For Quick Alerts
  ALLOW NOTIFICATIONS  
  For Daily Alerts

  ರಮ್ಯಕೃಷ್ಣ ಇದ್ದ ಕಾರಿನಿಂದ 100 ಕ್ಕೂ ಹೆಚ್ಚು ಮದ್ಯದ ಬಾಟಲಿ ವಶ

  |

  ನಟಿ ರಮ್ಯಕೃಷ್ಣ ಪ್ರಯಾಣಿಸುತ್ತಿದ್ದ ಅವರದ್ದೇ ಕಾರಿನಲ್ಲಿ 100 ಕ್ಕೂ ಹೆಚ್ಚು ಮದ್ಯದ ಬಾಟಲಿಗಳು ಪತ್ತೆಯಾಗಿದ್ದು, ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  ಯುವತಿಯಂತೆ ಕಾಣುವ ನಿರೂಪಕಿ ಅಪರ್ಣಾ ಅವರ ವಯಸ್ಸು ಎಷ್ಟು ? | Anchor Aparna

  ಗುರುವಾರ ರಾತ್ರಿ ರಮ್ಯಕೃಷ್ಣ ಹಾಗೂ ಅವರ ಸಹೋದರಿ ವಿನಯ ಕೃಷ್ಣ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರನ್ನು ಚೆನ್ನೈ ಪೊಲೀಸರು ಕನತ್ತೂರ್ ಬಳಿ ತಡೆದು ತಪಾಸಣೆಗೆ ಒಳಪಡಿಸಿದ್ದಾರೆ, ಆಗ ಕಾರಿನಲ್ಲಿದ್ದ 100 ಕ್ಕೂ ಹೆಚ್ಚು ಬಾಟಲಿಗಳನ್ನು ವಶಪಡಿಸಿಕೊಳ್ಳಲಾಗಿದೆ.

  ಕಾರಿನಲ್ಲಿ 96 ಬಾಟಲಿ ಬಿಯರ್‌ಗಳು, ಎಂಟು ಬಾಟಲಿ ವೈನ್ ಮತ್ತು ಬೇರೆ ಮಾದರಿಯ ಮದ್ಯದ ಬಾಟಲಿಗಳು ಇದ್ದು ಅವನ್ನು ಚೆನ್ನೈ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಕಾರಿನ ಡ್ರೈವರ್‌ ಅನ್ನೂ ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ.

  ಕಾರಿನ ಡ್ರೈವರ್ ಅನ್ನು ವಶಕ್ಕೆ ಪಡೆದ ಪೊಲೀಸರು

  ಕಾರಿನ ಡ್ರೈವರ್ ಅನ್ನು ವಶಕ್ಕೆ ಪಡೆದ ಪೊಲೀಸರು

  ಕಾರಿನ ಡ್ರೈವರ್ ಸೆಲ್ವಕುಮಾರ್ ಅನ್ನು ಪೊಲೀಸರು ವಶಕ್ಕೆ ಪಡೆದು ಕನತ್ತೂರ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಆದರೆ ಹಿಂದೆಯೇ ಕಾರಿನಲ್ಲಿ ಬಂದ ರಮ್ಯಾಕೃಷ್ಣ ಆತನಿಗೆ ಬೇಲ್ ನೀಡಿ ಠಾಣೆಯಿಂದ ಕರೆದೊಯ್ದಿದ್ದಾರೆ.

  ರಮ್ಯಕೃಷ್ಣಗೆ ಏಕೆ ಬೇಕಿತ್ತು ಅಷ್ಟೋಂದು ಮದ್ಯ

  ರಮ್ಯಕೃಷ್ಣಗೆ ಏಕೆ ಬೇಕಿತ್ತು ಅಷ್ಟೋಂದು ಮದ್ಯ

  ಆ ಮದ್ಯದ ಬಾಟಲಿಗಳನ್ನು ಮಮ್ಮಲಪುರಂ ನಿಂದ ಚೆನ್ನೈ ಗೆ ಕೊಂಡೊಯ್ಯಲಾಗುತ್ತಿತ್ತು ಎನ್ನಲಾಗಿದೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ರಮ್ಯಾಕೃಷ್ಣಗೆ ಅಷ್ಟೋಂದು ಮದ್ಯ ಏತಕ್ಕೆ ಬೇಕಿತ್ತು ಎಂಬ ಚರ್ಚೆ ಪ್ರಾರಂಭವಾಗಿದೆ.

  ಪಂಚಭಾಷಾ ನಟಿ ರಮ್ಯಕೃಷ್ಣ

  ಪಂಚಭಾಷಾ ನಟಿ ರಮ್ಯಕೃಷ್ಣ

  ಬಾಹುಬಲಿ ಸಿನಿಮಾದ ರಾಜಮಾತೆ ಶಿವಗಾಮಿ ಪಾತ್ರದಿಂದ ರಮ್ಯಾಕೃಷ್ಣ ಖ್ಯಾತವಾಗಿದ್ದಾರೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ರಮ್ಯಾಕೃಷ್ಣ ಅಭಿನಯಿಸಿದ್ದಾರೆ.

  ರವಿ ಬೋಪಣ್ಣ ಸಿನಿಮಾದಲ್ಲಿ ನಟಿಸಿದ್ದಾರೆ

  ರವಿ ಬೋಪಣ್ಣ ಸಿನಿಮಾದಲ್ಲಿ ನಟಿಸಿದ್ದಾರೆ

  ಬಿಡುಗಡೆ ಆಗಬೇಕಿರುವ ರವಿಚಂದ್ರನ್ ನಟಿಸಿರುವ ರವಿ ಬೋಪಣ್ಣ ಸಿನಿಮಾದಲ್ಲಿ ನಟಿಸಿರುವ ರಮ್ಯ ಕೃಷ್ಣ, ರಂಗ ಮಾರ್ತಾಂಡ, ರೊಮ್ಯಾಂಟಿಕ್, ಪಾರ್ಟಿ, ತೆರ ಯಾರ್‌ ಹೂ ಮೇ, ಮಧುರೈ ಮೀನಾಕ್ಷಿ, ಹಿಂದಿ ಸಿನಿಮಾ ತೆರ ಯಾರ್ ಹೂ ಮೇ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

  English summary
  More than 100 liquor bottles sized from Ramya Krishna's car. Her driver detained and released from bail.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X