ಚೊಚ್ಚಲ ತಮಿಳು ಚಿತ್ರದ ಶೂಟಿಂಗ್ ಮುಗಿಸಿದ ರಶ್ಮಿಕಾ ಮಂದಣ್ಣ

ತೆಲುಗು ಚಿತ್ರರಂಗದಲ್ಲಿ ಹೆಚ್ಚು ಬ್ಯುಸಿಯಿರುವ ನಟಿ ರಶ್ಮಿಕಾ ಮಂದಣ್ಣ ತಮಿಳಿನಲ್ಲೂ ಒಂದು ಸಿನಿಮಾ ಆರಂಭಿಸಿದ್ದರು. ತಮಿಳು ನಟ ಕಾರ್ತಿ ಜೊತೆ ಸುಲ್ತಾನ್ ಎಂಬ ಚಿತ್ರದಲ್ಲಿ ನಟಿಸುವ ಮೂಲಕ ಕಾಲಿವುಡ್‌ಗೆ ಪ್ರವೇಶ ಮಾಡಿದ್ದರು.

ಕಳೆದ ವರ್ಷ ಆರಂಭವಾಗಿದ್ದ ಈ ಚಿತ್ರ ಕೊನೆಯೂ ಚಿತ್ರೀಕರಣ ಮುಗಿಸಿದೆ. ಈ ಕುರಿತು ಟ್ವಿಟ್ಟರ್‌ನಲ್ಲಿ ಸಂತಸ ಹಂಚಿಕೊಂಡಿರುವ ನಟಿ ''ನಾನು ಕೆಲಸ ಮಾಡಿದ ಅತ್ಯಂತ ಉತ್ತಮ ತಂಡಗಳಲ್ಲಿ ಇದು ಒಂದಾಗಿದೆ'' ಎಂದಿದ್ದಾರೆ.

''ಈ ಸೆಟ್‌ನಲ್ಲಿ ನಾನು ಯಾವಾಗಲೂ ಮೋಜು ಮಾಡುತ್ತಿದ್ದೆ.. ನಗುತ್ತಿರುವ ಕಣ್ಣುಗಳೊಂದಿಗೆ ಹಳದಿ ಹೃದಯದ ಮುಖ ನನ್ನನ್ನು ಸಹಿಸಿಕೊಂಡಿದ್ದಕ್ಕಾಗಿ ಧನ್ಯವಾದಗಳು ಮತ್ತು ಇಡೀ ತಂಡಕ್ಕೆ ಪ್ರೀತಿ ಮತ್ತು ಶುಭಾಶಯಗಳು ..''ಎಂದು ಟ್ವೀಟ್ ಮಾಡಿದ್ದಾರೆ.

Rashmika mandanna and karthi movie Shooting completed

ಈ ಬಗ್ಗೆ ನಟ ಕಾರ್ತಿ ಸಹ ಸಂತಸ ಹಂಚಿಕೊಂಡಿದ್ದು ''ಮೂರು ವರ್ಷಗಳ ಹಿಂದೆ ಈ ಕಲ್ಪನೆಯನ್ನು ಕೇಳಿದ ದಿನದಿಂದ ಇಂದಿನವರೆಗೂ ಕಥೆ ನಮ್ಮನ್ನು ರೋಮಾಂಚನಗೊಳಿಸಿದೆ. ಇದು ಇದುವರೆಗಿನ ನನ್ನ ದೊಡ್ಡ ನಿರ್ಮಾಣಗಳಲ್ಲಿ ಒಂದಾಗಿದೆ. ಅತ್ಯುತ್ತಮವಾದ ಕೆಲಸ ಮಾಡಿದ್ದಕ್ಕಾಗಿ ಇಡೀ ತಂಡವನ್ನು ನಾನು ಅಭಿನಂದಿಸುತ್ತೇನೆ. ಎಲ್ಲರಿಗೂ ಧನ್ಯವಾದಗಳು'' ಎಂದಿದ್ದಾರೆ.

ಭಾಗ್ಯರಾಜ್ ಕಣ್ಣನ್ ಈ ಚಿತ್ರ ನಿರ್ದೇಶನ ಮಾಡಿದ್ದು, ಸರಿಯಾಗಿ ಒಂದು ವರ್ಷದ ನಂತರ ಸಿನಿಮಾ ಶೂಟಿಂಗ್ ಮುಕ್ತಾಯವಾಗಿದೆ. ಇನ್ನುಳಿದಂತೆ ಚಿತ್ರದಲ್ಲಿ ಯೋಗಿಬಾಬು, ಪೊಣ್ಣಂಬಾಲನ್ ಸಹ ನಟಿಸಿದ್ದಾರೆ. ವಿವೇಕ್ ಮತ್ತು ಮರ್ವಿನ್ ಸಂಗೀತ ನೀಡಿದ್ದಾರೆ. ಈ ವರ್ಷದಲ್ಲಿ ಸಿನಿಮಾ ತೆರೆಕಾಣಬೇಕಿತ್ತು. ಆದ್ರೆ, ಕೊರೊನಾ ಕಾರಣದಿಂದ ಇದು ಸಾಧ್ಯವಾಗುತ್ತಿಲ್ಲ.

ಇನ್ನು ರಶ್ಮಿಕಾ ಮಂದಣ್ಣ ತೆಲುಗಿನಲ್ಲಿ ಅಲ್ಲು ಅರ್ಜುನ್ ಜೊತೆ 'ಪುಷ್ಪ' ಸಿನಿಮಾ ಮಾಡುತ್ತಿದ್ದಾರೆ. ಖೈದಿ ದೊಡ್ಡ ಹಿಟ್ ಆದ ಬಳಿಕ ಕಾರ್ತಿ ನಟಿಸಿರುವ ಚಿತ್ರ ಸುಲ್ತಾನ್.

More from Filmibeat

English summary
Rashmika mandanna and karthi starrer Sulthan movie shooting completed today.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X