Don't Miss!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Sports
IND VS AUS Test: ಟೆಸ್ಟ್ ಸರಣಿಯಲ್ಲಿ ಕೆಎಲ್ ರಾಹುಲ್ ವಿಕೆಟ್ ಕೀಪರ್ ಅಲ್ಲ: ಪದಾರ್ಪಣೆ ಮಾಡಲು ಸಜ್ಜಾದ ವಿಕೆಟ್ ಕೀಪರ್
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಥಿಯೇಟರ್‌ಗಳಲ್ಲಿ ತಲೈವಾ ದರ್ಬಾರ್: ರೀ ರಿಲೀಸ್ ಆಗಿ ಹೊಸ ದಾಖಲೆ ಬರೆದ ರಜನಿಕಾಂತ್ 'ಬಾಬಾ'
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 'ಬಾಬಾ' ಸಿನಿಮಾ ರಿಲೀಸ್ ಆಗಿ ಧೂಳೆಬ್ಬಿಸಿದೆ. ಇತ್ತೀಚೆಗೆ ತಲೈವಾ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಬಾಬಾ' ಚಿತ್ರವನ್ನು ಹೊಸ ರೂಪದಲ್ಲಿ ಮತ್ತೆ ತೆರೆಗೆ ತರುವ ಪ್ರಯತ್ನ ಮಾಡಲಾಗಿತ್ತು. 20 ವರ್ಷಗಳ ಹಿಂದೆ ಮಿಶ್ರಪ್ರತಿಕ್ರಿಯೆ ಪಡೆದುಕೊಂಡಿದ್ದ 'ಬಾಬಾ' ಚಿತ್ರಕ್ಕೆ ಈ ಬಾರಿ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ತಿದೆ.
ಮೊದಲ ವಾರ ಚಿತ್ರದ 10 ಸಾವಿರ ಟಿಕೆಟ್‌ಗಳು ಮಾರಾಟವಾಗಿ ದಾಖಲೆ ಬರೆದಿದೆ. ರೀ ರಿಲೀಸ್ ವೇಳೆ ಚಿತ್ರವೊಂದಕ್ಕೆ ಈಮಟ್ಟಿಗೆ ಪ್ರತಿಕ್ರಿಯೆ ಸಿಕ್ಕಿರುವುದು ಅಚ್ಚರಿ ಮೂಡಿಸಿದೆ. ಸೂಪರ್ ಸ್ಟಾರ್ ಸ್ಟಾಮಿನಾ ಏನು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. 2002ರಲ್ಲಿ ರಿಲೀಸ್ ಆಗಿದ್ದ ಈ ಸೂಪರ್ ನ್ಯಾಚುರಲ್ ಆಕ್ಷನ್ ಚಿತ್ರಕ್ಕೆ ಸುರೇಶ್ ಕೃಷ್ಣ ಆಕ್ಷನ್ ಕಟ್ ಹೇಳಿದ್ದರು. ಹೊಸ ತಂತ್ರಜ್ಞಾನದಲ್ಲಿ ಚಿತ್ರಕ್ಕೆ ಹೊಸ ಸ್ಪರ್ಶ ಕೊಟ್ಟು ಈಗ ಪ್ರೇಕ್ಷಕರ ಮುಂದೆ ತರಲಾಗಿದೆ.
200
ಕೋಟಿ
ಗಳಿಸಿದ
ರಜನಿಕಾಂತ್
ನಟನೆಯ
ಚಿತ್ರಗಳ
ಪಟ್ಟಿ
ಇಲ್ಲಿದೆ
ಈ ಎಡಿಟಿಂಗ್ ಮಾಡಿದ್ದು ಮಾತ್ರವಲ್ಲ, ಚಿತ್ರಕ್ಕಾಗಿ ರಜಿನಿಕಾಂತ್ ಡಬ್ಬಿಂಗ್ ಕೂಡ ಮಾಡಿದ್ದರು. ಈ ರೀತಿಯ ಪ್ರಯತ್ನ ಇದೇ ಮೊದಲು ಎನ್ನಬಹುದು. ಒಂದಷ್ಟು ದೃಶ್ಯಗಳನ್ನು ತೆಗೆದು ಒಂದಷ್ಟು ಹೊಸ ದೃಶ್ಯಗಳನ್ನು ಸೇರಿಸಿದ್ದಾರೆ. ಅದೇ ಕಾರಣಕ್ಕೆ ರಜನಿಕಾಂತ್ ಡಬ್ಬಿಂಗ್ ಮಾಡಿದ್ದರು. ಚಿತ್ರದ ಟ್ರೈಲರ್ ಸಹ ರಿಲೀಸ್ ಆಗಿತ್ತು. ರಜನಿಕಾಂತ್ ಬಹಳ ಇಷ್ಟಪಟ್ಟು ಮಾಡಿದ್ದ ಸಿನಿಮಾ ಇದು. ಆಸ್‌ಯೂಷಲ್ ತಮ್ಮ ವಿಭಿನ್ನ ಸ್ಟೈಲ್, ಮ್ಯಾನರಿಸಂನಿಂದ 20 ವರ್ಷಗಳ ಹಿಂದೆ ಮೋಡಿ ಮಾಡಿದ್ದರು. ಆದರೆ ಬಾಕ್ಸಾಫೀಸ್‌ನಲ್ಲಿ ಸಿನಿಮಾ ಮುಗ್ಗರಿಸಿತ್ತು.

ಅಂದು 'ಬಾಬಾ' ಚಿತ್ರದಿಂದ ನಷ್ಟ ಅನುಭವಿಸಿದ ವಿತರಕರಿಗೆ ರಜಿನಿಕಾಂತ್ ಕೊಂಚ ನಷ್ಟ ಭರಿಸಿಕೊಟ್ಟಿದ್ದರು. ಈ ರೀತಿ ಫ್ಲಾಪ್ ಆಗಿದ್ದ ಚಿತ್ರವನ್ನು ರೀ ರಿಲೀಸ್ ಮಾಡುತ್ತಾರೆ ಎಂದಾಗಲೇ ಕೆಲವರಿಗೆ ಅಚ್ಚರಿ ಅನ್ನಿಸಿತ್ತು. ಸಾಮಾನ್ಯವಾಗಿ ಹಿಟ್ ಸಿನಿಮಾಗಳನ್ನು ರೀ ರಿಲೀಸ್ ಮಾಡುತ್ತಾರೆ. ಆದರೆ ಸೋತ ಚಿತ್ರವನ್ನು ಯಾಕೆ ಮತ್ತೆ ತೆರೆಗೆ ತರುತ್ತಾರೆ ಎಂದಿದ್ದರು. ಆದರೆ ಮೊದಲ ವಾರವೇ 10 ಸಾವಿರ ಟಿಕೆಟ್ ಮಾರಾಟವಾಗಿದೆ. ರಜನಿಕಾಂತ್ ಹುಟ್ಟುಹಬ್ಬ ಸೋಮವಾರ. ಆದರೆ ಶುಕ್ರವಾರವೇ ಸಿನಿಮಾ ರಿಲೀಸ್ ಆಗಿತ್ತು. ವೀಕೆಂಡ್‌ನಲ್ಲಿ ಸಿನಿಮಾ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದರು. ಯಶಸ್ವಿಯಾಗಿ ಸಿನಿಮಾ 2ನೇ ವಾರಕ್ಕೆ ಕಾಲಿಟ್ಟಿದೆ. ದೇಶ ವಿದೇಶದ ಆಯ್ದ ಥಿಯೇಟರ್‌ಗಳಲ್ಲಿ ಸಿನಿಮಾ ತೆರೆಕಂಡಿದೆ.