Don't Miss!
- News
Haath Se Haath Jodo: ಭಾರತ್ ಜೋಡೋ ಬೆನ್ನಲ್ಲೇ ಯುಪಿಯಲ್ಲಿ ಹಾಥ್ ಸೇ ಹಾಥ್ ಜೋಡೋ ಅಭಿಯಾನ ಆರಂಭಿಸಿದ ಕಾಂಗ್ರೆಸ್
- Sports
IND vs NZ: ಮುಂದಿನ 2 ಪಂದ್ಯಗಳು ಈತನಿಗೆ ನಿರ್ಣಾಯಕ; ದಿನೇಶ್ ಕಾರ್ತಿಕ್ ಎಚ್ಚರಿಕೆ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Finance
7th Pay Commission update news: ಕೇಂದ್ರ ಬಜೆಟ್‌ನಲ್ಲಿ 8ನೇ ವೇತನ ಆಯೋಗದ ಬಗ್ಗೆ ಘೋಷಣೆ?
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಣ್ಣಾವ್ರು ಚಾಲನೆ ನೀಡಿದ್ದ ಆ ಐಕಾನಿಕ್ ಸಿನಿಮಾಕ್ಕೆ 35 ವರ್ಷ: ಹಳೆ ನೆನಪಿಗೆ ಜಾರಿದ ಕಮಲ್
ಬಾಲನಟನಾಗಿ ಎಂಟ್ರಿಕೊಟ್ಟ ಕಮಲ್ ಹಾಸನ್ ತಮ್ಮ ಐವತ್ತು ವರ್ಷಗಳಿಗೂ ಮೀರಿದ ನಟನಾ ವೃತ್ತಿಯಲ್ಲಿ ಪ್ರಯೋಗಗಳನ್ನು ಮಾಡುತ್ತಲೇ ಬಂದಿದ್ದಾರೆ. ಒಂದೇ ವಿಧವಾದ ಪಾತ್ರಗಳಿಗೆ, ಕತೆಗಳಿಗೆ ಕಮಲ್ ಅಂಟಿಕೊಂಡಿದ್ದೇ ಇಲ್ಲ.
ಈ ಪ್ರಯೋಗದ ಹಾದಿಯಲ್ಲಿ ಹಲವು ಐಕಾನಿಕ್ ಸಿನಿಮಾಗಳನ್ನು ಕಮಲ್ ಹಾಸನ್ ನೀಡಿದ್ದಾರೆ ಅವುಗಳಲ್ಲಿ 'ಪುಷ್ಪಕ ವಿಮಾನ'ವೂ ಒಂದು.
ಮಾತೇ ಇರದ ಮೂಕಿ ಸಿನಿಮಾ 'ಪುಷ್ಪಕ ವಿಮಾನ' ಸಂಪೂರ್ಣವಾಗಿ ಬೆಂಗಳೂರಿನಲ್ಲಿಯೇ ಚಿತ್ರೀಕರಣವಾದ ಸಿನಿಮಾ. ಭಾರತದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾದ ಈ ಸಿನಿಮಾ ಬಿಡುಗಡೆ ಆಗಿ 35 ವರ್ಷಗಳು ಸಂಧಿವೆ. ಈ ಸಂದರ್ಭದಲ್ಲಿ ಕಮಲ್ ಹಾಸನ್ ಭಾವುಕವಾಗಿ ಟ್ವೀಟ್ ಒಂದನ್ನು ಮಾಡಿದ್ದಾರೆ.
ಸಿಂಗೀತಂ ಶ್ರೀನಿವಾಸ್ ನಿರ್ದೇಶಿಸಿ ಕಮಲ್ ನಟಿಸಿದ್ದ 'ಪುಷ್ಪಕ ವಿಮಾನ' ಸಿನಿಮಾ 1987ರ ನವೆಂಬರ್ 27 ರಂದು ಬಿಡುಗಡೆ ಆಗಿತ್ತು. ಆ ಕಾಲಕ್ಕೆ ಕೇವಲ 35 ಲಕ್ಷ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಆಗಿನ ಕಾಲಕ್ಕೆ 1 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿತ್ತು.
ಇಡೀ ಸಿನಿಮಾದ ಚಿತ್ರೀಕರಣ ಬೆಂಗಳೂರಿನಲ್ಲಿಯೇ ನಡೆದಿದ್ದು ವಿಶೇಷ. ಅದರಲ್ಲಿಯೂ ಸಿನಿಮಾದ ಬಹುತೇಕ ಚಿತ್ರೀಕರಣ ವಿಂಡ್ಸರ್ ಮ್ಯಾನರ್ ಹೋಟೆಲ್‌ನಲ್ಲಿಯೇ ನಡೆದಿತ್ತು. ಸಿನಿಮಾದ ಕೊನೆಯ ಆ ದೃಶ್ಯವನ್ನು ವಿಂಡ್ಸರ್ ಸರ್ಕಲ್ ಮೇಲೆ ಚಿತ್ರೀಕರಿಸಲಾಗಿತ್ತು. ಅದು ಐಕಾನಿಕ್ ದೃಶ್ಯದಂತೆ ಈಗಲೂ ಹಲವು ಸಿನಿಮಾ ಪ್ರಿಯರಿಗೆ ನೆನಪಿದೆ. ಅಂದಹಾಗೆ ಈ ಸಿನಿಮಾಕ್ಕೆ ಕ್ಲ್ಯಾಪ್ ಮಾಡಿದ್ದು ಡಾ ರಾಜ್‌ಕುಮಾರ್ ಅವರು.

ಸಿನಿಮಾ ಇದೀಗ 35 ವರ್ಷ ಪೂರೈಸಿರುವ ಬಗ್ಗೆ ಟ್ವೀಟ್ ಮಾಡಿರುವ ಕಮಲ್ ಹಾಸನ್, ''ನಾನು ಕೆಲಸ ಮಾಡಿರುವ ಅತ್ಯದ್ಭುತವಾದ ನಿರ್ದೇಶಕರಲ್ಲಿ ಅತ್ಯಂತ ಚಿಕ್ಕವರು ಸಿಂಗೀತಂ ಶ್ರೀನಿವಾಸ್. ನಮ್ಮ ಪ್ರಾಮಾಣಿಕ ಪ್ರಯತ್ನ 'ಪುಷ್ಪಕ್' ಈಗ ನಮಗಿಂತಲೂ ಹಳೆಯದ್ದು. ಅದಕ್ಕೀಗ 35 ವರ್ಷ ವಯಸ್ಸು. ಸರ್, ನಾವು ನಮ್ಮ ಕಲೆಗೆ ವಯಸ್ಸಾಗಲು ಬಿಡಬಾರದು. ನಮ್ಮ ಕಲೆಯನ್ನು ನಾವು ಯಂಗ್ ಆಗಿರುವಂತೆ ನೋಡಿಕೊಳ್ಳಬೇಕು. ನನಗೆ ಗೊತ್ತು ನೀವು ನನ್ನ ಮಾತಿಗೆ ನೀವು ನಗುತ್ತೀರೆಂದು. ಅಂದಹಾಗೆ ಇದರ ಸಂಗೀತ ನನ್ನ ಆಲ್ ಟೈಮ್ ಫೇವರೇಟ್'' ಎಂದಿದ್ದಾರೆ ಕಮಲ್ ಹಾಸನ್.
ಭಾಷೆಯೇ ಇಲ್ಲದ ಸಿನಿಮಾ ವಿವಿಧ ರಾಜ್ಯಗಳಲ್ಲಿ ಬೇರೆ-ಬೇರೆ ಹೆಸರುಗಳಲ್ಲಿ ಪ್ರದರ್ಶನ ಕಂಡಿತ್ತು. ಕನ್ನಡದಲ್ಲಿ 'ಪುಷ್ಪಕ ವಿಮಾನ', ತೆಲುಗಿನಲ್ಲಿ 'ಪುಷ್ಪಕ ವಿಮಾನಮು', ತಮಿಳಿನಲ್ಲಿ 'ಪೇಸು ಪದಂ', ಹಿಂದಿಯಲ್ಲಿ 'ಪುಷ್ಪಕ್', ಮಲಯಾಳಂನಲ್ಲಿ 'ಪುಷ್ಪಕ್ ವಿಮಾನಂ' ಎಲ್ಲ ರಾಜ್ಯಗಳಲ್ಲಿಯೂ ಈ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತ್ತು. ರಾಷ್ಟ್ರಪ್ರಶಸ್ತಿಯನ್ನೂ ಗಳಿಸಿಕೊಂಡಿತು.