Don't Miss!
- News
Breaking; ಕನ್ನಡದ ಹಿರಿಯ ನಟ ಮನ್ದೀಪ್ ರಾಯ್ ನಿಧನ
- Sports
ಮುಂದಿನ ತಿಂಗಳು ಬಿಸಿಸಿಐ ಹೊಸ ಒಪ್ಪಂದ: ಸೂರ್ಯ, ಪಾಂಡ್ಯ, ಗಿಲ್ಗೆ ಬಂಪರ್ ಸಾಧ್ಯತೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Technology
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಯ್ಯಯ್ಯೋ... ನಟ, ನಿರ್ದೇಶಕ ನಾಗಶೇಖರ್ ಗೆ ಇದೇನಾಯ್ತು.?
Recommended Video
ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಮತ್ತು ನಿರ್ದೇಶಕನಾಗಿ ಗುರುತಿಸಿಕೊಂಡಿರುವವರು ನಾಗಶೇಖರ್. 'ಮೈನಾ', 'ಸಂಜು ವೆಡ್ಸ್ ಗೀತಾ', 'ಅರಮನೆ' ಮುಂತಾದ ಚಿತ್ರಗಳಿಗೆ ನಾಗಶೇಖರ್ ಆಕ್ಷನ್ ಕಟ್ ಹೇಳಿದ್ದಾರೆ.
ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಶೇಕ್ ನಟಿಸಿದ ಚೊಚ್ಚಲ ಚಿತ್ರ 'ಅಮರ್'ಗೂ ಇದೇ ನಾಗಶೇಖರ್ ಡೈರೆಕ್ಟರ್. ಅಸಲಿಗೆ, 'ಅಮರ್' ಚಿತ್ರದ ಬಳಿಕ ನಾಗಶೇಖರ್ ಗಾಂಧಿನಗರ ಅಷ್ಟಾಗಿ ಕಾಣಿಸಿಕೊಂಡಿಲ್ಲ.
ನಾಗಶೇಖರ್ ಮುಂದಿನ ಚಿತ್ರದ ಬಗ್ಗೆಯೂ ಸುದ್ದಿ ಕೇಳಿಬಂದಿಲ್ಲ. ಹೀಗಿರುವಾಗಲೇ, ನಾಗಶೇಖರ್ ರವರ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಯಾವುದು ಆ ಫೋಟೋ ಅಂತೀರಾ.? ನೀವೇ ನೋಡಿ...

ಇದೇ ನೋಡಿ ಆ ಫೋಟೋ
ಸೀಳಾಗಿರುವ ತುಟಿ, ಒಡೆದ ಹಲ್ಲು, ಕೊಂಚ ಊದಿರುವ ಮುಖ.. ನಾಗಶೇಖರ್ ರವರ ಈ ಫೋಟೋ ನೋಡಿದ ಕೂಡಲೆ ತಲೆಯಲ್ಲಿ ಹತ್ತಾರು ಅನುಮಾನಗಳು ಮೂಡುವುದು ಸಹಜ. ಆದ್ರೆ, ವಾಸ್ತವವೇ ಬೇರೆ ಇದೆ.
ಬಾಲಿವುಡ್
ನ
ಖ್ಯಾತ
ನಿರ್ಮಾಪಕನ
ಪುತ್ರನಿಗೆ
ನಾಗಶೇಖರ್
ನಿರ್ದೇಶನ

ಮೇಕಪ್ ಅಷ್ಟೇ.!
ಮುಖಕ್ಕೆ ಪೆಟ್ಟಾಗಿರುವ ರೀತಿ ನಾಗಶೇಖರ್ ಕಾಣಿಸಿಕೊಂಡಿರುವುದು ಸಿನಿಮಾಗಾಗಿ.! ಹೌದು, ನಾಗಶೇಖರ್ ಗೆ ರಿಯಲ್ ಲೈಫ್ ನಲ್ಲಿ ಮುಖಕ್ಕೆ ಏಟು ಬಿದ್ದಿಲ್ಲ. ಹೊಸ ಚಿತ್ರವೊಂದಕ್ಕಾಗಿ ಆ ರೀತಿ ಮೇಕಪ್ ಮಾಡಿಕೊಂಡಿದ್ದಾರೆ ಅಷ್ಟೆ.!
ಸಂಜು
ವೆಡ್ಸ್
ಗೀತಾ-2
ಏನಾಯ್ತು?
ಅದೇ
ಕಥೆನಾ
ಇದು.!

ಕಾಲಿವುಡ್ ನಲ್ಲಿ ನಾಗಶೇಖರ್.!
ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಾಗಶೇಖರ್ ಇದೀಗ ಕಾಲಿವುಡ್ ನತ್ತ ಹೆಜ್ಜೆ ಇಟ್ಟಿದ್ದಾರೆ. 'ನವೆಂಬರ್ ಮಳೈಯಿಲ್ ನಾನುಂ ಅವಳುಂ' ಎಂಬ ತಮಿಳು ಚಿತ್ರವನ್ನು ನಾಗಶೇಖರ್ ನಿರ್ದೇಶಿಸುತ್ತಿದ್ದಾರೆ. ಇದೇ ಚಿತ್ರದ ಪಾತ್ರವೊಂದಕ್ಕಾಗಿ ಬಣ್ಣ ಹಚ್ಚಿರುವ ನಾಗಶೇಖರ್ ಸೀಳು ತುಟಿ ಹೊಂದಿರುವ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದಾರೆ.
'ಅಮರ್'
ಸಿನಿಮಾ
ನಂತರ
ಹೊಸ
ಸಿನಿಮಾ
ಅನೌನ್ಸ್
ಮಾಡಿದ
ನಾಗಶೇಖರ್

ಕನ್ನಡ ಸಿನಿಮಾ ಕಥೆ.?
ಅಂದ್ಹಾಗೆ, ಕನ್ನಡದಲ್ಲಿ 'ನವೆಂಬರ್ ನಲ್ಲಿ ನಾನು ಅವಳು' ಚಿತ್ರವನ್ನು ನಾಗಶೇಖರ್ ನಿರ್ದೇಶಿಸುತ್ತಿದ್ದರು. ಇದೇ ಚಿತ್ರದಲ್ಲಿ ರವಿಚಂದ್ರನ್ ಪುತ್ರ ವಿಕ್ರಮ್ ನಟಿಸುತ್ತಿದ್ದರು. ಈ ಚಿತ್ರ ನಿಂತು ಹೋಗಿದೆ ಎಂಬ ಮಾತು ಗಾಂಧಿನಗರದಲ್ಲಿದೆ. ಆದ್ರೀಗ, ಇದೇ ಚಿತ್ರದ ಕಥೆಯನ್ನು ಇಟ್ಟುಕೊಂಡು ತಮಿಳಿನಲ್ಲಿ ನಾಗಶೇಖರ್ ನಿರ್ದೇಶನ ಮಾಡುತ್ತಿರುವ ಹಾಗಿದೆ. ತಮಿಳಿನ 'ನವೆಂಬರ್ ಮಳೈಯಿಲ್ ನಾನುಂ ಅವಳುಂ' ಚಿತ್ರದ ನಾಯಕ-ನಾಯಕಿ ಯಾರು ಎಂಬುದು ತಿಳಿದು ಬಂದಿಲ್ಲ.