For Quick Alerts
  ALLOW NOTIFICATIONS  
  For Daily Alerts

  ರಾಜಕೀಯ ಪ್ರವೇಶದ ಬಗ್ಗೆ ರಜನೀಕಾಂತ್ ಮಹತ್ವದ ಹೇಳಿಕೆ

  |

  ನಟ ರಜನೀಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಕಳೆದ ಕೆಲ ವರ್ಷಗಳಿಂದ ಚರ್ಚೆ ಜೋರಾಗಿ ನಡೆಯುತ್ತಿದೆ. ಇದೇ ವಿಷಯವಾಗಿ ಇಂದು ರಜನೀಕಾಂತ್ ಸಭೆ ನಡೆಸಿದ್ದು, ಸಭೆ ನಂತರ ರಜನೀ ಆಡಿದ ಮಾತುಗಳು ಭಾರಿ ಕುತೂಹಲ ಕೆರಳಿಸಿವೆ.

  ರಜನಿಕಾಂತ್ ಇಂದು 'ರಜನಿ ಮಕ್ಕಳ್ ಮುಂದ್ರಂ' ಸಂಘಟನೆಯ ಜಿಲ್ಲಾ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಸಭೆ ನಡೆಸಿದರು. ಈ ಸಭೆಯಲ್ಲಿ ರಾಜಕೀಯ ಪಕ್ಷ ಸ್ಥಾಪನೆ ಮತ್ತು ಪ್ರವೇಶದ ಕುರಿತಾಗಿಯೇ ಚರ್ಚೆ ನಡೆಸಲಾಗಿದೆ.

  ಸಭೆಯ ನಂತರ ಮಾಧ್ಯಮಗಳೊಟ್ಟಿಗೆ ಮಾತನಾಡಿದ ರಜನಿಕಾಂತ್, 'ರಾಜಕೀಯ ಪ್ರವೇಶದ ಬಗ್ಗೆ ನನ್ನ ನಿರ್ಧಾರವನ್ನು ಶೀಘ್ರವಾಗಿ ತಿಳಿಸುತ್ತೇನೆ, ನಮ್ಮ ಜಿಲ್ಲಾ ಮುಖಂಡರು, ನನ್ನ ನಿರ್ಧಾರಕ್ಕೆ ಬದ್ಧವಾಗಿರುವುದಾಗಿ ಹೇಳಿದ್ದಾರೆ' ಎಂದು ರಜನೀ ಹೇಳಿದರು.

  ಸಭೆಯಲ್ಲಿ ಮಾತನಾಡಿದ್ದ ರಜನೀ, 'ಜನವರಿಯಲ್ಲಿ ಪಕ್ಷವನ್ನು ಘೋಷಿಸಿದರೆ ನೀವು ಸಿದ್ಧರಿದ್ದೀರಾ?' ಎಂಬ ಪ್ರಶ್ನೆಯನ್ನು ಮುಖಂಡರ ಮುಂದಿಟ್ಟಿದ್ದರು, ಇದಕ್ಕೆ ಎಲ್ಲರೂ ಸಿದ್ಧರಿದ್ದೀವೆಂದು ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲಿಗೆ ರಜನೀಕಾಂತ್ ಅವರು ತಮ್ಮ ಪಕ್ಷವನ್ನು ಜನವರಿಯಲ್ಲಿ ಘೋಷಿಸುವ ಸಾಧ್ಯತೆ ದಟ್ಟವಾಗಿದೆ.

  ಐಕಾನ್ ಆಫ್ ಗೋಲ್ಡನ್ ಜುಬ್ಲಿ ಅವಾರ್ಡ್ ಪಡೆದ ನಟ ರಜನಿಕಾಂತ್ | FILMIBEAT KANNADA

  ಕಳೆದ ತಿಂಗಳೇ ರಜನೀಕಾಂತ್ ತಮ್ಮ ರಾಜಕೀಯ ಪ್ರವೇಶವನ್ನು ಅಧಿಕೃತವಾಗಿ ಘೋಷಿಸುತ್ತಾರೆ ಎನ್ನಲಾಗಿತ್ತು. ಆದರೆ ಅವರ ಆರೋಗ್ಯದಲ್ಲಿ ವ್ಯತ್ಯಾಸ ಬಂದ ಕಾರಣ ರಜನೀಕಾಂತ್ ತಡ ಮಾಡಿದ್ದರು ಎನ್ನಲಾಗಿದೆ.

  English summary
  Tamil famous actor Rajinikanth may announce his political party in January 2021.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X