For Quick Alerts
  ALLOW NOTIFICATIONS  
  For Daily Alerts

  ಹೆಂಗಿದ್ದ ನಾಗಶೇಖರ್ ಹೆಂಗಾದರು: ನವೆಂಬರ್ ಮಳೆಯೇ ಕಾರಣ!

  |

  'ಮೈನಾ', 'ಸಂಜು ವೆಡ್ಸ್ ಗೀತಾ' ರೀತಿಯ ಹಿಟ್ ಸಿನಿಮಾಗಳನ್ನು ಕೊಟ್ಟ ನಿರ್ದೇಶಕ ನಾಗಶೇಖರ್ ಸೈಲೆಂಟ್ ಆಗಿಬಿಟ್ಟಿದ್ದಾರೆ. ಇತ್ತೀಚೆಗೆ ಅವರ ಸಿನಿಮಾಗಳು ಅಷ್ಟಾಗಿ ಸದ್ದು ಮಾಡ್ತಿಲ್ಲ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ನಾಗಶೇಖರ್ ವಿಚಿತ್ರ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ಅವರ ಹೊಸ ವೇಷ ನೋಡಿದವರು ಶಾಕ್ ಆಗಿದ್ದಾರೆ.

  ನಾಗಶೇಖರ್ ನಿರ್ದೇಶನದ 'ಅಮರ್' ಹಾಗೂ 'ಶ್ರೀಕೃಷ್ಣ@ಜಿಮೇಲ್‌ಡಾಟ್‌ಕಾಂ' ಸಿನಿಮಾಗಳು ಸದ್ದು ಮಾಡಲೇಯಿಲ್ಲ. ಕನ್ನಡದ 'ಲವ್ ಮಾಕ್ಟೇಲ್' ತೆಲುಗಿಗೆ ರೀಮೆಕ್ ಮಾಡುವ ಪ್ರಯತ್ನ ಮಾಡಿದರು. ಆದರೆ ಯಾಕೋ ಆ ಚಿತ್ರಕ್ಕೆ ಬಿಡುಗಡೆ ಭಾಗ್ಯವೇ ಸಿಗುತ್ತಿಲ್ಲ. ಇದೆಲ್ಲದರ ಮಧ್ಯೆ ನಾಗಶೇಖರ್ ಹೀರೊ ಆಗಿ ಮತ್ತೊಂದು ಚಿತ್ರಕ್ಕೆ ಕೈ ಹಾಕಿದ್ದಾರೆ. ಈ ಬಾರಿ ಸ್ಯಾಂಡಲ್‌ವುಡ್ ಬಿಟ್ಟು ಕಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಇಳಿಸಿದ್ದಾರೆ. ಚಿತ್ರತಂಡ ಪೋಸ್ಟರ್ ಸಮೇತ ನಾಗಶೇಖರ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿದೆ.

  'ನಗುತಾ ನಗುತಾ ಬಾಳು' ಹಾಡಿಗೆ ಹಂಸಲೇಖ ಬರೆದ ಸಾಹಿತ್ಯ ಏನು? ಅದು ಬದಲಾಗಿದ್ದು ಯಾಕೆ?'ನಗುತಾ ನಗುತಾ ಬಾಳು' ಹಾಡಿಗೆ ಹಂಸಲೇಖ ಬರೆದ ಸಾಹಿತ್ಯ ಏನು? ಅದು ಬದಲಾಗಿದ್ದು ಯಾಕೆ?

  ಪೋಸ್ಟರ್‌ನಲ್ಲಿ ತಲೆ ಬೋಳಿಸಿಕೊಂಡು ವಿಭಿನ್ನವಾಗಿ ದರ್ಶನ ಕೊಟ್ಟಿದ್ದಾರೆ. 'ನವೆಂಬರ್ ಮಳೆಯಿಳ್ ನಾನು ಅವಳುಂ' ಹೆಸರಿನ ಈ ಚಿತ್ರದಲ್ಲಿ ಒಂದು ವಿಭಿನ್ನ ಕಥೆ ಹೇಳಲು ನಾಗಶೇಖರ್ ಮುಂದಾಗಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆ ಬೆರೆದು ನಿರ್ದೇಶನದ ಮಾಡುವುದರ ಜೊತೆಗೆ ಸ್ನೇಹಿತರ ಜೊತೆ ಸೇರಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

  ಸೀಳು ತುಟಿಯ ಯುವಕನ ಪ್ರೇಮಕಥೆ

  ಸೀಳು ತುಟಿಯ ಯುವಕನ ಪ್ರೇಮಕಥೆ

  'ನವೆಂಬರ್ ಮಳೆಯಿಳ್ ನಾನು ಅವಳುಂ' ಚಿತ್ರದಲ್ಲಿ ಸೀಳು ತುಟಿಯ ಯುವಕನ ಪ್ರೇಮಕಥೆಯನ್ನು ಹೇಳಲು ನಾಗಶೇಖರ್ ಮುಂದಾಗಿದ್ದಾರೆ. ಪಾತ್ರಕ್ಕೆ ತಕ್ಕಂತೆ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಬಹುತೇಕ ಸಿನಿಮಾ ಕಥೆ ಮನೆಯಲ್ಲೇ ಸಾಗುತ್ತದೆಯಂತೆ. ಈಗಾಗಲೇ ಚಿತ್ರದ ಬಹುತೇಕ ಕೆಲಸಗಳು ಕಂಪ್ಲೀಟ್ ಆಗಿದೆ. ಕಾಲಿವುಡ್ ಅಂಗಳದಲ್ಲಿ ಸಿನಿಮಾ ಕುತೂಹಲ ಮೂಡಿಸಿದೆ.

  ರೀ ರೆಕಾರ್ಡಿಂಗ್ ಇಲ್ಲದ ಸಿನಿಮಾ

  ರೀ ರೆಕಾರ್ಡಿಂಗ್ ಇಲ್ಲದ ಸಿನಿಮಾ

  ವಿಭಿನ್ನ ಟೈಟಲ್‌ನ 'ನವೆಂಬರ್ ಮಳೆಯಿಳ್ ನಾನು ಅವಳುಂ' ಚಿತ್ರದಲ್ಲಿ ರೀ ರೆಕಾರ್ಡಿಂಗ್ ಇರುವುದಿಲ್ಲವಂತೆ. ವಿಚಿತ್ರ ಅನ್ನಿಸಿದರೂ ಇದು ನಿಜ. ರೀ ರೆಕಾರ್ಡಿಂಗ್ ಇಲ್ಲದೇ ಈ ಕಥೆಯನ್ನು ಹೇಳುವ ಪ್ರಯೋಗ ಮಾಡುತ್ತಿದ್ದಾರೆ ನಾಗಶೇಖರ್. ಆಯಾ ಸನ್ನಿವೇಶಗಳಿಗೆ ತಕ್ಕಂತೆ ಮಳೆ, ಗುಡುಗು, ವಾಹನಗಳ ಸದ್ದು ಹೀಗೆ ನೈಜ ಶಬ್ದ‌ಗಳನ್ನು ಮಾತ್ರ ಬಳಸಿಕೊಂಡು ಕಥೆಯನ್ನು ನಿರೂಪಣೆ ಮಾಡುತ್ತಿದ್ದಾರೆ.

  ವಿಕ್ರಂ ಚಿತ್ರಕ್ಕೂ ಇದೇ ಟೈಟಲ್

  ವಿಕ್ರಂ ಚಿತ್ರಕ್ಕೂ ಇದೇ ಟೈಟಲ್

  ಈ ಹಿಂದೆ ನಿರ್ದೇಶಕ ನಾಗಶೇಖರ್ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಂ ರವಿಚಂದ್ರನ್‌ ಜೊತೆ ಒಂದು ಸಿನಿಮಾ ಘೋಷಿಸಿದ್ದರು. 'ನವೆಂಬರ್‌ನಲ್ಲಿ ನಾನು ಅವಳು' ಚಿತ್ರ್ ಟೈಟಲ್. ಸಣ್ಣ ಟೀಸರ್ ಕೂಡ ಮಾಡಿ ರಿಲೀಸ್ ಮಾಡಿದ್ದರು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ನಿಂತು ಹೋಗಿತ್ತು. ಅದೇ ಟೈಟಲ್ ಕೊಂಚ ಬದಲಿಸಿ ತಮಿಳು ಸಿನಿಮಾ ಮಾಡುತ್ತಿದ್ದಾರೆ. ಆದರೆ ಆ ಕಥೆನೇ ಬೇರೆ ಈ ಕಥೆನೇ ಬೇರೆ ಎಂದು ನಿರ್ದೇಶಕರು ಹೇಳಿದ್ದಾರೆ.

  ಫೆಬ್ರವರಿ 14ಕ್ಕೆ ಚಿತ್ರ ರಿಲೀಸ್

  ಫೆಬ್ರವರಿ 14ಕ್ಕೆ ಚಿತ್ರ ರಿಲೀಸ್

  ಆಶಾ ಶಿವು, ನಾಗೇಂದ್ರ ಶೆಟ್ಟಿ ಜೊತೆ ಸೇರಿ ನಾಗಶೇಖರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕನ್ನಡದ ಛಾಯಾಗ್ರಾಹಕ ಸತ್ಯಾ ಹೆಗಡೆ ಚಿತ್ರವನ್ನು ಸೆರೆ ಹಿಡಿದಿದ್ದಾರೆ. ಕೆಆರ್‌ಜಿ ಸ್ಟುಡಿಯೋಸ್ ಸಂಸ್ಥೆ 'ನವೆಂಬರ್ ಮಳೆಯಿಳ್ ನಾನು ಅವಳುಂ' ಸಿನಿಮಾ ವಿತರಣೆಯ ಜವಾಬ್ದಾರಿ ವಹಿಸಿಕೊಂಡಿದೆ. ಮುಂದಿನ ವರ್ಷ ಫೆಬ್ರವರಿ 14ಕ್ಕೆ ವ್ಯಾಲಂಟೈನ್ಸ್ ಡೇ ಸ್ಪೆಷಲ್ ಆಗಿ ಸಿನಿಮಾ ರಿಲೀಸ್ ಆಗಲಿದೆ.

  English summary
  November Mazhaiyil Naanum Avalum new poster released on Nagashekar’s birthday. This movie is written, directed and acted by Nagashekar. Movie distribution rights bought by Krg Studios. know more.
  Friday, November 11, 2022, 18:20
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X