Don't Miss!
- Automobiles
ಬೆಂಗಳೂರು - ಮೈಸೂರು JUST 90 ನಿಮಿಷ: ಹೇಗಿರಲಿದೆ ಎಕ್ಸ್ಪ್ರೆಸ್ ವೇ!
- News
GATE Exam 2023: ದೇಶದ 29 ನಗರಗಳಲ್ಲಿ ಪರೀಕ್ಷೆ, ವೇಳಾಪಟ್ಟಿ ಮಾಹಿತಿ ತಿಳಿಯಿರಿ
- Technology
ಫಾಸ್ಟ್ಯಾಗ್ ರೀಚಾರ್ಜ್ ಮಾಡುವ ನೆಪದಲ್ಲಿ ಒಂದು ಲಕ್ಷ ಎಗರಿಸಿದ ವಂಚಕರು!
- Lifestyle
Chanakya Neeti: ಚಾಣಕ್ಯ ಪ್ರಕಾರ ಪುರುಷನ ಬದುಕಿನಲ್ಲಿ ಅದೃಷ್ಟ ತರುವ 3 ವ್ಯಕ್ತಿಗಳಿವರು
- Sports
ಸರಣಿ ಗೆದ್ದ ಬಳಿಕ ನಾಯಕನ ಮಾತು: ಯುವ ಆಟಗಾರರ ಪ್ರದರ್ಶನಕ್ಕೆ ಹಾರ್ದಿಕ್ ವಿಶೇಷ ಮೆಚ್ಚುಗೆ
- Finance
Tax Regime: ಹಳೆ ತೆರಿಗೆ ಪದ್ಧತಿ Vs ಹೊಸ ತೆರಿಗೆ ಪದ್ಧತಿ, 2023ರಲ್ಲಿ ಯಾವುದು ಬೆಸ್ಟ್?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ವಾರಿಸು' ರೀತಿಯ ಕೆಟ್ಟ ಚಿತ್ರ ಒಪ್ಪಿಕೊಂಡ ನೀವೇ ಗ್ರೇಟ್ ಎಂದು ವಿಜಯ್‌ಗೆ ಧನ್ಯವಾದ ತಿಳಿಸಿದ ಮಹೇಶ್ ಫ್ಯಾನ್ಸ್!
ಸಂಕ್ರಾಂತಿ ಹಬ್ಬ ಹತ್ತಿರ ಬರುತ್ತಿದ್ದಂತೆ ಸಂಕ್ರಾಂತಿ ಪ್ರಯುಕ್ತ ಬಿಡುಗಡೆಯಾಗಲಿರುವ ಚಿತ್ರಗಳ ಮೇಲಿನ ನಿರೀಕ್ಷೆ ಹೆಚ್ಚಾಗುತ್ತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಂಕ್ರಾಂತಿ ಪ್ರಯುಕ್ತ ತೆಲುಗು ಹಾಗೂ ತಮಿಳಿನಲ್ಲಿ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯಾಗಲಿದ್ದು, ಜಿದ್ದಾಜಿದ್ದಿಗೆ ಬೀಳಲಿವೆ. ಇನ್ನು ತೆಲುಗಿನಲ್ಲಿ ಬಾಲಕೃಷ್ಣ ನಟನೆಯ ವೀರಸಿಂಹ ರೆಡ್ಡಿ ಹಾಗೂ ಚಿರಂಜೀವಿ ನಟನೆಯ ವಾಲ್ತೇರು ವೀರಯ್ಯ ಬಿಡುಗಡೆಯಾದರೆ, ತಮಿಳಿನಲ್ಲಿ ವಿಜಯ್ ನಟನೆಯ ವಾರಿಸು ಹಾಗೂ ಅಜಿತ್ ಕುಮಾರ್ ನಟನೆಯ ತುನಿವು ಬಿಡುಗಡೆಯಾಗಲಿದೆ.
ಇನ್ನು ಈ ಚಿತ್ರಗಳ ಹೈಪ್ ಹೆಚ್ಚಿಸಲು ಚಿತ್ರತಂಡಗಳು ಟ್ರೈಲರ್‌ಗಳನ್ನು ಬಿಡುಗಡೆ ಮಾಡುತ್ತಿವೆ. ಮೊದಲಿಗೆ ತುನಿವು ಚಿತ್ರದ ಟ್ರೈಲರ್ ಬಿಡುಗಡೆಯಾಗಿ ಸಾಧಾರಣ ಎನಿಸಿಕೊಂಡಿತ್ತು. ಇದೀಗ ನಿನ್ನೆ ( ಜನವರಿ 4 ) ವಿಜಯ್ ನಟನೆಯ ವಾರಿಸು ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ಟ್ರೈಲರ್‌ಗೆ ಪಾಸಿಟಿವ್‌ಗಿಂತ ನೆಗೆಟಿವ್ ವಿಮರ್ಶೆಯೇ ದೊಡ್ಡ ಮಟ್ಟದಲ್ಲಿ ಹರಿದು ಬರುತ್ತಿದೆ.
ಹೌದು, ವಾರಿಸು ಚಿತ್ರದ ಟ್ರೈಲರ್ ವೀಕ್ಷಿಸಿದ ಸಿನಿ ಪ್ರಿಯರು ಇದು ನಾಲ್ಕೈದು ತೆಲುಗು ಚಿತ್ರಗಳ ಮಿಶ್ರಣ ಎಂದು ಟ್ರೋಲ್ ಮಾಡುತ್ತಿದ್ದಾರೆ. ಮೂಲತಃ ತೆಲುಗು ನಿರ್ದೇಶಕನಾದ ವಂಶಿ ಪೈಡಿಪಲ್ಲಿ ತೆಲುಗು ಫ್ಲೇವರ್ ಚಿತ್ರ ಮಾಡಬಹುದು ಎಂಬ ನಿರೀಕ್ಷೆ ಇತ್ತು, ಆದರೆ ಇವರು ನೋಡಿದ್ರೆ ಈಗಾಗಲೇ ಹಲವಾರು ಬಾರಿ ರಿಪೀಟ್ ಆಗಿರುವ ಚಿತ್ರಕತೆಯನ್ನೇ ಮತ್ತೆ ಹೇಳಲು ಹೊರಟಿದ್ದಾರೆ ಎಂದು ಕಾಲೆಳೆದಿದ್ದಾರೆ. ಅದರಲ್ಲಿಯೂ ಈ ವಿಷಯವಾಗಿ ಮಹೇಶ್ ಬಾಬು ಅಭಿಮಾನಿಗಳು ತುಸು ಖುಷಿಯಿಂದಲೇ ಟ್ರೋಲ್ ಮಾಡಿದ್ದಾರೆ.

ಇಂಥ ಕೆಟ್ಟ ಕಥೆ ಒಪ್ಪಿಕೊಂಡ ವಿಜಯ್‌ಗೆ ಧನ್ಯವಾದ
ಇನ್ನು ಈ ವಾರಿಸು ಕಥೆಯನ್ನು ನಿರ್ದೇಶಕ ವಂಶಿ ಮೊದಲಿಗೆ ತೆಲುಗಿನ ಮಹೇಶ್ ಬಾಬುಗೆ ಹೇಳಿದ್ದರು. ಆದರೆ ಮಹೇಶ್ ಬಾಬು ಈ ಚಿತ್ರಕ್ಕೆ ಓಕೆ ಹೇಳಿರಲಿಲ್ಲ, ಬಳಿಕ ರಾಮ್ ಚರಣ್ ಕೂಡ ಒಪ್ಪಿಕೊಂಡಿರಲಿಲ್ಲ. ಹೀಗಾಗಿ ಈ ಕಥೆಯನ್ನು ನಿರ್ದೇಶಕ ವಂಶಿ ಹಾಗೂ ನಿರ್ಮಾಪಕ ದಿಲ್ ರಾಜು ತಮಿಳಿನ ವಿಜಯ್ ಬಳಿ ಕೊಂಡೊಯ್ದು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದರು. ಹೀಗಾಗಿ ಈ ಕಥೆಯನ್ನು ಒಪ್ಪಿಕೊಂಡು ಮತ್ತೆ ಈ ಕಥೆ ತಮ್ಮ ನಟನ ಬಳಿ ಬರುವುದನ್ನು ತಪ್ಪಿಸಿದ ವಿಜಯ್ ಅವರಿಗೆ ಧನ್ಯವಾದ ಎಂದು ಮಹೇಶ್ ಬಾಬು ಅಭಿಮಾನಿಗಳು ಟ್ವೀಟ್ ಮಾಡುತ್ತಿದ್ದಾರೆ.

ನಾಲ್ಕೈದು ಚಿತ್ರಗಳ ಮಿಶ್ರಣ
ವಾರಿಸು ಟ್ರೈಲರ್ ಬಿಡುಗಡೆಯಾಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಇದು ನಾಲ್ಕೈದು ತೆಲುಗು ಚಿತ್ರಗಳ ಮಿಶ್ರಣ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ಟ್ರೈಲರ್‌ನಲ್ಲಿ ಬರುವ ದೃಶ್ಯಗಳು ಈ ಹಿಂದೆ ಬಿಡುಗಡೆಯಾದ ಮಹೇಶ್ ಬಾಬು ನಟನೆಯ ಶ್ರೀಮಂತುಡು, ಬ್ರಹ್ಮೋತ್ಸವಂ, ಅಲ್ಲು ಅರ್ಜುನ್ ನಟನೆಯ ಅಲಾ ವೈಕುಂಟಪುರಂಲೋ, ಪವನ್ ಕಲ್ಯಾಣ್ ನಟನೆಯ ಅಜ್ಞಾತವಾಸಿ ಹಾಗೂ ನವ್‌ದೀಪ್ ನಟೆನಯ ಗೌತಮ್ ಎಸ್‌ಎಸ್‌ಸಿ ಚಿತ್ರಗಳನ್ನು ನೆನಪಿಸುತ್ತವೆ. ಹೀಗಾಗಿ ಈ ಚಿತ್ರ ಈ ಎಲ್ಲಾ ಚಿತ್ರಗಳ ಮಿಶ್ರಣ ಎಂದು ಟ್ರೋಲ್ ಮಾಡಲಾಗುತ್ತಿದೆ.

ಸುಲಭವಾಗಿ ಗೆಸ್ ಮಾಡಬಲ್ಲ ಸ್ಟೋರಿ
ಇನ್ನು ಟ್ರೈಲರ್ ವೀಕ್ಷಿಸಿದ ಸಿನಿ ಪ್ರಿಯರು ಸುಲಭವಾಗಿ ಕಥೆಯನ್ನು ಗೆಸ್ ಮಾಡುತ್ತಿದ್ದಾರೆ. ನಾಯಕ ಕುಟುಂಬದ ಕೊನೆಯ ಮಗ ಹಾಗೂ ಆತ ವ್ಯವಹಾರದ ಕಡೆ ಹೆಚ್ಚು ಗಮನ ಕೊಡದೇ ಊರೂರು ಸುತ್ತಿಕೊಂಡಿರುತ್ತಾನೆ, ಎದುರಾಳಿಗಳು ತಮ್ಮ ವ್ಯವಹಾರವನ್ನು ಕಬಳಿಸಲು ಯತ್ನಿಸಿದಾಗ ಹಾಗೂ ಕುಟುಂಬದಲ್ಲಿ ಕಲಹ ಉಂಟಾದಾಗ ಆತನೇ ವ್ಯವಹಾರ ವಹಿಸಿಕೊಂಡು ಎಲ್ಲವನ್ನೂ ಸರಿಪಡಿಸುವ ಯತ್ನ ಮಾಡುತ್ತಾನೆ. ಇಂತಹ ಕಥೆಯಿರುವ ತೆಲುಗು ಚಿತ್ರಗಳನ್ನು ಎಷ್ಟು ನೋಡಿದ್ದೀರ ಎಂಬುದು ನಿಮಗೆ ಬಿಟ್ಟದ್ದು..

ಯಾರು ಗೆಲ್ಲಬಹುದು?
ಇನ್ನು ವಾರಿಸು ಟ್ರೈಲರ್‌ನಲ್ಲಿ ಧಮ್ ಇಲ್ಲ ಎಂಬ ವಿಷಯ ತಿಳಿಯುತ್ತಿದ್ದಂತೆ ಸಂಕ್ರಾಂತಿ ಎದುರಾಳಿ ಚಿತ್ರವಾದ ಅಜಿತ್ ಕುಮಾರ್ ನಟನೆಯ ತುನಿವು ಸಿನಿಮಾನವನ್ನು ಚಿತ್ರತಂಡ ಜನವರಿ 11ರಂದು ಬಿಡುಗಡೆಗೊಳಿಸಲಿದ್ದೇವೆ ಎಂದು ಘೋಷಿಸಿತು. ಇದಾದ ಬಳಿಕ 12ರಂದು ಬಿಡುಗಡೆ ಎಂದು ತಿಳಿಸಿದ್ದ ವಾರಿಸು ತಾವೂ ಸಹ ಒಂದು ದಿನ ಮುನ್ನವೇ ಚಿತ್ರಮಂದಿರದ ಅಂಗಳಕ್ಕೆ ಬರಲಿದ್ದೇವೆ ಎಂದು ಘೋಷಿಸಿತು. ಅಂದರೆ ಈ ಎರಡೂ ಚಿತ್ರಗಳೂ ಸಹ ಜನವರಿ 11ರಂದೇ ಬಿಡುಗಡೆಯಾಗಲಿದ್ದು, ಎರಡರ ಪೈಕಿ ಯಾವ ಚಿತ್ರ ಗೆಲ್ಲಲಿದೆ ಕಾದು ನೋಡಬೇಕಿದೆ. ಇನ್ನು ತುನಿವು ಟ್ರೈಲರ್ ಸಹ ವಾವ್ ಎನ್ನುವ ಮಟ್ಟದಲ್ಲಿ ಇಲ್ಲದಿದ್ದರೂ ವಾರಿಸು ಟ್ರೈಲರ್‌ಗಿಂತ ಎಷ್ಟೋ ಉತ್ತಮ ಎನ್ನಬಹುದು..