For Quick Alerts
  ALLOW NOTIFICATIONS  
  For Daily Alerts

  ಪೊನ್ನಿಯಿನ್ ಸೆಲ್ವನ್ ಬಜೆಟ್ ಎಷ್ಟು? ಐಶ್ವರ್ಯ ರೈ, ವಿಕ್ರಮ್, ತ್ರಿಶಾ ಪೈಕಿ ಹೆಚ್ಚು ಸಂಭಾವನೆ ಪಡೆದವರಾರು?

  |

  ಈ ಶುಕ್ರವಾರ ಸಿನಿ ಪ್ರೇಕ್ಷಕರಿಗೆ ಭರಪೂರ ಮನರಂಜನೆ ಸಿಗುವುದು ಖಚಿತ ಎನ್ನಬಹುದು. ಚಂದನವನದಲ್ಲಿ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ, ಕಾಲಿವುಡ್‌ನಿಂದ ಮಣಿರತ್ನಂ ನಿರ್ದೇಶನದ ಪೊನ್ನಿಯಿನ್ ಸೆಲ್ವನ್ 1 ಹಾಗೂ ಬಾಲಿವುಡ್‌ನಿಂದ ತಮಿಳು ರಿಮೇಕ್ ವಿಕ್ರಮ್ ವೇದಾ ಸಿನಿಮಾಗಳು ಥಿಯೇಟರ್ ಅಂಗಳಕ್ಕೆ ಬರಲಿವೆ. ಈ ಪೈಕಿ ಕಾಂತಾರ ಹಾಗೂ ಪೊನ್ನಿಯಿನ್ ಸೆಲ್ವನ್ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಈ ಎರಡು ಚಿತ್ರಗಳ ನಡುವೆ ಪೈಪೋಟಿ ಏರ್ಪಡಲಿದೆ ಎನ್ನಬಹುದು.

  ಕಾಂತಾರ ಸಾಮಾನ್ಯ ಬಜೆಟ್‌ನ ಕನ್ನಡ ಸಿನಿಮಾವಾಗಿದ್ದು, ಪೊನ್ನಿಯಿನ್ ಸೆಲ್ವನ್ ಬಿಗ್ ಬಜೆಟ್‌ನ ಪ್ಯಾನ್ ಇಂಡಿಯಾ ಸಿನಿಮಾವಾಗಿದೆ. ಇನ್ನು ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ದೊಡ್ಡ ತಾರೆಗಳ ದಂಡೇ ಇದೆ. ಚಿಯಾನ್ ವಿಕ್ರಮ್, ಐಶ್ವರ್ಯ ರೈ ಬಚ್ಚನ್, ಜಯಮ್ ರವಿ, ಕಾರ್ತಿ, ತ್ರಿಶಾ, ಐಶ್ವರ್ಯ ಲಕ್ಷ್ಮಿ, ಶೋಭಿತಾ ಧುಲಿಪಲ, ಪ್ರಭು, ಶರತ್ ಕುಮಾರ್, ವಿಕ್ರಮ್ ಪ್ರಭು ಹಾಗೂ ಪ್ರಕಾಶ್ ರಾಜ್ ಸೇರಿದಂತೆ ಇನ್ನೂ ಹಲವಾರು ತಾರೆಗಳು ಚಿತ್ರದಲ್ಲಿದ್ದು, ನಿರ್ಮಾಪಕರು ತಾರೆಯರ ಸಂಭಾವನೆಗೇ ಐವತ್ತಕ್ಕೂ ಹೆಚ್ಚು ಕೋಟಿ ಸುರಿದಿದೆ ಎನ್ನಲಾಗಿದೆ.

  ಹಾಗಿದ್ದರೆ ಪೊನ್ನಿಯಿನ್ ಸೆಲ್ವನ್ ನಿರ್ಮಾಪಕರು ಚಿತ್ರಕ್ಕೆ ಎಷ್ಟು ಕೋಟಿ ಖರ್ಚು ಮಾಡಿದ್ದಾರೆ ಹಾಗೂ ಕಲಾವಿದರಿಗೆ ಎಷ್ಟು ಕೋಟಿ ಸಂಭಾವನೆಯನ್ನು ನೀಡಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

  ಪೊನ್ನಿಯಿನ್ ಸೆಲ್ವನ್ ಬಜೆಟ್

  ಪೊನ್ನಿಯಿನ್ ಸೆಲ್ವನ್ ಬಜೆಟ್

  ಪೊನ್ನಿಯಿನ್ ಸೆಲ್ವನ್ 1 ಸಿನಿಮಾ ಬಜೆಟ್ 500 ಕೋಟಿ ರೂಪಾಯಿ ಎಂದು ವರದಿಯಾಗಿದೆ. ಈ ಮೂಲಕ ಆರ್ ಆರ್ ಆರ್ ಹಾಗೂ ರೋಬೊ 2.0 ಚಿತ್ರಗಳನ್ನು ಬಿಟ್ಟರೆ ಅತಿಹೆಚ್ಚು ವೆಚ್ಚದಲ್ಲಿ ತಯಾರಾದ ಸಿನಿಮಾ ಎನಿಸಿಕೊಂಡಿದೆ ಪೊನ್ನಿಯಿನ್ ಸೆಲ್ವನ್ 1 ಚಿತ್ರ. ಈ ಹಿಂದೆ ಆರ್ ಆರ್ ಆರ್ 550 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿತ್ತು ಹಾಗೂ ರೋಬೊ 2.0 575 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿತ್ತು.

  ಪೊನ್ನಿಯಿನ್ ಸೆಲ್ವನ್ ತಾರೆಗಳು ಪಡೆದ ಸಂಭಾವನೆ

  ಪೊನ್ನಿಯಿನ್ ಸೆಲ್ವನ್ ತಾರೆಗಳು ಪಡೆದ ಸಂಭಾವನೆ

  ಪೊನ್ನಿಯಿನ್ ಸೆಲ್ವನ್ ಚಿತ್ರದಲ್ಲಿ ನಟಿಸುವುದಕ್ಕಾಗಿ ನಟ ಚಿಯಾನ್ ವಿಕ್ರಮ್ 12 ಕೋಟಿ ಸಂಭಾವನೆ ಪಡೆದಿದ್ದರೆ, ನಟಿ ಐಶ್ವರ್ಯ ರೈ ಬಚ್ಚನ್ 10 ಕೋಟಿ ಸಂಭಾವನೆ ಪಡೆದಿದ್ದಾರೆ. ಇನ್ನುಳಿದಂತೆ ಜಯಮ್ ರವಿ 8 ಕೋಟಿ, ಕಾರ್ತಿ 5 ಕೋಟಿ, ತ್ರಿಶಾ 2.5 ಕೋಟಿ, ಐಶ್ವರ್ಯ ಲಕ್ಷ್ಮಿ 1.5 ಕೋಟಿ, ಪ್ರಭು 1.25 ಕೋಟಿ, ಶೋಭಿತ ಧುಲಿಪಲ 1 ಕೋಟಿ ಹಾಗೂ ಪ್ರಕಾಶ್ ರಾಜ್ 1 ಕೋಟಿ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆದಿದ್ದಾರೆ.

  ಮೊದಲ ದಿನ ದಾಖಲೆ ಬರೆಯುವ ಸಾಧ್ಯತೆ

  ಮೊದಲ ದಿನ ದಾಖಲೆ ಬರೆಯುವ ಸಾಧ್ಯತೆ

  ಇನ್ನು ಕೇವಲ ಖರ್ಚಿನಲ್ಲಿ ಮಾತ್ರವಲ್ಲದೇ ಗಳಿಕೆಯಲ್ಲೂ ಸಹ ಪೊನ್ನಿಯಿನ್ ಸೆಲ್ವನ್ ಒಂದೊಳ್ಳೆ ದಾಖಲೆ ಬರೆಯುವ ಮುನ್ಸೂಚನೆ ನೀಡಿದೆ. ಚೆನ್ನೈನಲ್ಲಿ ಮೊದಲ ದಿನದ ಶೋಗಳು ಬಹುತೇಕ ಸೋಲ್ಡ್ ಔಟ್ ಆಗಿದ್ದು, ಬೆಂಗಳೂರಿನಲ್ಲಿ ಉತ್ತಮವಾಗಿ ಬುಕಿಂಗ್ ನಡೆಯುತ್ತಿದೆ. ಇನ್ನುಳಿದಂತೆ ಹೈದರಾಬಾದ್ ಹಾಗೂ ಉತ್ತರ ಭಾರತದ ನಗರಗಳಲ್ಲಿ ಬುಕಿಂಗ್ ಸಾಮಾನ್ಯವಾಗಿ ನಡೆಯುತ್ತಿದೆ.

  English summary
  Ponniyin Selvan 1 movie's Budget All actors remuneration details; which star got more remuneration? Read on
  Tuesday, September 27, 2022, 16:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X