For Quick Alerts
  ALLOW NOTIFICATIONS  
  For Daily Alerts

  Exclusive: ನಯನತಾರಾ ಮಗು ವಿವಾದದಿಂದ ನಮಗಂತೂ ಒಳ್ಳೆಯದಾಯ್ತು ಎಂದ ಸಮಂತಾ!

  |

  ಸದ್ಯ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸಿನಿಮಾ ಮಾಡಿದರೂ ಮಾಡದಿದ್ದರೂ ಟ್ರೆಂಡಿಂಗ್ ಪಟ್ಟಿಯಲ್ಲಿರುವ ನಟಿಯೆಂದರೆ ಅದು ನಟಿ ಸಮಂತಾ ರುತ್ ಪ್ರಭು. ಹೌದು, ಕಳೆದ ವರ್ಷವಷ್ಟೇ ನಟ ಅಕ್ಕಿನೇನಿ ನಾಗಚೈತನ್ಯ ಜತೆ ವಿವಾಹ ವಿಚ್ಛೇದನ ಮಾಡಿಕೊಳ್ಳುವ ಮೂಲಕ ಭಾರೀ ಸುದ್ದಿಗೀಡಾಗಿದ್ದ ನಟಿ ಸಮಂತಾ ರುಥ್ ಪ್ರಭು ತದ ನಂತರ ಪುಷ್ಪ ಚಿತ್ರದಲ್ಲಿ 'ಊ ಅಂಟಾವ ಮಾವ ಊಹೂ ಅಂಟಾವ ಮಾವ' ಎಂಬ ಐಟಂ ಹಾಡಿಗೆ ಸೊಂಟ ಬಳುಕಿಸಿ ನೋಡುಗರ ಹುಬ್ಬೇರುವಂತೆ ಮಾಡಿದ್ದರು.

  ಅಷ್ಟೇ ಅಲ್ಲದೇ ತಮಿಳಿನಲ್ಲಿ ಕಾದುವಾಕುಲ ರೆಂಡು ಕಾದಲ್ ಎಂಬ ಚಿತ್ರದಲ್ಲಿ ಅಭಿನಯಿಸಿದ್ದ ನಟಿ ಸಮಂತಾ ಈ ಚಿತ್ರದಲ್ಲಿಯೂ ಸಹ ಹಾಟ್ ರೋಲ್ ನಿರ್ವಹಿಸಿದ್ದರು. ಇನ್ನು ಸಾಮಾಜಿಕ ಜಾಲತಾಣದಲ್ಲಿ ಹಾಟ್ ಅವತಾರದಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದ ನಟಿ ಸಮಂತಾ ವಿಚ್ಛೇದನದ ಬಳಿಕ ಕೇವಲ ಹಾಟ್ ಕಂಟೆಂಟ್‌ಗಳ ಕಡೆ ಮಾತ್ರ ಗಮನ ಹರಿಸುತ್ತಿದ್ದಾರಾ ಎಂಬ ಎಂಬ ಮಾತುಗಳು ಹೆಚ್ಚಾಗಿ ಕೇಳಿಬಂದದ್ದು ಹಾಗೂ ಟ್ರೋಲ್ ಆದದ್ದು ನಿಜ.

  ಹೀಗೆ ವಿಚ್ಛೇದನದ ಬಳಿಕ ವಿಷಯಾಧಾರಿತ ಚಿತ್ರಗಳಲ್ಲಿ ಅಭಿನಯಿಸುತ್ತಿಲ್ಲ ಎಂದವರಿಗೆ ನಟಿ ಸಮಂತಾ ಯಶೋಧಾ ಚಿತ್ರದ ಟ್ರೈಲರ್ ಮೂಲಕ ಉತ್ತರ ನೀಡಿದ್ದಾರೆ. ಟ್ರೈಲರ್ ವೀಕ್ಷಿಸಿದ ಸಿನಿಪ್ರೇಮಿಗಳು ಸಮಂತಾ ಒಂದೊಳ್ಳೆ ಕತೆಯನ್ನು ಹಿಡಿದು ಈ ಬಾರಿ ಚಿತ್ರಮಂದಿರಕ್ಕೆ ಲಗ್ಗೆ ಇಡುತ್ತಿದ್ದು, ಹಳೆ ಸಮಂತಾ ನಮಗೆ ಸಿಗಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಇನ್ನು ಯಶೋಧಾ ಟ್ರೈಲರ್‌ನ ಪ್ರಮುಖ ಅಂಶ ಸರೋಗಸಿ. ಈ ಚಿತ್ರದ ಟ್ರೈಲರ್ ಬಿಡುಗಡೆಯಾಗುವ ಕೆಲ ದಿನಗಳ ಹಿಂದಷ್ಟೇ ನಟಿ ನಯನತಾರಾ ದಂಪತಿ ಸರೋಗಸಿ ಮೂಲಕ ಇಬ್ಬರು ಮಕ್ಕಳನ್ನು ಪಡೆದಿದ್ದ ಕಾರಣ ಯಶೋಧ ಟ್ರೈಲರ್‌ನಲ್ಲಿದ್ದ ಸರೋಗಸಿ ವಿಷಯದ ಬಗ್ಗೆ ಜನ ಹೆಚ್ಚಾಗಿ ಮಾತನಾಡಿಕೊಳ್ಳತೊಡಗಿದರು. ಸದ್ಯ ಸಮಂತಾ ಫಿಲ್ಮಿಬೀಟ್ ಸಂದರ್ಶನದಲ್ಲಿ ಮಾತನಾಡಿದ್ದು ಈ ಸಂದರ್ಶನದಲ್ಲಿ ತಮ್ಮ ಚಿತ್ರದಲ್ಲಿನ ಸರೋಗಸಿ ಹಾಗೂ ನಯನತಾರಾ ಸರೋಗಸಿ ಮೂಲಕ ಮಗು ಪಡೆದದ್ದರ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

  ಏನಿದು ಸರೋಗಸಿ?

  ಏನಿದು ಸರೋಗಸಿ?

  ಸರೋಗಸಿ ಎಂದರೆ ಬಾಡಿಗೆ ತಾಯ್ತತನದ ಮೂಲಕ ಮಕ್ಕಳನ್ನು ಪಡೆಯುವ ವಿಧಾನ. ಇನ್ನು ನಮ್ಮ ಭಾರತ ದೇಶದಲ್ಲಿ ಈ ವಿಧಾನ ಬ್ಯಾನ್ ಆಗಿದೆ ಎಂಬ ಮಾತುಗಳೂ ಸಹ ಇವೆ. ಹೀಗಾಗಿಯೇ ನಟಿ ನಯನತಾರಾ ಮದುವೆಯಾದ ನಾಲ್ಕೇ ತಿಂಗಳುಗಳಿಗೆ ಮಕ್ಕಳನ್ನು ಪಡೆದಾಗ ಇದು ಸರೋಗಸಿ, ಇದರ ವಿರುದ್ಧ ತನಿಖೆಯಾಗಬೇಕು ಎಂಬ ಆದೇಶವೂ ಆಗಿತ್ತು. ಹೀಗಾಗಿ ಇದು ನಯನತಾರಾ ಮತ್ತು ಪತಿ ವಿ‍ಘ್ನೇಶ್ ಅವರನ್ನು ವಿವಾದಕ್ಕೆ ದೂಡಿತ್ತು.

  ಇದರಿಂದ ತಮಗೆ ಒಳ್ಳೆಯದಾಯಿತು ಎಂದ ಸಮಂತಾ!

  ಇದರಿಂದ ತಮಗೆ ಒಳ್ಳೆಯದಾಯಿತು ಎಂದ ಸಮಂತಾ!

  ಇನ್ನು ಫಿಲ್ಮಿಬೀಟ್ ಜತೆ ನಡೆದ ಸಂದರ್ಶನದಲ್ಲಿ ಮಾತನಾಡಿದ ನಟಿ ಸಮಂತಾ ಚಿತ್ರದಲ್ಲಿ ಸರೋಗಸಿ ಪ್ರಮುಖ ಭಾಗವಾಗಿದೆ ಎಂದರು. ಇದರ ಕುರಿತು ಪ್ರಶ್ನೆ ಹಾಕಿದ ನಿರೂಪಕಿ ಸೆಲೆಬ್ರಿಟಿ ಜೋಡಿ ಸರೋಗಸಿ ಮೂಲಕ ಮಕ್ಕಳನ್ನು ಪಡೆದ ಕಾರಣ ಸದ್ಯ ತಮಿಳುನಾಡಿನಲ್ಲಿ ಇದರ ಕುರಿತು ಪ್ರಶ್ನೆ ಎದ್ದಿತ್ತು ಹಾಗೂ ಚರ್ಚೆ ನಡೆದಿತ್ತು, ಅದೇ ಸಮಯದಲ್ಲಿ ಸರೋಗಸಿ ಕುರಿತಾಗಿಯೇ ನಿಮ್ಮ ಚಿತ್ರವೂ ಬಂದ ಕಾರಣ ಸಮಂತಾ ಈ ಹಾಟ್ ಟಾಪಿಕ್ ಕುರಿತಾಗಿಯೇ ಚಿತ್ರ ಮಾಡಿದ್ದಾರೆ ಎಂದು ಜನ ಮಾತನಾಡಿಕೊಳ್ಳತೊಡಗಿದರು ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದರು. ಇದಕ್ಕೆ ಉತ್ತರಿಸಿದ ಸಮಂತಾ 'ನಾನು ಹಾಟ್ ಟಾಪಿಕ್ ಉಪಯೋಗಿಸಿಕೊಂಡು ಚಿತ್ರ ಮಾಡುವ ನಟಿಯಲ್ಲ, ಏಕೆಂದರೆ ವಿವಾದಕ್ಕೂ ಮುನ್ನವೇ ನಮ್ಮ ಚಿತ್ರ ತಯಾರಾಗಿತ್ತು. ಆದರೆ ಈ ವಿವಾದದಿಂದ ( ನಯನತಾರಾ ಸರೋಗಸಿ ವಿವಾದ ) ನಮಗೆ ಉಚಿತ ಪ್ರಚಾರ ಸಿಕ್ಕಂತಾಯಿತು. ಇದು ನಮಗೆ ಒಳ್ಳೆಯದ್ದೇ ಆಯಿತು' ಎಂದರು.

  ಬಾಡಿಗೆ ತಾಯ್ತತನದ ಬಗ್ಗೆ ಸಮಂತಾ ಅಭಿಪ್ರಾಯ

  ಬಾಡಿಗೆ ತಾಯ್ತತನದ ಬಗ್ಗೆ ಸಮಂತಾ ಅಭಿಪ್ರಾಯ

  ಇನ್ನು ನಿರೂಪಕಿ ಸರೋಗಸಿ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂಬ ಪ್ರಶ್ನೆಯನ್ನು ಇಟ್ಟಾಗ ಉತ್ತರಿಸಿದ ನಟಿ ಸಮಂತಾ 'ನಾನು ಯಾವುದರ ಕುರಿತೂ ಸಹ ಅಭಿಪ್ರಾಯವನ್ನು ನೀಡಲು ಇಚ್ಛಿಸುವುದಿಲ್ಲ. ಏಕೆಂದರೆ ನೀವೇನಾದರೂ ಒಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರೆ ನಾನು ಅದನ್ನು ಬದಲಾಯಿಸಿಕೊಳ್ಳುತ್ತೇನೆ. ಯಾರಿಗೆ ಹೇಗೆ ಇಷ್ಟವೋ ಅದೇ ರೀತಿ ಬದುಕುವುದೇ ಸರಿ' ಎಂದು ಸಮಂತಾ ಹೇಳಿದರು.

  English summary
  Nayanthara's surrogacy controversy has become free marketing for us says Samantha. Read on
  Tuesday, November 8, 2022, 16:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X