For Quick Alerts
  ALLOW NOTIFICATIONS  
  For Daily Alerts

  ಕ್ಯಾನ್ಸರ್‌ಗೆ ತುತ್ತಾಗಿ ಆರ್ಥಿಕ ಸಂಕಷ್ಟದಲ್ಲಿರುವ ನಟನ ಸಹಾಯಕ್ಕೆ ಬಂದ ರಜನಿ

  |

  ಕ್ಯಾನ್ಸರ್‌ ರೋಗಕ್ಕೆ ತುತ್ತಾಗಿ ಚಿಕಿತ್ಸೆಗಾಗಿ ಕಷ್ಟಪಡುತ್ತಿರುವ ತಮಿಳು ನಟ ತವಸಿಗೆ ಸ್ಟಾರ್‌ ನಟರು ಸಹಾಯ ಮಾಡಲು ಮುಂದಾಗಿದ್ದಾರೆ. ಸುಮಾರು 30 ವರ್ಷಕ್ಕೂ ಹೆಚ್ಚು ಕಾಲ ಕಾಲಿವುಡ್ ಇಂಡಸ್ಟ್ರಿಯಲ್ಲಿ ತೊಡಗಿಕೊಂಡಿದ್ದ ನಟ ಇಂದು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ.

  ಗೊಳಾಡುತ್ತಿದ್ದಾರೆ ಒಂದು ಕಾಲದ ಸ್ಟಾರ್ ನಟ | Filmibeat Kannada

  ಚೆನ್ನೈ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ತವಸಿ, ಗುರುತೇ ಸಿಗದಷ್ಟು ದೈಹಿಕವಾಗಿ ನೊಂದಿದ್ದಾರೆ. ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ತವಸಿ ಆಸ್ಪತ್ರೆಯಿಂದಲೇ ವಿಡಿಯೋವೊಂದನ್ನು ಮಾಡಿ ಸಹಾಯ ಸಹಾಯಕ್ಕಾಗಿ ವಿನಂತಿಸಿದ್ದಾರೆ. ಈ ವಿಡಿಯೋ ನೋಡಿದ್ರೆ ಒಂದು ಕ್ಷಣ ಕರುಳು ಕಿತ್ತು ಬರುತ್ತದೆ. ಹಿರಿಯ ಕಲಾವಿದನ ಪರಿಸ್ಥಿತಿ ತಿಳಿದ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ನಟ ಸಿಂಬು ನೆರವು ನೀಡಲು ಮುಂದಾಗಿದ್ದಾರೆ. ಮುಂದೆ ಓದಿ...

  ತವಸಿ ಸಹಾಯಕ್ಕೆ ನಿಂತ ರಜನಿ

  ತವಸಿ ಸಹಾಯಕ್ಕೆ ನಿಂತ ರಜನಿ

  ನಟ ತವಸಿಯ ಆರೋಗ್ಯ ಸ್ಥಿತಿ ಕಂಡು ಮರುಗಿದ ರಜನಿಕಾಂತ್, ತಮ್ಮ ತಂಡಕ್ಕೆ ಸೂಚನೆ ನೀಡಿದ್ದಾರಂತೆ. ತವಸಿ ಆರೋಗ್ಯದ ಬಗ್ಗೆ ಮಾಹಿತಿ ಪಡೆದು, ಅವರಿಗೆ ಸಹಾಯ ಮಾಡಿ ಎಂದು ಹೇಳಿದ್ದಾರಂತೆ. ರಜನಿ ಅಭಿನಯದ ಹಲವು ಚಿತ್ರಗಳಲ್ಲಿ ತವಸಿ ನಟಿಸಿದ್ದಾರೆ.

  ಆಗ ಅಬ್ಬರಸಿ ಬೊಬ್ಬಿರಿದಿದ್ದ ನಟ ಇಂದು ಆಸ್ಪತ್ರೆಯಲ್ಲಿ ಅನಾಥ!ಆಗ ಅಬ್ಬರಸಿ ಬೊಬ್ಬಿರಿದಿದ್ದ ನಟ ಇಂದು ಆಸ್ಪತ್ರೆಯಲ್ಲಿ ಅನಾಥ!

  ಎಸ್‌ಟಿಆರ್ ಸಹಾಯ

  ಎಸ್‌ಟಿಆರ್ ಸಹಾಯ

  ಹಿರಿಯ ನಟನ ಚಿಕಿತ್ಸೆಗಾಗಿ ಯುವ ನಟ ಸಿಂಬು ಒಂದು ಲಕ್ಷ ರೂಪಾಯಿ ಸಹಾಯಧನ ನೀಡಿದ್ದಾರೆ ಎಂದು ವರದಿಯಾಗಿದೆ. ತಮಿಳಿನ ಹಲವು ನಟರ ಚಿತ್ರದಲ್ಲಿ ತವಸಿ ಕಾಣಿಸಿಕೊಂಡಿದ್ದಾರೆ. ಶಿವಕಾರ್ತಿಕೇಯನ್ ಮತ್ತು ಸೂರಿ ನಟನೆಯ ವಾರ್ತ ಪಡಾದೆ ವಾಲಿಬಾರ್ ಸಂಘಂ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದರು.

  ಸೇತುಪತಿ ಸಹಾಯ

  ಸೇತುಪತಿ ಸಹಾಯ

  ಖ್ಯಾತ ನಟ ವಿಜಯ್ ಸೇತುಪತಿ ತವಸಿ ಚಿಕಿತ್ಸೆಗೆ 10 ಲಕ್ಷ ಹಣ ನೀಡುವುದಾಗಿ ಹೇಳಿದ್ದಾರೆ. ಡಿಎಂಕೆ ಶಾಸಕ ಶರವಣ ಅವರು ತವಸಿ ದಾಖಲಾಗಿರುವ ಮಧುರೈ ನ ಆಸ್ಪತ್ರೆಗೆ ಭೇಟಿ ನೀಡಿದ್ದು, ತಾವೂ ಸಹ ಹಣ ಸಹಾಯ ಮಾಡುವುದಾಗಿ ಹೇಳಿದ್ದಾರೆ.

  ಸೂರ್ಯ ಟ್ರಸ್ಟ್ ಸಹಾಯ

  ಸೂರ್ಯ ಟ್ರಸ್ಟ್ ಸಹಾಯ

  ತವಸಿ ಚಿಕಿತ್ಸೆಗೆ ಈಗಾಗಲೇ ಹಲವು ನಟರು ಸಹಾಯ ಮಾಡಲು ಮುಂದೆ ಬಂದಿದ್ದಾರೆ. ಸೂರ್ಯಾ ಅವರ ಚಾರಿಟೇಬಲ್ ಟ್ರಸ್ಟ್ ಈಗಾಗಲೇ ತವಸಿ ಚಿಕಿತ್ಸೆಗೆ ನೆರವು ಒದಗಿಸಿದೆ. ನಟ ಶಿವಕಾರ್ತಿಕೇಯನ್ ಸಹ ತಾವು ಸಹಾಯ ಮಾಡುವುದಾಗಿ ಮುಂದೆ ಬಂದಿದ್ದಾರೆ.

  English summary
  Superstar Rajinikanth help to senior actor Thavasi, who admitted to hospital in chennai. he is suffering from cancer.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X