For Quick Alerts
  ALLOW NOTIFICATIONS  
  For Daily Alerts

  ಬಾಯ್ ಫ್ರೆಂಡ್ ಜೊತೆ ನಯನತಾರಾ ಓಣಂ ಆಚರಣೆ: ರೊಮ್ಯಾಂಟಿಕ್ ಫೋಟೋ ವೈರಲ್

  |

  ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ನಡುವಿನ ಪ್ರೀತಿ-ಪ್ರೇಮದ ವಿಚಾರ ಗುಟ್ಟಾಗಿ ಉಳಿದಿಲ್ಲ. ಲಾಕ್ ಡೌನ್ ಸಮಯದಲ್ಲಿ ಇವರು ಮದುವೆಯಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಆದರೆ ಈ ಬಗ್ಗೆ ನಿರ್ದೇಶಕ ವಿಘ್ನೇಶ್ ಶಿವನ್ ಸ್ಪಷ್ಟನೆ ನೀಡುವ ಮೂಲಕ ಮದುವೆ ವಿಚಾರವನ್ನು ತಳ್ಳಿ ಹಾಕಿದ್ದರು.

  ಅದ್ದೂರಿಯಾಗಿ ನಡೀತು ಯಶ್ ಮಗನ ನಾಮಕರಣ | Filmibeat Kannada

  ಸದಾ ಜೊತೆಯಲ್ಲಿಯೇ ಇರುವ ಈ ಜೋಡಿ ಇದೀಗ ಓಣಂ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದೆ. ನಯನತಾರಾ ಹುಟ್ಟೂರಿನಲ್ಲಿ ಹಬ್ಬ ಆಚರಣೆ ಮಾಡಿದ್ದಾರೆ. ಬಾಯ್ ಫ್ರೆಂಡ್ ವಿಘ್ನೇಶ್ ಸಹ ಜೊತೆಯಲ್ಲಿ ಇದ್ದಿದ್ದು ಓಣಂ ಹಬ್ಬದ ಸಂಭ್ರಮ ಮತ್ತಷ್ಟು ಹೆಚ್ಚಿಸಿದೆ. ಮುಂದೆ ಓದಿ..

  ಈ ಸುದ್ದಿ ಹರಡಿಸಿದ ನೀವೆಲ್ಲ ಜೋಕರ್ಸ್ ಎಂದ ನಯನತಾರಾ!ಈ ಸುದ್ದಿ ಹರಡಿಸಿದ ನೀವೆಲ್ಲ ಜೋಕರ್ಸ್ ಎಂದ ನಯನತಾರಾ!

  ಓಣಂ ಹಬ್ಬದ ಸಂಭ್ರಮ

  ಓಣಂ ಹಬ್ಬದ ಸಂಭ್ರಮ

  ಪ್ರಪಂಚದಾದ್ಯಂತ ಮಲಯಾಳಿಗಳು ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದಾರೆ. ಕೊರೊನಾ ವೈರಸ್ ಹಾವಳಿಯ ನಡುವೆಯೂ ಕೇರಳದ ಅತೀ ದೊಡ್ಡ ಹಬ್ಬ ಓಣಂ ಅನ್ನು ಆಚರಣೆ ಮಾಡಿದ್ದಾರೆ. ಕೇರಳ ವಿಶೇಷ ಉಡುಪು ಧರಿಸಿ, ಸಿಹಿ ತಿಂಡಿ, ವಿಶೇಷ ಆಹಾರ ತಯಾರಿಸಿ ಕುಟುಂಬದ ಜೊತೆ ಹಬ್ಬವನ್ನು ಸಂಭ್ರಮಿಸಿದ್ದಾರೆ.

  ಭಾವಿಪತಿ ಜೊತೆ ನಯನತಾರಾ ಹಬ್ಬ ಆಚರಣೆ

  ಭಾವಿಪತಿ ಜೊತೆ ನಯನತಾರಾ ಹಬ್ಬ ಆಚರಣೆ

  ಓಣಂ ಆಚರಣೆ ಮಾಡಿದ ಸೆಲೆಬ್ರಿಟಿಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಬ್ಬದ ಪ್ರಯುಕ್ತ ನಯನತಾರಾ ಭಾವಿಪತಿ ವಿಘ್ನೇಶ್ ಶಿವನ್ ಜೊತೆ ತನ್ನ ಹುಟ್ಟೂರು ಕೊಚಿಗೆ ತೆರಳಿದ್ದಾರೆ. ಕೊಚಿಯಲ್ಲಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಹಬ್ಬದ ಜೊತೆಗೆ ಇಬ್ಬರ ಫೋಟೋ ಶೂಟ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ.

  ನಟಿ ನಯನತಾರಾ ಮತ್ತು ಬಾಯ್‌ಫ್ರೆಂಡ್‌ಗೆ ಕೊರೊನಾ?ನಟಿ ನಯನತಾರಾ ಮತ್ತು ಬಾಯ್‌ಫ್ರೆಂಡ್‌ಗೆ ಕೊರೊನಾ?

  ವೈರಲ್ ಆಗಿದೆ ರೊಮ್ಯಾಂಟಿಕ್ ಫೋಟೋಶೂಟ್

  ವೈರಲ್ ಆಗಿದೆ ರೊಮ್ಯಾಂಟಿಕ್ ಫೋಟೋಶೂಟ್

  ಸಾಂಪ್ರದಾಯಿಕ ಉಡುಪು ಧರಿಸಿರುವ ನಯನತಾರಾ ಮತ್ತು ವಿಘ್ನೇಶ್ ಇಬ್ಬರ ರೊಮ್ಯಾಂಟಿಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸುಂದರ ಫೋಟೋಗಳನ್ನು ವಿಘ್ನೇಶ್ ಶಿವನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಂತೋಷವಾಗಿ ಇರಲು ಕಾರಣಗಳನ್ನು ಕಂಡುಕೊಳ್ಳೋಣ. ಅವುಗಳನ್ನು ಭರವಸೆಯಿಂದ ಹೆಚ್ಚಿಸೋಣ. ಈ ಕೊರೊನಾ ಸಮಯದಲ್ಲಿಯೂ ಮುಖದಲ್ಲಿ ಮಂದಹಾಸವನ್ನು ಆಹ್ವಾನಿಸುವ ಏಕೈಕ ಮಾರ್ಗವಾಗಿದೆ" ಎಂದು ಬರೆದುಕೊಂಡಿದ್ದಾರೆ.

  ವರ್ಷದ ಕೊನೆಯಲ್ಲಿ ಮದುವೆಯಾಗುವ ಸಾಧ್ಯತೆ

  ವರ್ಷದ ಕೊನೆಯಲ್ಲಿ ಮದುವೆಯಾಗುವ ಸಾಧ್ಯತೆ

  ಹಬ್ಬದ ಸಂಭ್ರಮದಲ್ಲಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಜೊತೆ ನಯನತಾರಾ ತಾಯಿ ಕೂಡ ಕ್ಯಾಮರಾಗೆ ಪೋಸ್ ನೀಡಿದ್ದಾರೆ. ಇವರ ಹಬ್ಬದ ಸಂಭ್ರಮ ಎಲ್ಲಾ ಕಡೆ ಸದ್ದು ಮಾಡುತ್ತಿದೆ. ಅಂದ್ಹಾಗೆ ನಯನತಾರಾ ಮತ್ತು ವಿಘ್ನೇಶ್ ಶಿವನ್ ಈ ವರ್ಷದ ಕೊನೆಯಲ್ಲಿ ಹಸೆಮಣೆ ಏರಲಿದ್ದಾರೆ ಎಂದು ಹೇಳಲಾಗುತ್ತಿದೆ. ಮದುವೆ ವಿಚಾರವಾಗಿ ಈ ಜೋಡಿ ಸದಾ ಸುದ್ದಿಯಲ್ಲಿರುತ್ತಾರೆ. ಆದರೆ ಯಾವಾಗ ಹಸೆಮಣೆ ಏರಲಿದ್ದಾರೆ ಎನ್ನುವುದು ಅಭಿಮಾನಿಗಳ ಸದ್ಯದ ಕುತೂಹಲ.

  English summary
  Nayanthara celebration Onam Festival with her boyfriend Vignesh Shivan. Nayanthara and Vignesh Shivan romantic photoshoot goes viral.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X