For Quick Alerts
  ALLOW NOTIFICATIONS  
  For Daily Alerts

  ರಜನಿಕಾಂತ್ ಹಿರಿಯ ಪುತ್ರಿ ಐಶ್ವರ್ಯಾಗೆ ವಿಚ್ಛೇದನ ನೀಡಿದ ಧನುಷ್: ಇಬ್ಬರೂ ಕೊಟ್ಟ ಕಾರಣವೇನು?

  |

  ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಾರೆಯರ ವಿಚ್ಛೇದನದ ಪರ್ವ ಮುಂದುವರೆದಿದೆ. ಸಮಂತಾ ಹಾಗೂ ನಾಗಚೈತನ್ಯ ಡಿವೋರ್ಸ್ ಬಳಿಕ ಮತ್ತೊಂದು ತಾರಾ ಜೋಡಿ ದೂರವಾಗಿದೆ. ಶಾಕಿಂಗ್ ಎಂಬಂತೆ ನಟ ಧನುಷ್ ಹಾಗೂ ಪತ್ನಿ ಐಶ್ವರ್ಯಾ ರಜನಿಕಾಂತ್ ಇಬ್ಬರ ವಿಚ್ಛೇದನ ನೀಡುವುದಾಗಿ ಘೋಷಿಸಿದ್ದಾರೆ. 18 ವರ್ಷಗಳ ಸಂಸಾರ ನಡೆಸಿದ ಬಳಿಕ ಇಬ್ಬರೂ ಬೇರೆಯಾಗಲು ನಿರ್ಧರಿಸಿರುವುದು ತಮಿಳು ಚಿತ್ರರಂಗಕ್ಕೆ ಹಾಗೂ ಅವರ ಅಭಿಮಾನಿಗಳಿಗೆ ದೊಡ್ಡ ಶಾಕ್ ಆಗಿದೆ. ಇದರೊಂದಿಗೆ ಐಶ್ವರ್ಯಾ ತಂದೆ ಸೂಪರ್‌ ಸ್ಟಾರ್ ರಜನಿಕಾಂತ್ ಅಭಿಮಾನಿಗಳಿಗೆ ಈ ಸುದ್ದಿ ಬೇಸರವನ್ನುಂಟು ಮಾಡಿದೆ.

  ಅಪ್ಪನ ಹಿಂದೆಯೇ ಹೋದ ರಜನಿಕಾಂತ್ ಪುತ್ರಿ ಐಶ್ವರ್ಯ | Filmibeat Kannada

  ನಟ ಧನುಷ್ ಹಾಗೂ ಐಶ್ವರ್ಯಾ ಇಬ್ಬರೂ ಟ್ವಿಟ್ಟರ್‌ನಲ್ಲಿ ಇಬ್ಬರೂ ಬೇರೆಯಾಗುತ್ತಿರುವ ವಿಷಯವನ್ನು ಘೋಷಣೆ ಮಾಡಿದ್ದಾರೆ. ಇಬ್ಬರೂ ಬೇರೆಯಾಗುತ್ತಿರುವುದಾಗಿ ಧನುಷ್ ಹಾಗೂ ಐಶ್ವರ್ಯಾ ಜೊತೆಯಾಗಿ ಟ್ವೀಟ್ ಮಾಡಿ ಘೋಷಣೆ ಮಾಡಿದ್ದಾರೆ. ಆದರೆ, ದಿಢೀರನೇ ಈ ನಿರ್ಧಾರಕ್ಕೆ ಕಾರಣವೇನು ಎಂಬುದು ಇನ್ನೂ ಗೊತ್ತಾಗಿಲ್ಲ. ಹೀಗಾಗಿ ಸಹಜವಾಗಿಯೇ ಈ ವಿಚ್ಚೇದನ ಸುದ್ದಿ ಶಾಕಿಂಗ್ ಆಗಿದೆ.

  ವಿಚ್ಛೇದನ ಘೋಷಿಸಿದ ಧನುಷ್-ಐಶ್ವರ್ಯಾ

  ವಿಚ್ಛೇದನ ಘೋಷಿಸಿದ ಧನುಷ್-ಐಶ್ವರ್ಯಾ

  ಸೋಮವಾರ (ಜನವರಿ 17) ತಡರಾತ್ರಿ ಧನುಷ್ ಹಾಗೂ ಐಶ್ವರ್ಯಾ ಇಬ್ಬರೂ ಟ್ವಿಟ್ಟರ್‌ನಲ್ಲಿ ಇಬ್ಬರೂ ಬೇರೆಯಾಗುತ್ತಿರುವ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. 18 ವರ್ಷದ ಸುಧೀರ್ಘ ದಾಂಪತ್ಯಕ್ಕೆ ತಿಲಾಂಜಲಿ ಇಡಲು ನಿರ್ಧರಿಸಿದ್ದಾರೆ. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿ ವಿವಾಹವಾಗಿದ್ದರು. ಹೀಗಾಗಿ ಈ ವಿಚ್ಛೇದನ ಸಿನಿಮಾರಂಗ ಸೇರಿದಂತೆ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದೆ.

  ಟ್ವಿಟ್ಟರ್‌ನಲ್ಲಿ ಧನುಷ್ ಡಿವೋರ್ಸ್

  ನಿನ್ನೆ(ಜನವರಿ 17) ರಂದು ಧನುಷ್ ಸೋಶಿಯಲ್ ಮೀಡಿಯಾ ಮೂಲಕ ವಿಚ್ಛೇದನದ ಬಗ್ಗೆ ಬಹಿರಂಗ ಪತ್ರವನ್ನು ಬರೆದಿದ್ದಾರೆ. "18 ವರ್ಷ ಸ್ನೇಹಿತರಾಗಿ, ದಂಪತಿಯಾಗಿ, ಪೋಷಕರಾಗಿ ಹಾಗೂ ಹಿತೈಷಿಯಾಗಿ ಜೊತೆಗಿದ್ದೆವು. ಬೆಳವಣಿಗೆ, ಪರಸ್ಪರ ಅರಿತುಕೊಳ್ಳುವಿಕೆ, ಹೊಂದಾಣಿಕೆ ಹಾಗೂ ಒಪ್ಪಿಕೊಳ್ಳುವ ಜರ್ನಿ ಮಧುರವಾಗಿತ್ತು. ಇವತ್ತು ನಾವು ನಮ್ಮ ಬೇರೆ ದಾರಿಗಳನ್ನು ಹುಡುಕಿಕೊಳ್ಳುವ ತೀರ್ಮಾನಕ್ಕೆ ಬಂದಿದ್ದೇವೆ. ಐಶ್ವರ್ಯ ಹಾಗೂ ನಾನು ಇಬ್ಬರೂ ಬೇರೆಯಾಗುವ ನಿರ್ಧಾರಕ್ಕೆ ಬಂದಿದ್ದು, ಒಬ್ಬರನೊಬ್ಬರು ಸ್ವತಂತ್ರ ವ್ಯಕ್ತಿಯಾಗಿ ಅರ್ಥ ಮಾಡಿಕೊಳ್ಳಲು ನಿರ್ಧರಿಸಿದ್ದೇವೆ. ನಮ್ಮ ನಿರ್ಧಾರಗಳಿಗೆ ಗೌರವ ನೀಡಿ ಮತ್ತು ಇದನ್ನು ನಿಭಾಯಿಸಲು ಬಿಡಿ " ಎಂದು ಧನುಷ್ ತಿಳಿಸಿದ್ದಾರೆ.

  ಐಶ್ವರ್ಯಾ ಹೇಳಿದ್ದೇನು?

  ಸೂಪರ್ ಸ್ಟಾರ್ ರಜನಿಕಾಂತ್ ಹಿರಿಯ ಪುತ್ರಿ ಐಶ್ವರ್ಯಾ ಕೂಡ ಇದೇ ಪತ್ರವನ್ನು ತನ್ನ ಸೋಷಿಯಲ್ ಮೀಡಿಯಾದಲ್ಲಿಯೂ ಹಂಚಿಕೊಂಡಿದ್ದಾರೆ. ಈ ವಿಚ್ಛೇದನದ ಪತ್ರಕ್ಕೆ ಒಂದೇ ಸಾಲಿನಲ್ಲಿ ಬರೆದು ಪೋಸ್ಟ್ ಮಾಡಿದ್ದಾರೆ. " ಇದಕ್ಕೆ ಯಾವುದೇ ಅಡಿಬರಹ ಬೇಡ.. ನೀವು ಅರ್ಥ ಮಾಡಿಕೊಳ್ಳುವುದು ಹಾಗೂ ನಿಮ್ಮ ಪ್ರೀತಿ ಅತೀ ಮುಖ್ಯವಾಗಿ ಬೇಕಿದೆ." ಎಂದು ಐಶ್ವರ್ಯಾ ರಜನಿಕಾಂತ್ ಪೋಸ್ಟ್ ಮಾಡಿದ್ದಾರೆ.

  ಐಶ್ವರ್ಯಾಗಿಂತ ಧನುಷ್ 2 ವರ್ಷ ಚಿಕ್ಕವರು

  ಐಶ್ವರ್ಯಾಗಿಂತ ಧನುಷ್ 2 ವರ್ಷ ಚಿಕ್ಕವರು


  ಧನುಷ್ ಹಾಗೂ ಐಶ್ವರ್ಯಾ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಿ ವಿವಾಹವಾಗಿದ್ದರು. ನವೆಂಬರ್ 18, 2004ರಲ್ಲಿ ದಕ್ಷಿಣ ಭಾರತದ ಸಂಪ್ರದಾಯದಂತೆ ಧನುಷ್ ಹಾಗೂ ಐಶ್ವರ್ಯಾ ವಿವಾಹವಾಗಿದ್ದರು. ಇತ್ತೀಚೆಗೆ ರಜನಿಕಾಂತ್ ಮನೆ ಬಳಿ ಪೊಯೆಸ್ ಗಾರ್ಡನ್‌ನಲ್ಲಿಯೇ ಹೊಸ ಬಂಗಲೆಯನ್ನು ಕಟ್ಟಿಸುತ್ತಿದ್ದರು. ಈಗ ದಿಢೀರನೇ ಇಬ್ಬರೂ ತಮ್ಮ ವೈವಾಹಿಕ ಜೀವನಕ್ಕೆ ತಿಲಾಂಜಲಿ ಇಡಲು ನಿರ್ಧರಿಸಿದ್ದು ಎಲ್ಲರಿಗೂ ದೊಡ್ಡ ಶಾಕಿಂಗ್ ವಿಷಯವಾಗಿದೆ.

  English summary
  Rajinikanth daughter Aishwaryaa and actor Dhanush announces Divorce after 18 years of togetherness. They Married in a South Indian ceremony on November 18, 2004, both had two sons.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  Desktop Bottom Promotion