For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರು ಪಿವಿಆರ್‌ನಲ್ಲಿ ಪೊನ್ನಿಯಿನ್ ಸೆಲ್ವನ್ ಟಿಕೆಟ್ ದರ ಅಬ್ಬಬ್ಬಾ! ಐದಾರು ಚಿತ್ರ ನೋಡಬಹುದಲ್ಲಾ ಎಂದ ಪ್ರೇಕ್ಷಕರು

  |

  ಪೊನ್ನಿಯಿನ್ ಸೆಲ್ವನ್ 500 ಕೋಟಿ ಬಜೆಟ್‌ನಲ್ಲಿ ತಯಾರಾಗಿರುವ ಚಿತ್ರ. ಈ ಚಿತ್ರಕ್ಕೆ ಮಣಿರತ್ನಂ ನಿರ್ದೇಶನವಿದ್ದು, ಚಿತ್ರದಲ್ಲಿ ಚಿಯಾನ್ ವಿಕ್ರಮ್, ಐಶ್ವರ್ಯ ರೈ ಬಚ್ಚನ್, ಜಯಮ್ ರವಿ, ಕಾರ್ತಿ, ತ್ರಿಶಾ, ಐಶ್ವರ್ಯ ಲಕ್ಷ್ಮಿ, ಶೋಭಿತಾ ಧುಲಿಪಲ, ಪ್ರಭು, ಶರತ್ ಕುಮಾರ್, ವಿಕ್ರಮ್ ಪ್ರಭು ಹಾಗೂ ಪ್ರಕಾಶ್ ರಾಜ್ ಸೇರಿದಂತೆ ಇನ್ನೂ ಹಲವಾರು ಕಲಾವಿದರ ದಂಡೇ ಇದೆ. ಹೀಗೆ ಬೃಹತ್ ತಾರಾಗಣ ಹಾಗೂ ಮಣಿರತ್ನಂ ರೀತಿಯ ದೊಡ್ಡ ನಿರ್ದೇಶಕ ನಿರ್ದೇಶಿಸಿರುವ ಚಿತ್ರ ಎಂಬ ಕಾರಣಕ್ಕೆ ಚಿತ್ರದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆಯಿದೆ.

  ಈ ಚಿತ್ರ ಇದೇ ಶುಕ್ರವಾರ ( ಸೆಪ್ಟೆಂಬರ್ 30 ) ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ತಮಿಳು, ಕನ್ನಡ, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಯ ವರ್ಷನ್‌ಗಳಲ್ಲಿ ತೆರೆಗೆ ಅಪ್ಪಳಿಸಲಿದೆ. ಇನ್ನು ಬಿಗ್ ಬಜೆಟ್ ಹೊಂದಿರುವ ಈ ಚಿತ್ರದ ಟಿಕೆಟ್ ದರ ಕೂಡ ದೊಡ್ಡ ಮಟ್ಟದಲ್ಲಿಯೇ ಇದೆ. ಅದರಲ್ಲಿಯೂ ಬೆಂಗಳೂರಿನ ಪಿವಿಆರ್ ಐಮ್ಯಾಕ್ಸ್ ಹಾಗೂ ಗೋಲ್ಡ್ ಕ್ಲಾಸ್‌ಗಳ ಟಿಕೆಟ್ ದರ ಗಗನಕ್ಕೇರಿದೆ.

  ಬೆಂಗಳೂರಿನ ಕೋರಮಂಗಲದ ನೆಕ್ಸಸ್ ಮಾಲ್‌ನ ಪಿವಿಆರ್ ಗೋಲ್ಡ್ ಕ್ಲಾಸ್, ರಾಜ್‌ಕುಮಾರ್ ರಸ್ತೆಯ ಓರಿಯನಾ ಮಾಲ್‌ನ ಪಿವಿಆರ್ ಗೋಲ್ಡ್ ಕ್ಲಾಸ್ ಹಾಗೂ ವೈಟ್ ಫೀಲ್ಡ್ ವಿಆರ್ ಬೆಂಗಳೂರು ಮಾಲ್‌ನ ಪಿವಿಆರ್ ಗೋಲ್ಡ್ ಕ್ಲಾಸ್‌ನ ಟಿಕೆಟ್‌ಗಳ ದರ 1150, 1300 ಮತ್ತು 1500 ರೂಪಾಯಿಗಳಷ್ಟಿದ್ದು ಸದ್ಯ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಈ ಕುರಿತು ಪ್ರತಿಕ್ರಿಯಿಸಿರುವ ನೆಟ್ಟಿಗರು ಇಷ್ಟು ದುಡ್ಡು ಕೊಟ್ಟು ಸಿನಿಮಾ ನೋಡುವ ಬದಲು ಸಾಮಾನ್ಯ ಚಿತ್ರಮಂದಿರದಲ್ಲಿ ಐದಾರು ಸಿನಿಮಾ ನೋಡಬಹುದು ಎಂದು ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಇದು ಐಷಾರಾಮಿ ಸಿನಿಮಾ ಹಾಲ್ ಆಗಿರಲಿದ್ದು, ಟಿಕೆಟ್ ದರ ದುಬಾರಿಯಾಗಿದೆ ಮತ್ತು ಈಗಾಗಲೇ ಈ ಶೋಗಳು ಸೋಲ್ಡ್ ಔಟ್ ಕೂಡ ಆಗಿವೆ. ಹಾಗೂ ಇಲ್ಲಿ ಬಿಡುಗಡೆಯಾಗಿದ್ದ ಪುನೀತ್ ರಾಜ್‌ಕುಮಾರ್ ಅಭಿನಯದ ಯುವರತ್ನ, ಯಶ್ ಅಭಿನಯದ ಕೆಜಿಎಫ್ ಹಾಗೂ ಇನ್ನೂ ಕೆಲ ಕನ್ನಡ ಚಿತ್ರಗಳ ಟಿಕೆಟ್ ದರಗಳೂ ಸಹ ಇಷ್ಟೇ ದುಬಾರಿ ಮೊತ್ತದ್ದಾಗಿದ್ದವು.

  Ponniyin Selvan 1 PVR gold class and imax tickets are selling for 1500 rupees

  ಇನ್ನು ಪೊನ್ನಿಯಿನ್ ಸೆಲ್ವನ್ ಚಿತ್ರದ ಇನ್ನುಳಿದ ಪಿವಿಆರ್ ಶೋಗಳ ಟಿಕೆಟ್ ದರ ಬೆಂಗಳೂರಿನಲ್ಲಿ 236 ರೂಪಾಯಿಗಳಷ್ಟಿದೆ.

  English summary
  Ponniyin Selvan 1 movie's PVR gold and imax tickets are selling for 1500 rupees. Read on
  Tuesday, September 27, 2022, 22:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X