For Quick Alerts
  ALLOW NOTIFICATIONS  
  For Daily Alerts

  ನಾವೀಗ ಪ್ನಗ್ನೆಂಟ್ ಎಂದು ಬರೆದ ನಿರ್ದೇಶಕ ಅಟ್ಲಿ; ನಕ್ಕ ನೆಟ್ಟಿಗರು, ಕಂಗ್ರಾಟ್ಸ್ ಹೇಳಿದ ರಶ್ಮಿಕಾ

  By ಫಿಲ್ಮಿಬೀಟ್ ಡೆಸ್ಕ್
  |

  ತಮಿಳು ಚಿತ್ರರಂಗದ ಹೆಸರಾಂತ ನಿರ್ದೇಶಕ ಅಟ್ಲಿ ಕುಮಾರ್. ಸಹಾಯಕ ನಿರ್ದೇಶಕನಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಅಟ್ಲಿ 2013ರಲ್ಲಿ ತೆರೆಕಂಡ ರಾಜ ರಾಣಿ ಚಿತ್ರದ ಮೂಲಕ ನಿರ್ದೇಶಕನಾದರು. ನಿರ್ದೇಶನದ ಮೊದಲ ಚಿತ್ರದ ಮೂಲಕವೇ ಬೃಹತ್ ಹಿಟ್ ಬಾರಿಸಿದ ಅಟ್ಲಿ ನಂತರ ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ಅವರಿಗೆ ಮೂರು ಚಿತ್ರಗಳನ್ನು ನಿರ್ದೇಶಿಸಿ ಗೆದ್ದು ಈಗ ಬಾಲಿವುಡ್‌ಗೂ ಸಹ ಕಾಲಿಟ್ಟಿದ್ದಾರೆ.

  ಹೀಗೆ ಯಶಸ್ವಿ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಅಟ್ಲಿ ಕುಮಾರ್ 2014ರಲ್ಲಿ ಕೃಷ್ಣ ಪ್ರಿಯಾ ಎಂಬ ತಮ್ಮ ಬಹು ಸಮಯದ ಗೆಳತಿ ಜತೆ ವೈವಾಹಿಕ ಜೀವನ ಆರಂಭಿಸಿದರು. ಎಂಟು ವರ್ಷಗಳಿಂದ ಅನ್ಯೋನ್ಯವಾಗಿ ಜೀವನ ಸಾಗಿಸುತ್ತಿರುವ ನಿರ್ದೇಶಕ ಅಟ್ಲಿ ಹಾಗೂ ಪ್ರಿಯಾ ಕೃಷ್ಣ ಮೊದಲ ಬಾರಿಗೆ ತಂದೆ - ತಾಯಿಯಾಗುತ್ತಿರುವ ಖುಷಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ತಮ್ಮ ಪತ್ನಿ ಜತೆಗಿನ ತಮ್ಮ ಫೊಟೊಶೂಟ್ ಚಿತ್ರಗಳನ್ನು ಹಂಚಿಕೊಂಡಿರುವ ಅಟ್ಲಿ ತಾವು ಪೋಷಕರಾಗುತ್ತಿರುವ ಖುಷಿಯನ್ನು ತಮ್ಮ ಅನುಯಾಯಿಗಳ ಜತೆ ಹಂಚಿಕೊಂಡಿದ್ದಾರೆ. ಆದರೆ ಅಟ್ಲಿ ಬರೆದುಕೊಂಡಿರುವ ಸಾಲುಗಳನ್ನು ಕಂಡ ಕೆಲ ನೆಟ್ಟಿಗರು ಗೊಂದಲಕ್ಕೊಳಗಾಗಿದ್ದು, ಕೆಲವರು ಟ್ರೋಲ್ ಮಾಡಿದ್ದರೆ, ಇನ್ನೂ ಕೆಲವರು ತಪ್ಪಾಗಿ ಬರೆದಿದ್ದೀರ ಎಂದು ಕಾಮೆಂಟ್ ಮಾಡಿದ್ದಾರೆ.

  ವಿ ಆರ್ ಪ್ರಗ್ನೆಂಟ್ ಎಂದ ಅಟ್ಲಿ

  ವಿ ಆರ್ ಪ್ರಗ್ನೆಂಟ್ ಎಂದ ಅಟ್ಲಿ

  'ನಾವು ಪೋಷಕರಾಗುತ್ತಿರುವ ವಿಷಯವನ್ನು ಹಂಚಿಕೊಳ್ಳಲು ಸಂತಸವಾಗುತ್ತಿದೆ. ನಿಮ್ಮೆಲ್ಲರ ಆಶೀರ್ವಾದ ಬೇಕು' ಎಂದು ಅಟ್ಲಿ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಇದನ್ನು ಇಂಗ್ಲಿಷ್‌ನಲ್ಲಿಯೇ ಬರೆದಿರುವ ಅಟ್ಲಿ 'We are pregnant' ಎಂದು ಉಲ್ಲೇಖಿಸಿದ್ದಾರೆ. ಇದು ನಾವು ಪ್ರಗ್ನೆಂಟ್ ಆಗಿದ್ದೇವೆ ಎಂಬ ಅರ್ಥವನ್ನು ಕೊಡುವ ಕಾರಣ ಕೆಲ ನೆಟ್ಟಿಗರು ಅದು ತಪ್ಪು, 'She is pregnant' ಎಂದು ಬಳಸಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ವಿ ಆರ್ ಪ್ರಗ್ನೆಂಟ್ ಅಂತೆ ಎಂದು ನಕ್ಕಿದ್ದಾರೆ. ಆದರೆ ಆಂಗ್ಲ ಭಾಷೆಯಲ್ಲಿ ಈ ಸಾಲನ್ನು ತಂದೆ ತಾಯಿಯಾಗುವ ಪೋಷಕರು ಬಳಸುವುದು ಕಾಮನ್. ಈ ಹೆಸರಿನ ಅಡಿಯಲ್ಲಿ ಚಲನಚಿತ್ರವೊಂದೂ ಸಹ ಬಂದಿತ್ತು.

  ಶುಭ ಹಾರೈಸಿದ ರಶ್ಮಿಕಾ

  ಶುಭ ಹಾರೈಸಿದ ರಶ್ಮಿಕಾ

  ಇನ್ನು ಅಟ್ಲಿ ತಾನು ತಂದೆಯಾಗುತ್ತಿರುವ ಖುಷಿಯನ್ನು ಹಂಚಿಕೊಂಡಿರುವ ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ನಟಿ ರಶ್ಮಿಕಾ ಮಂದಣ್ಣ ಇಬ್ಬರಿಗೂ ಕಂಗ್ರಾಜುಲೇಷನ್ಸ್ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಅಟ್ಲಿ ಕೂಡ ರಿಪ್ಲೈ ಮಾಡಿದ್ದು ಧನ್ಯವಾದ ತಿಳಿಸಿದ್ದಾರೆ. ಇನ್ನೂ ಹಲವಾರು ಸಿನಿಮಾ ಮಂದಿ ರಿಪ್ಲೈ ಮಾಡಿ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.

  ಹಲವಾರು ಬಾರಿ ಅಟ್ಲಿ ಟ್ರೋಲ್

  ಹಲವಾರು ಬಾರಿ ಅಟ್ಲಿ ಟ್ರೋಲ್

  ಇನ್ನು ನಿರ್ದೇಶಕ ಅಟ್ಲಿ ಟ್ರೋಲ್ ಆಗಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವಾರು ಬಾರಿ ತಮ್ಮ ಲುಕ್ ಹಾಗೂ ಬಣ್ಣದ ವಿಚಾರವಾಗಿ ಟ್ರೋಲ್‌ಗಳನ್ನು ಎದುರಿಸಿದ್ದರು. ಇದ್ಯಾವುದಕ್ಕೂ ಕಿಂಚಿತ್ತೂ ಸೊಪ್ಪು ಹಾಕದೇ ತನ್ನ ಪಾಡಿಗೆ ಸಿನಿಮಾಗಳಲ್ಲಿ ಬ್ಯುಸಿ ಇದ್ದ ಅಟ್ಲಿ ಈಗ ಬಾಲಿವುಡ್‌ನ ಸ್ಟಾರ್ ನಟ ಶಾರುಖ್ ಖಾನ್‌ಗೆ ಚಿತ್ರ ನಿರ್ದೇಶಿಸುವ ಮಟ್ಟ ತಲುಪಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್‌ಗಳನ್ನು ಚಿತ್ರತಂಡ ಹಂಚಿಕೊಂಡಿದ್ದು, ಮುಂದಿನ ಜೂನ್ ತಿಂಗಳಿನಲ್ಲಿ ಚಿತ್ರ ಬೆಳ್ಳಿ ತೆರೆಗೆ ಅಪ್ಪಳಿಸಲಿದೆ.

  English summary
  Netizens laughed as director Atlee tweeted we are pregnant post. Take a look
  Friday, December 16, 2022, 21:06
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X