ಬೆಳ್ಳಂಬೆಳಗ್ಗೆ ಚಿತ್ರಮಂದಿರದಲ್ಲಿ 'ಮಾಸ್ಟರ್' ಸಿನಿಮಾ ವೀಕ್ಷಿಸಿದ ಕೀರ್ತಿ ಸುರೇಶ್

ದಳಪತಿ ವಿಜಯ್ ಅಭಿನಯದ ಬಹುನಿರೀಕ್ಷೆಯ ಮಾಸ್ಟರ್ ಸಿನಿಮಾ ಇಂದು ದೇಶದಾದ್ಯಂತ ಬಿಡುಗಡೆಯಾಗಿದೆ. ಕೊರೊನಾ ಲಾಕ್ ಡೌನ್ ಬಳಿಕ ರಿಲೀಸ್ ಆಗುತ್ತಿರುವ ಮೊದಲ ಸ್ಟಾರ್ ನಟನ ಸಿನಿಮಾ ಇದಾಗಿದೆ. ವರ್ಷದ ಪ್ರಾರಂಭದಲ್ಲಿ ಬರ್ತಿವ ಮಾಸ್ಟರ್ ಚಿತ್ರಕ್ಕೆ ಮೊದಲ ದಿನ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶವಿದ್ದರೂ ಅಭಿಮಾನಿಗಳು ಎರಡು ದಿನಗಳ ಮುಂಚಿತವಾಗಿಯೇ ಮುಗಿಬಿದ್ದು ಟಿಕೆಟ್ ಖರೀದಿಸಿ ಇಂದು ಬೆಳ್ಳಂಬೆಳಗ್ಗೆ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಸುಮಾರು 9 ತಿಂಗಳ ಬಳಿಕ ಚಿತ್ರಮಂದಿರದಲ್ಲಿ ಸಿನಿಮಾ ನೋಡಿ ಕುಣಿದು ಕುಪ್ಪಳಿಸುತ್ತಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ಸಿನಿಮಾ ಗಣ್ಯರು ಸಹ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ವೀಕ್ಷಿಸಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿ ಕೀರ್ತಿ ಸುರೇಶ್ ಬೆಳ್ಳಂಬೆಳಗ್ಗೆ ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ವೀಕ್ಷಿಸಿದ್ದಾರೆ. ಚೆನ್ನೈನಲ್ಲಿ ಸಿನಿಮಾ ವೀಕ್ಷಿಸಿದ ಕೀರ್ತಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. 'ಒಂದು ವರ್ಷದಿಂದ ಕಾದು ಬಳಿಕ ಚಿತ್ರಮಂದಿರಕ್ಕೆ ಮರಳಿದ ಸಂತಸವನ್ನು ವಿವರಿಸಲು ಸಾಧ್ಯವಾಗುತ್ತಿಲ್ಲ. ಈ ಸಿನಿಮಾಗಿಂತ ಉತ್ತಮವಾದುದ್ದು ಯಾವುದು ಇಲ್ಲ. ಇದು ಮಾಸ್ಟರ್ ಸಿನಿಮಾ' ಎಂದು ಬರೆದುಕೊಂಡಿದ್ದಾರೆ.

Master movie release; Actress Keerthy Suresh watches master movie in Theatre

ಸಿನಿಮಾ ನೋಡಿ ಪ್ರೇಕ್ಷಕರು ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಮಾಸ್ಟರ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವಿಜಯ್ ಮತ್ತು ವಿಜಯ್ ಸೇತುಪತಿ ಅಭಿನಯವನ್ನು ಹಾಡಿಹೊಗಳುತ್ತಿದ್ದಾರೆ. ವರ್ಷದ ಪ್ರಾರಂಭದಲ್ಲಿ ರಿಲೀಸ್ ಆದ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಗೆ ಚಿತ್ರತಂಡ ಫುಲ್ ಖುಷ್ ಆಗಿದೆ.

More from Filmibeat

English summary
Master movie release; Actress keerthy Suresh watches master movie in Theatre early morning.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X