For Quick Alerts
  ALLOW NOTIFICATIONS  
  For Daily Alerts

  ಗಾಯದಿಂದ ಚೇತರಿಸಿಕೊಂಡ ಪ್ರಕಾಶ್ ರಾಜ್: ಮಧ್ಯಪ್ರದೇಶದ ಕಡೆ ಪ್ರಯಾಣ

  |

  ಕಳೆದ ವಾರ ಬಹುಭಾಷೆ ನಟ ಪ್ರಕಾಶ್ ರಾಜ್ ಗಾಯಗೊಂಡಿದ್ದರು. ತಮಿಳು ಸಿನಿಮಾ ಚಿತ್ರೀಕರಣವೊಂದರ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ಪೆಟ್ಟು ಮಾಡಿಕೊಂಡಿದ್ದರು. ಗಾಯ ಸ್ವಲ್ಪ ಗಂಭೀರವಾಗಿದ್ದರಿಂದ ಶಸ್ತ್ರ ಚಿಕಿತ್ಸೆಗೆ ಸಹ ಒಳಪಟ್ಟರು. ಇದೀಗ, ಗಾಯದಿಂದ ಚೇತರಿಸಿಕೊಂಡಿರುವ ಪ್ರಕಾಶ್ ರಾಜ್ ಮತ್ತೆ ಶೂಟಿಂಗ್‌ಗೆ ಹಾಜರಾಗಿದ್ದಾರೆ.

  ಆಪರೇಷನ್ ಆಗಿ ಏಳೇ ದಿನಕ್ಕೆ ಅಚ್ಚರಿ ಮೂಡಿಸಿದ ಪ್ರಕಾಶ್ ರಾಜ್

  ಮಣಿರತ್ನಂ ನಿರ್ದೇಶನದ 'ಪೊನ್ನಿಯನ್ ಸೆಲ್ವನ್' ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಮಧ್ಯಪ್ರದೇಶದಕ್ಕೆ ಹೊರಟಿದ್ದಾರೆ ಪ್ರಕಾಶ್ ರಾಜ್. ಮಧ್ಯಪ್ರದೇಶದ ಓರ್ಚಾದಲ್ಲಿ ಮಣಿರತ್ನಂ ಮುಂದಿನ ಶೆಡ್ಯೂಲ್ ಶೂಟಿಂಗ್ ಮಾಡ್ತಿದ್ದು, ಈ ಹಿನ್ನೆಲೆ ಚೆನ್ನೈನಿಂದ ಪ್ರಯಾಣ ಮಾಡಿದ್ದಾರೆ. ಈ ವೇಳೆ ಏರ್‌ಪೋರ್ಟ್‌ನಲ್ಲಿ ಮಣಿರತ್ನಂ, ಪ್ರಕಾಶ್ ರಾಜ್ ಹಾಗೂ ತಮಿಳು ನಟ ಕಾರ್ತಿ ಒಟ್ಟಿಗೆ ಕಾಣಿಸಿಕೊಂಡಿರುವ ಫೋಟೋವೊಂದು ವೈರಲ್ ಆಗಿದೆ.

  ಚಿತ್ರೀಕರಣ ವೇಳೆ ಪ್ರಕಾಶ್ ರಾಜ್‌ಗೆ ಪೆಟ್ಟು: ಹೈದರಾಬಾದ್‌ನಲ್ಲಿ ಶಸ್ತ್ರ ಚಿಕಿತ್ಸೆ ಚಿತ್ರೀಕರಣ ವೇಳೆ ಪ್ರಕಾಶ್ ರಾಜ್‌ಗೆ ಪೆಟ್ಟು: ಹೈದರಾಬಾದ್‌ನಲ್ಲಿ ಶಸ್ತ್ರ ಚಿಕಿತ್ಸೆ

  'ಪೊನ್ನಿಯನ್ ಸೆಲ್ವನ್' ಸಿನಿಮಾ ಐತಿಹಾಸಿಕ ಕಥಾಹಂದರ ಹೊಂದಿದ್ದು, ಚೋಳ ರಾಜರ ಸುತ್ತ ಸ್ಕ್ರಿಪ್ಟ್ ಮಾಡಲಾಗಿದೆ. ಮಧ್ಯಪ್ರದೇಶದ ಹಳೆಯ ಕೋಟೆ, ಅರಮನೆ ಹಾಗೂ ಐತಿಹಾಸಿಕ ಪ್ರದೇಶಗಳಲ್ಲಿ ಶೂಟಿಂಗ್ ಪ್ಲಾನ್ ಮಾಡಿದ್ದು, ಪ್ರಕಾಶ್ ರಾಜ್ ಸಹ ಚಿತ್ರತಂಡದ ಜೊತೆ ಹೋಗಿದ್ದಾರೆ. ಮುಂದೆ ಓದಿ...

  ಆಗಸ್ಟ್ 10 ರಂದು ಗಾಯಗೊಂಡಿದ್ದ ಬಹುಭಾಷೆ ನಟ

  ಆಗಸ್ಟ್ 10 ರಂದು ಗಾಯಗೊಂಡಿದ್ದ ಬಹುಭಾಷೆ ನಟ

  ತಮಿಳು ನಟ ಧನುಶ್ ನಟಿಸುತ್ತಿರುವ 44ನೇ ಸಿನಿಮಾದಲ್ಲಿ ಪ್ರಕಾಶ್ ರಾಜ್ ನಟಿಸುತ್ತಿದ್ದು, ಆಗಸ್ಟ್ 10 ರಂದು ಚೆನ್ನೈನಲ್ಲಿ ಚಿತ್ರೀಕರಣ ನಡೆದಿದೆ. ಈ ವೇಳೆ ಪ್ರಕಾಶ್ ರಾಜ್ ಸಹ ಭಾಗಿಯಾಗಿದ್ದರು. ಅಕಸ್ಮಾತ್ ಆಗಿ ಕಾಲು ಜಾರಿ ಬಿದ್ದ ಪ್ರಕಾಶ್ ರಾಜ್‌ ಕೈಗೆ ಮತ್ತು ಕಾಲಿಗೆ ಪೆಟ್ಟಾಗಿತ್ತು. ನಂತರ ಆಪ್ತ ವೈದ್ಯರ ಸಲಹೆ ಮೆರೆಗೆ ಹೈದರಾಬಾದ್‌ನಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾದರು.

  ಶಸ್ತ್ರ ಚಿಕಿತ್ಸೆ ಯಶಸ್ವಿ

  ಶಸ್ತ್ರ ಚಿಕಿತ್ಸೆ ಯಶಸ್ವಿ

  ಆಗಸ್ಟ್ 11 ರಂದು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾದರು. ಸ್ನೇಹಿತ ಹಾಗೂ ವೈದ್ಯ ಗುರುವರೆಡ್ಡಿ ಆಪರೇಷನ್ ಮಾಡಿದರು ಎಂದು ಸ್ವತಃ ಪ್ರಕಾಶ್ ರಾಜ್ ಮಾಹಿತಿ ಹಂಚಿಕೊಂಡರು. ಶಸ್ತ್ರ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದಲೇ ಫೋಟೋ ಹಂಚಿಕೊಂಡಿದ್ದ ನಟ, ''ಡೆವಿಲ್ ಈಸ್ ಬ್ಯಾಕ್, ಸರ್ಜರಿ ಯಶಸ್ವಿಯಾಗಿದೆ'' ಎಂದು ಹೇಳಿದ್ದರು.

  ಡೆವಿಲ್ ಈಸ್ ಬ್ಯಾಕ್: ಸರ್ಜರಿ ಬಳಿಕ ಮೊದಲ ಫೋಟೋ ಹಂಚಿಕೊಂಡ ಪ್ರಕಾಶ್ ರಾಜ್ಡೆವಿಲ್ ಈಸ್ ಬ್ಯಾಕ್: ಸರ್ಜರಿ ಬಳಿಕ ಮೊದಲ ಫೋಟೋ ಹಂಚಿಕೊಂಡ ಪ್ರಕಾಶ್ ರಾಜ್

  ಚಿರಂಜೀವಿ ಭೇಟಿ ಮಾಡಿದ ನಟ

  ಚಿರಂಜೀವಿ ಭೇಟಿ ಮಾಡಿದ ನಟ

  ಆಗಸ್ಟ್ 17 ರಂದು ತೆಲುಗು ಮೆಗಾಸ್ಟಾರ್ ಚಿರಂಜೀವಿ ಅವರನ್ನು ಭೇಟಿ ಮಾಡಿದರು. ಜಿಮ್‌ನಲ್ಲಿ ಭೇಟಿ ಮಾಡಿದ್ದ ಪ್ರಕಾಶ್ ರಾಜ್ ಟ್ವಿಟ್ಟರ್‌ನಲ್ಲಿ ಫೋಟೋ ಹಂಚಿಕೊಂಡಿದ್ದರು, ''ಬೆಳ್ಳಿಗ್ಗೆ ಜಿಮ್‌ನಲ್ಲಿ 'ಬಾಸ್' ಅನ್ನು ಭೇಟಿಯಾದೆ. ಸಿನಿಮಾ ರಂಗದ ಸಮಸ್ಯೆಗಳನ್ನು ಸರಿಪಡಿಸುವ ಜವಾಬ್ದಾರಿ ಹೊತ್ತಿದ್ದಕ್ಕೆ ಅವರಿಗೆ ಧನ್ಯವಾದ ಹೇಳಿದೆ. ಸದಾ ಉತ್ಸಾಹ ತುಂಬುವ ಅಣ್ಣಯ್ಯ. ಅವರನ್ನು ಪಡೆದ ನಾವುಗಳು ಅದೃಷ್ಟವಂತರು'' ಎಂದು ಪೋಸ್ಟ್ ಹಾಕಿದ್ದರು.

  ಆಗಸ್ಟ್ 18ರಂದು ಶೂಟಿಂಗ್‌ಗೆ ಹಾಜರ್

  ಆಗಸ್ಟ್ 18ರಂದು ಶೂಟಿಂಗ್‌ಗೆ ಹಾಜರ್

  ಈಗ ಬುಧವಾರ ಮಣಿರತ್ನಂ ನಿರ್ದೇಶನದ ಪೊನ್ನಿಯನ್ ಸೆಲ್ವನ್ ಚಿತ್ರೀಕರಣಕ್ಕೆ ಪ್ರಕಾಶ್ ರಾಜ್ ಸಜ್ಜಾಗಿದ್ದಾರೆ. ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದು, ಈ ಹಿಂದೆ ಅಮಿತಾಭ್ ಬಚ್ಚನ್ ಆ ಮಾಡಲಿದ್ದಾರೆ ಎನ್ನಲಾಗಿತ್ತು. ಬಿಗ್ ಬಿ ಸಿಗದ ಕಾರಣ ಪ್ರಕಾಶ್ ರಾಜ್ ಎಂಟ್ರಿಯಾದರು. ತಮಿಳು ನಟ ವಿಕ್ರಮ್, ಐಶ್ವರ್ಯ ರೈ, ತ್ರಿಷಾ, ಜಯಂ ರವಿ, ಕಾರ್ತಿ, ವಿಕ್ರಂ ಪ್ರಭು, ಪ್ರಭು, ಜಯರಾಂ, ಐಶ್ವರ್ಯ ಲಕ್ಷ್ಮಿ, ಆರ್ ಶರತ್ ಕುಮಾರ್, ಪಾರ್ಥಿಬನ್, ಕಿಶೋರ್ ಸೇರಿದಂತೆ ಬಹುದೊಡ್ಡ ತಾರಬಳಗ ಈ ಚಿತ್ರದಲ್ಲಿದೆ.

  ಎರಡು ಭಾಗದಲ್ಲಿ ಪೊನ್ನಿಯನ್ ಸೆಲ್ವನ್

  ಎರಡು ಭಾಗದಲ್ಲಿ ಪೊನ್ನಿಯನ್ ಸೆಲ್ವನ್

  ಅಂದ್ಹಾಗೆ, ಪೊನ್ನಿಯನ್ ಸೆಲ್ವನ್ ಚಿತ್ರವನ್ನು ಎರಡು ಭಾಗಗಳಲ್ಲಿ ತಯಾರಿಸುತ್ತಿದ್ದು, ಮೊದಲ ಭಾಗ 2022ರ ಸಮ್ಮರ್‌ನಲ್ಲಿ ತೆರೆಗೆ ಬರಬಹುದು. ಎ ಆರ್ ರೆಹಮಾನ್ ಚಿತ್ರಕ್ಕೆ ಸಂಗೀತ ಒದಗಿಸುತ್ತಿದ್ದು, ಲೈಕಾ ಪ್ರೊಡಕ್ಷನ್ ಬಂಡವಾಳ ಹಾಕಿದ್ದಾರೆ. ಈ ಸಿನಿಮಾದ ಬಜೆಟ್ ಸುಮಾರು 500 ಕೋಟಿವರೆಗೂ ಆಗಿದೆಯಂತೆ.

  English summary
  Ponniyin Selvan shoot resumes in Orchha in Madhya Pradesh which is famous for its old monuments like forts, palaces. Prakash raj joins after met recovery from injury.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X