twitter
    For Quick Alerts
    ALLOW NOTIFICATIONS  
    For Daily Alerts

    ವಿಕ್ಕಿ- ನಯನ್ ಸರೋಗಸಿ ವಿವಾದ ಸುಖಾಂತ್ಯ: ವರದಿಯಲ್ಲಿದೆ ಆಸಕ್ತಿಕರ ಅಂಶಗಳು!

    |

    ನಟಿ ನಯನತಾರ, ನಿರ್ದೇಶಕ ವಿಘ್ನೇಶ್ ಶಿವನ್ ಸರೋಗಸಿ ವಿವಾದ ಸುಖಾಂತ್ಯ ಕಂಡಿದೆ. ಮದುವೆಯಾದ 4 ತಿಂಗಳಿಗೆ ದಂಪತಿ ಬಾಡಿಗೆ ತಾಯ್ತನ ವಿಧಾನದಿಂದ ಅವಳಿ ಮಕ್ಕಳನ್ನು ಪಡೆದಿದ್ದರು. ದಂಪತಿ ಈ ವಿಧಾನದಲ್ಲಿ ಮಕ್ಕಳನ್ನು ಪಡೆದಿರುವುದ ಕಾನೂನುಬದ್ಧವಾಗಿಲ್ಲ ಎನ್ನುವ ಆರೋಪ ಕೇಳಿಬಂದಿತ್ತು.

    ನಯನ್ - ವಿಕ್ಕಿ ದಂಪತಿ ನಿಯಮಾವಳಿಗಳನ್ನು ಮೀರಿ ಸರೋಗಸಿ ವಿಧಾನದಲ್ಲಿ ಮಕ್ಕಳು ಪಡೆದಿದ್ದಾರೆ ಎನ್ನುವ ಆರೋಪ ಬಂದ ಹಿನ್ನಲೆಯಲ್ಲಿ ತಮಿಳುನಾಡು ಸರ್ಕಾರವು ಹಸ್ತಕ್ಷೇಪ ಮಾಡಬೇಕಾಯಿತು. ಈ ವಿಚಾರಕ್ಕೆ ಸಂಬಂಧಿಸಿ ವಿಚಾರಣೆ ನಡೆಸಿ ವರದಿ ನೀಡುವಂತೆ ಸಮಿತಿಯನ್ನು ನೇಮಿಸಿತ್ತು. ಸಮಿತಿ ಇಂದು ವಿಚಾರಣೆ ನಡೆಸಿ ವರದಿ ಸಲ್ಲಿಸಿದೆ. ವರದಿಯಲ್ಲಿ ಸಾಕಷ್ಟು ಆಸಕ್ತಿಕರ ವಿಚಾರಗಳಿವೆ. ನಯನತಾರ, ವಿಘ್ನೇಶ್ ದಂಪತಿ ಕಾನೂನುಬದ್ಧವಾಗಿ ಈ ವಿಧಾನದಲ್ಲಿ ಮಕ್ಕಳನ್ನು ಪಡೆದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚೆನ್ನೈನ ಖಾಸಗಿ ಆಸ್ಪತ್ರೆಯ ವೈದ್ಯರನ್ನು, ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೇ ರೀತಿ ಗರ್ಭ ಧರಿಸಿದ್ದ ಬಾಡಿಗೆ ತಾಯಿ ಕೂಡ ಮದುವೆ ಆಗಿದ್ದಾರೆ ಎಂದು ಸಮಿತಿ ತಿಳಿಸಿದೆ.

    ಸರೋಗಸಿ ವಿವಾದ.. ನಯನ್‌ಗೆ ಕೆಟ್ಟದು ಬಯಸಿದ್ಯಾರು? ವಿಘ್ನೇಶ್ ಶಿವನ್ ಹೇಳಿದ್ದೇನು?ಸರೋಗಸಿ ವಿವಾದ.. ನಯನ್‌ಗೆ ಕೆಟ್ಟದು ಬಯಸಿದ್ಯಾರು? ವಿಘ್ನೇಶ್ ಶಿವನ್ ಹೇಳಿದ್ದೇನು?

    2016 ಮಾರ್ಚ್ 11ರಂದು ನಯನತಾರ, ವಿಘ್ನೇಶ್ ದಂಪತಿ ಮದುವೆ ಆಗಿರುವಂತೆ ಅಫಿಡವಿಟ್‌ ಸಲ್ಲಿಸಿರೋದು ಗೊತ್ತೇಯಿದೆ. 2021ರ ಆಗಸ್ಟ್‌ನಲ್ಲಿ ಸರೋಗಸಿ ಪ್ರಕ್ರಿಯೆ ಒಪ್ಪಂದ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ನಯನ್- ವಿಕ್ಕಿ ದಂಪತಿ ವಿರುದ್ಧ ಕೇಳಿ ಬರುತ್ತಿದ್ದ ಆರೋಪಗಳಿಗೆಲ್ಲಾ ಬ್ರೇಕ್ ಬಿದ್ದಂತಾಗಿದೆ.

    ಪ್ರಕರಣಕ್ಕೆ ಮುಂದೆ ಟ್ವಿಸ್ಟ್ ಸಿಗುತ್ತಾ?

    ಪ್ರಕರಣಕ್ಕೆ ಮುಂದೆ ಟ್ವಿಸ್ಟ್ ಸಿಗುತ್ತಾ?

    ನಯನತಾರ ಫ್ಯಾಮಿಲಿ ಡಾಕ್ಟರ್‌ ನೀಡಿದ ವರದಿಯನ್ನು ಆಧರಿಸಿ ಖಾಸಗಿ ಆಸ್ಪತ್ರೆಯ ವೈದ್ಯರು ಸರೋಗಸಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ ಎಂದು ವರದಿಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಸಮಿತಿಯ ಸದಸ್ಯರು ನಯನತಾರ ಫ್ಯಾಮಿಲಿ ಡಾಕ್ಟರ್‌ನನ್ನು ವಿಚಾರಿಸಲಾಗಲಿಲ್ಲ. ಇದಕ್ಕೆ ಕಾರಣ ಆಕೆ ಸದ್ಯ ವಿದೇಶದಲ್ಲಿ ಇದ್ದಾರಂತೆ. ಫೋನ್ ಸಂಪರ್ಕಕ್ಕೂ ಸಿಗುತ್ತಿಲ್ಲ. ಹಾಗಾಗಿ ಆಕೆಯ ವಿಚಾರಣೆ ನಡೆದಿಲ್ಲ ಎಂದು ವರದಿಯಲ್ಲಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಫ್ಯಾಮಿಲಿ ಡಾಕ್ಟರ್ ಹೇಳಿಕೆಯಿಂದ ಈ ಸರೋಗಸಿ ವ್ಯವಹಾರಕ್ಕೆ ಬೇರೆ ಏನಾದರೂ ತಿರುವು ಸಿಗುತ್ತಾ ಕಾದು ನೋಡಬೇಕು.

    ಸರ್ಕಾರದಿಂದ ದಂಪತಿಗೆ ಕ್ಲೀನ್ ಚಿಟ್

    ಸರ್ಕಾರದಿಂದ ದಂಪತಿಗೆ ಕ್ಲೀನ್ ಚಿಟ್

    ಕಾಲಿವುಡ್ ಕಪಲ್ ಸರೋಗಸಿ 2021 ಆಕ್ಟ್ ಪ್ರಕಾರ ಅವಳಿ ಮಕ್ಕಳನ್ನು ಪಡೆದಿದ್ದಾರೆ ಎಂದು ತಮಿಳು ಆರೋಗ್ಯ ಇಲಾಖೆ ಇಂದು ತಿಳಿಸಿದೆ. ಇನ್ನು ವಿಕ್ಕಿ, ನಯನ್ 2016 ಮಾರ್ಚ್‌ನಲ್ಲಿಯೇ ಮದುವೆ ಮಾಡಿಕೊಂಡಿರುವುದಾಗಿ ಮ್ಯಾರೇಜ್ ಸರ್ಟಿಫಿಕೆಟ್‌ನ ಕಮಿಟಿ ನೀಡಿದೆ. ಚೆನ್ನೈನಲ್ಲಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಸರ್ಕಾರದ ನಿಬಂಧನಗಳ ಪ್ರಕಾರವೇ ಸರೋಗಸಿ ವಿಧಾನದ ಮೂಲಕ ದಂಪತಿಗೆ ಅವಳಿ ಮಕ್ಕಳು ಜನಿಸಿರುವುದಾಗಿ ಆಧಾರಗಳನ್ನು ಸಮಿತಿ ನೀಡಿರುವುದರಿಂದ ಸರ್ಕಾರ ಅವರಿಗೆ ಕ್ಲೀನ್ ಚಿಟ್ ನೀಡಿದೆ.

    ದೀಪಾವಳಿಗೆ ಮಕ್ಕಳೊಂದಿಗೆ ದಂಪತಿ ವಿಶ್

    ದೀಪಾವಳಿಗೆ ಮಕ್ಕಳೊಂದಿಗೆ ದಂಪತಿ ವಿಶ್

    ಅಕ್ಟೋಬರ್ ಒಂಭತ್ತರಂದು ಅವಳಿ ಮಕ್ಕಳಿಗೆ ಅಪ್ಪ ಅಮ್ಮ ಆಗಿರುವುದಾಗಿ ವಿಕ್ಕಿ- ನಯನ್ ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ್ದರು. ಮಕ್ಕಳ ಕಾಲುಗಳಿಗೆ ಮುತ್ತನ್ನಿಡುತ್ತಿರುವ ಫೋಟೊಗಳನ್ನು ಶೇರ್ ಮಾಡಿದ್ದರು. ಮದುವೆ ಆಗಿ 4 ತಿಂಗಳಿಗೆ ಮಕ್ಕಳಾ ಎಂದು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದರು. ನಂತರ ಸರೋಗಸಿ ವಿಧಾನದಿಂದ ದಂಪತಿ ಮಕ್ಕಳು ಪಡೆದಿರುವುದು ಗೊತ್ತಾಗಿತ್ತು. ದಂಪತಿ ಮಕ್ಕಳನ್ನು ಹಿಡಿದು ದೀಪಾವಳಿ ಶುಭಾಶಯ ಕೋರಿದ್ದರು.

    ಪ್ರೀತಿಸಿ ಹಸೆಮಣೆ ಏರಿದ್ದ ಜೋಡಿ

    ಪ್ರೀತಿಸಿ ಹಸೆಮಣೆ ಏರಿದ್ದ ಜೋಡಿ

    ವಿಘ್ನೇಶ್ ಶಿವನ್ ನಿರ್ದೇಶನದ 'ನಾನುಂ ರೌಡಿದಾನ್' ಚಿತ್ರದಲ್ಲಿ ನಯನತಾರ ನಟಿಸಿದ್ದರು. ಆದ ಶುರುವಾಗಿದ್ದ ಸ್ನೇಹ ನಂತರ ಪ್ರೀತಿಗೆ ತಿರುಗಿತ್ತು. ಕೆಲ ವರ್ಷಗಳಿಂದ ಪ್ರೀತಿಲಿ ಮುಳುಗಿದ್ದ ಜೋಡಿ ಜೂನ್ 9ರಂದು ಮಹಾಬಲೀಪುರಂಜ ರೆಸಾರ್ಟ್‌ವೊಂದರಲ್ಲಿ ಅದ್ಧೂರಿಯಾಗಿ ಮದುವೆ ಆಗಿದ್ದರು. ಸೂಪರ್ ಸ್ಟಾರ್ ರಜನಿಕಾಂತ್, ಶಾರೂಖ್ ಖಾನ್ ಸೇರಿದಂತೆ ಸಾಕಷ್ಟು ಗಣ್ಯರು ಮದುವೆ ಸಮಾರಂಭದಲ್ಲಿ ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದರು. ನಂತರ ಹನಿಮೂನ್‌ಗಾಗಿ ಜೋಡಿ ವಿದೇಶಗಳಲ್ಲಿ ಸುತ್ತಾಡಿ ಬಂದಿತ್ತು.

    English summary
    Nayanthara and vignesh shivan did not break any Surrogacy Laws TN health dept . two paediatric doctors panel submitted its report which stated that all guidelines had been followed by the couple. Know more.
    Wednesday, October 26, 2022, 22:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X