ನವೆಂಬರ್ 7ಕ್ಕೆ ಕಮಲ್ ಹಾಸನ್ 232ನೇ ಚಿತ್ರದ ಫಸ್ಟ್ ಲುಕ್!

'ವಿಶ್ವರೂಪಂ-2' ಚಿತ್ರದ ಬಳಿಕ ನಿರ್ದೇಶಕ ಶಂಕರ್ ಜೊತೆ 'ಇಂಡಿಯನ್-2' ಸಿನಿಮಾ ಮಾಡುತ್ತಿರುವ ಕಮಲ್ ಹಾಸನ್ ಈಗ ಮತ್ತೊಂದು ಚಿತ್ರಕ್ಕೆ ಸಂಬಂಧಿಸಿದಂತೆ ಸುದ್ದಿಯಲ್ಲಿದ್ದಾರೆ.

ಗ್ಲೋಬಲ್ ಸ್ಟಾರ್ ಕಮಲ್ ಹಾಸನ್ ಅವರ ಮುಂದಿನ ಚಿತ್ರವನ್ನು ಲೋಕೇಶ್ ಕನಕರಾಜ್ ನಿರ್ದೇಶನ ಮಾಡಲಿದ್ದಾರೆ. ನವೆಂಬರ್ 7 ರಂದು ಕಮಲ್ ಹಾಸನ್ ಅವರ 66ನೇ ಹುಟ್ಟುಹಬ್ಬದ ಪ್ರಯುಕ್ತ, ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

ಇದು ಕಮಲ್ ಹಾಸನ್ ವೃತ್ತಿ ಜೀವನದ 232ನೇ ಚಿತ್ರವಾಗಿದ್ದು, ಅನಿರುದ್ಧ್ ರವಿಚಂದ್ರನ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಸದ್ಯದ ಮಾಹಿತಿ ಪ್ರಕಾರ ಲೋಕೇಶ್-ಕಮಲ್ ಕಾಂಬಿನೇಷನ್ ಸಿನಿಮಾ ರಾಜಕೀಯ ಥ್ರಿಲ್ಲರ್ ಆಗಿದೆ ಎನ್ನಲಾಗಿದೆ.

Kamal Haasan 232nd Movie First Look Will Release on November 7th

ಸದ್ಯ ಲೋಕೇಶ್ ಕನಕರಾಜ್ ತಮಿಳು ನಟ ವಿಜಯ್ ನಟನೆಯ 'ಮಾಸ್ಟರ್' ಚಿತ್ರ ನಿರ್ದೇಶನ ಮಾಡುತ್ತಿದ್ದು, ಈ ಚಿತ್ರ ಕೊನೆಯ ಹಂತದಲ್ಲಿದೆ. ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಯುತ್ತಿದ್ದ ಕಮಲ್ ಹಾಸನ್ ಚಿತ್ರವನ್ನು ಆರಂಭಿಸಲಿದ್ದಾರೆ.

ಮತ್ತೊಂದೆಡೆ ಶಂಕರ್ ನಿರ್ದೇಶನದಲ್ಲಿ ಇಂಡಿಯನ್ 2 ಸಿನಿಮಾ ಕೆಲಸ ನಡೆಯುತ್ತಿದೆ. ಕಾಜಲ್ ಅಗರ್‌ವಾಲ್ ಮತ್ತು ರಕುಲ್ ಪ್ರೀತ್ ಸಿಂಗ್ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Recommended Video

ಎಲ್ಲರ ಮುಂದೆ ಅಭಿಮಾನಿಯನ್ನು ಪ್ರೀತಿಯಿಂದ ಮಾತನಾಡಿಸಿದ ಡಿ ಬಾಸ್ | Darshan | Munirathna | Filmibeat Kannada

More from Filmibeat

English summary
Super star Kamal Haasan and lokesh kanagaraj movie first look will release on November 7th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X