For Quick Alerts
  ALLOW NOTIFICATIONS  
  For Daily Alerts

  ಅಯ್ಯೋ ಪಾಪ ಬೆಡಗಿ ನಯನತಾರಾಗೆ ಕಿವಿ ಕೆಪ್ಪಾಯ್ತಾ?

  By ಶಂಕರ್, ಚೆನ್ನೈ
  |

  ದಕ್ಷಿಣದ ಸುರಸುಂದರಿ ನಯನತಾರಾ ಸೌಂದರ್ಯಕ್ಕೆ ಮರುಳಾಗದವರು ವಿರಳ. ಅಂತಹ ಸೌಂದರ್ಯದ ಗಣಿಗೆ ಕಿವುಡು ಸಮಸ್ಯೆ ಬಂದರೆ ಏನು ಮಾಡುವುದು. ಅದೂ ಒಂಥರಾ ಒಳ್ಳೇದೆ ಅನ್ನಿ, ಗಾಸಿಪ್ ಸುದ್ದಿಗಳಿಗೆ ಕಿವಿಗೊಡುವ ಸಮಸ್ಯೆಯೇ ಇರಲ್ಲ.

  ಆದರೆ ಅಭಿಮಾನಿಗಳ ಪಾಡೇನಾಗಬೇಡ? ಅವರೂ ಸಖತ್ ಎಂಜಾಯ್ ಮಾಡ್ತಾರೆ ಬಿಡಿ. ಏಕೆಂದರೆ ನಯನತಾರಾ ನಿಜವಾಗಿಯೂ ಕಿವುಡರಾಗಿಲ್ಲ. ಆ ರೀತಿಯ ಪಾತ್ರವನ್ನು ಮಾಡಲು ಹೊರಟಿದ್ದಾರೆ. ಇತ್ತೀಚೆಗೆ ಅವರು ಗ್ಲಾಮರ್ ಪಾತ್ರಗಳಿಗೆ ಫುಲ್ ಸ್ಟಾಪ್ ಇಟ್ಟು ಅಭಿನಯದ ಕಡೆಗೆ ಗಮನಹರಿಸುತ್ತಿದ್ದಾರೆ. [ಸೀತೆ ಪಾತ್ರ ಮಾಡಿದವಳು ಸಿಲ್ಕ್ ಸ್ಮಿತಾ ಆಗಲಾರೆ]

  ಗ್ಲಾಮರ್ ಪಾತ್ರಗಳಲ್ಲಿ ಹೆಸರು ಮಾಡಿದ್ದು ಸಾಕು, ಇನ್ನೇನಿದ್ದರೂ ಅಭಿನಯಕ್ಕೆ ಪ್ರಾಮುಖ್ಯತೆ ಎನ್ನುತ್ತಿದ್ದಾರೆ. ಇತ್ತೀಚೆಗೆ ಅವರು ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಆ ಚಿತ್ರದ ಹೆಸರು 'ನಾನುಮ್ ರೌಡಿ ಥಾನ್' ಎಂದು. ಈ ಚಿತ್ರದಲ್ಲಿ ನಯನಿ ಕಿವುಡು ಹುಡುಗಿಯಾಗಿ ಕಾಣಿಸಲಿದ್ದಾರೆ.

  ಚಿತ್ರದಲ್ಲಿ ಅವರ ಪಾತ್ರಕ್ಕೆ ಬಹಳ ಪ್ರಾಮುಖ್ಯತೆ ಇದೆಯಂತೆ. ಪ್ರೇಕ್ಷಕರನ್ನೂ ಅಷ್ಟೇ ಆ ಪಾತ್ರ ಬಹಳವಾಗಿ ಕಾಡುತ್ತದಂತೆ. ತೆಲುಗಿನಲ್ಲಿ ಸೀತೆ ಪಾತ್ರ ಪೋಷಿಸಿದ್ದ ನಯನತಾರಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

  ಕನ್ನಡದಲ್ಲಿ ಉಪೇಂದ್ರ ಜೊತೆ 'ಸೂಪರ್' ಚಿತ್ರದಲ್ಲಿ ಸೂಪರಾಗಿ ಕಾಣಿಸಿಕೊಂಡಿದ್ದರು ನಯನಿ. ಅದಾದ ಬಳಿಕ ಅವರು ಕನ್ನಡ ಚಿತ್ರಗಳ ಕಡೆಗೆ ಕಣ್ಣೆತ್ತಿಯೂ ನೋಡಿಲ್ಲ. ತಮ್ಮ ಮತ್ತು ಸಿಂಬು ನಡುವಿನ ಗಾಸಿಪ್ ಗಳಿಗೆ ಕಿವಿಗೊಡದೆ ಈಗ ಕಿವುಡಿ ಪಾತ್ರದಲ್ಲಿ ಮಗ್ನರಾಗಿದ್ದಾರೆ.

  English summary
  Actress Nayanthara is now concerntrating on degramours roles. In this way recently she agreed to play as deaf in 'Naanum Rowdy Thaan' movie in Tamil.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X