For Quick Alerts
  ALLOW NOTIFICATIONS  
  For Daily Alerts

  ಆಸ್ಕರ್ ಗೆದ್ದ 'ಪ್ಯಾರಾಸೈಟ್' ವಿರುದ್ಧ ಕೇಸ್ ದಾಖಲಿಸಲು ಮುಂದಾದ ವಿಜಯ್ ತಂಡ

  |

  ದಕ್ಷಿಣ ಕೊರಿಯ ಚಿತ್ರದ ಪ್ಯಾರಾಸೈಟ್ ಅತ್ಯುತ್ತಮ ಸಿನಿಮಾ ಸೇರಿದಂತೆ ನಾಲ್ಕು ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದುಕೊಂಡಿತ್ತು. ಆಸ್ಕರ್ ಗೆದ್ದ ಪ್ಯಾರಾಸೈಟ್ ಚಿತ್ರಕ್ಕೆ ಇಡೀ ವಿಶ್ವ ಚಿತ್ರರಂಗವೇ ಶುಭಾಶಯ ತಿಳಿಸಿದೆ.

  ಆದರೆ, ತಮಿಳು ನಟ ವಿಜಯ್ ಅಭಿಮಾನಿಗಳು ಮಾತ್ರ ಪ್ಯಾರಾಸೈಟ್ ಚಿತ್ರದ ವಿರುದ್ಧ ಕಥೆ ಕದ್ದ ಆರೋಪ ಮಾಡಿದ್ದಾರೆ. 1999ರಲ್ಲಿ ವಿಜಯ್ ನಟಿಸಿದ್ದ ಚಿತ್ರದ ಕಥೆಯಿಂದ ಸ್ಫೂರ್ತಿ ಪಡೆದುಕೊಂಡಿರುವ ಪ್ಯಾರಾಸೈಟ್ ಚಿತ್ರಕ್ಕೆ ಆಸ್ಕರ್ ಸಿಕ್ಕಿದೆ ಎಂದು ಟ್ರೋಲ್ ಮಾಡುತ್ತಿದ್ದರು.

  ಆಸ್ಕರ್ ಗೆದ್ದ 'ಪ್ಯಾರಸೈಟ್' ಚಿತ್ರದ ಬಗ್ಗೆ ವಿಜಯ್ ಫ್ಯಾನ್ಸ್ ಆರೋಪ!ಆಸ್ಕರ್ ಗೆದ್ದ 'ಪ್ಯಾರಸೈಟ್' ಚಿತ್ರದ ಬಗ್ಗೆ ವಿಜಯ್ ಫ್ಯಾನ್ಸ್ ಆರೋಪ!

  ಇದೀಗ, ಪ್ಯಾರಾಸೈಟ್ ಚಿತ್ರದ ನಿರ್ಮಾಪಕರ ವಿರುದ್ಧ ಕೇಸ್ ದಾಖಲಿಸಲು ವಿಜಯ್ ಚಿತ್ರದ ಪ್ರಡ್ಯೂಸರ್ ಮುಂದಾಗಿದ್ದಾರೆ. ಮುಂದೆ ಓದಿ....

  ಅಂತಾರಾಷ್ಟ್ರೀಯ ವಕೀಲರ ಜೊತೆ ಚರ್ಚೆ

  ಅಂತಾರಾಷ್ಟ್ರೀಯ ವಕೀಲರ ಜೊತೆ ಚರ್ಚೆ

  ಪ್ಯಾರಾಸೈಟ್ ಚಿತ್ರದ ನಿರ್ಮಾಪಕರ ವಿರುದ್ಧ ಕಥೆ ಕದ್ದ ಆರೋಪದಲ್ಲಿ ಕೇಸ್ ದಾಖಲಿಸಲು ವಿಜಯ್ ಸಿನಿಮಾ ನಿರ್ಮಾಪಕರು ಮುಂದಾಗಿದ್ದಾರೆ. ಈ ಕುರಿತು ಅಂತಾರಾಷ್ಟ್ರೀಯ ವಕೀಲರನ್ನು ಸಂಪರ್ಕಿಸಿದ್ದು, ಪ್ರಕರಣ ದಾಖಲಿಸುವ ಸಾಧ್ಯತೆಗಳ ಬಗ್ಗೆ ಚರ್ಚಿಸುತ್ತಿದ್ದಾರಂತೆ.

  ಕೆ ಎಸ್ ರವಿಕುಮಾರ್ ಸಂತಸ

  ಕೆ ಎಸ್ ರವಿಕುಮಾರ್ ಸಂತಸ

  ಇನ್ನು ಪ್ಯಾರಾಸೈಟ್ ಚಿತ್ರಕ್ಕೆ ಆಸ್ಕರ್ ಸಿಕ್ಕಿರುವ ಬಗ್ಗೆ ಮಿನ್ಸಾರ ಕಣ್ಣ ಚಿತ್ರದ ನಿರ್ದೇಶಕ ಕೆ ಎಸ್ ರವಿಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. 20 ವರ್ಷದ ಬಂದಿದ್ದ ಕಥೆಗೆ ಆಸ್ಕರ್ ಸಿಕ್ಕಿದೆ ಎನ್ನುವುದಾದರೆ ನಿಜಕ್ಕೂ ಸಂತಸ ಎಂದಿದ್ದಾರೆ. ''ನಾನು ಪ್ಯಾರಾಸೈಟ್ ಚಿತ್ರವನ್ನು ನೋಡಿಲ್ಲ. ಆದರೆ ಜನರು ಹೇಳುತ್ತಿರುವುದನ್ನ ನೋಡಿದ್ರೆ ಆಸ್ಕರ್ ಗೆಲ್ಲುವಂತಹ ಕತೆಯನ್ನು ನಾನು 20 ವರ್ಷದ ಹಿಂದೆಯೇ ಆಯ್ಕೆ ಮಾಡಿಕೊಂಡಿದ್ದೆ ಎನ್ನುವುದು ಖುಷಿ ಕೊಟ್ಟಿದೆ. ಪ್ಯಾರಾಸೈಟ್ ಚಿತ್ರಕ್ಕೆ ಶುಭಾಶಯ ತಿಳಿಸುತ್ತೇನೆ'' ಎಂದಿದ್ದಾರೆ.

  ಆಸ್ಕರ್ 2020 LIVE: ಆಸ್ಕರ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿಆಸ್ಕರ್ 2020 LIVE: ಆಸ್ಕರ್ ಪ್ರಶಸ್ತಿ ವಿಜೇತರ ಸಂಪೂರ್ಣ ಪಟ್ಟಿ

  1999ರಲ್ಲಿ ಬಂದಿದ್ದ ಮಿನ್ಸಾರ ಕಣ್ಣ!

  1999ರಲ್ಲಿ ಬಂದಿದ್ದ ಮಿನ್ಸಾರ ಕಣ್ಣ!

  ಕೆ ಎಸ್ ರವಿಕುಮಾರ್ ನಿರ್ದೇಶನ ಹಾಗೂ ವಿಜಯ್ ನಟಿಸಿದ್ದ ಮಿನ್ಸಾರ ಕಣ್ಣ ಸಿನಿಮಾ 1999ರಲ್ಲಿ ಬಿಡುಗಡೆಯಾಗಿತ್ತು. ಕೆ ಆರ್ ಗಂಗಾಧರನ್ ಈ ಚಿತ್ರ ನಿರ್ಮಿಸಿದ್ದರು. ಖುಷ್ಬೂ, ರಂಭಾ, ಮೋನಿಕಾ ಹಾಗೂ ವಿಜಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

  ಪ್ಯಾರಾಸೈಟ್ ಚಿತ್ರದ ಕುರಿತು

  ಪ್ಯಾರಾಸೈಟ್ ಚಿತ್ರದ ಕುರಿತು

  ಬಾಂಗ್ ಜೋನ್-ಹೋ ನಿರ್ದೇಶನದ ಸೌತ್ ಕೊರಿಯನ್ ಸಿನಿಮಾ 'ಪ್ಯಾರಾಸೈಟ್' ನಾಲ್ಕು ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಪಡೆದುಕೊಂಡಿದೆ. ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಸಿನಿಮಾ, ಅತ್ಯುತ್ತಮ ಒರಿಜಿನಲ್ ಚಿತ್ರಕಥೆ ಹಾಗೂ ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್ ಸಿನಿಮಾ ಎಂಬ ಪ್ರಶಸ್ತಿ ಲಭಿಸಿದೆ.

  English summary
  Tamil actor Vijay Fans saying 'Oscar winning movie parasite and minsara kanna storyline have similarities'. so, Minsara Kanna movie producer planning to file case against parasite filmmakers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X