For Quick Alerts
  ALLOW NOTIFICATIONS  
  For Daily Alerts

  'ಮಾಸ್ಟರ್' ನಾಯಕಿ ಮೇಲೆ ಮುಗಿಬಿದ್ದ ವಿಜಯ್ ಅಭಿಮಾನಿಗಳು: ಟ್ವೀಟ್ ಡಿಲೀಟ್

  |

  ಮಾಸ್ಟರ್ ಸಿನಿಮಾದ ನಾಯಕಿಯ ಮೇಲೆಯೇ ವಿಜಯ್ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಅಭಿಮಾನಿಗಳ ಮಾತಿನ ಛಾಟಿ ತಾಳಲಾರದಿ ಮಾಡಿದ್ದ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ ನಟಿ.

  ರಾಜ್ ಕುಮಾರ್ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದ ದುನಿಯಾ ವಿಜಯ್

  ಮಾಸ್ಟರ್ ಸಿನಿಮಾ ಬಗ್ಗೆ ಅಭಿಮಾನಿಗಳು ಮಾಡಿದ್ದ ಕಾರ್ಟೂನ್ ಪೋಸ್ಟರ್ ಬಗ್ಗೆ ಸಿನಿಮಾದ ನಾಯಕಿ ಮಾಳವಿಕಾ ಮೋಹನನ್ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ವಿಜಯ್ ಅಭಿಮಾನಿಗಳು ನಟಿಯ ಟ್ವೀಟ್ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಲೇ ಮಾಳವಿಕಾ ತನ್ನ ಟ್ವೀಟ್ ಡಿಲೀಟ್ ಮಾಡಿದ್ದಾರೆ.

  ಮಾಸ್ಟರ್ ಸಿನಿಮಾದ ತಂಡದ ಕಾರ್ಟೂನ್ ಒಂದನ್ನು ವಿಜಯ್ ಅಭಿಮಾನಿಗಳ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆ ಕಾರ್ಟೂನ್ ನಲ್ಲಿ ಲಿಂಗಭೇದ ಇದೆ ಎಂಬರ್ಥದ ಟ್ವೀಟ್ ಅನ್ನು ಮಾಳವಿಕ ಮೋಹನನ್ ಮಾಡಿದ್ದರು.

  ಮಾಸ್ಟರ್ ಸಿನಿಮಾ ಕುರಿತ ಕಾರ್ಟೂನ್‌

  ಮಾಸ್ಟರ್ ಸಿನಿಮಾ ಕುರಿತ ಕಾರ್ಟೂನ್‌

  ಕಾರ್ಟೂನ್‌ ನಲ್ಲಿ ವಿಜಯ್ ಸೇರಿದಂತೆ ಚಿತ್ರದ ಇತರ ನಟರು, ತಂತ್ರಜ್ಞರು ಒಂದು ಮನೆಯಲ್ಲಿ ಕುಳಿತು ಟಿವಿ ನೋಡುವುದು, ಆಟ ಆಡುವುದರಲ್ಲಿ ನಿರತರಾಗಿದ್ದಾರೆ. ಅದೇ ಕಾರ್ಟೂನ್‌ನಲ್ಲಿ ಮಾಸ್ಟರ್ ನಾಯಕಿ ಅಡುಗೆ ಮಾಡುತ್ತಿರುವಂತೆ ಚಿತ್ರಸಲಾಗಿದೆ.

  ಕಾರ್ಟೂನ್‌ ಗೆ ಆಕ್ಷೇಪ ವ್ಯಕ್ತಪಡಿಸಿದ ನಟಿ

  ಕಾರ್ಟೂನ್‌ ಗೆ ಆಕ್ಷೇಪ ವ್ಯಕ್ತಪಡಿಸಿದ ನಟಿ

  ಈ ಟ್ವೀಟ್‌ ಗೆ ಆಕ್ಷೇಪ ವ್ಯಕ್ತಪಡಿಸಿದ ನಟಿ ಮಾಳವಿಕಾ ಮೋಹನನ್, 'ಕಾರ್ಟೂನ್‌ನಲ್ಲಿಯೂ ನಾಯಕಿಗೆ ಅಡುಗೆ ಮಾಡುವ ಕೆಲಸವನ್ನೇ ನೀಡಿದ್ದಾರೆ, ಯಾವಾಗ ಲಿಂಗಭೇದ ಅಂತ್ಯವಾಗುತ್ತದೆ' ಎಂಬರ್ಥದ ಟ್ವೀಟ್ ಮಾಡಿದ್ದರು.

  ಟ್ವೀಟ್ ಡಿಲೀಟ್ ಮಾಡಿದ ನಟಿ

  ಟ್ವೀಟ್ ಡಿಲೀಟ್ ಮಾಡಿದ ನಟಿ

  ಆದರೆ ವಿಜಯ್ ಅಭಿಮಾನಿಗಳು ಮುಗಿಬಿದ್ದಕೂಡಲೇ ಟ್ವೀಟ್ ಅನ್ನು ಡಿಲೀಟ್ ಮಾಡಿದರು ಮಾಳವಿಕಾ ಮೋಹನನ್, ಆದರೆ ಅವರು ಮಾಡಿದ್ದ ಟ್ವೀಟ್‌ ನ ಸ್ಕ್ರೀನ್ ಶಾಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

  ಕನ್ನಡ ಸಿನಿಮಾದಲ್ಲೂ ನಟಿಸಿರುವ ಮಾಳವಿಕಾ ಮೋಹನನ್

  ಕನ್ನಡ ಸಿನಿಮಾದಲ್ಲೂ ನಟಿಸಿರುವ ಮಾಳವಿಕಾ ಮೋಹನನ್

  'ನಾನು ಮತ್ತು ವರಮಹಾಲಕ್ಷ್ಮಿ' ಎಂಬ ಪ್ರೀತಂ ಗುಬ್ಬಿ ನಿರ್ದೇಶನದ ಕನ್ನಡ ಸಿನಿಮಾದಲ್ಲಿ ಮಾಳವಿಕಾ ಮೋಹನನ್ ನಟಿಸಿದ್ದರು. ಹಲವು ಸಿನಿಮಾಗಳಲ್ಲಿ ನಟಿಸಿರುವ ಅವರು ಮಲೆಯಾಳಂ ಮತ್ತು ತಮಿಳಿನಲ್ಲಿ ಬೇಡಿಕೆಯ ನಟಿ.

  English summary
  Heroine Malavika Mohanan calls Master cartoon created by fans is sexist. She delete her tweet, but screen shot become viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X