Don't Miss!
- News
ಜನರ ಆಕ್ರೋಶಕ್ಕೆ ಮಣಿದ ಸರ್ಕಾರ: ನೇಪಾಳದಲ್ಲಿ ಇಳಿಯಿತು ಪೆಟ್ರೋಲ್, ಡೀಸೆಲ್ ಬೆಲೆ
- Sports
Eng vs NZ 3rd Test: ಪಂದ್ಯಕ್ಕೆ ಮಳೆ ಕಾಟ, ಸಂಕಷ್ಟದಲ್ಲಿ ನ್ಯೂಜಿಲೆಂಡ್
- Technology
ಇನ್ಸ್ಟಾಗ್ರಾಮ್ನಲ್ಲಿ ಬೇರೆಯವರ ಲಾಸ್ಟ್ ಸೀನ್ ನೋಡುವುದು ಹೇಗೆ?
- Finance
ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಮೇಲೆ ದಂಡ ವಿಧಿಸಿದ ಆರ್ಬಿಐ
- Lifestyle
18 ವರ್ಷಗಳ ಬಳಿಕ ಬರಿಗಣ್ಣಿಗೆ ಗೋಚರಿಸುತ್ತಿದೆ 5 ಗ್ರಹಗಳ ಸಂಯೋಗದ ಅಪರೂಪದ ದೃಶ್ಯ: ನೋಡಲು ಮಿಸ್ ಮಾಡದಿರಿ
- Automobiles
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
- Education
SSC MTS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
'ಬಾಹುಬಲಿ 2' ರೆಕಾರ್ಡ್ ಮುರಿದ ಕಮಲ್ ಹಾಸನ್ 'ವಿಕ್ರಂ'!
ನಟ ಕಮಲ್ ಹಾಸನ್ ಅಭಿನಯದ 'ವಿಕ್ರಂ' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಮೂಲಕ ಕಮಲ್ ಹಾಸನ್ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಅದೇ ಹಳೇ ಸ್ಟೈಲ್‌ನಲ್ಲಿ ರಗಡ್ ಲುಕ್‌ನಲ್ಲಿ 'ವಿಕ್ರಂ' ಮೂಲಕ ರೀ ಎಂಟ್ರಿ ಕೊಟ್ಟಿದ್ದಾರೆ ನಟ ಕಮಲ್ ಹಾಸನ್. ಈ ಚಿತ್ರ ಕಮಲ್ ಹಾಸನ್ ಸಿನಿಮಾ ಜರ್ನಿಯಲ್ಲಿ ಹೊಸ ದಾಖಲೆ ಬರೆದಿದೆ.
ನಿರೀಕ್ಷೆ ಮಟ್ಟವನ್ನು ಮೀರಿ ವಿಕ್ರಂ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಕಮಲ್ ಹಾಸನ್ ಜೊತೆಗೆ ನಿರ್ದೇಶಕ ಲೊಕೇಶ್ ಕನಗರಾಜ್ ನಿರ್ದೇಶನಕ್ಕೆ ಜನರು ಸೈ ಎನ್ನುತ್ತಿದ್ದಾರೆ. ನಟ ಕಮಲ್ ಹಾಸನ್ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಹಲವು ವರ್ಷಗಳ ಗ್ಯಾಪ್ ಬಳಿಕ ಬಂದಿರುವ ಕಮಲ್ ಹಾಸನ್ ಕಮಾಲ್ ಮಾಡುತ್ತಿದ್ದಾರೆ.
2022ರ
ತಮಿಳಿನ
ಅತೀ
ಹೆಚ್ಚು
ಗಳಿಕೆ
ಕಂಡ
ಸಿನಿಮಾ
'ವಿಕ್ರಂ'?
'ಕೆಜಿಎಫ್
2',
'ಬೀಸ್ಟ್'
ಹಿಂದಿಕ್ಕಿದ್ರಾ
ಕಮಲ್?
ಸದ್ಯ ಒಂದೊಂದೇ ದಾಖಲೆಗಳನ್ನು ಮಾಡುತ್ತಾ, ಒಂದೊಂದೇ ದಾಖಲೆಗಳನ್ನು ಮುರಿಯುತ್ತಿದ್ದಾರೆ. ನಟ ಕಮಲ್ ಹಾಸನ್ ವೃತ್ತಿ ಬದುಕಿನಲ್ಲಿ ಅತ್ಯಂತ ದೊಡ್ಡ ಯಶಸ್ಸು ಕಂಡ ಸಿನಿಮಾ 'ವಿಕ್ರಂ' ಎನಿಸಿಕೊಂಡಿದೆ. ಈ ಸಿನಿಮಾ ರಾಜಮೌಳಿಯ 'ಬಾಹುಬಲಿ 2' ಚಿತ್ರದ ರೆಕಾರ್ಡ್ ಮುರಿದಿದೆ. ಅದು ಹೇಗೆ ಎನ್ನುವುದನ್ನು ಮುಂದೆ ಓದಿ...
10
ದಿನ
300
ಕೋಟಿ:
ಕಮಾಲ್
ಮಾಡಿದ
ಕಮಲ್
ಹಾಸನ್
'ವಿಕ್ರಂ'

350 ಕೋಟಿ ರೂ. ದಾಟಿದ ವಿಕ್ರಂ!
ತಮಿಳು ಚಿತ್ರ 'ವಿಕ್ರಂ' ದೊಡ್ಡ ಮಟ್ಟದಲ್ಲಿ ಓಪನಿಂಗ್ ಪಡೆದುಕೊಂಡಿದೆ. ಅಂತೆಯೇ ಸಿನಿಮಾದ ಗಳಿಕೆ ಕೂಡ ಉತ್ತಮ ರೀತಿಯಲ್ಲಿ ಇದೆ. ಸಿನಿಮಾ ರಿಲೀಸ್ ಆಗಿ ಎರಡು ವಾರಗಳು ಆಗುತ್ತಿದ್ದರೂ ಕೂಡ, ಸಿನಿಮಾದ ಗಳಿಕೆ ಹೆಚ್ಚುತ್ತಲೇ ಇದೆ. 'ವಿಕ್ರಂ' 16ನೇ ದಿನಕ್ಕೆ 352.17 ಕೋಟಿ ರೂ. ಕಲೆ ಹಾಕಿದೆ. ಈ ಮೂಲಕ ತಮಿಳಿನ ನಂಬರ್ 1 ಸಿನಿಮಾ ಆಗಿದೆ.

'ಬಾಹುಬಲಿ 2' ದಾಖಲೆ ಮುರಿದ 'ವಿಕ್ರಂ'!
ತಮಿಳು ನಾಡಿನಲ್ಲಿ ಅತಿ ಹೆಚ್ಚು ಗಳಿಕೆ ಕಂಡ, ತಮಿಳಿನ ಸಿನಿಮಾ ಎನ್ನುವ ಹೆಗ್ಗಳಿಕೆಗೆ 'ವಿಕ್ರಂ' ಪಾತ್ರವಾಗಿದೆ. ಯಾಕೆಂದರೆ ಈ ಹಿಂದೆ ತಮಿಳುನಾಡಿನಲ್ಲಿ ಅತಿ ಹೆಚ್ಚು ಗಳಿಕೆ ಕಂಡಿದ್ದ 'ಬಾಹುಬಲಿ 2' ಸಿನಿಮಾದ ರೆಕಾರ್ಡ್ ಬ್ರೇಕ್ ಮಾಡಿದೆ. ತಮಿಳು ನಾಡಿನಲ್ಲಿ 'ವಿಕ್ರಂ' ಒಟ್ಟು 153.65 ಕೋಟಿ ರೂ. ಗಳಿಸಿದೆ. ಈ ಮೂಲಕ ತಮಿಳಿಗೆ ಡಬ್ ಆಗಿ, ತಮಿಳುನಾಡಿನಲ್ಲಿ ತೆಲುಗಿನ 'ಬಾಹುಬಲಿ 2' ಸಿನಿಮಾ ಮಾಡಿದ್ದ ದಾಖಲೆಯನ್ನು ಮುರಿದು ಹಾಕಿ, ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ.

ಕರ್ನಾಟಕದಲ್ಲಿ 'ವಿಕ್ರಂ' ಬಾಚಿದ್ದೆಷ್ಟು!
ತಮಿಳುನಾಡು- 153.65 ಕೋಟಿ ರೂ.
ಆಂಧ್ರಪ್ರದೇಶ/ತೆಲಂಗಾಣ- Rs 25.91 ಕೋಟಿ ರೂ.
ಕರ್ನಾಟಕ- 18.40 ಕೋಟಿ ರೂ.
ಕೇರಳಾ- 33.75 ಕೋಟಿ ರೂ.
ಓವರ್‌ಸೀಸ್- 111.91 ಕೋಟಿ ರೂ.

ವಿಕ್ರಂ ಬ್ರೇಕ್ 'ಕೆಜಿಎಫ್' ರೆಕಾರ್ಡ್!
'ಬಾಹುಬಲಿ' ಬಳಿಕ ಹೆಚ್ಚು ಸದ್ದು ಮಾಡಿದ್ದು, 'ಕೆಜಿಎಫ್ 2'. ಕನ್ನಡದ 'ಕೆಜಿಎಫ್ 2' ತಮಿಳು ನಾಡಿನಲ್ಲಿ ಉತ್ತಮ ಗಳಿಕೆ ಕಂಡಿತ್ತು. ಆದರೆ 'ವಿಕ್ರಂ' ಸಿನಿಮಾ 'ಕೆಜಿಎಫ್ 2' ಸಿನಿಮಾವನ್ನು ಹಿಂದಿಕ್ಕಿ ತಮಿಳುನಾಡಿನಲ್ಲಿ ಹಲವು ದಾಖಲೆಗಳನ್ನು ಬರೆದಿದೆ. ಕೇವಲ ತಮಿಳುನಾಡಿನಲ್ಲಿಯೇ 153.65 ಕೋಟಿ ರೂ ಕಲೆಕ್ಷನ್ ಮಾಡಿದೆ. ಈ ಮೂಲಕ ಅತೀ ಹೆಚ್ಚು ಗಳಿಕೆ ಕಂಡ ತಮಿಳು ಸಿನಿಮಾ ಎನ್ನುವ ಪಟ್ಟಿ ಸೇರಿದೆ.