For Quick Alerts
  ALLOW NOTIFICATIONS  
  For Daily Alerts

  ತಲೈವಿ ಸಿನಿಮಾ ನಿಷೇಧಿಸಿ ಎಂದು ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಮದ್ರಾಸ್ ಕೋರ್ಟ್

  |

  ಕಂಗನಾ ರಣಾವತ್ ನಟಿಸಿರುವ ತಲೈವಿ ಸಿನಿಮಾ ಬಿಡುಗಡೆಯನ್ನು ನಿಷೇಧಿಸಿ ಎಂದು ಮದ್ರಾಸ್‌ ಹೈ ಕೋರ್ಟ್‌ನಲ್ಲಿ ಅರ್ಜಿಯೊಂದು ಸಲ್ಲಿಕೆಯಾಗಿತ್ತು. ದೂರುದಾರರ ಮನವಿ ಸ್ವೀಕರಿಸಿದ್ದ ನ್ಯಾಯಾಲಯ ಶುಕ್ರವಾರ ಈ ಅರ್ಜಿಯನ್ನು ವಜಾಗೊಳಿಸಿದೆ.

  ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಸಂಬಂಧಿ ಎಂದು ಹೇಳಲಾಗುತ್ತಿರುವ ಜೆ ದೀಪಾ ಎನ್ನುವವರು ನ್ಯಾಯಾಲಯದಲ್ಲಿ ತಲೈವಿ ಚಿತ್ರಕ್ಕೆ ನಿರ್ಬಂಧ ಹೇರುವಂತೆ ಅರ್ಜಿ ಸಲ್ಲಿಸಿದ್ದರು.

  ದಿವಂಗತ ಸಿಎಂ ಜಯಲಲಿತಾ ಅವರ ಜೀವನದ ಬಗ್ಗೆ ತಲೈವಿ ಸಿನಿಮಾ ನಕಾರಾತ್ಮಕವಾಗಿ ಬಿಂಬಿಸುವ ಉದ್ದೇಶ ಹೊಂದಿದೆ. ಹಾಗಾಗಿ, ಈ ಚಿತ್ರ ಬಿಡುಗಡೆ ಮಾಡಲು ಅನುಮತಿ ನೀಡಬಾರದು ಎಂದು ಮನವಿ ಮಾಡಿದ್ದರು.

  ಸಿನಿಮಾ ಮಾಡುವ ಮುಂಚೆ ಜಯಲಲಿತಾ ಅವರ ಕುಟುಂಬದ ಸದಸ್ಯರೊಂದಿಗೆ ಯಾವುದೇ ಒಪ್ಪಂದ ಹಾಗೂ ಮಾತುಕತೆ ಮಾಡಿಲ್ಲ, ಅವರಿಂದ ಅನುಮತಿಯೂ ಪಡೆದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

  ಎಎಲ್ ವಿಜಯ್ ಈ ಚಿತ್ರ ನಿರ್ದೇಶನ ಮಾಡಿದ್ದು, ಜಯಲಲಿತಾ ಅವರ ಬಗ್ಗೆ ಕೆಟ್ಟದಾಗಿ ಬಿಂಬಿಸುವ ಯಾವ ಅಂಶಗಳು ಚಿತ್ರದಲ್ಲಿ ಇಲ್ಲ. ಜೆ ದೀಪಾ ಅವರು ತಲೈವಿ ರಿಲೀಸ್‌ಗೂ ಮುಂಚೆ ಖಾಸಗಿಯಾಗಿ ವಿಶೇಷ ಪ್ರದರ್ಶನ ತೋರಿಸುವಂತೆ ಬೇಡಿಕೆ ಇಟ್ಟಿದ್ದರು. ಅದಕ್ಕೆ ಒಪ್ಪದ ಕಾರಣ ಕೋರ್ಟ್ ಮೊರೆ ಹೋಗಿದ್ದಾರೆ. ತಲೈವಿ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಅನುಮತಿ ಸಿಕ್ಕಿದೆ. ಸಿನಿಮಾ ರಿಲೀಸ್‌ಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ.

  ಇನ್ನು ಏಪ್ರಿಲ್ 23 ರಂದು ತಲೈವಿ ಸಿನಿಮಾ ತೆರೆಕಾಣಬೇಕಿತ್ತು. ಕೋವಿಡ್ ಎರಡನೇ ಅಲೆಯ ಭೀತಿಯಿಂದ ಬಿಡುಗಡೆ ದಿನಾಂಕ ಮುಂದೂಡಲಾಗಿದೆ. ಮುಂದಿನ ದಿನಾಂಕದ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ.

  ಕೊರೊನಾ ಲಸಿಕೆ ವಿವೇಕ್ ಹೃದಯಾಘಾತಕ್ಕೆ ಕಾರಣವಾಯ್ತಾ? | Filmibeat Kannada

  ಕಂಗನಾ ರಣಾವತ್ ಅವರು ಜಯಲಲಿತಾ ಪಾತ್ರದಲ್ಲಿ ನಟಿಸಿದ್ದಾರೆ. ಎಂಜಿಆರ್ ಪಾತ್ರದಲ್ಲಿ ಅರವಿಂದ್ ಸ್ವಾಮಿ ಹಾಗೂ ಕರುಣಾನಿಧಿ ಪಾತ್ರದಲ್ಲಿ ಪ್ರಕಾಶ್ ರಾಜ್ ಬಣ್ಣ ಹಚ್ಚಿದ್ದಾರೆ.

  English summary
  Madras High court dismissed a plea against release of Jayalalitha biopic titled Thalaivi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X