Just In
Don't Miss!
- News
ನೇಪಾಳ ಕಮ್ಯೂನಿಸ್ಟ್ ಪಕ್ಷದಿಂದ ಕೆಪಿ ಶರ್ಮಾ ಓಲಿ ಉಚ್ಚಾಟನೆ
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ರಶ್ಮಿಕಾ ನಟನೆಯ ಮೊದಲ ತಮಿಳು ಸಿನಿಮಾ ಬಿಡುಗಡೆ ಇನ್ನಷ್ಟು ತಡ
ನಟಿ ರಶ್ಮಿಕಾ ಮಂದಣ್ಣ ತಮ್ಮ ನಟನಾ ವೃತ್ತಿಯ ಉತ್ತುಂಗದಲ್ಲಿದ್ದಾರೆ. ಅವಕಾಶಗಳ ಮೇಲೆ ಅವಕಾಶಗಳು ರಶ್ಮಿಕಾ ರನ್ನು ಅರಸಿ ಬರುತ್ತಿವೆ.
ಬಾಲಿವುಡ್‌ನಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಸಿನಿಮಾಗಳನ್ನು ಬಾಚಿಕೊಂಡಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ತೆಲುಗಿನಲ್ಲಿಯೂ ದೊಡ್ಡ-ದೊಡ್ಡ ನಟರ ಜೊತೆ ನಟಿಸುತ್ತಿದ್ದಾರೆ. ಆದರೆ ರಶ್ಮಿಕಾ ಮಂದಣ್ಣರ ಮೊದಲ ತಮಿಳು ಸಿನಿಮಾ ಬಿಡುಗಡೆ ಮಾತ್ರ ಯಾಕೊ ತಡವಾಗುತ್ತಿದೆ.
ಅಮಿತಾಬ್ ಬಚ್ಚನ್ ಮಗಳಾಗಿ ನಟಿಸಲಿದ್ದಾರೆ ರಶ್ಮಿಕಾ ಮಂದಣ್ಣ
ರಶ್ಮಿಕಾ ಮಂದಣ್ಣ, ಕಾರ್ತಿ ಜೊತೆಯಾಗಿ ನಟಿಸಿರುವ ತಮಿಳು ಸಿನಿಮಾ 'ಸುಲ್ತಾನ್' ಚಿತ್ರೀಕರಣ ಮುಗಿದು ಬಹು ಸಮಯವೇ ಆಗಿದೆ. ಆದರೆ ಸಿನಿಮಾ ಬಿಡುಗಡೆ ಮಾತ್ರ ತಡವಾಗುತ್ತಲೇ ಇದೆ. ಸುಲ್ತಾನ್ ಸಿನಿಮಾ ರಶ್ಮಿಕಾ ನಟನೆಯ ಮೊದಲ ತಮಿಳು ಸಿನಿಮಾ.
'ಸುಲ್ತಾನ್' ಸಿನಿಮಾ 2021 ರ ಜನವರಿಯ ಸಂಕ್ರಾಂತಿ ವೇಳೆಗೆ ಬಿಡುಗಡೆ ಆಗುತ್ತದೆ ಎನ್ನಲಾಗಿತ್ತು. ಹೊಸ ಸುದ್ದಿಯ ಪ್ರಕಾರ, ಸಿನಿಮಾವು 2021 ರ ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರಲಿದೆ. ಚಿತ್ರತಂಡ ಉದ್ದೇಶಪೂರ್ವಕವಾಗಿ ಬಿಡುಗಡೆ ದಿನಾಂಕವನ್ನು ಮುಂದಕ್ಕೆ ಹಾಕಿದೆಯಂತೆ.
ಜನವರಿ, ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ತಮಿಳಿನ ದೊಡ್ಡ-ದೊಡ್ಡ ಸ್ಟಾರ್ ನಟರುಗಳ ಸಿನಿಮಾ ಬಿಡುಗಡೆ ಆಗಲಿವೆ, ಹಾಗಾಗಿ ಏಪ್ರಿಲ್ ನಲ್ಲಿ ತಮ್ಮ ಸಿನಿಮಾವನ್ನು ತೆರೆಗೆ ತರಲು ನಿರ್ಧರಿಸಿದೆ ಚಿತ್ರತಂಡ.
ಮೂರು ವರ್ಷದ ಬಳಿಕ ನೆನಪಿಸಿಕೊಂಡ ರಶ್ಮಿಕಾ: ಮನತುಂಬಿ ಹಾರೈಸಿದ ರಕ್ಷಿತ್ ಶೆಟ್ಟಿ
ವಿಜಯ್ ನಟನೆಯ 'ಮಾಸ್ಟರ್', ರಜನೀಕಾಂತ್ ನಟನೆಯ 'ಅನ್ನಾತೆ', ತಮಿಳಿನಲ್ಲೂ ಬಿಡುಗಡೆ ಆಗಲಿರುವ 'RRR', ಇಂಡಿಯನ್ 2, ಅಜಿತ್ ನಟನೆಯ ವಾಲಿಮೈ, ಧನುಶ್ ನಟನೆಯ ಜಗಮೇ ತಾಂಡಿರಮ್, ವಿಕ್ರಂ ನಟನೆಯ ಕೋಬ್ರಾ, ಕೆಜಿಎಫ್ 2 ಇನ್ನೂ ಕೆಲವು ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಗೆ ತಯಾರಾಗಿವೆ. ಇವುಗಳ ಜೊತೆಗೆ ಸ್ಪರ್ಧೆಗೆ ರೆಡಿಯಿಲ್ಲ ಸುಲ್ತಾನ್ ತಂಡ ಹಾಗಾಗಿ ಬಿಡುಗಡೆಯನ್ನು ಮುಂದಕ್ಕೆ ಹಾಕಿದೆ.
ಸುಲ್ತಾನ್ ಸಿನಿಮಾವನ್ನು ಭಾಗ್ಯರಾಜ್ ಕನ್ನನ್ ನಿರ್ದೇಶಿಸಿದ್ದಾರೆ. ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ, ಕಾರ್ತಿ ಜೊತೆಗೆ ಯೋಗಿಬಾಬು, ಪೊನ್ನಂಬಲಂ ಇನ್ನೂ ಹಲವರು ನಟಿಸಿದ್ದಾರೆ.