Just In
Don't Miss!
- News
ಪೆಟ್ರೋಲ್, ಡೀಸೆಲ್ ದರ ಏರಿಕೆ: ಕೇಂದ್ರಕ್ಕೆ ಬಿಸಿ ಮುಟ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ
- Education
UAS Dharwad Recruitment 2021: ಸೀನಿಯರ್ ರಿಸರ್ಚ್ ಫೆಲೋ ಹುದ್ದೆಗೆ ಮಾ.10ಕ್ಕೆ ನೇರ ಸಂದರ್ಶನ
- Automobiles
ಹೊಸ ರೂಪದೊಂದಿಗೆ ರಸ್ತೆಗಿಳಿಯಲಿವೆ ತೆರೆಮರೆಗೆ ಸರಿದ ಜಟಕಾ ಬಂಡಿ
- Sports
ಐಎಸ್ಎಲ್: ಫೈನಲ್ಗಾಗಿ ನಾರ್ಥ್ ಈಸ್ಟ್, ಬಾಗನ್ ನಡುವೆ ಫೈನಲ್ ಫೈಟ್
- Lifestyle
ಮಾ.11ಕ್ಕೆ ಕುಂಭ ರಾಶಿಗೆ ಬುಧನ ಪ್ರವೇಶ: ನಿಮ್ಮ ಬದುಕಿನಲ್ಲಿ ಆಗಲಿದೆ ಈ ಬದಲಾವಣೆ
- Finance
ಅಡಿಕೆ, ಕಾಫೀ, ಮೆಣಸು ಹಾಗೂ ರಬ್ಬರ್ನ ಮಾ. 08ರ ಮಾರುಕಟ್ಟೆ ದರ ಇಲ್ಲಿದೆ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಮಾಸ್ಟರ್' ಸಿನಿಮಾ ಲೀಕ್: 25 ಕೋಟಿ ಪರಿಹಾರ ಕೇಳಿದ ಚಿತ್ರತಂಡ
ತಮಿಳಿನ ವಿಜಯ್ ನಟನೆಯ 'ಮಾಸ್ಟರ್' ಸಿನಿಮಾ ಬಿಡುಗಡೆ ಆಗಿ ವಾರವಾಗುತ್ತಾ ಬಂತು. ಕೊರೊನಾ ನಿಯಮದ ನಡುವೆಯೂ ಕೋಟ್ಯಂತರ ಹಣವನ್ನು 'ಮಾಸ್ಟರ್' ಸಿನಿಮಾ ಗಳಿಸಿದೆ.
ಮಾಸ್ಟರ್ ಸಿನಿಮಾ ಬಿಡುಗಡೆಗೆ ಮುನ್ನವೇ ಸಿನಿಮಾದ ಕೆಲ ದೃಶ್ಯಗಳನ್ನು ಲೀಕ್ ಮಾಡಲಾಗಿತ್ತು. ಕ್ಲೈಮ್ಯಾಕ್ಸ್ ದೃಶ್ಯ ಸೇರಿದಂತೆ ಇನ್ನೂ ಕೆಲವು ದೃಶ್ಯಗಳು ಸಿನಿಮಾದ ಬಿಡುಗಡೆಗೆ ಮುನ್ನವೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದವು.
ದೃಶ್ಯಗಳು ವೈರಲ್ ಆದ ಬಗ್ಗೆ ನಿರ್ದೇಶಕ ಲೋಕೇಶ್ ಕನಕರಾಜನ್ ಸೇರಿ ಹಲವರು ತೀವ್ರ ಬೇಸರ ವ್ಯಕ್ತಪಡಿಸಿ, ಸಿನಿಮಾವನ್ನು ಚಿತ್ರಮಂದಿರದಲ್ಲಿಯೇ ನೋಡುವಂತೆ ಮನವಿ ಮಾಡಿದ್ದರು. ಇದಕ್ಕೆ ಹಲವು ತಮಿಳು ನಿರ್ಮಾಪಕರು, ನಟರು ಸಹ ಬೆಂಬಲ ವ್ಯಕ್ತಪಡಿಸಿ, 'ಕಿಲ್ ಫೈರಸಿ' ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದರು.

ಡಿಜಿಟಲ್ ಸಂಸ್ಥೆ ನೌಕರನೊಬ್ಬನಿಂದ ದೃಶ್ಯಗಳು ಲೀಕ್
'ಮಾಸ್ಟರ್' ಸಿನಿಮಾದ ದೃಶ್ಯಗಳನ್ನು ಲೀಕ್ ಮಾಡಿದ ಘಟನೆಗೆ ಸಂಬಂಧಿಸಿದಂತೆ ನಿರ್ಮಾಪಕರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಇದೀಗ ಮಾಸ್ಟರ್ ಸಿನಿಮಾದ ದೃಶ್ಯಗಳನ್ನು ಲೀಕ್ ಮಾಡಿದ್ದು ಯಾರು ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರಂತೆ.

25 ಕೋಟಿ ಪರಿಹಾರ ಹಣ ನೀಡುವಂತೆ ನೊಟೀಸ್
ಡಿಜಿಟಲ್ ಸಂಸ್ಥೆಯ ಸಿಬ್ಬಂದಿಯೊಬ್ಬ 'ಮಾಸ್ಟರ್' ಸಿನಿಮಾದ ದೃಶ್ಯಗಳನ್ನು ಲೀಕ್ ಮಾಡಿದ್ದಾರೆ ಎನ್ನಲಾಗುತ್ತಿದ್ದು, ಸಿನಿಮಾದ ದೃಶ್ಯಗಳನ್ನು ಲೀಕ್ ಮಾಡಿದ್ದಕ್ಕೆ ಡಿಜಿಟಲ್ ಸಂಸ್ಥೆಯ ಮೇಲೆ 25 ಕೋಟಿ ರೂಪಾಯಿಯ ಪರಿಹಾರಕ್ಕೆ ಒತ್ತಾಯಿಸಿ ಸಿನಿಮಾದ ಸಹ ನಿರ್ಮಾಪಕ ಲತಿಕ್ ಕುಮಾರ್ ನೊಟೀಸ್ ಕಳಿಸಿದ್ದಾರೆ.

ತಮಿಳ್ ರಾಕರ್ಸ್‌ನಿಂದ ಸಿನಿಮಾ ಪೈರಸಿ
'ಮಾಸ್ಟರ್' ಸಿನಿಮಾ ಬಿಡುಗಡೆ ಆದಬಳಿಕವೂ ಆನ್‌ಲೈನ್ ನಲ್ಲಿ ಪೂರ್ಣ ಸಿನಿಮಾವನ್ನು ಲೀಕ್ ಮಾಡಲಾಯಿತು. ಕುಖ್ಯಾತ ತಮಿಳ್ ರಾಕರ್ಸ್ ತಂಡವು 'ಮಾಸ್ಟರ್' ಸಿನಿಮಾದ ಪೈರೇಟೆಡ್ ಕಾಪಿಯನ್ನು ಬಿಡುಗಡೆ ಮಾಡಿತು, ಆದರೆ ಮಾಸ್ಟರ್ ಸಿನಿಮಾದ ಅಜೇಯ ಓಟವನ್ನು ತಡೆಯಲು ಇವಕ್ಕೆ ಸಾಧ್ಯವಾಗಿಲ್ಲ.

ಕೊರೊನಾ ಸಮಯದಲ್ಲೂ ಗಳಿಕೆಯಲ್ಲಿ ದಾಖಲೆ
ಶೇ 50 ಪ್ರೇಕ್ಷಕರಿಗೆ ಮಾತ್ರವೇ ಸಿನಿಮಾ ವೀಕ್ಷಣೆಗೆ ಅವಕಾಶವಿರುವ ಸಮಯದಲ್ಲಿಯೂ ಸಹ ವಿಜಯ್ ನಟನೆಯ 'ಮಾಸ್ಟರ್' ಸಿನಿಮಾ ದಾಖಲೆಗಳನ್ನು ಬರೆದಿದೆ. ಕರ್ನಾಟಕವೊಂದರಲ್ಲೇ ಆರು ದಿನದಲ್ಲಿ 13 ಕೋಟಿ ಹಣವನ್ನು ಮಾಸ್ಟರ್ ಗಳಿಸಿದೆ ಎಂದು ಹೇಳಲಾಗುತ್ತಿದೆ.