For Quick Alerts
  ALLOW NOTIFICATIONS  
  For Daily Alerts

  ಸರೋಗಸಿ ವಿಧಾನದಲ್ಲಿ ಅವಳಿ ಮಕ್ಕಳು? ನಯನ್- ವಿಕ್ಕಿ ದಂಪತಿಗೆ 5 ವರ್ಷ ಜೈಲು ಶಿಕ್ಷೆ?

  |

  ಮದುವೆ ಆದ ನಾಲ್ಕೇ ತಿಂಗಳಿಗೆ ಅವಳಿ ಮಕ್ಕಳ ಪೋಷಕರಾಗಿರುವುದಾಗಿ ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಘೋಷಿಸಿದ್ದಾರೆ. ಸಾರೋಗಸಿ ಪದ್ಧತಿ ಮೂಲಕ ದಂಪತಿ ಮಕ್ಕಳನ್ನು ಪಡೆದಿದ್ದಾರೆ ಎನ್ನಲಾಗುತ್ತಿದೆ. ಇದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ ಎನ್ನಲಾಗ್ತಿದ್ದು, ತಮಿಳುನಾಡು ಸರ್ಕಾರ ಕೂಡ ಇವರು ಹೇಗೆ ಮಕ್ಕಳನ್ನು ಪಡೆದರು ಎನ್ನುವ ಮಾಹಿತಿ ಕೇಳಿರುವುದಿರಂದ ಈ ವಿಚಾರ ಹಾಟ್ ಟಾಪಿಕ್ ಆಗಿದೆ.

  2019ರಲ್ಲೇ ಸರೋಗಸಿ ವಿಧಾನದಲ್ಲಿ ಮಕ್ಕಳನ್ನು ಪಡೆಯುವುದು ಅಪರಾಧ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೂ ಕಾನೂ ಉಲ್ಲಂಘಿಸಿ ನಯನತಾರಾ ಬಾಡಿಗೆ ತಾಯ್ತನ ಮೂಲಕ ಮಕ್ಕಳನ್ನು ಪಡೆದಿರುವುದು ಈಗ ಸಮಸ್ಯೆ ತಂದೊಡ್ಡಿದೆ. ಆದರೆ ಇಷ್ಟೆಲ್ಲಾ ಚರ್ಚೆ ನಡೆಯುತ್ತಿದ್ದು, ಗಂಡ ಹೆಂಡತಿ ಮಾತ್ರ ಯಾವುದೇ ಪ್ರತಿಕ್ರಿಯೆ ನೀಡುವ ಗೋಜಿಗೆ ಹೋಗಿಲ್ಲ.

  ನಯನತಾರಾ-ವಿಘ್ನೇಶ್ ಜೋಡಿಗೆ ಮಗು: ತನಿಖೆಗೆ ಆದೇಶಿಸಿದ ತಮಿಳುನಾಡು ಸರ್ಕಾರ! ನಯನತಾರಾ-ವಿಘ್ನೇಶ್ ಜೋಡಿಗೆ ಮಗು: ತನಿಖೆಗೆ ಆದೇಶಿಸಿದ ತಮಿಳುನಾಡು ಸರ್ಕಾರ!

  ಅಂದಹಾಗೆ ಸರೋಗಸಿ ನಿಯಂತ್ರಣ ಕಾಯ್ದೆ2021ರ ಪ್ರಕಾರ ಭಾರತದಲ್ಲಿ ಮದುವೆಯಾದ ಜೋಡಿಗಳ ಜೊತೆಗೆ ವಿಚ್ಛೇದನ ಪಡೆದ ಅಥವಾ ಗಂಡ ಮರಣವೊಂದಿದ್ದರೆ ಒಂಟಿ ಮಹಿಳೆ ಮಾತ್ರ ಸರೋಗಸಿ ವಿಧಾನದ ಮೂಲಕ ಮಕ್ಕಳನ್ನು ಪಡೆಯಲು ಅನುಮತಿಸಲಾಗಿದೆ.

  ಮದುವೆಯಾಗುವುದಕ್ಕಿಂತ ಸುಮಾರು 5 ತಿಂಗಳ ಮೊದಲೇ ಸರೋಗಸಿ ಪ್ರಾಸೆಸ್ ಶುರುವಾದಂತೆ ಕಾಣುತ್ತಿದೆ. ಮದುವೆಗೂ ಮೊದಲೇ ಬಾಡಿಗೆ ಗರ್ಭದಲ್ಲಿ ಮಕ್ಕಳು ಬೆಳೆಯಲು ಪ್ರಾರಂಭಿಸಿದ ಸಾಧ್ಯತೆಯಿದೆ. ಹಾಗಾಗಿ ಮದುವೆಗೂ ಮೊದಲೇ ಇವರು ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆಯಬೇಕೆಂದುಕೊಂಡಿದ್ದು ಕಾನೂನಿನ ಪ್ರಕಾರ ಅಪರಾಧವಾಗುತ್ತದೆ. ಮದುವೆಯಾಗದೇ ಸಹಜೀವನ ನಡೆಸು ಜೋಡಿಗೂ ಸರೋಗಸಿ ವಿಧಾನದಲ್ಲಿ ಮಕ್ಕಳು ಪಡೆಯುವ ಅವಕಾಶ ಇಲ್ಲ. ನಯನತಾರಾ ಹಾಗೂ ವಿಘ್ನೇಶ್ ಮದುವೆಗೂ ಮುನ್ನ ಸಹಜೀವನ ನಡೆಸುತ್ತಿದ್ದರು. ಇದೆಲ್ಲ ಗೊತ್ತಿಲ್ಲದೇ ಇಬ್ಬರು ಸಂಕಷ್ಟಕ್ಕೆ ಸಿಲುಕಿದಂತೆ ಕಾಣುತ್ತಿದೆ.

  Nayanthara Vignesh Shivan Became parents Did Star couple Break Surrogacy Laws

  ಸದ್ಯ ನಯನತಾರಾ ಹಾಗೂ ವಿಘ್ನೇಶ್ ಶಿವನ್ ದಂಪತಿಗೆ ಮಕ್ಕಳು ಎಲ್ಲಿಂದ ಬಂಧರು? ಸರೋಗಸಿ ವಿಧಾನದಲ್ಲೇ ಮಕ್ಕಳನ್ನು ಪಡೆದರಾ ? ಅಥವಾ ದತ್ತು ತೆಗೆದುಕೊಂಡರಾ? ಒಂದು ವೇಳೆ ಹಾಗೆ ಆಗಿದ್ದರೆ ಅದು ಕಾನೂನಾತ್ಮಕವಾಗಿ ಇದೆಯಾ? ಎಂದು ನೆಟ್ಟಿಗರು ಕೇಳುತ್ತಿದ್ದಾತೆ. ಕಾನೂನಾತ್ಮಕವಾಗಿ ಮಕ್ಕಳನ್ನು ಪಡೆದಿದ್ದರೆ ಸರಿ, ಇಲ್ಲದಿದ್ದರೆ ದಂಪತಿ ಸಮಸ್ಯೆ ತಪ್ಪಿದ್ದಲ್ಲ. ವಿಕ್ಕಿ- ನಯನ್‌ ನ್ಯಾಯಾಲಯದ ತೀರ್ಪನ್ನು ಉಲ್ಲಂಘಿಸಿದ್ದಾರೆ. ಹಾಗಾಗಿ ಶಿಕ್ಷೆ ಅನುಭವಿಸಲೇಬೇಕು ಎಂದು ಕಾಲಿವುಡ್‌ನಲ್ಲಿ ಚರ್ಚೆ ನಡೀತಿದೆ. ಈ ಆಕ್ಟ್ ಪ್ರಕಾರ ಶಿಕ್ಷೆ ಏನಿರಬಹುದು ಎಂದು ಕೆಲವರು ಪರಿಶೀಲಿಸುತ್ತಿದ್ದಾರೆ. ಸರೋಗಸಿ ಯಾಕ್ಟ್ 2021 ರ ಪ್ರಕಾರ ಅಕ್ರಮವಾಗಿ ಬಾಡಿಗೆ ತಾಯ್ತನದ ಮೂಲಕ ಮಕ್ಕಳನ್ನು ಪಡೆದಿದ್ದರೆ 5 ವರ್ಷ ಜೈಲು ಶಿಕ್ಷೆ, 50 ಸಾವಿರ ದಂಡ ಪಾವತಿಸಬೇಕು. 2ನೇ ಬಾರಿ ಇದೇ ತಪ್ಪು ಮಾಡಿದರೆ 1ಲಕ್ಷ ದಂಡ ಎನ್ನಲಾಗುತ್ತಿದೆ. ಸದ್ಯ ದಂಪತಿ ಕಾನೂನಾತ್ಮಕವಾಗಿ ಮಕ್ಕಳನ್ನು ಪಡೆದಿರುವುದಾಗಿ ಸಾಬೀತು ಮಾಡುತ್ತಾರಾ ಕಾದು ನೋಡಬೇಕು.

  ಬಾಡಿಗೆ ಗರ್ಭದ ಮೂಲಕ ಮಕ್ಕಳನ್ನು ಪಡೆಯುವುದಕ್ಕೆ ಸರೋಗಸಿ ವಿಧಾನ ಎನ್ನುತ್ತಾರೆ. ಅಂದರೆ ಬೇರೆ ಮಹಿಳೆ, ಪುರುಷನಿಗೆ ಸೇರಿದ ಮಗುವನ್ನು ಮತ್ತೊಂದು ಮಹಿಳೆ ತನ್ನ ಗರ್ಭದಲ್ಲಿ ಹೊತ್ತು ಹೆರುವುದು. ಪ್ರಸವದ ನಂತರ ಮಗುವನ್ನು ಹೊತ್ತು ಹೆತ್ತ ಮಹಿಳೆಗೆ ಅ ಮಗುವಿನ ಮೇಲೆ ಯಾವುದೇ ಹಕ್ಕು ಇರುವುದಿಲ್ಲ. ಅಂಡಾಣು, ವೀರ್ಯ ಕೊಟ್ಟವರೇ ಆ ಮಗುವಿಗೆ ಪೋಷಕರಾಗುತ್ತಾರೆ. ಈ ವಿಧಾನದಲ್ಲಿ ಸಾಕಷ್ಟು ಸೆಲೆಬ್ರೆಟಿಗಳು ಮಕ್ಕಳನ್ನು ಪಡೆದಿದ್ದಾರೆ.

  English summary
  Nayanthara Vignesh Shivan Became parents Did Star couple Break Surrogacy Laws. Know More.
  Wednesday, October 12, 2022, 7:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X