For Quick Alerts
  ALLOW NOTIFICATIONS  
  For Daily Alerts

  ಪ್ರೇಕ್ಷಕರ ತಾಳ್ಮೆ ಪರೀಕ್ಷೆ ಮಾಡಲ್ಲ 'ಪೊನ್ನಿಯಿನ್ ಸೆಲ್ವನ್': ಆ ವಿಚಾರದಲ್ಲಿ ಮಣಿರತ್ನಂ ಸಕ್ಸಸ್!

  |

  ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ರಿಲೀಸ್‌ಗೆ ಕೌಂಟ್‌ಡೌನ್ ಸ್ಟಾರ್ಟ್ ಆಗಿದೆ. ಬಹುಕೋಟಿ ವೆಚ್ಚದಲ್ಲಿ ಈ ಐತಿಹಾಸಿಕ ಕಥಾಹಂದರದ ಸಿನಿಮಾ ನಿರ್ಮಾಣವಾಗಿದೆ. ಕಾಲಿವುಡ್ ಸೂಪರ್ ಸ್ಟಾರ್‌ಗಳು ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಸದ್ಯ ಚಿತ್ರದ ಕಾಲಾವಧಿ ಎನ್ನುವ ಬಗ್ಗೆ ಮಾಹಿತಿ ಸಿಕ್ಕಿದೆ. ಕಾಲಾವಧಿ ವಿಚಾರದಲ್ಲಿ 'ಬಾಹುಬಲಿ' ಹಾಗೂ 'RRR' ಚಿತ್ರಗಳಿಂದ 'ಪೊನ್ನಿಯಿನ್ ಸೆಲ್ವನ್' ಚಿಕ್ಕ ಸಿನಿಮಾ ಎನ್ನುವುದು ಗೊತ್ತಾಗ್ತಿದೆ.

  ಯಾವುದೇ ಸಿನಿಮಾ ಆದರೂ ಕಾಲಾವಧಿ ಬಹಳ ಮುಖ್ಯ. ಎರಡೂವರೆ ಗಂಟೆಗಿಂತ ಹೆಚ್ಚು ಹೊತ್ತು ಪ್ರೇಕ್ಷಕರುನ್ನು ಥಿಯೇಟರ್‌ನಲ್ಲಿ ಕೂರಿಸಿಕೊಳ್ಳುವುದೇ ಸಾಹಸವೇ ಸರಿ. ಇದೇ ಕಾರಣಕ್ಕೆ ಚಿತ್ರತಂಡಗಳು ಎಡಿಟಿಂಗ್ ಟೇಬಲ್‌ನಲ್ಲಿ ಸಿಕ್ಕಾಪಟ್ಟೆ ಸರ್ಕಸ್ ಮಾಡಬೇಕಾಗುತ್ತದೆ. ಕೆಲವೊಮ್ಮೆ ಅಷ್ಟು ಕಥೆಯನ್ನು ಎರಡು ಗಂಟೆಗಳಲ್ಲಿ ಹೇಳಲು ಸಾಧ್ಯವಾಗದೇ ಇದ್ದರೆ ಸೀಕ್ವೆಲ್‌ ಸಿನಿಮಾಗಳನ್ನು ಮಾಡುವ ಟ್ರೆಂಡ್ ಕೂಡ ಶುರುವಾಗಿದೆ. 'ಬಾಹುಬಲಿ', 'KGF', 'ಪುಷ್ಪ' ಸಿನಿಮಾಗಳು ಎರಡೆರಡು ಭಾಗಗಳಾಗಿ ಪ್ರೇಕ್ಷಕರ ಮುಂದೆ ಬರುವುದಕ್ಕೆ ಇದೂ ಒಂದು ಕಾರಣ ಎಂದು ನಿರ್ದೇಶಕರೇ ಹೇಳಿದ್ದಾರೆ.

  'ಪೊನ್ನಿಯಿನ್ ಸೆಲ್ವನ್' ಸಿನಿಮಾ ರನ್ ಟೈಮ್ 2 ಗಂಟೆ 46 ನಿಮಿಷ ಎನ್ನುವ ಮಾಹಿತಿ ಸಿಗುತ್ತಿದೆ. ಎಲ್ಲರಿಗೂ ಗೊತ್ತಿರುವಂತೆ ಮಣಿರತ್ನಂ ಈ ಚಿತ್ರವನ್ನು ಎರಡು ಭಾಗಗಳಾಗಿ ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ. ಹಾಗಾಗಿ ಬಹಳ ಲೆಕ್ಕಾಚಾರವಾಗಿ ಶೂಟಿಂಗ್ ಮಾಡಿದ್ದು, ಕಥೆಯನ್ನು ಬಹಳ ಅಚ್ಚುಕಟ್ಟಾಗಿ ಹೇಳಿದಂತೆ ಕಾಣುತ್ತಿದೆ. ಎಷ್ಟೋ ಸಮಯದಲ್ಲಿ ರನ್ ಟೈಮ್ ಜಾಸ್ತಿಯಾದ ಕಾರಣಕ್ಕೆ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗದೇ ಹೋಗಿರುವ ಉದಾಹರಣೆ ಇದೆ. ಬಹಳಷ್ಟು ಸಲ ಸಿನಿಮಾ ರಿಲೀಸ್ ಆದಮೇಲೆ ಟ್ರಿಮ್ ಮಾಡಲಾಗಿದೆ.

  'KGF' ಚಾಪ್ಟರ್-2 ಚಿತ್ರದ ಕಾಲಾವಧಿ 2 ಗಂಟೆ 48 ನಿಮಿಷ ಇತ್ತು. ಇನ್ನು 3 ಗಂಟೆಗಳಷ್ಟು ಸುದೀರ್ಘವಾಗಿ 'RRR' ಚಿತ್ರದಲ್ಲಿ ರಾಜಮೌಳಿ ರಾಮ್ - ಭೀಮ್ ಕಥೆ ಹೇಳಿದ್ದರು. ಇನ್ನು ಅಲ್ಲು ಅರ್ಜನ್ ನಟನೆಯ 'ಪುಷ್ಪ' ಸಿನಿಮಾ ಕೂಡ ಹೆಚ್ಚು ಕಮ್ಮಿ 3 ಗಂಟೆ ಇತ್ತು. ಸಿನಿಮಾದಲ್ಲಿ ಧಮ್ ಇದ್ದರೆ ಮೂರಲ್ಲ 4 ಗಂಟೆ ಕೂಡ ಪ್ರೇಕ್ಷಕರು ನೋಡುತ್ತಾರೆ. ಆದರೆ ಚಿಕ್ಕದಾಗಿ ಇದಷ್ಟು ಉತ್ತಮ. ಇದೇ ಕಾರಣಕ್ಕೆ ಮಣಿರತ್ನಂ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ರನ್ ಟೈಮ್ 2 ಗಂಟೆ 46 ನಿಮಿಷ ಇರುವಂತೆ ನೋಡಿಕೊಂಡಿದ್ದಾರೆ. ಫಸ್ಟ್ ಹಾಫ್ 1 ಗಂಟೆ 21 ನಿಮಿಷ, ಸೆಕೆಂಡ್ ಹಾಫ್ 1 ಗಂಟೆ 25 ನಿಮಿಷ ಕಾಲಾವಧಿಯಲ್ಲಿ ಚೋಳರ ರಾಜ್ಯದ ಕಥೆ ಹೇಳಲಾಗಿದೆ.

  Mani Ratnams magnum opus Ponniyin Selvan Total Runtime

  ರಾಜ ಆದಿತ್ಯಾ ಕರಿಕಾಲನ್ ಪಾತ್ರದಲ್ಲಿ ಚಿಯಾನ್ ವಿಕ್ರಮ್, ರಾಣಿ ನಂದಿನಿಯಾಗಿ ಐಶ್ವರ್ಯ ರೈ, ಅರುಲ್‌ಮುಳಿ ವರ್ಮನ್ ಪಾತ್ರದಲ್ಲಿ ಜಯಂ ರವಿ, ಯೋಧ ವಲ್ಲರಿಯನ್ ವಂದಿಯದೇವನ್ ಪಾತ್ರದಲ್ಲಿ ಕಾರ್ತಿ ಹವಾ ಜೋರಾಗಿದೆ. ಚೋಳರ ಯುವರಾಣಿ ಕುಂದವೈ ಪಿರತ್ತಿಯಾರ್ ಪಾತ್ರದಲ್ಲಿ ತ್ರಿಶಾ, ಸುಂದರ ಚೋಳ ಆಗಿ ಪ್ರಕಾಶ್ ರಾಜ್, ರವಿ ದಾಸನ್ ಪಾತ್ರದಲ್ಲಿ ಕನ್ನಡ ನಟ ಕಿಶೋರ್ ಬಣ್ಣ ಹಚ್ಚಿದ್ದಾರೆ. ಮದ್ರಾಸ್ ಟಾಕೀಸ್ ಹಾಗೂ ಲೈಕಾ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಬಹಳ ಅದ್ದೂರಿಯಾಗಿ ಸಿನಿಮಾ ಮೂಡಿ ಬಂದಿದೆ.

  English summary
  Mani Ratnam's magnum opus Ponniyin Selvan Total Runtime. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X