ಜನವರಿ 6 ರಿಂದ ಹೈದರಾಬಾದ್‌ನಲ್ಲಿ ಪೊನ್ನಿಯನ್ ಸೆಲ್ವನ್ ಚಿತ್ರೀಕರಣ ಆರಂಭ
ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಕುತೂಹಲ ಮೂಡಿಸಿರುವ ಮಣಿರತ್ನಂ ಅವರ ಪೊನ್ನಿಯನ್ ಸೆಲ್ವನ್ ಸಿನಿಮಾ ಜನವರಿ 6 ರಂದು ಹೈದರಾಬಾದ್‌ನಲ್ಲಿ ಚಿತ್ರೀಕರಣ ಮರುಪ್ರಾರಂಭ ಮಾಡುತ್ತಿದೆ ಎಂದು ವರದಿಯಾಗಿದೆ.
ಚಿತ್ರೀಕರಣ ಆರಂಭಕ್ಕೂ ಮುನ್ನ ಎಲ್ಲ ಕಲಾವಿದರು ಹಾಗೂ ತಂತ್ರಜ್ಞರಿಗೆ ಕೊರೊನಾ ಪರೀಕ್ಷೆ ಮಾಡಿಸಲಾಗುತ್ತಿದೆಯಂತೆ. ಮೂಲಗಳ ಪ್ರಕಾರ ತಮಿಳು ನಟ ಕಾರ್ತಿ ಮತ್ತು ಜಯಂ ರವಿ ಈ ಶೆಡ್ಯೂಲ್‌ನಲ್ಲಿ ಭಾಗವಹಿಸಲಿದ್ದಾರೆ.
ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಿರುವ ಮತ್ತೊಬ್ಬ ಸ್ಟಾರ್ ನಟ ವಿಕ್ರಂ ಮುಂದಿನ ಶೆಡ್ಯೂಲ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎನ್ನಲಾಗಿದೆ. ಸದ್ಯ ವಿಕ್ರಂ ಕೋಬ್ರಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಪೊನ್ನಿಯನ್ ಸೆಲ್ವನ್ ಚಿತ್ರವನ್ನು ಎರಡು ಭಾಗಗಳಲ್ಲಿ ತಯಾರಿಸಲು ನಿರ್ದೇಶಕ ಮಣಿರತ್ನಂ ಪ್ಲಾನ್ ಮಾಡಿದ್ದಾರೆ ಎಂದು ಈ ಹಿಂದೆಯೇ ವರದಿಯಾಗಿದೆ. ಎ ಆರ್ ರೆಹಮಾನ್ ಚಿತ್ರಕ್ಕೆ ಸಂಗೀತ ಒದಗಿಸುತ್ತಿದ್ದು, ಲೈಕಾ ಪ್ರೊಡಕ್ಷನ್ ಬಂಡವಾಳ ಹಾಕಿದ್ದಾರೆ.
ಅಂದ್ಹಾಗೆ, ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ಬಹುದೊಡ್ಡ ತಾರಬಳಗ ಇದೆ. ಭಾರತೀಯ ಚಿತ್ರರಂಗದ ಹಲವು ದೊಡ್ಡ ಕಲಾವಿದರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಪ್ರಧಾನ ಪಾತ್ರದಲ್ಲಿ ತ್ರಿಷಾ ನಟಿಸಿದ್ದಾರೆ. ಐಶ್ವರ್ಯ ರೈ ಬಚ್ಚನ್, ಅಮಿತಾಭ ಬಚ್ಚನ್, ವಿಕ್ರಂ ಪ್ರಭು, ಜಯರಾಅಂ, ಐಶ್ವರ್ಯ ಲಕ್ಷ್ಮಿ, ಕಿಶೋರ್, ಸಾರಾ ಅರ್ಜುನ್ ಸೇರಿದಂತೆ ಹಲವರು ನಟರು ಇರಲಿದ್ದಾರೆ.


Click it and Unblock the Notifications











