Don't Miss!
- News
ಇನ್ಫೋಸಿಸ್ ಸಿಇಒ ಆಗಿ ಸಲೀಲ್ ಪರೇಖ್ ಮರು ನೇಮಕ
- Automobiles
ಕೆಟಿಎಂ ಡ್ಯೂಕ್ 390 ಪ್ರತಿಸ್ಪರ್ಧಿ 2022ರ ಕಿಮ್ಕೊ ಕೆ ರೈಡರ್ 400 ಬೈಕ್ ಅನಾವರಣ
- Sports
ವೈರಲ್ ಫೋಟೋ: MI vs DC ಪಂದ್ಯದ ವೇಳೆ ಪ್ರೇಕ್ಷಕರ ಗಮನ ಸೆಳೆದ ಈ ಮಿಸ್ಟರಿ ಗರ್ಲ್ಸ್ ಯಾರು?
- Finance
ಟಾಪ್ 10 ಕಂಪನಿಗಳ ಪೈಕಿ 5 ಕಂಪನಿ ಮೌಲ್ಯ 1.78 ಲಕ್ಷ ಕೋಟಿ ಏರಿಕೆ
- Education
IGNOU Re-registration 2022 For July Session : ಜುಲೈ ಸೆಶನ್ ಪ್ರವೇಶಾತಿಗೆ ಮರುನೊಂದಣಿ ಪ್ರಕ್ರಿಯೆ ಆರಂಭ
- Lifestyle
ಮೇ 22ರಿಂದ ರಿಂದ ಮೇ 28ರ ವಾರ ಭವಿಷ್ಯ: ಈ ರಾಶಿಯ ಉದ್ಯೋಗಿಗಳು ಯಾವುದೇ ಕೆಲಸದಲ್ಲೂ ನಿರ್ಲಕ್ಷ್ಯ ಮಾಡಬೇಡಿ
- Technology
ಟ್ರೂಕಾಲರ್ ಮಾದರಿಯ ಹೊಸ ಕಾಲರ್ ಐಡಿ ಫೀಚರ್ಸ್ ಪರಿಚಯಿಸಲು ಟ್ರಾಯ್ ಸಿದ್ಧತೆ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಪುತ್ರಿ ಐಶ್ವರ್ಯಾ ವಿಚ್ಛೇದನ ಬಳಿಕ ಕುಗ್ಗಿದ ರಜನಿಕಾಂತ್: ಅಭಿಮಾನಿಗಳ ಎದೆಯಲ್ಲಿ ನಡುಕ
ರಜನಿಕಾಂತ್ ಹಿರಿಯ ಪುತ್ರಿ ಐಶ್ವರ್ಯಾ ಹಾಗೂ ನಟ ಧನುಷ್ 2022, ಜನವರಿ 17 ರಂದು ಬೇರೆಯಾಗುತ್ತಿರುವುದಾಗಿ ತಿಳಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರೂ ವಿಚ್ಛೇದನ ಪಡೆಯುವ ಸಂಗತಿ ರಜನಿಕಾಂತ್ ಅಭಿಮಾನಿಗಳಿಗೆ ದೊಡ್ಡ ಶಾಕ್ ಆಗಿತ್ತು. ಧನುಷ್ ಹಾಗೂ ಪುತ್ರಿ ಐಶ್ವರ್ಯಾ ದಾಂಪತ್ಯಕ್ಕೆ ಅಂತ್ಯ ಹಾಡುತ್ತಿರುವುದಾಗಿ ಹೇಳಿದ ದಿನದಿಂದ ರಜನಿಕಾಂತ್ ತುಂಬಾನೇ ನೊಂದುಕೊಂಡಿದ್ದಾರೆಂದು ಆಪ್ತರು ಹೇಳಿದ್ದಾರೆ.
ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಬಹಳ ದಿನಗಳಿಂದ ಆರೋಗ್ಯ ಸಮಸ್ಯೆಯಿದೆ. ಇದೇ ಕಾರಣಕ್ಕೆ ರಜನಿ ರಾಜಕೀಯ ಪ್ರವೇಶಕ್ಕೂ ಅಂತ್ಯ ಹಾಡಿದ್ದರು. ಈಗ ಮಗಳ ಕೌಟುಂಬಿಕ ಜೀವನ ಮುರಿದು ಬಿದ್ದಿದ್ದರಿಂದ ನೊಂದುಕೊಂಡಿದ್ದಾರಂತೆ. ಇದು ಎಲ್ಲಿ ರಜನಿಕಾಂತ್ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೋ ಎನ್ನುವ ಆತಂಕದಲ್ಲಿ ಸೂಪರ್‌ಸ್ಟಾರ್ ಅಭಿಮಾನಿಗಳಿದ್ದಾರೆ. ಈ ಮಧ್ಯೆ ಸ್ವತಃ ರಜನಿ ಮಗಳ ಸಂಸಾರವನ್ನು ಸರಿಪಡಿಸಲು ಮುಂದಾಗಿದ್ದಾರಂತೆ.

ಐಶ್ವರ್ಯಾ ವಿಚ್ಛೇದನ: ಕುಗ್ಗಿದ ಸೂಪರ್‌ಸ್ಟಾರ್
ರಜನಿಕಾಂತ್ ಅಳಿಯ ಧನುಷ್ ಹಾಗೂ ಪುತ್ರಿ ಐಶ್ವರ್ಯಾ ರಜನಿಕಾಂತ್ ತಮ್ಮ 18 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ್ದರು. ಇದು ಸೂಪರ್‌ಸ್ಟಾರ್ ರಜನಿಕಾಂತ್ ಮನಸ್ಸಿನ ಮೇಲೆ ಪರಿಣಾಮ ಬೀರಿದೆಯಂತೆ. ಮಗಳ ಹಾಗೂ ಅಳಿಯ ತೆಗೆದುಕೊಂಡ ನಿರ್ಧಾರದಿಂದ ರಜನಿಕಾಂತ್ ಕುಗ್ಗಿ ಹೋಗಿದ್ದಾರಂತೆ. 71ನೇ ವಯಸ್ಸಿನಲ್ಲಿಯೂ ರಜನಿಕಾಂತ್ ಲವ ಲವಿಕೆಯಿಂದ ಸಿನಿಮಾಗಳಲ್ಲಿ ನಟಿಸುತ್ತಿದ್ದವರು. ಆದರೆ, ಮಗಳು ದಾಂಪತ್ಯಕ್ಕೆ ಅಂತ್ಯ ಹಾಡಲು ನಿರ್ಧರಿಸಿದ ದಿನದಿಂದ ರಜನಿ ನೋವಿನಲ್ಲಿಯೇ ಕಾಲ ಕಳೆಯುತ್ತಾರೆ ಎಂದು ಆಪ್ತರೊಬ್ಬರು ಮಾಧ್ಯಮವೊಂದರಲ್ಲಿ ಬಹಿರಂಗ ಪಡಸಿದ್ದಾರೆ.

ಮಗಳ ದಾಂಪತ್ಯ ಸರಿಸಡಿಸಲು ಮುಂದಾದ ರಜನಿ
2022, ಜನವರಿ 17ರಂದು ಧನುಷ್ ಹಾಗೂ ಐಶ್ವರ್ಯಾ ಕೌಟುಂಬಿಕ ಜೀವನಕ್ಕೆ ಅಂತ್ಯ ಹಾಡುವುದಾಗಿ ತಿಳಿಸಿದ್ದಾರೆ. ಇದು ರಜನಿಕಾಂತ್ ಕುಟುಂಬಕ್ಕೆ ದೊಡ್ಡ ಆಘಾತ ನೀಡಿದೆ. ಇದನ್ನು ಇಬ್ಬರ ಕುಟುಂಬ ಸದಸ್ಯರಿಗೆ, ಅಭಿಮಾನಿಗಳು ಹಾಗೂ ಸ್ನೇಹಿತರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಮಗಳ ದಾಂಪತ್ಯವನ್ನು ಸರಿಪಡಿಸಲು ರಜನಿಕಾಂತ್ ಮುಂದಾಗಿದ್ದು, ಮಗಳೊಂದಿಗೆ ನಿರಂತರವಾಗಿ ಮಾತಾಡುತ್ತಿದ್ದಾರೆ ಎನ್ನಲಾಗಿದೆ. ಧನುಷ್ ತಂದೆ ಕಸ್ತೂರಿ ರಾಜ ಕೂಡ ಇಬ್ಬರದ್ದು ತಾತ್ಕಾಲಿಕ ಕಲಹ ಅಷ್ಟೇ. ಇಬ್ಬರೂ ಮತ್ತೆ ಒಂದಾಗುತ್ತಾರೆಂಬ ಭರವಸೆ ನೀಡಿದ್ದರು. ಈಗ ರಜನಿಕಾಂತ್ ಅಖಾಡಕ್ಕಿಳಿದಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ.

ರಜನಿ ಮನಸ್ಥಿತಿ ಹೇಗಿದೆ?
ರಜನಿಕಾಂತ್‌ಗೆ ಇನ್ನೂ ಮಗಳ ವಿಚ್ಛೇದನದ ವಿಷಯವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. " ರಜನಿ ಸರ್ ಪುತ್ರಿ ಐಶ್ವರ್ಯಾ ವಿಚ್ಛೇದನವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಇಬ್ಬರೂ ಬೇರೆಯಾಗಿರುವುದು ಕೇವಲ ತಾತ್ಕಾಲಿಕಷ್ಟೇ ಎಂದು ಹೇಳುತ್ತಿದ್ದಾರೆ. ಮಗಳ ಕುಟುಂಬವನ್ನು ಸರಿಪಡಿಸುವ ಬಗ್ಗೆನೇ ರಜನಿಕಾಂತ್ ಮಾತಾಡುತ್ತಿದ್ದಾರೆ." ಎಂದು ಸೂಪರ್‌ಸ್ಟಾರ್ ಆಪ್ತರೊಬ್ಬರು ವಿಯಾನ್‌ಗೆ ತಿಳಿಸಿದ್ದಾರೆ. ಆದರೆ, ರಜನಿಕಾಂತ್ ಮಧ್ಯಸ್ಥಿಕೆ ಬಳಿಕ ಧನುಷ್ ಹಾಗೂ ಐಶ್ವರ್ಯಾ ಮತ್ತೆ ಒಂದಾಗುತ್ತಾರಾ ಎನ್ನುವ ಬಗ್ಗೆ ಇನ್ನೂ ಮಾಹಿತಿ ಸಿಕ್ಕಿಲ್ಲ.

ರಜನಿ ಆರೋಗ್ಯದ ಬಗ್ಗೆ ಆತಂಕ
ಅಳಿಯ ಧನುಷ್ ಹಾಗೂ ಪುತ್ರಿ ಐಶ್ವರ್ಯಾ ವಿಚ್ಛೇದನಕ್ಕೆ ಮುಂದಾಗಿರುವುದು ರಜನಿಕಾಂತ್ ಅವರಿಗೆ ಬೇಸರ ತರಿಸಿದೆ. ಇಬ್ಬರನ್ನು ಒಂದು ಮಾಡುವುದಕ್ಕೆ ರಜನಿ ತನ್ನೆಲ್ಲಾ ಪ್ರಯತ್ನವನ್ನೂ ಮಾಡುತ್ತಿದ್ದಾರೆ. ಈ ಪ್ರಯತ್ನದಲ್ಲಿ ರಜನಿಕಾಂತ್ ಎಲ್ಲಿ ತನ್ನ ಆರೋಗ್ಯವನ್ನು ಕೆಡಿಸಿಕೊಳ್ಳುತ್ತಾರೋ ಎನ್ನುವ ಆತಂಕದಲ್ಲಿದ್ದಾರೆ. ಆಗಾಗ ರಜನಿಕಾಂತ್ ಆರೋಗ್ಯದಲ್ಲಿ ಏರು-ಪೇರಾಗುತ್ತಲೇ ಇರುತ್ತೆ. ಹೀಗಾಗಿ ಮಗಳ ವಿಚ್ಛೇದನದಿಂದ ಮತ್ತಷ್ಟು ಆರೋಗ್ಯ ಹದಗೆಟ್ಟರೆ ಏನು ಗತಿ ಎನ್ನುವ ಆತಂಕ ಆಭಿಮಾನಿಗಳಲ್ಲಿದೆ.