For Quick Alerts
  ALLOW NOTIFICATIONS  
  For Daily Alerts

  ವಿಕ್ರಂ, ಐಶ್ವರ್ಯಾ ರೈ, ಎ ಆರ್ ರೆಹಮಾನ್ ಸರಳತೆಗೆ ಫಿದಾ ಆದ ನೆಟ್ಟಿಗರು

  |

  ತಮಿಳಿನ ಸ್ಟಾರ್ ನಟ ವಿಕ್ರಂ, ಕೆಲ ದಿನಗಳ ಹಿಂದಷ್ಟೆ ತಮ್ಮ ಮನೆಯ ಕೆಲಸದವರ ಮಗನ ಮದುವೆಯಲ್ಲಿ ಭಾಗಿಯಾಗಿ ಸರಳತೆ ಮೆರೆದಿದ್ದರು. ಈಗ ಮತ್ತೊಮ್ಮೆ ತಮ್ಮ ಸರಳತೆಯಿಂದ ಸುದ್ದಿಯಾಗಿದ್ದಾರೆ. ಆದರೆ ಈ ಬಾರಿ ವಿಕ್ರಂ ಜೊತೆಗೆ ನಟಿ ಐಶ್ವರ್ಯಾ ರೈ ಸಹ ಜೊತೆಯಾಗಿದ್ದಾರೆ.

  ವಿಕ್ರಂ, ಐಶ್ವರ್ಯಾ ರೈ, ತ್ರಿಶಾ, ಕಾರ್ತಿ ಇನ್ನಿತರ ಸ್ಟಾರ್ ನಟರು ನಟಿಸಿರುವ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು ಕೆಲವೇ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾ ತಂಡವು ಪ್ರಚಾರ ಆರಂಭಿಸಿದ್ದು, ಭಾರತದಾದ್ಯಂತ ಪ್ರವಾಸ ಮಾಡಿ ಪ್ರಚಾರ ಮಾಡಲಾಗುತ್ತಿದೆ.

  ವಿಕ್ರಂ- ಶ್ರೀನಿಧಿ ಶೆಟ್ಟಿ ಜೋಡಿಯ 'ಕೋಬ್ರಾ' ಸಿನಿಮಾ ಓಟಿಟಿ ರಿಲೀಸ್ ಡೇಟ್ ಫಿಕ್ಸ್: ಎಲ್ಲಿ.. ಯಾವಾಗ? ವಿಕ್ರಂ- ಶ್ರೀನಿಧಿ ಶೆಟ್ಟಿ ಜೋಡಿಯ 'ಕೋಬ್ರಾ' ಸಿನಿಮಾ ಓಟಿಟಿ ರಿಲೀಸ್ ಡೇಟ್ ಫಿಕ್ಸ್: ಎಲ್ಲಿ.. ಯಾವಾಗ?

  ನಿನ್ನೆ ಹೈದರಾಬಾದ್‌ನಲ್ಲಿ ಪ್ರಚಾರ ಮಾಡಿದ ಸಿನಿಮಾ ತಂಡ ಅಲ್ಲಿಂದ ನೇರವಾಗಿ ಮುಂಬೈಗೆ ಪ್ರಯಾಣ ಬೆಳೆಸಿದೆ. ಹೀಗೆ ಚಿತ್ರತಂಡ ಒಟ್ಟಿಗೆ ಪ್ರಯಾಣಿಸುವಾಗ ಖಾಸಗಿ ವಿಮಾನದಲ್ಲಿ ಪ್ರಯಾಣಿಸುವುದು ರೂಢಿ. ಆದರೆ ನಿನ್ನೆ ವಿಕ್ರಂ, ಐಶ್ವರ್ಯಾ ರೈ, ತ್ರಿಶಾ, ಎ.ಆರ್.ರೆಹಮಾನ್ ಅವರುಗಳು ಸಾಮಾನ್ಯ ವಿಮಾನದಲ್ಲಿ ಅದೂ ಎಕಾನಮಿ ಕ್ಲಾಸ್‌ನಲ್ಲಿ ಹೈದರಾಬಾದ್‌ನಿಂದ ಮುಂಬೈಗೆ ಪ್ರಯಾಣ ಬೆಳೆಸಿದ್ದಾರೆ.

  ಹೌದು, ಸಾಮಾನ್ಯರು ಪ್ರಯಾಣಿಸುವ ಎಕಾನಮಿ ಕ್ಲಾಸ್‌ನಲ್ಲಿ ಚಿತ್ರತಂಡ ಪ್ರಯಾಣಿಸಿದ್ದು, ಆ ಚಿತ್ರ ಇದೀಗ ಸಖತ್ ವೈರಲ್ ಆಗಿದೆ. ವಿಮಾನದಲ್ಲಿ ಎಕಾನಮಿ ಹಾಗೂ ಬ್ಯುಸಿನೆಸ್ ಕ್ಲಾಸ್ ಎಂದಿರುತ್ತದೆ. ಶ್ರೀಮಂತರು, ಐಶಾರಾಮಿ ವರ್ಗದವರು ಎಕಾನಮಿ ಬದಲಿಗೆ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಾರೆ. ಆದರೆ ವಿಕ್ರಂ ಹಾಗೂ ಐಶ್ವರ್ಯಾ ರೈ ಅವರುಗಳು ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣ ಬೆಳೆಸಿದ್ದು ನೆಟ್ಟಿಗರ ಆಶ್ಚರ್ಯ ಹಾಗೂ ಮೆಚ್ಚುಗೆಗೆ ಕಾರಣವಾಗಿದೆ.

  ಚಿತ್ರತಂಡವು, ಹೈದರಾಬಾದ್‌ನಿಂದ ಮುಂಬೈಗೆ ಒಟ್ಟಿಗೆ ಪ್ರಯಾಣಿಸುತ್ತಿರುವ ಚಿತ್ರವನ್ನು ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಎ.ಆರ್.ರೆಹಮಾನ್, ವಿಕ್ರಂ ಒಟ್ಟಿಗೆ ಕುಳಿತಿದ್ದರೆ, ಅವರ ಪಕ್ಕದಲ್ಲಿ ಸೀಟಿನಲ್ಲಿ ಐಶ್ವರ್ಯಾ ರೈ ಮಾಸ್ಕ್‌ ಧರಿಸಿ ಕುಳಿತಿದ್ದಾರೆ. ಅವರೊಟ್ಟಿಗೆ ತ್ರಿಶಾ ಸಹ ಇದ್ದಾರಾದರೂ ಅವರ ಮುಖ ಕಾಣುತ್ತಿಲ್ಲ.

  ದೊಡ್ಡ ಸ್ಟಾರ್ ನಟ-ನಟಿಯರು ಸಾಮಾನ್ಯರಂತೆ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣ ಬೆಳೆಸಿರುವುದನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

  'ಪೊನ್ನಿಯಿನ್ ಸೆಲ್ವನ್' ಸಿನಿಮಾವು ಇದೇ ಸೆಪ್ಟೆಂಬರ್ 30 ರಂದು ದೇಶದಾದ್ಯಂತ ಹಲವು ಭಾಷೆಗಳಲ್ಲಿ ತೆರೆಗೆ ಬರಲಿದೆ. ವಿದೇಶಗಳಲ್ಲಿಯೂ ದೊಡ್ಡ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ವಿಕ್ರಂ, ಕಾರ್ತಿ, ಐಶ್ವರ್ಯಾ ರೈ, ತ್ರಿಶಾ, ಜಯಂ ಸೂರ್ಯ, ಪ್ರಕಾಶ್ ರೈ, ಶೋಭಿತಾ ಧುಲಿಪಾಲ, ನಾಸರ್, ಕಿಶೋರ್ ಇನ್ನೂ ಹಲವು ಸ್ಟಾರ್ ನಟ-ನಟಿಯರು ಸಿನಿಮಾದಲ್ಲಿ ನಟಿಸಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಈ ಚಿತ್ರತಂಡ ಬೆಂಗಳೂರಿಗೂ ಬಂದು ಪ್ರಚಾರ ಮಾಡಿತ್ತು. ಆದರೆ ಬೆಂಗಳೂರಿಗೆ ಐಶ್ವರ್ಯಾ ರೈ ಬಂದಿರಲಿಲ್ಲ.

  English summary
  Netizen praises actor Vikram, Aishwarya Rai, Trisha and AR Rahman's simplicity. They all traveled in economy class from Hyderabad to Mumbai.
  Sunday, September 25, 2022, 15:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X