Just In
Don't Miss!
- News
ಬಜೆಟ್ 2021; ಉತ್ತರ ಕನ್ನಡ ಜಿಲ್ಲೆಯ ನಿರೀಕ್ಷೆಗಳು
- Automobiles
ಮಾರ್ಚ್ ಅವಧಿಗಾಗಿ ಮಹೀಂದ್ರಾ ವಿವಿಧ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್
- Finance
ಮೊಟೊರೊಲಾ ಹೊಸ ಸ್ಮಾರ್ಟ್ಫೋನ್: ಮೊಟೊ ಜಿ 30 ಮತ್ತು ಮೊಟೊ ಜಿ 10 ಪವರ್
- Sports
ಸುನಿಲ್ ಗವಾಸ್ಕರ್ ಟೆಸ್ಟ್ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿ ಇಂದಿಗೆ 50 ವರ್ಷ
- Lifestyle
ಮಹಾಶಿವರಾತ್ರಿ: ಶಿವನಿಗೆ ಪೂಜೆ ಸಲ್ಲಿಸುವಾಗ ಇವುಗಳನ್ನು ದೂರವಿಡಿ
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ದಳಪತಿ 65' ಸಿನಿಮಾಗೆ ಇವರೇ ನಾಯಕಿ; ಟ್ವಿಟ್ಟರ್ ನಲ್ಲಿ ಅಭಿಮಾನಿಗಳ ಟ್ರೆಂಡ್
ವಿಜಯ್ ದಳಪತಿ ಸದ್ಯ ಮಾಸ್ಟರ್ ಸಿನಿಮಾದ ಸಕ್ಸಸ್ ನಲ್ಲಿದ್ದಾರೆ. ಪೊಂಗಲ್ ಹಬ್ಬದ ಸಮಯದಲ್ಲಿ ತೆರೆಗೆ ಬಂದ ಮಾಸ್ಟರ್ ಸಿನಿಮಾಗೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಿತ್ರಮಂದಿರಗಳಲ್ಲಿ ಶೇ.50 ಆಸನಗಳಿಗೆ ಮಾತ್ರ ಅವಕಾಶ ನೀಡಿದರೂ ಸಹ ಮಾಸ್ಟರ್ ರಿಲೀಸ್ ಆಗಿ ನಾಲ್ಕು ದಿನಗಳಲ್ಲೇ 100 ಕೋಟಿ ಕ್ಲಬ್ ಸೇರಿದೆ.
ಮಾಸ್ಟರ್ ರಿಲೀಸ್ ಆಗುತ್ತಿದ್ದಂತೆ ಅಭಿಮಾನಿಗಳ ಚಿತ್ತ ವಿಜಯ್ ಮುಂದಿನ ಸಿನಿಮಾದ ಮೇಲಿದೆ. ದಳಪತಿ 65 ಚಿತ್ರ ಯಾವುದು, ಯಾರ ಜೊತೆ ಸಿನಿಮಾ ಮಾಡುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳನ್ನು ಕಾಡುತ್ತಿದ್ದಾರೆ. ವಿಜಯ್ ಮುಂದಿನ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್ ಹೇಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಚಿತ್ರಕ್ಕೆ ಸನ್ ಪಿಕ್ಚರ್ಸ್ ಬಂಡವಾಳ ಹೂಡುತ್ತಿದ್ದಾರೆ.
ಆಸ್ಟ್ರೇಲಿಯಾದಲ್ಲಿ 'ಮಾಸ್ಟರ್' ಆರ್ಭಟ: ಏರುತ್ತಲೇ ಇದೆ ಗಳಿಕೆ

ವಿಜಯ್ ಗೆ ಪೂಜಾ ಹೆಗ್ಡೆ ನಾಯಕಿ
ವಿಜಯ್ ಮುಂದಿನ ಸಿನಿಮಾದ ಬಗ್ಗೆ ಚರ್ಚೆಯಾಗುತ್ತಿದ್ದಂತೆ ದಳಪತಿಗೆ ನಾಯಕಿ ಯಾರಾಗ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ. ಅಲ್ಲದೆ ಅಭಿಮಾನಿಗಳೇ ವಿಜಯ್ ಗೆ ನಾಯಕಿ ಯಾರಾಗಬೇಕು ಎಂದು ಟ್ರೆಂಡ್ ಮಾಡುತ್ತಿದ್ದಾರೆ. ಹೌದು, ದಳಪತಿ ವಿಜಯ್ 65ನೇ ಸಿನಿಮಾಗೆ ನಟಿ ಪೂಜಾ ಹೆಗ್ಡೆ ನಾಯಕಿ ಎಂದು ಟ್ವಿಟ್ಟರ್ ನಲ್ಲಿ ಟ್ರೆಂಡ್ ಮಾಡುತ್ತಿದ್ದಾರೆ.

ತೆಲುಗು ಸಿನಿಮಾರಂಗದಲ್ಲಿ ಪೂಜಾ ಬ್ಯುಸಿ
ಪೂಜಾ ಹೆಗ್ಡೆ ಸದ್ಯ ತೆಲುಗು ಸಿನಿಮಾರಂಗದಲ್ಲಿ ಬ್ಯುಸಿಯಾಗಿದ್ದಾರೆ. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಪೂಜಾ, ವಿಜಯ್ ಸಿನಿಮಾಗೂ ನಾಯಕಿ ಆಗಲಿ ಎನ್ನುವುದು ಅಭಿಮಾನಿಗಳ ಆಸೆ. ಈಗಾಗಲೇ ಅಭಿಮಾನಿಗಳು ಪೂಜಾನೆ ನಾಯಕಿ ಎಂದು ಹೇಳಿ, ಟ್ವಿಟ್ಟರ್ ನಲ್ಲಿ ಬಹಿರಂಗ ಪಡಿಸಿದ್ದಾರೆ.
ಹಿಂದಿಗೆ ರಿಮೇಕ್ ಆಗುತ್ತಿದೆ ವಿಜಯ್ 'ಮಾಸ್ಟರ್' ಚಿತ್ರ; ಯಾರಾಗಲಿದ್ದಾರೆ ನಾಯಕ?

ವಿಜಯ್ ಜೊತೆ ಪೂಜಾ ನಟಿಸುವುದು ಬಹುತೇಕ ಖಚಿತ
ಮೂಲಗಳ ಪ್ರಕಾರ ನಿರ್ಮಾಪಕರು ಸಹ ಪೂಜಾ ಹೆಗ್ಡೆ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರಂತೆ. ಪೂಜಾ ಹೆಗ್ಡೆ ಸಹ ಕಥೆ ಕೇಳಿ ಇಂಪ್ರೆಸ್ ಆಗಿದ್ದಾರೆ ಎನ್ನಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಅಭಿಮಾನಿಗಳ ಆಸೆಯಂತೆ ನಟಿ ಪೂಜಾ ಹೆಗ್ಡೆ ವಿಜಯ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ. ಮೊದಲ ಬಾರಿಗೆ ವಿಜಯ್ ಗೆ ಜೋಡಿಯಾಗಿ ಪೂಜಾ ಕಾಣಿಸಿಕೊಳ್ಳಲಿದ್ದಾರೆ.

ಫೆಬ್ರವರಿ 1ರಂದು ಅಧಿಕೃತ ಘೋಷಣೆ
ಫೆಬ್ರವರಿ 1ರಂದು ವಿಜಯ್ ಮುಂದಿನ ಸಿನಿಮಾದ ಬಗ್ಗೆ ಸಿನಿಮಾತಂಡ ಮಾಹಿತಿ ಬಹಿರಂಗ ಪಡಿಸಲಿದೆ ಎಂದು ಹೇಳಲಾಗುತ್ತಿದೆ. ಸಿನಿಮಾದ ಟೈಟಲ್ ಮತ್ತು ನಾಯಕಿ ಯಾರು ಎಂದು ಅನೌನ್ಸ್ ಆಗುವ ಸಾಧ್ಯತೆ ಇದೆ.