For Quick Alerts
  ALLOW NOTIFICATIONS  
  For Daily Alerts

  ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ನಯನತಾರ-ವಿಘ್ನೇಶ್

  |

  ದಕ್ಷಿಣ ಭಾರತದ ಖ್ಯಾತ ಜೋಡಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಪ್ರೀತಿಯಲ್ಲಿರುವುದು ತಿಳಿದಿರುವ ವಿಚಾರ. ಈ ಇಬ್ಬರು ಹಲವು ವರ್ಷಗಳಿಂದ ಲೀವ್-ಇನ್-ರಿಲೇಶಷನ್‌ಷಿಪ್‌ನಲ್ಲಿ ಇದ್ದಾರೆ. ಗುಟ್ಟಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಮದುವೆ ಬಗ್ಗೆ ಎಲ್ಲಿಯೂ ಅಧಿಕೃತವಾಗಿ ಮಾತನಾಡಿಲ್ಲ.

  ನಯನತಾರಾ ಮತ್ತು ವಿಘ್ನೇಶ್ ಶಿವನ್ ಜೋಡಿ ಖಾಸಗಿ ಜೀವನದಲ್ಲಿ ಬಹಳ ಗಮನ ಸೆಳೆದಿದ್ದಾರೆ. ಖಾಸಗಿ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಭಾಗವಹಿಸುವುದು, ಪಾರ್ಟಿ ಹಾಗೂ ಹಾಲಿಡೇ ಎಂಜಾಯ್ ಮಾಡುವ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಚರ್ಚೆಗೆ ಕಾರಣ ಆಗ್ತಾರೆ.

  ಶಾರುಖ್ ಆಯ್ತು ಮತ್ತೋರ್ವ ಸ್ಟಾರ್ ನಟನ ಸಿನಿಮಾದಲ್ಲಿ ನಯನತಾರಾಶಾರುಖ್ ಆಯ್ತು ಮತ್ತೋರ್ವ ಸ್ಟಾರ್ ನಟನ ಸಿನಿಮಾದಲ್ಲಿ ನಯನತಾರಾ

  ಹೀಗೆ ಸಿನಿಮಾದಿಂದ ಹೊರೆಗೆಯೂ ಯಶಸ್ವಿ ಜೋಡಿ ಎನಿಸಿಕೊಳ್ಳುತ್ತಿರುವ ನಯನತಾ-ವಿಘ್ನೇಶ್, ಚಿತ್ರರಂಗದಲ್ಲಿಯೂ ಸಕ್ಸಸ್‌ಫುಲ್ ಜೋಡಿಯಾಗಿ ಗುರುತಿಸಿಕೊಂಡಿದೆ. ಹೌದು, ನಯನತಾರಾ ಮತ್ತು ವಿಘ್ನೇಶ್ ಒಟ್ಟಿಗೆ ನಿರ್ಮಾಣ ಮಾಡಿರುವ 'ಪೆಬ್ಬಲ್ಸ್' ಚಿತ್ರಕ್ಕೆ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಲಭಿಸಿದೆ.

  ಈ ಖುಷಿಯನ್ನು ಸ್ವತಃ ನಯನತಾರಾ ಹಾಗೂ ವಿಘ್ನೇಶ್ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ನಮ್ಮ ಚಿತ್ರಕ್ಕೆ ಮೊದಲ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ ಎಂದು ನಯನತಾರಾ ಪೋಸ್ಟ್ ಹಾಕಿದ್ರೆ, ವಿಘ್ನೇಶ್ ಶಿವನ್, ''ಪೆಬ್ಬಲ್ಸ್'' ('ಕೋಳಾಂಗಳ್') ಚಿತ್ರಕ್ಕೆ ಟೈಗರ್ ಪ್ರಶಸ್ತಿ ಸಿಕ್ಕಿದೆ. ಇದು ಮೊದಲ ಅಂತಾರಾಷ್ಟ್ರೀಯ ಪ್ರಶಸ್ತಿ. ನಮ್ಮ ಇಡೀ ತಂಡಕ್ಕೆ ಹೃದಯಪೂರ್ವಕ ಧನ್ಯವಾದಗಳು'' ಎಂದಿದ್ದಾರೆ.

  'ರೌಡಿ ಪಿಕ್ಚರ್ಸ್' ಎಂಬ ಹೆಸರಿನಲ್ಲಿ ವಿಘ್ನೇಶ್ ಶಿವನ್ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. ಇದರಲ್ಲಿ ನಯನತಾರ ಸಹ ಸಹ ಮಾಲೀಕರು ಎನ್ನುವುದು ವಿಶೇಷ. ಈ ಸಂಸ್ಥೆಯಡಿ ಹಲವು ಚಿತ್ರಗಳು ನಿರ್ಮಾಣ ಆಗುತ್ತಿದೆ. ಖುದ್ದು ನಯನತಾರಾ ನಟಿಸಿರುವ 'ನೇಟ್ರಿಕಣ್' ರೌಡಿ ಪಿಕ್ಚರ್ಸ್‌ನಲ್ಲಿ ನಿರ್ಮಾಣವಾಗಿದೆ. ಇದರ ಜೊತೆಗೆ 'ರಾಕಿ', 'ಪೆಬ್ಬಲ್ಸ್' ಹಾಗೂ ವಿಜಯ್ ಸೇತುಪತಿ, ಸಮಂತಾ ಹಾಗೂ ನಯನತಾರಾ ನಟಿಸಿ ವಿಘ್ನೇಶ್ ಶಿವನ್ ನಿರ್ದೇಶನ ಮಾಡ್ತಿರುವ ಚಿತ್ರವೂ ಇದೇ ಸಂಸ್ಥೆಯಲ್ಲಿ ನಿರ್ಮಾಣವಾಗುತ್ತಿದೆ.

  'ಬಾಹುಬಲಿ' ತಂಡ ಸೇರಿಕೊಂಡ ನಟಿ ನಯನತಾರಾ'ಬಾಹುಬಲಿ' ತಂಡ ಸೇರಿಕೊಂಡ ನಟಿ ನಯನತಾರಾ

  ಪಿಎಸ್ ವಿನೋದ್ ರಾಜ್ ನಿರ್ದೇಶನ ಮಾಡಿರುವ 'ಪೆಬ್ಬಲ್ಸ' ಸಿನಿಮಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಗಮನ ಸೆಳೆಯುತ್ತಿದೆ. ಇದೀಗ, ದಕ್ಷಿಣ ಹಾಲೆಂಡ್‌ನಲ್ಲಿ ನಡೆಯುವ 'ರೋಟರ್‌ಡ್ಯಾಮ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ'ದಲ್ಲಿ ಭಾಗವಹಿಸಿ ಪ್ರಶಸ್ತಿ ಸಹ ಪಡೆದುಕೊಂಡಿದೆ. ಯುವನ್ ಶಂಕರ್ ರಾಜಾ ಚಿತ್ರಕ್ಕೆ ಸಂಗೀತ ಒದಗಿಸಿದ್ದಾರೆ.

  Nayanthara and Vignesh Shivan International award for Pebbles movie

  ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗುತ್ತಿರುವ ಭಾರತದ ಎರಡನೇ ಸಿನಿಮಾ 'ಕೋಳಾಂಗಳ್'. ಇದಕ್ಕೂ ಮುನ್ನಾ ಮಲಯಾಳಂ ನಿರ್ದೇಶಕ ಕುಮಾರ್ ಶಶಿಧರನ್ ನಿರ್ದೇಶಿಸಿದ್ದ 'ದುರ್ಗಾ' ಈ ಪ್ರಶಸ್ತಿಗೆ ಭಾಜನವಾಗಿತ್ತು. 'ಕಠೋರವಾದ ವಿಷಯವನ್ನಿಟ್ಟುಕೊಂಡು, ಮಾನವೀಯತೆ, ಹಾಸ್ಯದ ಮಿಳಿತದೊಂದಿಗೆ ಮಾಡಲಾಗಿರುವ ಅದ್ಭುತ ಚಲನಚಿತ್ರ ಇದು. ಈ ಸಿನಿಮಾ 'ಸಿನಿಮಾ ವ್ಯಾಕರಣಕ್ಕೆ' ಒಳ್ಳೆಯ ಉದಾಹರಣೆ' ಎಂದು ಸಿನಿಮಾವನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವ ಜ್ಯೂರಿಗಳು ಹೇಳಿದ್ದಾರೆ.

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಅಣ್ಣಾತ್ತೆ' ಚಿತ್ರದಲ್ಲಿ ನಯನತಾರಾ ನಟಿಸಿದ್ದಾರೆ. ಜೊತೆಗೆ ವಿಘ್ನೇಶ್ ಶಿವನ್ ನಿರ್ಮಾಣದ 'ನೇಟ್ರಿಕಣ್' ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಜೊತೆಗೆ ವಿಜಯ್ ಸೇತುಪತಿ ಹಾಗೂ ಸಮಂತಾ ಜೊತೆ ಮಾಡುತ್ತಿರುವ ಚಿತ್ರ ಶೂಟಿಂಗ್ ಹಂತದಲ್ಲಿದೆ. ಇದರ ಜೊತೆಗೆ ತೆಲುಗಿನಲ್ಲಿ 'ಆರಡುಗಲಾ ಬುಲೆಟ್' ಎನ್ನುವ ಸಿನಿಮಾಗೆ ಆಯ್ಕೆಯಾಗಿದ್ದಾರೆ. ಶಾರೂಖ್ ಖಾನ್ ಹಾಗೂ ಅಟ್ಲಿ ಕಾಂಬಿನೇಷನ್‌ನಲ್ಲಿ ಮೂಡಿ ಬರಲಿರುವ ಹೊಸ ಚಿತ್ರದಲ್ಲಿಯೂ ನಯನತಾರ ನಾಯಕಿ ಎನ್ನುವ ವಿಚಾರ ಚರ್ಚೆಯಾಗುತ್ತಿದೆ. ಆದರೆ, ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ.

  2012ರಲ್ಲಿ 'ಪೋಡಾ ಪೋಡಿ' ಚಿತ್ರದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡ ವಿಘ್ನೇಶ್ ಶಿವನ್, 2015ರಲ್ಲಿ 'ನಾನು ರೌಡಿಧಾನ್' ಚಿತ್ರದ ಮೂಲಕ ಹೆಚ್ಚು ಗಮನ ಸೆಳೆದರು. ಈ ಸಿನಿಮಾ ಮಾಡುವ ಸಂದರ್ಭದಲ್ಲಿಯೇ ನಟಿ ನಯನತಾರ ಜೊತೆ ಪ್ರೀತಿಯಲ್ಲಿ ಬಿದ್ದರು. ಆಗಿಂದಲೇ ನಯನತಾರ ಮತ್ತು ವಿಘ್ನೇಶ್ ಪರಿಚಯ ಪ್ರೀತಿಗೆ ತಿರುಗಿತು.

  English summary
  Kollywood Actress Nayanthara and Vignesh Shivan International award for Pebbles movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X