twitter
    For Quick Alerts
    ALLOW NOTIFICATIONS  
    For Daily Alerts

    "ನಾನೇ ಇನ್ಮುಂದೆ ನಿಮ್ಮ ಕಾಲಿಗೆ ಬೀಳುತ್ತೇನೆ": ರಾಘವ ಲಾರೆನ್ಸ್ ಹೊಸ ಪ್ರತಿಜ್ಞೆ

    |

    ಸ್ಟಾರ್‌ ಕೊರಿಯೋಗ್ರಫರ್ ಲಾಘವ ಲಾರೆನ್ಸ್ ಈಗ ಹೀರೊ ಆಗಿಯೂ ಸಕ್ಸಸ್ ಕಂಡಿದ್ದಾರೆ. ಅಷ್ಟೇ ಅಲ್ಲಾ ಸಿನಿಮಾಗಳನ್ನು ನಿರ್ದೇಶನ ಕೂಡ ಮಾಡಿದ್ದಾರೆ. ತಮ್ಮ ಸೇವಾ ಮನೋಭಾವದಿಂದಲೂ ಸಾಕಷ್ಟು ಜನರಿಗೆ ಸ್ಫೂರ್ತಿಯಾಗಿದ್ದಾರೆ. ನಾನು ಯಾರಿಗಾದರೂ ಸಹಾಯ ಮಾಡಿದರೆ ಅವರು ನನ್ನ ಕಾಲಿಗೆ ಬೀಳುವ ಬದಲು ನಾನೇ ಅವರ ಕಾಲಿಗೆ ಬೀಳುತ್ತೇನೆ ಎಂದು ರಾಘವ ಹೊಸ ನಿರ್ಧಾರ ಕೈಗೊಂಡಿದ್ದಾರೆ.

    'ರುದ್ರನ್', 'ಅದಿಗಾರಂ', 'ಚಂದ್ರಮುಖಿ' ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ರಾಘವ ಲಾರೆನ್ಸ್ ಬಣ್ಣ ಹಚ್ಚಿದ್ದಾರೆ. 90ರ ದಶಕದಲ್ಲಿ ಕೊರಿಯೋಗ್ರಫರ್ ಆಗಿ ಗುರ್ತಿಸಿಕೊಂಡ ರಾಘವ ರಜನಿಕಾಂತ್, ಚಿರಂಜೀವಿ, ದಳಪತಿ ವಿಜಯ್, ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸೇರಿದಂತೆ ಹಲವರನ್ನು ಕುಣಿಸಿದ್ದಾರೆ. ಗಾಯಕರಾಗಿ, ಮ್ಯೂಸಿಕ್ ಕಂಪೋಸರ್ ಆಗಿಯೂ ಕೆಲಸ ಮಾಡಿದ್ದಾರೆ. ಸದ್ಯ ರಾಘವ ಮಾಡಿರುವ ಪೋಸ್ಟ್‌ವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಅವರ ನಿರ್ಧಾರಕ್ಕೆ ಶಹಬ್ಬಾಶ್‌ಗಿರಿ ಸಿಕ್ತಿದೆ.

    ನ್ಯೂ ಲುಕ್​ ಜೊತೆ ಸ್ಪೆಷಲ್​ ಸಂದೇಶ ಕೊಟ್ಟ ನಟ ರಾಘವ ಲಾರೆನ್ಸ್​ನ್ಯೂ ಲುಕ್​ ಜೊತೆ ಸ್ಪೆಷಲ್​ ಸಂದೇಶ ಕೊಟ್ಟ ನಟ ರಾಘವ ಲಾರೆನ್ಸ್​

    'ಇದು ನನ್ನ ಜೀವನದಲ್ಲಿ ಆದ ಬದಲಾವಣೆ. ಇನ್ನು ಮುಂದೆ ನಾನು ಯಾರಿಗೆ ಸಹಾಯ ಮಾಡಿದರೂ ಅವರು ನನ್ನ ಕಾಲಿಗೆ ಬೀಳಬಾರದು ಎಂದು ಹಾರೈಸುತ್ತೇನೆ. ಅವರ ಕಾಲಿಗೆ ಬಿದ್ದು ಸೇವೆ ಮಾಡುತ್ತೇನೆ" ಎಂದು ಮಗುವಿನ ಪಾದಗಳಿಗೆ ನಮಸ್ಕರಿಸುತ್ತಿರುವ ಫೋಟೋವನ್ನು ಲಾರೆನ್ಸ್ ಹಂಚಿಕೊಂಡಿದ್ದಾರೆ.

     ಕೆಲ ಘಟನೆಗಳು ಈ ನಿರ್ಧಾರಕ್ಕೆ ಕಾರಣ

    ಕೆಲ ಘಟನೆಗಳು ಈ ನಿರ್ಧಾರಕ್ಕೆ ಕಾರಣ

    "ನನ್ನಲ್ಲಿ ಈ ಸಣ್ಣ ಬದಲಾವಣೆ ತರಲು ಬಹಳ ದಿನಗಳಿಂದ ಕಾಯುತ್ತಿದ್ದೆ. ಇಂದಿನಿಂದ ಮೊದಲ ಹೆಜ್ಜೆ ಇಡುತ್ತಿದ್ದೇನೆ. ಇದುವರೆಗೆ ಬಡವರು ಶ್ರೀಮಂತರ ಕಾಲಿಗೆ ಬಿದ್ದು ಸಹಾಯ ಕೇಳುವುದನ್ನು ನೋಡಿದ್ದಾರೆ. ಇನ್ಮುಂದೆ ನಾನು ಈ ರೀತಿ ಏನನ್ನೂ ನೋಡಲು ಬಯಸುವುದಿಲ್ಲ. ನನ್ನ ಜೀವನದಲ್ಲಿ ನಡೆದ ಕೆಲವು ಘಟನೆಗಳು ಇದಕ್ಕೆ ಕಾರಣ. ನಾನು ಅವುಗಳನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ" ಎಂದು ಲಾರೆನ್ಸ್ ಬರೆದಿದ್ದಾರೆ. ಬಹುಮುಖ ಪ್ರತಿಭೆ ಲಾರೆನ್ಸ್ ನಿರ್ಧಾರಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಮತ್ತೆ ಗಟ್ಟಿ ಪಾತ್ರಕ್ಕೆ ಮರಳಿದ ಅನುಷ್ಕಾ ಶೆಟ್ಟಿ: ರಾಘವ ಲಾರೆನ್ಸ್‌ಗೆ ಧನ್ಯವಾದ!ಮತ್ತೆ ಗಟ್ಟಿ ಪಾತ್ರಕ್ಕೆ ಮರಳಿದ ಅನುಷ್ಕಾ ಶೆಟ್ಟಿ: ರಾಘವ ಲಾರೆನ್ಸ್‌ಗೆ ಧನ್ಯವಾದ!

     ಹೆತ್ತವರು ನನ್ನ ಕಾಲಿಗೆ ಬಿದ್ರೆ ಮಗು ಅಳುತಿತ್ತು

    ಹೆತ್ತವರು ನನ್ನ ಕಾಲಿಗೆ ಬಿದ್ರೆ ಮಗು ಅಳುತಿತ್ತು

    " ಒಮ್ಮೆ ಒಂದು ಕುಟುಂಬವು ತಮ್ಮ ಮಗುವಿನ ಹೃದಯದ ಶಸ್ತ್ರಚಿಕಿತ್ಸೆಗೆ ಸಹಾಯ ಕೋರಿ ನನ್ನ ಬಳಿಗೆ ಬಂದಾಗ, ಅವರು ಸಹಾಯಕ್ಕಾಗಿ ನನ್ನ ಕಾಲಿಗೆ ಬಿದ್ದರು. ನಾನು ದೂರ ಹೋದೆ ಆದರೆ ನಂತರ, ನಾನು ಮಗುವಿನ ಮುಖವನ್ನು ನೋಡಿದೆ. ಹೆತ್ತವರು ಸಹಾಯಕ್ಕಾಗಿ ನನ್ನ ಕಾಲಿಗೆ ಬಿದ್ದಾಗ ಮಗು ಅಳುತ್ತಿತ್ತು. ಪೋಷಕರು ಮತ್ತು ಮಕ್ಕಳು ಅನುಭವಿಸುವ ನೋವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ ಮತ್ತು ಅನುಭವಿಸುತ್ತೇನೆ ಏಕೆಂದರೆ ಅವರ ಮಕ್ಕಳ ಮುಂದೆ ಯಾವುದೇ ತಂದೆ ಹೀರೋ ಆಗಲು ಬಯಸುತ್ತಾರೆ. ಶ್ರೀಮಂತರ ಬಳಿ ಹಣವಿದೆ ಎಂಬ ಕಾರಣಕ್ಕೆ, ಬಡವರು ಅವರ ಕಾಲಿಗೆ ಬೀಳುವುದು ನ್ಯಾಯವಲ್ಲ ಎಂದು ನಾನು ಭಾವಿಸುತ್ತೇನೆ."

     ತಾಯಿ ವಯಸ್ಸಿನವ್ರು ಕಾಲಿಗೆ ಬೀಳುತ್ತಾರೆ

    ತಾಯಿ ವಯಸ್ಸಿನವ್ರು ಕಾಲಿಗೆ ಬೀಳುತ್ತಾರೆ

    "ಶಸ್ತ್ರಚಿಕಿತ್ಸೆ ಯಶಸ್ವಿಯಾದ ನಂತರ, ಪೋಷಕರು ತಮ್ಮ ಮಕ್ಕಳನ್ನು ನನ್ನ ಪಾದದ ಬಳಿ ಇಡುತ್ತಾರೆ. ದೇವರು ಮತ್ತು ಮಕ್ಕಳು ಒಂದೇ ಎಂದು ನಾನು ನಂಬುತ್ತೇನೆ. ಹಾಗಾಗಿ ದೇವರು ನನ್ನ ಕಾಲಿಗೆ ಬೀಳುತ್ತಿರುವಂತೆ ಅನಿಸುತ್ತಿದೆ. ಕೆಲವೊಮ್ಮೆ, ನಾನು ಹಳ್ಳಿಗಳಿಗೆ ಭೇಟಿ ನೀಡಿದಾಗ ಮತ್ತು ನನ್ನ ತಾಯಿಯ ವಯಸ್ಸಿನ ವೃದ್ಧರಿಗೆ ಸಹಾಯ ಮಾಡುವಾಗ, ಅವರು ಅದೇ ರೀತಿ ಮಾಡುತ್ತಾರೆ. ಇದು ನ್ಯಾಯವೇ?"

    'ಕಾಂಚನಾ' ಸಿನಿಮಾ ನಿರ್ಮಿಸಿದ್ದು ಏಕೆ? ಕಾರಣ ಬಿಚ್ಚಿಟ್ಟ ರಾಘವ್ ಲಾರೆನ್ಸ್'ಕಾಂಚನಾ' ಸಿನಿಮಾ ನಿರ್ಮಿಸಿದ್ದು ಏಕೆ? ಕಾರಣ ಬಿಚ್ಚಿಟ್ಟ ರಾಘವ್ ಲಾರೆನ್ಸ್

     ನನಗೆ ನಿಮ್ಮೆಲ್ಲರ ಆಶೀರ್ವಾದ ಬೇಕು

    ನನಗೆ ನಿಮ್ಮೆಲ್ಲರ ಆಶೀರ್ವಾದ ಬೇಕು

    "ಸಹಾಯ ಪಡೆಯುವವರು ನನಗೆ ಶುದ್ಧ ಆಶೀರ್ವಾದವನ್ನು ನೀಡುತ್ತಿದ್ದಾರೆ ಎಂದು ನಾನು ಬಲವಾಗಿ ನಂಬುತ್ತೇನೆ. ಆದ್ದರಿಂದ ಮುಂದೆ ನಾನು ಯಾರಿಗೆ ಸಹಾಯ ಮಾಡಿದರೂ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತೇನೆ. ನನ್ನ ಪುಟ್ಟ ಅಹಂಕಾರವೂ ಮಾಯವಾಗಲಿ ಎಂದು ಆಶಿಸುತ್ತೇನೆ. ಶೀಘ್ರದಲ್ಲೇ ನಾನು ನನ್ನ ಅಭಿಮಾನಿಗಳನ್ನು ಭೇಟಿಯಾಗುತ್ತಿದ್ದೇನೆ ಮತ್ತು ನನ್ನೊಳಗೆ ಈ ಬದಲಾವಣೆಯನ್ನು ತರಲು ಒಂದು ಸಣ್ಣ ಪ್ರಯತ್ನವನ್ನು ಮಾಡುತ್ತಿದ್ದೇನೆ. ನನಗೆ ನಿಮ್ಮೆಲ್ಲರ ಆಶೀರ್ವಾದ ಬೇಕು" ಎಂದು ವಿಡಿಯೋ ಮಾಡಿ ತಿಳಿಸಿದ್ದಾರೆ.

    English summary
    Raghava Lawrence New decision impresses netizens. Know More.
    Tuesday, September 20, 2022, 14:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X