For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ ಡಬಲ್ ಡೀಲ್.. ಲೈಕಾ ಸಂಸ್ಥೆಗೆ 2 ಕಾಲ್‌ಶೀಟ್: ಅಬ್ಬಬ್ಬಾ ಒಟ್ಟು ಸಂಭಾವನೆ ಎಷ್ಟು ಕೋಟಿ ಗೊತ್ತಾ?

  |

  ಸೂಪರ್ ಸ್ಟಾರ್ ರಜನಿಕಾಂತ್ ಸಿನಿಮಾ ಮಾಡುವ ಸ್ಪೀಡ್ ಹೆಚ್ಚಿಸಿದ್ದಾರೆ. 'ಜೈಲರ್' ಸಿನಿಮಾ ಶೂಟಿಂಗ್ ಮುಗಿಯೋಕು ಮೊದಲೇ ಮತ್ತೆರಡು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅದು ಕೂಡ ಒಂದೇ ಬ್ಯಾನರ್ 2 ಸಿನಿಮಾಗಳು ಎನ್ನುವುದು ವಿಶೇಷ. ಸದ್ಯ ಈ ಸುದ್ದಿ ಈಗ ಕಾಲಿವುಡ್‌ನಲ್ಲಿ ಹಾಟ್ ಟಾಪಿಕ್ ಆಗಿದೆ. ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ.

  ತಲೈವಾ ಕ್ರೇಜ್, ಫ್ಯಾನ್ ಬೇಸ್ ಬಗ್ಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ. ರಜಿನಿಕಾಂತ್ ಸಿನಿಮಾ ಅಂದರೆ ಶುರುವಾಗುವುದುಕ್ಕೂ ಮೊದಲೇ ಬ್ಯುಸಿನೆಸ್ ಆಗಿಬಿಡುತ್ತೆ. ಬಾಕ್ಸಾಫೀಸ್‌ನಲ್ಲಿ ಸಿನಿಮಾ ಸೌಂಡ್ ಮಾಡೋದು ಗ್ಯಾರೆಂಟಿ. ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಶುರುವಾದ ಮೇಲೆ ನೂರಾರು ಕೋಟಿ ಬಂಡವಾಳ ಹಾಕಿ ವಾಪಸ್ ತೆಗೆಯುವುದು ಕೂಡ ಕಷ್ಟ ಆಗುವುದಿಲ್ಲ. ರಜನಿಕಾಂತ್ ನಟನೆಯ 169ನೇ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರದಲ್ಲಿ ತಲೈವಾ ಜೈಲರ್ ಆಗಿ ಅಬ್ಬರಿಸೋಕೆ ಬರ್ತಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

  'ಕಾಂತಾರ' ನೋಡಿ ಶಭಾಷ್ ಎಂದ ರಜನೀಕಾಂತ್‌ಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ'ಕಾಂತಾರ' ನೋಡಿ ಶಭಾಷ್ ಎಂದ ರಜನೀಕಾಂತ್‌ಗೆ ರಿಷಬ್ ಶೆಟ್ಟಿ ಪ್ರತಿಕ್ರಿಯೆ

  ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ರಜನಿಕಾಂತ್ ಬಳಿ 2 ಸಿನಿಮಾ ಕಾಲ್‌ಶೀಟ್ ಪಡೆದು ಭಾರೀ ಡೀಲ್ ಕುದುರಿಸಿಕೊಂಡಿದೆ. ಸಂಸ್ಥೆಯ ಚೇರ್ಮನ್ ಸುಭಾಸ್ಕರನ್, ಮುಖ್ಯಸ್ಥ ತಮಿಳ್ ಕುಮಾರನ್ ಹಾಗೂ ಡೆಪ್ಯುಟಿ ಚೇರ್ಮನ್ ಪ್ರೇಮ್‌ ಶಿವಸ್ವಾಮಿ ತಲೈವಾನ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ರಜನಿಕಾಂತ್ ಕೂಡ 2 ಸಿನಿಮಾಗಳಲ್ಲಿ ನಟಿಸೋಕೆ ಒಪ್ಪಿಕೊಂಡಿದ್ದಾರೆ ಎಂದು ಕಾಲಿವುಡ್‌ನಲ್ಲಿ ಸುದ್ದಿಯಾಗಿದೆ. ಮೊದಲ ಸಿನಿಮಾ ಮುಹೂರ್ತ ನವೆಂಬರ್ 5ಕ್ಕೆ ನೆರವೇರಲಿದೆ. ಕ್ರೇಜಿ ಕಾಂಬಿನೇಷನ್‌ನಲ್ಲಿ ಸಿನಿಮಾ ಮೂಡಿ ಬರಲಿದೆ.

  2 ಸಿನಿಮಾಗಳಿಗೆ ಸೇರಿಸಿ ತಲೈವಾಗೆ ಒಟ್ಟು 250 ಕೋಟಿ ರೂ. ಸಂಭಾವನೆ ನೀಡಲು ಲೈಕಾ ಸಂಸ್ಥೆ ಒಪ್ಪಂದ ಮಾಡಿಕೊಂಡಿದೆ ಎನ್ನಲಾಗ್ತಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಹುಬ್ಬೇರಿಸಿದ್ದಾರೆ. ರಜನಿಕಾಂತ್ 100 ಕೋಟಿ ರೂ.ಗೂ ಅಧಿಕ ಸಂಭಾವನೆ ಪಡೆಯುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಆದರೆ 2 ಚಿತ್ರಕ್ಕೆ ಸೇರಿ 250 ಕೋಟಿ ರೂ. ಡೀಲ್ ನಡೆದಿರುವ ಸಾಧ್ಯತೆಯಿದೆ. ಲೈಕಾ ಸಂಸ್ಥೆ ಈ ಹಿಂದೆ ಕೂಡ ರಜಿನಿಕಾಂತ್ ಜೊತೆ ಸಿನಿಮಾಗಳನ್ನು ಮಾಡಿದೆ. ಬಹುಕೋಟಿ ವೆಚ್ಚದ '2.O' ಚಿತ್ರವನ್ನು ಇದೇ ಸಂಸ್ಥೆ ನಿರ್ಮಾಣ ಮಾಡಿತ್ತು.

  ವಿಚ್ಛೇದನದಿಂದ ಹಿಂದೆ ಸರಿದ ಧನುಶ್-ಐಶ್ವರ್ಯಾ!ವಿಚ್ಛೇದನದಿಂದ ಹಿಂದೆ ಸರಿದ ಧನುಶ್-ಐಶ್ವರ್ಯಾ!

  '2.O' ನಂತರ ಮುರುಗದಾಸ್ ನಿರ್ದೇಶನದ ರಜನಿಕಾಂತ್ ನಟನೆಯ 'ದರ್ಬಾರ್' ಸಿನಿಮಾವನ್ನು ಇದೇ ಸಂಸ್ಥೆ ನಿರ್ಮಾಣ ಮಾಡಿತ್ತು. ತಲೈವಾ ನಟನೆಯ 'ಕಾಲಾ' ಚಿತ್ರದ ಡಿಸ್ಟ್ರಿಬ್ಯೂಷನ್ ರೈಟ್ಸ್ ಕೊಂಡುಕೊಂಡಿತ್ತು. ರಜನಿಕಾಂತ್ ಸಿನಿಮಾಗಳು ಯಾವ ರೀತಿ ಬ್ಯುಸಿನೆಸ್‌ ಮಾಡುತ್ತೆ ಎನ್ನುವುದು ಲೈಕಾ ಸಂಸ್ಥೆಗೆ ಗೊತ್ತು. ಹಾಗಾಗಿಯೇ ಇಂತಾದೊಂದು ಭಾರೀ ಡೀಲ್ ಮಾಡಿಕೊಂಡಿದ್ದಾರೆ. 2 ಎರಡೂ ಸಿನಿಮಾಗಳ ಸ್ಟಾರ್ ಕಾಸ್ಟ್, ಟೆಕ್ನಿಕಲ್ ಟೀಂ ಬಗ್ಗೆ ಭಾರೀ ಕುತೂಹಲ ಮೂಡಿದೆ.

  English summary
  Lyca Productions Signed 2 Films With Superstar Rajinikanth. Pooja For the first film will happen on NOV 5 in Chennai. Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X