For Quick Alerts
  ALLOW NOTIFICATIONS  
  For Daily Alerts

  ನ್ಯೂ ಲುಕ್​ ಜೊತೆ ಸ್ಪೆಷಲ್​ ಸಂದೇಶ ಕೊಟ್ಟ ನಟ ರಾಘವ ಲಾರೆನ್ಸ್​

  |

  ನೃತ್ಯ ನಿರ್ದೇಶಕನಾಗಿ ಚಿತ್ರರಂಗದಲ್ಲಿ ಹೆಸರು ಗಳಿಸಿದ್ದ ರಾಘವ ಲಾರೆನ್ಸ್ ಸದ್ಯ ಟಾಲಿವುಡ್​ನಲ್ಲಿ ಬಹುಬೇಡಿಕೆಯ ನಟ. ಕಾಂಚನಾ, ಕಾಂಚನಾ -2 ಚಿತ್ರಗಳಲ್ಲಿ ನಾಯಕ ನಟನಾಗಿ ಮಿಂಚಿದ್ದ ರಾಘವ ಲಾರೆನ್ಸ್​ ಅದ್ಧುತವಾಗಿ ನಟಿಸುವುದರ ಮೂಲಕ ಯಾವ ಪಾತ್ರಕ್ಕೂ ಜೀವ ನೀಡಬಲ್ಲ ನಟ ಎಂದು ಗುರುತಿಸಿಕೊಂಡರು.

  ಹಾರರ್​-ಕಾಮಿಡಿ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳನ್ನು ಮಾಡುವ ಮೂಲಕ ಸೈ ಉತ್ತಮ ನಟನಾಗಿಯೂ ಸೈ ಎನಿಸಿಕೊಂಡಿದ್ದ ತಮಿಳು ನಟ ರಾಘವ ಲಾರೆನ್ಸ್​ ಇದೀಗ ಹೊಸ ಲುಕ್​ನಲ್ಲಿ ಅಭಿಮಾನಿಗಳಿಗೆ ದರ್ಶನಕೊಟ್ಟಿದ್ದಾರೆ. ಈ ಹಿಂದೆ ನೋಡಿದ ರಾಘವ ಲಾರೆನ್ಸ್​​ಗೂ ಸದ್ಯದ ರಾಘವ ಲಾರೆನ್ಸ್​ಗೂ ಅಜ-ಗಜಾಂತರ ವ್ಯತ್ಯಾಸವಿದ್ದು, ಫ್ಯಾನ್ಸ್​ ಜಸ್ಟ್​ ವಾವ್​ ಎಂದಿದ್ದಾರೆ.

  ಮಾಸ್​ ಹೀರೋ ಲುಕ್​ನಲ್ಲಿ ಕಾಂಚನ ನಟ

  ಮಾಸ್​ ಹೀರೋ ಲುಕ್​ನಲ್ಲಿ ಕಾಂಚನ ನಟ

  ಪಿ.ವಾಸು ನಿರ್ದೇಶನದ ಚಂದ್ರಮುಖಿ-2 ಚಿತ್ರದಲ್ಲಿ ನಟಿಸುತ್ತಿರುವ ರಾಘವ ಲಾರೆನ್ಸ್​ ಈ ಚಿತ್ರಕ್ಕಾಗಿ ತಮ್ಮ ದೇಹವನ್ನು ದಂಡಿಸಿದ್ದು, ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ನೃತ್ಯ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ರಾಘವ ಲಾರೆನ್ಸ್​ ಇದೀಗ ಮಾಸ್​ ಹೀರೋ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಇತ್ತೀಚಿನ ಫೋಟೋವನ್ನು ಟ್ವಿಟರ್​ನಲ್ಲಿ ಶೇರ್​ ಮಾಡಿರುವ ರಾಘವ ಲಾರೆನ್ಸ್​, ಫಿಟ್​ ಆ್ಯಂಡ್​ ಫೈನ್​ ಆಗಿದ್ದಾರೆ. ಫೋಟೋದಲ್ಲಿ ಬಾಡಿಬಿಲ್ಡರ್​ನಂತೆ ರಾಘವ ಫೋಸ್​ ಕೊಟ್ಟಿದ್ದು, ಮೆಚ್ಚಿನ ನಾಯಕನ ಬದಲಾವಣೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

   ಶಿವ ಮಾಸ್ಟರ್​ಗೆ ಥ್ಯಾಂಕ್ಸ್​ ಹೇಳಿದ ಲಾರೆನ್ಸ್

  ಶಿವ ಮಾಸ್ಟರ್​ಗೆ ಥ್ಯಾಂಕ್ಸ್​ ಹೇಳಿದ ಲಾರೆನ್ಸ್

  ಇನ್ನು ಫೋಟೋ ಜೊತೆಗೆ ಒಂದಿಷ್ಟು ಪ್ರಮುಖ ವಿಚಾರಗಳನ್ನು ರಾಘವ ತಮ್ಮ ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ. ಮೊದಲನೆಯದಾಗಿ ತಮ್ಮ ಟ್ರೈನರ್​ಗೆ ಧನ್ಯವಾದ ತಿಳಿಸಿದ್ದಾರೆ. ಚಂದ್ರಲೇಖ-2 ಚಿತ್ರಕ್ಕಾಗಿ ಬದಲಾಗಿದ್ದೇನೆ. ಈ ಬದಲಾವಣೆಗೆ ಸತತ ಶ್ರಮ ವಹಿಸಿರುವ ನನ್ನ ತರಬೇತುದಾರ ಶಿವ ಮಾಸ್ಟರ್​ ಅವರಿಗೆ ಧನ್ಯವಾದ ಎಂದಿದ್ದಾರೆ.

   ಲಾರೆನ್ಸ್​ ಟ್ರಸ್ಟ್​ನ ಸಂಪೂರ್ಣ ಜವಾಬ್ದಾರಿ ಹೊತ್ತ ರಾಘವ

  ಲಾರೆನ್ಸ್​ ಟ್ರಸ್ಟ್​ನ ಸಂಪೂರ್ಣ ಜವಾಬ್ದಾರಿ ಹೊತ್ತ ರಾಘವ

  ಇನ್ನು ತಮ್ಮ ಲಾರೆನ್ಸ್​ ಚಾರಿಟೇಬಲ್​ ಟ್ರಸ್ಟ್​ ಬಗ್ಗೆ ಪ್ರಮುಖವಾದ ವಿಚಾರವನ್ನು ರಾಘವ ಲಾರೆನ್ಸ್​ ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇನ್ನು ಮುಂದೆ ಲಾರೆನ್ಸ್​ ಚಾರಿಟೇಬಲ್​ ಟ್ರಸ್ಟ್​ನ ಸಂಪೂರ್ಣ ಜವಾಬ್ದಾರಿಯನ್ನು ನಾನೇ ಹೊರುತ್ತಿದ್ದೇನೆ. ನಾನೀಗ ಉತ್ತಮ ಸ್ಥಾನದಲ್ಲಿದ್ದೇನೆ. ಟ್ರಸ್ಟ್​ ನಿರ್ವಹಣೆ ಮಾಡುವಷ್ಟು ಶಕ್ತನಾಗಿದ್ದೇನೆ. ಹೆಚ್ಚಿನ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ಹೀಗಾಗಿ ಜನ ಸೇವೆಯ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

   ಇನ್ಮುಂದೆ ನಿಮ್ಮ ಪ್ರೀತಿ ಆಶೀರ್ವಾದವಿರಲಿ

  ಇನ್ಮುಂದೆ ನಿಮ್ಮ ಪ್ರೀತಿ ಆಶೀರ್ವಾದವಿರಲಿ

  ಇನ್ನು ಈವರೆಗೂ ನನ್ನ ಹಾಗೂ ಲಾರೆನ್ಸ್​ ಚಾರಿಟೇಬಲ್​ ಟ್ರಸ್ಟ್​ ಅನ್ನು ನಂಬಿ ಸಹಾಯ ಮಾಡಿರುವ ದಾನಿಗಳಿಗೆ ಧನ್ಯವಾದಗಳು. ಇನ್ನು ಮುಂದೆ ಟ್ರಸ್ಟ್​ ಹೆಸರಿನಲ್ಲಿ ಯಾರೂ ಹಣ ಕಳುಹಿಸಬೇಡಿ ಎಂದಿದ್ದಾರೆ. ನಿಮ್ಮ ಸಹಾಯಕ್ಕೆ ನಾನು ಋಣಿಯಾಗಿದ್ದೇನೆ. ಇನ್ನು ಮುಂದೆ ನಿಮ್ಮ ಪ್ರೀತಿ ಆಶೀರ್ವಾದ ನಮ್ಮ ಮೇಲಿರಲಿ ಎಂದು ರಾಘವ ಲಾರೆನ್ಸ್ ಮನವಿ ಮಾಡಿದ್ದಾರೆ. ರಾಘವ ಲಾರೆನ್ಸ್ ಅಭಿನಯದ ಚಂದ್ರಮುಖಿ-2 ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಸದ್ಯದಲ್ಲೇ ಚಿತ್ರತಂಡ ಪ್ರೇಕ್ಷಕರಿಗೆ ಗುಡ್​ನ್ಯೂಸ್​ ನೀಡಲಿದೆ. ಇನ್ನು 17 ವರ್ಷಗಳ ಬಳಿಕ ಚಂದ್ರಮುಖಿ ಸಿಕ್ವೇಲ್​ ತೆರೆಯ ಮೇಲೆ ಬರುತ್ತಿದ್ದು, ಪ್ರೇಕ್ಷಕರೂ ಕೂಡ ಚಿತ್ರದ ಬಗ್ಗೆ ಕಾತುರರಾಗಿದ್ದಾರೆ.

  English summary
  Kollywood actor Raghava lawrence builds body for his next movie chandramukhi-2,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X