For Quick Alerts
  ALLOW NOTIFICATIONS  
  For Daily Alerts

  'ಬೀಸ್ಟ್' ಚಿತ್ರೀಕರಣ ಸೆಟ್‌ನಲ್ಲಿ ಧೋನಿ: ವಿಜಯ್ ಜೊತೆ ನಟಿಸುತ್ತಾರಾ ಕ್ಯಾಪ್ಟನ್ ಕೂಲ್

  |

  ತಮಿಳು ಸ್ಟಾರ್ ನಟ, ದಳಪತಿ ವಿಜಯ್ ಸದ್ಯ 'ಬೀಸ್ಟ್' ಸಿನಿಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಫಸ್ಟ್ ಲುಕ್ ಮೂಲಕ ಅಭಿಮಾನಿಗಳ ಥ್ರಿಲ್ ಹೆಚ್ಚಿಸಿದ್ದ 'ಬೀಸ್ಟ್' ಚಿತ್ರದ ಚಿತ್ರೀಕರಣ ಸದ್ಯ ಚೆನ್ನೈನಲ್ಲಿ ನಡೆಯುತ್ತಿದೆ. ಚೆನ್ನೈನ ಗೋಕುಲಮ್ ಸ್ಟುಡಿಯೋದಲ್ಲಿ ವಿಜಯ್ ಮತ್ತು ಬೀಸ್ಟ್ ತಂಡ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

  ಇಂದು (ಆಗಸ್ಟ್ 12) ಬೆಳಗ್ಗೆಯೇ ಚಿತ್ರೀಕರಣ ಪ್ರಾರಂಭ ಮಾಡಿದ್ದ ಬೀಸ್ಟ್ ತಂಡಕ್ಕೆ ದೊಡ್ಡ ಸರ್ಪ್ರೈಸ್ ಎದುರಾಗಿತ್ತು. ಚಿತ್ರೀಕರಣ ಸೆಟ್ ಗೆ ವಿಶೇಷ ಅತಿಥಿಯೊಬ್ಬರು ಭೇಟಿ ನೀಡುವ ಮೂಲಕ ಬೀಸ್ಟ್ ಸಂಭ್ರಮವನ್ನು ಹೆಚ್ಚಿಸಿತ್ತು. ಹೌದು, ವಿಜಯ್ ನಟನೆಯ ಬೀಸ್ಟ್ ಚಿತ್ರೀಕರಣ ಸೆಟ್ ಗೆ ಟೀಂ ಇಂಡಿಯಾದ ಮಾಜಿ ಆಟಗಾರ ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿಗೊಳಿಸಿರುವ ಎಂ.ಎಸ್ ಧೋನಿ ಭೇಟಿ ಕೊಟ್ಟಿದ್ದಾರೆ. ದಿಢೀರ್ ಅಂತ ಸೆಟ್ ಗೆ ಭೇಟಿ ನೀಡಿದ ಧೋನಿ ನೋಡಿ ಚಿತ್ರತಂಡ ಅಚ್ಚರಿ ಪಟ್ಟಿದೆ.

  ಕಾನೂನಿಗೆ ತಲೆಬಾಗಿದ ವಿಜಯ್: ರೋಲ್ಸ್ ರಾಯ್ಸ್‌ನ ಪೂರ್ಣ ತೆರಿಗೆ ಪಾವತಿಕಾನೂನಿಗೆ ತಲೆಬಾಗಿದ ವಿಜಯ್: ರೋಲ್ಸ್ ರಾಯ್ಸ್‌ನ ಪೂರ್ಣ ತೆರಿಗೆ ಪಾವತಿ

  ಚಿತ್ರೀಕರಣ ಸೆಟ್ ಗೆ ಬಂದ ಧೋನಿಯನ್ನು ದಳಪತಿ ವಿಜಯ್ ಆತ್ಮೀಯವಾಗಿ ಸ್ವಾಗತ ಮಾಡಿದ್ದಾರೆ. ಬಳಿಕ ವಿಜಯ್, ಧೋನಿಯನ್ನು ತನ್ನ ವ್ಯಾನಿಟ್ ವ್ಯಾನ್ ಒಳಗೆ ಕರೆದುಕೊಂಡು ಹೋಗಿ ಕೆಲವು ಸಮಯ ಮಾತುಕತೆ ನಡೆಸಿದ್ದಾರೆ. ಧೋನಿ ಸೆಟ್ ಗೆ ಭೇಟಿ ನೀಡಿರುವ ಫೋಟೋ ಮತ್ತು ವಿಜಯ್ ಜೊತೆ ಮಾತುಕತೆ ನಡೆಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಟ್ವಿಟ್ಟರ್ ನಲ್ಲಿ ವಿಜಯ್ ಟ್ರೆಂಡಿಂಗ್ ನಲ್ಲಿದ್ದಾರೆ.

  ಅಂದಹಾಗೆ ಧೋನಿಯನ್ನು ಬೀಸ್ಟ್ ಸೆಟ್ ನಲ್ಲಿ ದಿಢೀರ್ ನೋಡಿದ ಅಭಿಮಾನಿಗಳು ವಿಜಯ್ ಜೊತೆ ಬೀಸ್ಟ್ ನಲ್ಲಿ ಸಿನಿಮಾದಲ್ಲಿ ಏನಾದರೂ ಕಾಣಿಸಿಕೊಳ್ಳುತ್ತಾರಾ ಎನ್ನುವ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಮೂಲಗಳ ಪ್ರಕಾರ ಎಂ.ಎಸ್ ಧೋನಿ, ವಿಜಯ್ ನಟನೆಯ ಗೋಕುಲಮ್ ಸ್ಟೋಡಿಯೋಸ್ ಪಕ್ಕದಲ್ಲೇ ಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರಂತೆ. ಹಾಗಾಗಿ ಅಲ್ಲೇ ಇದ್ದ ವಿಜಯ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

  ಇಬ್ಬರ ಫೋಟೋಗಳನ್ನು ಅಭಿಮಾನಿಗಳು ಶೇರ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬ ಆಚರಿಸುತ್ತಿದ್ದಾರೆ. ಇಬ್ಬರನ್ನು ಒಟ್ಟಿಗೆ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಅಂದಹಾಗೆ ವಿಜಯ್ ಮತ್ತು ಧೋನಿ ಭೇಟಿಯಾಗುತ್ತಿರುವುದು ಇದೇ ಮೊದಲಲ್ಲ. 2008ರಲ್ಲೇ ಇಬ್ಬರು ಭೇಟಿಯಾಗಿ ಸ್ನೇಹಿತರಾಗಿದ್ದರು. ವಿಜಯ್ ಚೆನ್ನೈ ಸೂಪರ್ ಕಿಂಗ್ಸ್ ನ ಬ್ರಾಂಡ್ ಅಂಬಾಸಿಡರ್ ಆಗಿದ್ದರು. ಆಗ ಇಬ್ಬರು ಕಾಣಿಸಿಕೊಂಡಿದ್ದರು. ಇಬ್ಬರು ಸಿ ಎಸ್ ಕೆ ಜೆರ್ಸಿ ತೊಟ್ಟು ಪೋಸ್ ನೀಡಿದ್ದರು. ಇದೀಗ ಅನೇಕ ವರ್ಷಗಳ ಬಳಿಕ ಮತ್ತೆ ಇಬ್ಬರೂ ಭೇಟಿಯಾಗಿದ್ದಾರೆ.

   M.S Dhoni meets Tamil Actor Vijay in Beast Set in Chennai

  ಎಂ.ಎಸ್ ಧೋನಿ ಇತ್ತೀಚಿಗಷ್ಟೆ ಹೋಸ ಹೇರ್ ಸ್ಟೈಲ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ವಿಭಿನ್ನ ಕೇಶವಿನ್ಯಾಸದ ಮೂಲಕ ದರ್ಶನ ನೀಡಿದ್ದ ಧೋನಿಗೆ ಅಭಿಮಾನಿಗಳು ಮತ್ತು ಸಿನಿಮಾ ಗಣ್ಯರು ಸಹ ಫಿದಾ ಆಗಿದ್ದರು. ಧೋನಿ ಹೊಸ ಹೇರ್ ಸ್ಟೈಲ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದರೆ ಬೆನ್ನಲ್ಲೇ ಬೀಸ್ಟ್ ಸೆಟ್ ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

  ಇನ್ನು ಬೀಸ್ಟ್ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿ ಅನೇಕ ದಿನಗಳಾಗಿದೆ. ವಿಜಯ್ 65ನೇ ಸಿನಿಮಾ ಇದಾಗಿದ್ದು, ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪಕ್ಕಾ ಆಕ್ಷನ್ ಸಿನಿಮಾ ಇದಾಗಿದ್ದು, ಫಸ್ಟ್ ಲುಕ್ ಈಗಾಗಲೇ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇನ್ನು ವಿಜಯ್ ಜೊತೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳುತ್ತಿದ್ದಾರೆ. ಮೊದಲ ಬಾರಿಗೆ ಪೂಜಾ, ದಳಪತಿ ವಿಜಯ್ ಜೊತೆ ನಟಿಸುತ್ತಿದ್ದಾರೆ.

  English summary
  M.S Dhoni meets Tamil Actor Vijay in Beast Set in Chennai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X