For Quick Alerts
  ALLOW NOTIFICATIONS  
  For Daily Alerts

  ವಿಜಯ್ v/s ಅಜಿತ್ ಜಗಳದ ನಡುವೆ ಲೂಟಿಗಿಳಿದ ಚಿತ್ರಮಂದಿರಗಳು, ಟಿಕೆಟ್ ಬೆಲೆ ಗಗನಕ್ಕೆ!

  |

  ಈ ಸಂಕ್ರಾಂತಿ ಹಬ್ಬ ತಮಿಳು ಹಾಗೂ ತೆಲುಗು ಸಿನಿಮಾ ಪ್ರೇಕ್ಷಕರಿಗೆ ಡಬಲ್ ಧಮಾಕಾ. ತೆಲುಗು ಚಿತ್ರರಂಗದಲ್ಲಿ ಈ ಸಂಕ್ರಾಂತಿಗೆ ಬಹುವರ್ಷಗಳ ಪ್ರತಿಸ್ಪರ್ಧಿಗಳಾದ ನಟ ಚಿರಂಜೀವಿ ಹಾಗೂ ಬಾಲಕೃಷ್ಣ ಎದುರಾಗುತ್ತಿದ್ದರೆ, ತಮಿಳು ಬಾಕ್ಸ್ ಆಫೀಸ್‌ನಲ್ಲಿ ವಿಜಯ್ ಮತ್ತು ಅಜಿತ್ ಎದುರು ಬದುರಾಗುತ್ತಿದ್ದಾರೆ.

  ಈ ಸೂಪರ್‌ ಸ್ಟಾರ್‌ಗಳ ಬಾಕ್ಸ್ ಆಫೀಸ್‌ ಠಕ್ಕರ್ ಅನ್ನೇ ಅವಕಾಶವನ್ನಾಗಿ ಬದಲಾಯಿಸಿಕೊಂಡಿರುವ ಚಿತ್ರಮಂದಿರಗಳು, ವಿತರಕರು ಸಿನಿಮಾ ಟಿಕೆಟ್‌ ದರಗಳನ್ನು ದೊಡ್ಡ ಪ್ರಮಾಣದಲ್ಲಿ ಏರಿಸಿದ್ದಾರೆ.

  ತಮಿಳುನಾಡಿನಲ್ಲಂತೂ ಚಿತ್ರಮಂದಿರಗಳಲ್ಲಿ ಲೂಟಿಯೇ ನಡೆಯುತ್ತಿದೆ. ಸ್ವತಃ ವಿಜಯ್ ಹಾಗೂ ಅಜಿತ್ ಅಭಿಮಾನಿಗಳು ಈ ಬಗ್ಗೆ ದೂರುತ್ತಿದ್ದು, ಸರ್ಕಾರದ ಮಧ್ಯ ಪ್ರವೇಶಕ್ಕೂ ಬೇಡಿಕೆ ಇಟ್ಟಿದ್ದಾರೆ.

  ವಿಜಯ್‌ರ 'ವಾರಿಸು' ಹಾಗೂ ಅಜಿತ್ ನಟನೆಯ 'ತುನಿವು' ಸಿನಿಮಾ ಒಟ್ಟಿಗೆ ಒಂದೇ ದಿನ ತಮಿಳುನಾಡಿನಲ್ಲಿ ಬಿಡುಗಡೆ ಆಗುತ್ತಿದ್ದು, ಇಬ್ಬರೂ ನಟರಿಗೆ ಭಾರಿ ಸಂಖ್ಯೆಯ ಮಾಸ್ ಅಭಿಮಾನಿಗಳಿದ್ದಾರೆ. ಮೊದಲ ದಿನವೇ ಸಿನಿಮಾ ನೋಡಲು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.

  ಇದೇ ಕಾರಣಕ್ಕೆ ಚಿತ್ರಮಂದಿರಗಳು ಹಾಗೂ ವಿತರಕರು ಟಿಕೆಟ್ ಬೆಲೆ ಏರಿಸಿದ್ದು, ತಮಿಳುನಾಡಿನಲ್ಲಿ 'ವಾರಿಸು' ಹಾಗೂ ಅಜಿತ್‌ರ 'ತುನಿವು' ಸಿನಿಮಾದ ಟಿಕೆಟ್ ದರಗಳು 700 ರಿಂದ ಆರಂಭವಾಗಿ 2000 ರುಪಾಯಿ ಮುಟ್ಟಿವೆ.

  ಅಸಲಿಗೆ ದೇಶದಲ್ಲಿ ಅತಿ ಕಡಿಮೆ ಟಿಕೆಟ್ ದರವಿರುವ ರಾಜ್ಯಗಳಲ್ಲಿ ಒಂದು ತಮಿಳುನಾಡು. ಆದರೆ ಇಬ್ಬರು ಸ್ಟಾರ್ ನಟರ ಸಿನಿಮಾ ಒಂದೇ ದಿನ ಬಿಡುಗಡೆ ಆಗುತ್ತಿರುವ ಕಾರಣದಿಂದ ಟಿಕೆಟ್ ದರಗಳನ್ನು ಏರಿಸಲಾಗಿದೆ. ಈ ಹಠಾತ್ ಬೆಲೆ ಏರಿಕೆಯನ್ನು ತಮಿಳುನಾಡು ಸಿನಿಮಾ ಪ್ರೇಕ್ಷಕರು ಖಂಡಿಸಿದ್ದು, ಸಾಮಾಜಿಕ ಜಾಲತಾಣದ ಮೂಲಕ ಸರ್ಕಾರದ ಮಧ್ಯ ಪ್ರವೇಶಕ್ಕೆ ಬೇಡಿಕೆ ಇಟ್ಟಿದ್ದಾರೆ.

  ಬ್ಲಾಕ್‌ನಲ್ಲಿ ಟಿಕೆಟ್ ದರಗಳ ಬೆಲೆ ಹೆಚ್ಚಾಗಿದೆಯೇ ಹೊರತು ಚಿತ್ರಮಂದಿರಗಳು ಟಿಕೆಟ್ ದರ ಹೆಚ್ಚು ಮಾಡಿಲ್ಲ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಬುಕ್‌ ಮೈ ಶೋ ಮಾಹಿತಿಯಂತೆ ಚೆನ್ನೈನ ಕೆಲವು ಚಿತ್ರಮಂದಿರಗಳಲ್ಲಿ 200 ಕ್ಕಿಂತಲೂ ಕಡಿಮೆ ದರಕ್ಕೆ 'ವಾರಿಸು', 'ತುನಿವು' ಸಿನಿಮಾಗಳ ಟಿಕೆಟ್‌ ಲಭ್ಯವಿದೆ.

  English summary
  Movie ticket price hike for Vijay and Ajith Kumar movie in Tamil Nadu. tickets selling from 700 to 2000 rs in block.
  Monday, January 9, 2023, 17:34
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X