For Quick Alerts
  ALLOW NOTIFICATIONS  
  For Daily Alerts

  ಹಿಂದಿ ಡಬ್ಬಿಂಗ್ ಹಕ್ಕು: ಶೂಟಿಂಗ್ ಮುಂಚೆಯೇ 'ವಿಕ್ರಂ'ಗೆ ಭರ್ಜರಿ ಬೆಲೆ

  |

  ಸೂಪರ್ ಸ್ಟಾರ್ ಕಮಲ್ ಹಾಸನ್ ನಟಿಸುತ್ತಿರುವ 'ವಿಕ್ರಂ' ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. ಲಾಕ್‌ಡೌನ್‌ನಿಂದ ವಿನಾಯಿತಿ ಸಿಕ್ಕ ಬಳಿಕ ಶೂಟಿಂಗ್ ಶುರು ಮಾಡಿರುವ ಚಿತ್ರತಂಡ ಮೇಕಿಂಗ್ ಹಂತದಿಂದಲೇ ಭರ್ಜರಿ ಸುದ್ದಿಗಳನ್ನು ಕೊಡ್ತಿದೆ.

  ಜುಲೈ 16 ರಂದು ಚಿತ್ರದ ಪೂಜೆ ನೆರವೇರಿಸಿ ಮೊದಲ ದಿನ ಶೂಟಿಂಗ್ ಆರಂಭಿಸಿದ್ದ 'ವಿಕ್ರಂ' ಸಿನಿಮಾದ ಹಿಂದಿ ಡಬ್ಬಿಂಗ್ ಹಕ್ಕು ಮಾರಾಟವಾಗಿರುವ ಬಗ್ಗೆ ವರದಿಯಾಗಿದೆ. ಚಿತ್ರೀಕರಣ ಮುಗಿಯುವುದಕ್ಕೂ ಮುಂಚೆಯೇ ಹಿಂದಿ ಡಬ್ಬಿಂಗ್ ಹಕ್ಕು ಸೇಲ್ ಆಗಿದ್ದು, ಗೋಲ್ಡ್‌ಮೈನ್ಸ್ ಟೆಲಿಫಿಲಂ ಸಂಸ್ಥೆ 37 ಕೋಟಿ ನೀಡಿ ಹಕ್ಕು ಖರೀದಿ ಮಾಡಿದೆ ಎಂದು ಹೇಳಲಾಗಿದೆ.

  ತಮಿಳಿನಲ್ಲಿ ತಯಾರಾಗುತ್ತಿರುವ ಈ ಚಿತ್ರ ತೆಲುಗಿನಲ್ಲಿ ಡಬ್ ಆಗುವ ಸಾಧ್ಯತೆ ಇದೆ. ಇದರ ಜೊತೆಗೆ ಹಿಂದಿಗೂ ಡಬ್ ಆಗುವುದು ಖಚಿತವಾಗಿದೆ. ಅಂದ್ಹಾಗೆ, ಕಮಲ್ ಹಾಸನ್ ನಟಿಸುತ್ತಿರುವ 232ನೇ ಚಿತ್ರ ಇದಾಗಿದ್ದು, 'ಮಾಸ್ಟರ್' ಚಿತ್ರದ ನಂತರ ಲೋಕೇಶ್ ಕನಕರಾಜ್ ನಿರ್ದೇಶನ ಮಾಡ್ತಿದ್ದಾರೆ.

  'ಮತ್ತೆ ಹೈಸ್ಕೂಲ್‌ಗೆ ಬಂದಂತಿದೆ': ಚಿತ್ರೀಕರಣ ಪ್ರಾರಂಭಿಸಿದ ಕಮಲ್'ಮತ್ತೆ ಹೈಸ್ಕೂಲ್‌ಗೆ ಬಂದಂತಿದೆ': ಚಿತ್ರೀಕರಣ ಪ್ರಾರಂಭಿಸಿದ ಕಮಲ್

  ರಾಜ್ ಕಮಲ್ ಫಿಲಂಸ್ ಬ್ಯಾನರ್‌ನಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಖುದ್ದು ಕಮಲ್ ಹಾಸನ್ ಬಂಡವಾಳ ಹಾಕುತ್ತಿದ್ದಾರೆ. ಇದೊಂದು ಪೊಲಿಟಿಕಲ್ ಥ್ರಿಲ್ಲರ್ ಆಗಿದ್ದು, ವಿಜಯ್ ಸೇತುಪತಿ, ಫಾಹದ್ ಫಾಸಿಲ್ ಪಾತ್ರಗಳ ಬಗ್ಗೆ ಕುತೂಹಲ ಹೆಚ್ಚಿದೆ. ಇನ್ನು ಮಲಯಾಳಂ ಇಂಡಸ್ಟ್ರಿಯ ಖ್ಯಾತ ನಟ ನರೈನ್ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮುಂದೆ ಓದಿ....

  ಮೊದಲ ದಿನ ಸಂತಸ ಹಂಚಿಕೊಂಡಿದ್ದ ನಟ

  ಮೊದಲ ದಿನ ಸಂತಸ ಹಂಚಿಕೊಂಡಿದ್ದ ನಟ

  ಮೊದಲ ದಿನ ಚಿತ್ರೀಕರಣ ವೇಳೆ ಟ್ವಿಟ್ಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದ ಕಮಲ್ ಹಾಸನ್, ''ವಿಕ್ರಂ ಮೊದಲ ದಿನದ ಚಿತ್ರೀಕರಣ ಆರಂಭ. ಮತ್ತೆ ಹೈಸ್ಕೂಲ್‌ಗೆ ಬಂದ ಅನುಭವ. ನನ್ನ 50 ವರ್ಷದ ವೃತ್ತಿ ಜೀವನದಲ್ಲಿ ನಟನೆಯಿಂದ ಇಷ್ಟು ದೂರ ಉಳಿದಿದ್ದು ಇದೇ ಮೊದಲ. ರಾಜ್‌ ಕಮಲ್ ಫಿಲಂಸ್ ಅಡಿಯಲ್ಲಿ ಕೆಲಸ ಮಾಡಲಿರುವ ನನ್ನ ಒಡನಾಡಿಗಳಿಗೆ ಸ್ವಾಗತ ಬಯಸುತ್ತೇನೆ. ವಿಜಯ್ ಸೇತುಪತಿ, ಲೋಕೇಶ್ ಕನಕರಾಜ್ ಹಾಗೂ ಫಾಹದ್ ಫಾಸಿಲ್‌ಗೆ ವಿಶೇಷ ಸ್ವಾಗತ ಕೋರುತ್ತೇನೆ'' ಎಂದಿದ್ದರು.

  ಕೆಜಿಎಫ್ ಸಾಹಸ ನಿರ್ದೇಶಕರ ಎಂಟ್ರಿ

  ಕೆಜಿಎಫ್ ಸಾಹಸ ನಿರ್ದೇಶಕರ ಎಂಟ್ರಿ

  ಇನ್ನು ಕೆಜಿಎಫ್, ರಾಬರ್ಟ್ ಸಿನಿಮಾಗಳಿಗೆ ಸಾಹಸ ನಿರ್ದೇಶನ ಮಾಡಿರುವ ಅನ್ಬು-ಅರಿವು ಮಾಸ್ಟರ್‌ಗಳು ವಿಕ್ರಂ ಚಿತ್ರದಲ್ಲಿ ಕೆಲಸ ಮಾಡ್ತಿದ್ದಾರೆ. 2013ರಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅನ್ಬು ಮತ್ತು ಅರಿವ್ ತಮಿಳು, ತೆಲುಗು, ಕನ್ನಡ ಹಾಗೂ ಬಾಲಿವುಡ್‌ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಮದ್ರಾಸ್, ಕಬಾಲಿ, ಕೆಜಿಎಫ್, ರಾಬರ್ಟ್, ಧ್ರುವ, ಇರು ಮುಗನ್, ಖೈದಿ, ಸಲ್ಮಾನ್ ಖಾನ್ ರಾಧೆ ಸಿನಿಮಾ ಸೇರಿದಂತೆ ಹಲವು ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಕೆಜಿಎಫ್ ಚಿತ್ರದ ಸಾಹಸಕ್ಕಾಗಿ 2019ರ ರಾಷ್ಟ್ರ ಪ್ರಶಸ್ತಿ ಸಹ ಲಭಿಸಿದೆ.

  'ವಿಕ್ರಂ' ಫಸ್ಟ್ ಲುಕ್: ಒಂದು ಪೋಸ್ಟರ್, ಮೂರು ಸ್ಟಾರ್ ನಟರು'ವಿಕ್ರಂ' ಫಸ್ಟ್ ಲುಕ್: ಒಂದು ಪೋಸ್ಟರ್, ಮೂರು ಸ್ಟಾರ್ ನಟರು

  ಇಂಡಿಯನ್ 2 ವಿವಾದ

  ಇಂಡಿಯನ್ 2 ವಿವಾದ

  ಈ ಚಿತ್ರ ಹೊರತುಪಡಿಸಿ ಶಂಕರ್ ಜೊತೆ ಇಂಡಿಯನ್-2 ಸಿನಿಮಾದಲ್ಲಿ ಕಮಲ್ ಹಾಸನ್ ನಟಿಸುತ್ತಿದ್ದಾರೆ. ಚಿತ್ರದ ಅರ್ಧದಷ್ಟು ಚಿತ್ರೀಕರಣ ಮಾಡಿರುವ ಈ ಸಿನಿಮಾ ನಿರ್ಮಾಪಕ-ನಿರ್ದೇಶಕರ ನಡುವಿನ ವ್ಯವಹಾರಿಕ ವಿವಾದಿಂದ ತಾತ್ಕಲಿಕವಾಗಿ ನಿಂತಿದೆ. ಚಿತ್ರದ ನಿರ್ಮಾಪಕ ಲೈಕಾ ಪ್ರೊಡಕ್ಷನ್ ಸಂಸ್ಥೆ ನಿರ್ದೇಶಕ ಶಂಕರ್ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದು, ಸಿನಿಮಾ ಮುಗಿಸಿಕೊಡುವಂತೆ ಬೇಡಿಕೆಯಿಟ್ಟಿದ್ದಾರೆ. ಈ ಸಂಬಂಧ ಮದ್ರಾಸ್ ಮತ್ತು ಹೈದರಾಬಾದ್‌ ನ್ಯಾಯಾಲಯದಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.

  ದೃಶ್ಯಂ 2 ರಿಮೇಕ್‌ನಲ್ಲಿ ಕಮಲ್ ಹಾಸನ್?

  ದೃಶ್ಯಂ 2 ರಿಮೇಕ್‌ನಲ್ಲಿ ಕಮಲ್ ಹಾಸನ್?

  ಇನ್ನು ಮಲಯಾಳಂ ಹಿಟ್ ಚಿತ್ರ 'ದೃಶ್ಯಂ-2' ತಮಿಳಿನಲ್ಲಿ ರಿಮೇಕ್ ಆಗಲಿದ್ದು, ಕಮಲ್ ಹಾಸನ್ ಕಾಣಿಸಿಕೊಳ್ಳಲಿದ್ದಾರೆ. ಮೋಹನ್ ಲಾಲ್ ನಟನೆಯಲ್ಲಿ ತೆರೆಕಂಡಿದ್ದ ದೃಶ್ಯಂ 2 ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ನಿರೀಕ್ಷೆಯಂತೆ ಈ ಚಿತ್ರದ ಉಳಿದ ಭಾಷೆಗಳಲ್ಲಿ ರಿಮೇಕ್ ಆಗುತ್ತಿದೆ. ತಮಿಳಿನಲ್ಲಿ ಕಮಲ್ ಹಾಸನ್, ತೆಲುಗಿನಲ್ಲಿ ವೆಂಕಟೇಶ್, ಕನ್ನಡದಲ್ಲಿ ರವಿಚಂದ್ರನ್ ಹಾಗೂ ಹಿಂದಿಯಲ್ಲಿ ಅಜಯ್ ದೇವಗನ್ ನಟಿಸಲಿದ್ದಾರೆ.

  English summary
  Kamal Haasan's Vikram movie Hindi dubbing rights bagged by Goldmines Telefilms for a smashing high price of 37 CR.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X