 'ಅತ್ರಂಗಿರೇ' ಚಿತ್ರದಲ್ಲಿ ಸಹನಟಿ ಆಗಿದ್ದ ಸಾರಾ ಅಲಿಖಾನ್ ಜೊತೆ ಧನುಷ್‌ ಕೈ ಕೈ ಹಿಡಿದು ಅಡ್ಡಾಡಿದ್ದರು. ಇದೇ ಈಗ ಭಾರೀ ಚರ್ಚೆ ಹುಟ್ಟಾಕ್ಕಿದೆ.

  ಧನುಷ್‌ ಮತ್ತು ಸಾರಾ ಬಹಳ ಕ್ಲೋಸ್ ಆಗಿ ಇದ್ದಿದನ್ನು ಕೆಲವರು ಟೀಕೆ ಮಾಡಲು ಶುರು ಮಾಡಿದ್ದಾರೆ. ಅದು ಎಲ್ಲಿಂದ ಎಲ್ಲಿಗೋ ಹೋಗಿ, ಧನುಷ್ ಮತ್ತು ಐಶ್ವರ್ಯಾ ಡೈವೋರ್ಸ್‌ಗೆ ಸಾರಾನೇ ಕಾರಣ ಅನ್ನುವಂತಹ ತಿರುವು ಪಡೆದುಕೊಂಡಿದೆ. ಆದರೆ ಧನುಷ್ ಅಭಿಮಾನಿಗಳು ಮಾತ್ರ ಕಾಮಾಲೆ ಕಣ್ಣಿಗೆ ಲೋಕವೆಲ್ಲ ಹಳದಿ ಅನ್ನುತ್ತಿದ್ದಾರೆ. ನಟ-ನಟಿ ಹೀಗೆ ಒಟ್ಟಿಗೆ ಆತ್ಮೀಯವಾಗಿ ಕಾಣಿಸಿಕೊಂಡರೆ ತಪ್ಪು ಅರ್ಥ ಕಲ್ಪಿಸುತ್ತೀರ. ಇದು ಸರೀನಾ ಅಂತ ಕೇಳುತ್ತಿದ್ದಾರೆ. ಆದರೆ ಧನುಷ್ ಮತ್ತು ಸಾರಾ ಒಟ್ಟೊಟ್ಟಿಗೆ ಓಡಾಡಿರೋ ಫೋಟೊಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚಕ್ಕರ್ ಹೊಡೀತಿದೆ.

   ವಿಚ್ಛೇದನದ ನೋವು ಮರೆತು ನಿರ್ದೇಶನಕ್ಕಿಳಿದ ಐಶ್ವರ್ಯಾ ರಜನಿಕಾಂತ್! ವಿಚ್ಛೇದನದ ನೋವು ಮರೆತು ನಿರ್ದೇಶನಕ್ಕಿಳಿದ ಐಶ್ವರ್ಯಾ ರಜನಿಕಾಂತ್!

   ಹಾಲಿವುಡ್ ಸಿನಿಮಾಗಳಲ್ಲಿ ಧನುಷ್ ಅಭಿನಯ

  ಹಾಲಿವುಡ್ ಸಿನಿಮಾಗಳಲ್ಲಿ ಧನುಷ್ ಅಭಿನಯ

  ಒಂದು ಕಾಲದಲ್ಲಿ 'ಇವನು ಹೀರೋನಾ ?' ಅಂತ ಮಾತನಾಡಿಕೊಂಡವರು ಬಾಯಿ ಮುಚ್ಚಿಕೊಳ್ಳುವಂತೆ ತನ್ನ ಪ್ರತಿಭೆಯಿಂದ ಪ್ರೇಕ್ಷಕರ ಮನಗೆದ್ದ ನಟ ಧನುಷ್. ತಮಿಳು ಸಿನಿಮಾದಲ್ಲಿ ನಟಿಸಿದ್ದಕ್ಕೆ ಕೆಲವರು ಕುಹಕವಾಡಿದ್ದರು. ಆದರೆ ಈಗ ಹಾಲಿವುಡ್ ಫಿಲ್ಮ್ ಮೇಕರ್ಸ್‌ ಧನುಷ್‌ನ ಕರೆದು ಅವಕಾಶ ಕೊಡುತ್ತಿದ್ದಾರೆ. ಈ ಹಿಂದೆ 'ದಿ ಎಕ್ಸ್‌ಟ್ರಾಡಿನರಿ ಜರ್ನಿ ಆಫ್ ದಿ ಫಕೀರ್' ಅನ್ನುವ ಹಾಲಿವುಡ್ ಕಾಮಿಡಿ ಚಿತ್ರದಲ್ಲಿ ಮಿಂಚಿದ್ದ ಧನುಷ್ ಈಗ 'ದಿ ಗ್ರೇಮ್ಯಾನ್' ಅನ್ನುವ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ನಟಿಸಿದ್ದಾರೆ.

   'ಅಸುರನ್' ಆಗಿ ರಾಷ್ಟ್ರಪ್ರಶಸ್ತಿ

  'ಅಸುರನ್' ಆಗಿ ರಾಷ್ಟ್ರಪ್ರಶಸ್ತಿ

  ಮೂರು ವರ್ಷಗಳ ಹಿಂದೆ ಧನುಷ್ ನಟನೆಯ 'ಅಸುರನ್' ಸಿನಿಮಾ ಹೊಸ ದಾಖಲೆ ಬರೆದಿತ್ತು. ವೆಟ್ರಿಮಾರನ್ ನಿರ್ದೇಶನದ ಈ ಸಿನಿಮಾ ಭಾಷೆಯ ಗಡಿಮೀರಿ ಸಿನಿಮಾ ಪ್ರೇಕ್ಷಕರ ಮನಗೆದ್ದಿತ್ತು. ದಕ್ಷಿಣ ತಮಿಳುನಾಡಿನಲ್ಲಿ ಮೇಲ್ಜಾತಿಯ ಸಮುದಾಯ ಕೆಳವರ್ಗದವರ ಮೇಲೆ ನಡೆಸುವ ಅಮಾನವೀಯ ಕ್ರೌರ್ಯವನ್ನು ಚಿತ್ರಿಸಿದ್ದು, ಈ ಸಿನಿಮಾದಲ್ಲಿ 60 ವರ್ಷದ ವೃದ್ಧನಾಗಿ ಮೂರು ಮಕ್ಕಳ ತಂದೆಯಾಗಿ ಧನುಷ್ ನಟನೆಯನ್ನು ಮರೆಯೋಕೆ ಸಾಧ್ಯವಿಲ್ಲ. ಈ ಚಿತ್ರದ ನಟನೆಗಾಗಿ ಧನುಷ್ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಿದ್ದರು.

   ತಮಿಳು- ತೆಲುಗು ಸಿನಿಮಾಗಳಲ್ಲಿ ಧನುಷ್

  ತಮಿಳು- ತೆಲುಗು ಸಿನಿಮಾಗಳಲ್ಲಿ ಧನುಷ್

  ಸದ್ಯ ಧನುಷ್ 'ತಿರುಚಿತ್ರಾಂಬಲಂ', 'ನಾನೇ ವರುವೇನ್' ಅನ್ನುವ ಎರಡು ತಮಿಳು ಸಿನಿಮಾಗಳು ಹಾಗೂ 'ಸರ್' ಅನ್ನುವ ಒಂದು ತೆಲುಗು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 'ಸರ್' ಸಿನಿಮಾ ತಮಿಳಿಗೂ ಡಬ್ ಆಗಿ ರಿಲೀಸ್‌ ಆಗಲಿದೆ. ಮತ್ತೊಂದ್ಕಡೆ ಬಾಲಿವುಡ್ ಚಿತ್ರದಲ್ಲಿ ನಟಿಸುವ ಬಗ್ಗೆಯೂ ಚರ್ಚೆ ನಡೀತಿದೆ.

  Recommended Video

  ಹೆಂಡತಿ ಕೈ ಹಿಡಿದು ಬರಮಾಡಿಕೊಂಡ ಸುದೀಪ್ | Vikrant Rona | Kiccha Sudeep | Priya Sudeep | *Press Meet
   'ದಕ್ಷಿಣದ ನಟ' ಎಂದು ನನಗೆ ಹೇಳಬೇಡಿ

  'ದಕ್ಷಿಣದ ನಟ' ಎಂದು ನನಗೆ ಹೇಳಬೇಡಿ

  ಮುಂಬೈನಲ್ಲಿ 'ದಿ ಗ್ರೇಮ್ಯಾನ್' ಸಿನಿಮಾ ಪ್ರೀಮಿಯರ್ ಶೋ ನಂತರ ಮಾತನಾಡಿದ ಧನುಷ್, ತಮ್ಮನ್ನು 'ದಕ್ಷಿಣ ನಟ ಎನ್ನುವ ಬದಲು ಭಾರತ ನಟ ಎಂದು ಕರೆಯಿರಿ. ಬದಲಾಗುತ್ತಿರುವ ಕಾಲದಲ್ಲಿ, ಈ ಜನಾಂಗೀಯ ಅಥವಾ ಪ್ರಾದೇಶಿಕ ಗುರುತು ಸರಿಯಲ್ಲ. ಕಲಾವಿದರನ್ನು ದಕ್ಷಿಣ ನಟರು ಅಥವಾ ಉತ್ತರ ನಟರು ಎಂದು ಕರೆಯುವುದಕ್ಕಿಂತ ಒಟ್ಟಾಗಿ ಭಾರತೀಯ ನಟರು ಎಂದು ಕರೆದರೆ ನಾನು ಅದನ್ನು ಪ್ರಶಂಸಿಸುತ್ತೇನೆ' ಎಂದು ಹೇಳಿದ್ದಾರೆ.

  English summary
  Is Sara Ali Khan Responsible For Dhanush And Aishwarya Rajinikanth Split, Know More.
  Monday, July 25, 2022, 10:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X