For Quick Alerts
  ALLOW NOTIFICATIONS  
  For Daily Alerts

  ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದ ನಟಿ ರಮ್ಯಾ ಕೃಷ್ಣನ್

  |

  ಬಹುಭಾಷೆ ನಟಿ ರಮ್ಯಾಕೃಷ್ಣನ್ ಅವರು ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದುಕೊಂಡಿದ್ದಾರೆ. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿಂದು (ಏಪ್ರಿಲ್ 28) ಎರಡನೇ ಡೋಸ್ ಪಡೆದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

  'ಕೊರೊನಾ ವೈರಸ್ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಡಬೇಕಿದೆ. ಎಲ್ಲರೂ ಸುರಕ್ಷಿತ ಇರಿ' ಎಂದು ರಮ್ಯಾಕೃಷ್ಣನ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

  100 ಆಮ್ಲಜನಕ ಸಾಂದ್ರಕ ದಾನ ಮಾಡಿದ ಅಕ್ಷಯ್ ಕುಮಾರ್ ದಂಪತಿ

  ಕೋವಿಡ್ ಲಸಿಕೆ ಪಡೆದ ನಂತರ ಫೋಟೋಗಳನ್ನು ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ ನಟಿ ರಮ್ಯಾಕೃಷ್ಣನ್. ಒಂದು ಫೋಟೋದಲ್ಲಿ ಲಸಿಕೆ ಪಡೆಯುತ್ತಿರುವುದು, ಇನ್ನೊಂದಿಷ್ಟು ಫೋಟೋದಲ್ಲಿ ನಗುಮುಖದಲ್ಲಿ ಫೋಸ್ ಕೊಟ್ಟಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  ಕೋವಿಡ್ ಎರಡನೇ ಅಲೆ ಭಾರತ ದೇಶವನ್ನು ಬಹಳ ಕೆಟ್ಟದಾಗಿ ಕಾಡುತ್ತಿದೆ. ಬೆಡ್ ಸಮಸ್ಯೆ, ಆಕ್ಸಿಜನ್ ಸಮಸ್ಯೆ, ವೆಂಟಿಲೇಟರ್ ಸಮಸ್ಯೆ ಎಂಬ ವರದಿಗಳಾಗಿವೆ. ಮತ್ತೊಂದೆಡೆ ಕೋವಿಡ್‌ಗೆ ಲಸಿಕೆ ಸಹ ನೀಡಲಾಗುತ್ತಿದೆ.

  ಇನ್ನುಳಿದಂತೆ ರಮ್ಯಾಕೃಷ್ಣನ್ ಅವರು ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಹೆಚ್ಚು ಬ್ಯುಸಿಯಿದ್ದಾರೆ. 'ಬಾಹುಬಲಿ' ಸಿನಿಮಾದ ಶಿವಗಾಮಿ ಪಾತ್ರದ ಬಳಿಕ ರಮ್ಯಾಕೃಷ್ಣನ್ ಅವರ ಬೇಡಿಕೆ ಮತ್ತಷ್ಟು ಹೆಚ್ಚಾಗಿದೆ. ಕನ್ನಡ, ಮಲಯಾಳಂ ಭಾಷೆಯಲ್ಲೂ ಹೆಚ್ಚು ಸಿನಿಮಾ ಮಾಡಿದ್ದಾರೆ.

  ಗೆಳತಿ ಮಾಲಾಶ್ರೀ ದುಃಖಕ್ಕೆ ಪತ್ರದ ಮೂಲಕ ಸಮಾಧಾನ ಮಾಡಿದ ನಟಿ ಶ್ರುತಿ | Filmibeat Kannada

  'ಸೂಪರ್ ಡಿಲೆಕ್ಸ್' ಚಿತ್ರದಲ್ಲಿ ರಮ್ಯಾಕೃಷ್ಣನ್ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದರು. ಇದೀಗ, ತಮಿಳಿನಲ್ಲಿ ಎರಡು ಸಿನಿಮಾ, ತೆಲುಗಿನಲ್ಲಿ ವಿಜಯ್ ದೇವರಕೊಂಡ ನಟನೆಯ 'ಲೈಗರ್' ಹಾಗೂ ರಿಪಬ್ಲಿಕ್ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.

  English summary
  Actress Ramya Krishnan gets second dose of Covid-19.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X