For Quick Alerts
  ALLOW NOTIFICATIONS  
  For Daily Alerts

  40ನೇ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ರಜನಿಕಾಂತ್-ಲತಾ ದಂಪತಿ

  |

  ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಲತಾ ದಂಪತಿ 40ನೇ ವರ್ಷದ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದು, ಮಗಳ ಐಶ್ವರ್ಯ ಧನುಶ್ ಇನ್ಸ್ಟಾಗ್ರಾಂ ಮೂಲಕ ಶುಭಕೋರಿದ್ದಾರೆ.

  ರಜನಿಕಾಂತ್ ಮತ್ತು ಲತಾ ಅವರು 1981 ಫೆಬ್ರವರಿ 26 ರಂದು ವಿವಾಹವಾದರು. ಇಂದಿಗೆ (ಫೆಬ್ರವರಿ 26) ಇವರಿಬ್ಬರ ದಾಂಪತ್ಯಕ್ಕೆ 40 ವರ್ಷ ತುಂಬಿದೆ. ಐಶ್ವರ್ಯ (ನಟ ಧನುಶ್ ಪತ್ನಿ) ಮತ್ತು ಸೌಂದರ್ಯ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದು, ಇಬ್ಬರಿಗೂ ಮದುವೆಯಾಗಿದೆ.

  ರಾಜಕೀಯದಿಂದ ಹಿಂದೆ ಸರಿದ ರಜನಿ: 'ನಿಮ್ಮ ನಿರ್ಧಾರದ ಪರ ನಿಲ್ಲುವೆ' ಎಂದ ಖುಷ್ಬೂ

  ರಜನಿಕಾಂತ್ ಮತ್ತು ಲತಾ ಅವರ ಲವ್ ಸ್ಟೋರಿ ಬಹಳ ಆಸಕ್ತಿದಾಯಕವಾಗಿದೆ. 1980ರಲ್ಲಿ ರಜನಿಕಾಂತ್ ಅದಾಗಲೇ ಸೂಪರ್ ಸ್ಟಾರ್. ವಿದ್ಯಾರ್ಥಿಯಾಗಿದ್ದ ಲತಾ ಕಾಲೇಜ್ ಮ್ಯಾಗ್‌ಜಿನ್‌ಗಾಗಿ ರಜನಿ ಸಂದರ್ಶನ ಮಾಡಲು ಸೆಟ್‌ಗೆ ಹೋಗಿದ್ದರು.

  ಪತ್ರಕರ್ತೆ ಸ್ನೇಹಿತೆಯ ಮೂಲಕ ಸಂಪರ್ಕ ಮಾಡಿ 'ತಿಲ್ಲು ಮುಲ್ಲು' ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಲತಾ ಭೇಟಿ ನೀಡಿದ್ದರು. ಶೂಟಿಂಗ್ ಬಿಡುವಿನ ವೇಳೆಯಲ್ಲಿ ಲತಾ ಅವರನ್ನು ಭೇಟಿ ಮಾಡಿದ ರಜನಿ, ಸಂದರ್ಶನ ನೀಡಿದರು.

  ಈ ಸಂದರ್ಶನ ಮುಗಿಯುವಷ್ಟರಲ್ಲಿ ಲತಾ ಅವರ ಮೇಲೆ ರಜನಿಕಾಂತ್ ಗೆ ಪ್ರೀತಿ ಉಂಟಾಗಿತ್ತು. ನಂತರ ನನ್ನನ್ನು ಮದುವೆಯಾಗುತ್ತೀರಾ ಎಂದು ಖುದ್ದು ರಜನಿ ಕೇಳಿದ್ದರು. ರಜನಿಯ ಸ್ನೇಹಿತ ಹಾಗೂ ನಿರ್ದೇಶಕ ಮಹೇಂದ್ರನ್ ಮೂಲಕ ಲತಾ ಅವರ ಮನೆಯಲ್ಲಿ ಮಾತುಕತೆ ಮಾಡಲಾಯಿತು.

  ಅಭಿಮಾನಿಗಳಲ್ಲಿ ರಜನಿಕಾಂತ್ ಮನವಿ: ಮತ್ತೆ ಮತ್ತೆ ನನಗೆ ನೋವುಂಟು ಮಾಡಬೇಡಿ ಎಂದ ಸೂಪರ್ ಸ್ಟಾರ್

  ಬಳಿಕ ಎರಡು ಕುಟುಂಬದವರ ಒಪ್ಪಿಗೆ ಪಡೆದು ಆಂಧ್ರಪ್ರದೇಶದಲ್ಲಿರುವ ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ರಜನಿ ಮತ್ತು ಲತಾ ವೈವಾಹಿಕ ಬದುಕು ಆರಂಭಿಸಿದರು.

  ರಶ್ಮಿಕಾ ಮುಂಬೈನಲ್ಲಿ ಖರೀದಿಸಿದ ಮನೆಯ ಬೆಲೆ ಎಷ್ಟು ಕೋಟಿ ಗೊತ್ತಾ? | Filmibeat Kannada
  English summary
  Superstar Rajinikanth and Latha celebrated his 40th wedding anniversary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X