Just In
Don't Miss!
- News
ದೆಹಲಿ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರದ ನೀತಿಯೇ ಕಾರಣ: ದೀದಿ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ದುಬಾರಿ ಪ್ರಚಾರ; 25 ನಿಮಿಷದ ಪ್ರಯಾಣಕ್ಕೆ 1.5 ಲಕ್ಷ ರೂ. ಖರ್ಚು ಮಾಡಿದ ಕಮಲ್ ಹಾಸನ್
ನಟ ಮತ್ತು ರಾಜಕಾರಣಿ ಕಮಲ್ ಹಾಸನ್ ಸದ್ಯ ರಾಜಕೀಯದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಕಮಲ್ ಮಧುರೈನಿಂದ ತಿರುಚಿಗೆ ತೆರಳಲು ಖರ್ಚು ಮಾಡಿದ ಹಣ ಚರ್ಚೆಗೆ ಕಾರಣವಾಗಿದೆ. ಹೌದು, ಕಮಲ್ ಹಾಸನ್ ಮಧುರೈಯಿಂದ ತಿರುಚಿಗೆ ತೆರಳಲು ಬರೋಬ್ಬರಿ 1.5 ಲಕ್ಷರೂ ಖರ್ಚು ಮಾಡಿದ್ದಾರೆ.
ಕಮಲ್ ಹಾಸನ್ ತಿರಿಚಿಯಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿಯಾಗಬೇಕಿತ್ತು. ಆದರೆ ತಿರುಚಿ ವಿಮಾನ ನಿಲ್ದಾಣದಲ್ಲಿ ರನ್ ವೇ ಕಾರ್ಪೆಟ್ ಕೆಲಸದಿಂದ ವಿಮಾನವನ್ನು ಮಧುರೈಗೆ ತಿರುಗಿಸಲಾಯಿತು. ಮುಖ್ಯವಾದ ಸಮಾವೇಶ ಆಗಿದ್ದರಿಂದ ಕಮಲ್ ಹಾಸನ್ ಸರಿಯಾದ ಸಮಯಕ್ಕೆ ಆಗಮಿಸಲೇ ಬೇಕಿತ್ತು. ಹಾಗಾಗಿ ಸಮಯ ಉಳಿಸುವ ದೃಷ್ಟಿಯಿಂದ ಕಮಲ್ ಖಾಸಗಿ ಚಾಪರ್ ಮೂಲಕ ತಿರುಚಿಗೆ ಆಗಮಿಸಿದ್ದಾರೆ. ಪ್ರಯಾಣಕ್ಕೆ 1.5 ಲಕ್ಷ ರೂ. ಖರ್ಚಾಗಿದೆ.
ವಿಡಿಯೋ: ಬಿಗ್ಬಾಸ್ ಮನೆಯಲ್ಲಿ ಮೊಬೈಲ್ ಫೋನ್ ಬಳಸಿದ ಸ್ಪರ್ಧಿ!
ರಾಜಕಾರಣಿಗಳಿಗೆ ಇದೆಲ್ಲ ದೊಡ್ಡ ವಿಚಾರವಲ್ಲ. ಆದರೆ ತಮಿಳು ನಾಡಿನ ರಾಜಕೀಯ ವಿಚಾರದಲ್ಲಿ ಖಾಸಗಿ ಚಾಪರ್ ಗಳನ್ನು ಬಳಸುವುದು ತೀರ ವಿರಳ. ಹೆಚ್ಚಿನ ರಾಜಕೀಯ ನಾಯಕರು ರಸ್ತೆ ಅಥವಾ ವಾಣಿಜ್ಯ ವಿಮಾನಗಳನ್ನು ಬಳಸುತ್ತಾರೆ. ಆದರೆ ಜೆ ಜಯಲಲಿತಾ ಮಾತ್ರ ಅನಾರೋಗ್ಯದ ಕಾರಣದಿಂದ ಖಾಸಗಿ ಚಾಪರ್ ಬಳಲುತ್ತಿದ್ದರು.
ರನ್ ವೇ ಸಮಸ್ಯೆಯಿಂದ ಕಮಲ್ ಹಾಸನ್ ಕಾರ್ಯಕ್ರಮವನ್ನು ರದ್ದು ಮಾಡಬಹುದಿತ್ತು, ಆದರೆ ಅವರಿಗಾಗಿ ಸೇರಿದ್ದ ಸಾವಿರಾರು ಜನರಿಗಾಗಿ, ಕಾರ್ಯಕರ್ತರಿಗಾಗಿ ದುಬಾರಿ ಪ್ರಯಾಣ ಮಾಡಿದ್ದಾರೆ. ಇದು ಪಕ್ಷದ ಕಾರ್ಯಕರ್ತರಿಗೆ ಸಂತಸ ತಂದಿದೆ.
ತಿರುಚಿ ವಿಮಾನ ನಿಲ್ದಾಣದಲ್ಲಿ ಕಮಲ್ ಹಾಸನ್ ಅವರನ್ನು ಸ್ವಾಗತ ಮಾಡಲು ನೂರಾರು ಕಾರ್ಯಕರ್ತರು ಕಾಯುತ್ತಿದ್ದರು. ಅಲ್ಲದೆ ಜಾನಪದ ನೃತ್ಯತಂಡ ಕಾಯುತ್ತಿತ್ತು. ಕಮಲ್ ಹಾಸನ್ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿಲ್ಲ, ಚಾಪರ್ ಮೂಲಕ ಬರ್ತಿದ್ದು, ವಿಮಾನ ನಿಲ್ದಾಣದಿಂದ 5 ಕಿ.ಮೀ ದೂರದಲ್ಲಿರುವ ಮೋರಿಸ್ ನಗರದ ಹೆಲಿಪ್ಯಾಡ್ ನಲ್ಲಿ ಲ್ಯಾಂಡ್ ಆಗುತ್ತಿದ್ದಾರೆ ಎಂದು ಗೊತ್ತಾದ ಬಳಿಕ ಎಲ್ಲರೂ ಅಲ್ಲಿಗೆ ತೆರಳಿ ಅದ್ದೂರಿಯಾಗಿ ಸ್ವಾಗತ ಮಾಡಿದ್ದಾರೆ. ಕಮಲ್ ಹಾಸನ್ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು.