For Quick Alerts
  ALLOW NOTIFICATIONS  
  For Daily Alerts

  ಮದುವೆ ಸಂಭ್ರಮದಲ್ಲಿ ಸಾಯಿ ಪಲ್ಲವಿ; ಮೆಹಂದಿ ಹಾಕಿ ಸಂತಸಪಟ್ಟ 'ಪ್ರೇಮಂ' ಸುಂದರಿ

  |

  ದಕ್ಷಿಣ ಭಾರತದ ಖ್ಯಾತ ನಟಿ ಸಾಯಿ ಪಲ್ಲವಿ ಸದ್ಯ ಮದುವೆ ಸಂಭ್ರಮದಲ್ಲಿದ್ದಾರೆ. ಲಾಕ್ ಲೌಡ್ ನಲ್ಲಿ ಸಾಯಿ ಪಲ್ಲವಿ ಸೈಲೆಂಟ್ ಆಗಿ ಮದುವೆ ಆಗುತ್ತಿದ್ದಾರಾ ಎಂದ ಅಚ್ಚರಿ ಪಡಬೇಡಿ. ಸಾಯಿ ಪಲ್ಲವಿ ತನ್ನ ಹತ್ತಿರದ ಸಂಬಂಧಿಯ ಮದುವೆ ಸಂಭ್ರಮದಲ್ಲಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ಇತ್ತೀಚಿಗೆ ಸಾಕಷ್ಟು ಪೋಸ್ಟ್ ಗಳನ್ನು ಹಂಚಿಕೊಂಡಿರುವ ಸಾಯಿ ಪಲ್ಲವಿ ತನ್ನ ಕುಟುಂಬದವರ ಜೊತೆ ಮಸ್ತ್ ಮಜಾ ಮಾಡುತ್ತಿದ್ದಾರೆ. ಇದೀಗ ಪ್ರೇಮಂ ಸುಂದರಿ ಮೆಹಂದಿ ಹಾಕಿದ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

  ಲಾಕ್‌ಡೌನ್‌ನಲ್ಲಿ ಏನ್ಮಾಡ್ತಿದ್ದಾರೆ ಸಾಯಿ ಪಲ್ಲವಿ; ನಟಿಯ ಜೊತೆ ಫೋಟೋಗೆ ಪೋಸ್ ನೀಡಿದವರ್ಯರು? ಲಾಕ್‌ಡೌನ್‌ನಲ್ಲಿ ಏನ್ಮಾಡ್ತಿದ್ದಾರೆ ಸಾಯಿ ಪಲ್ಲವಿ; ನಟಿಯ ಜೊತೆ ಫೋಟೋಗೆ ಪೋಸ್ ನೀಡಿದವರ್ಯರು?

  ಸಂಬಂಧಿಕರ ಮದುವೆಯಲ್ಲಿ ಸಾಯಿ ಪಲ್ಲವಿ ಮಿಂಚುತ್ತಿದ್ದು, ಕುಟುಂಬದ ಸಮಯವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೆ ಸೋದರ ಸಂಬಂಧಿಗಳ ಜೊತೆ ಕ್ಯಾಮರಾಗೆ ಪೋಸ್ ನೀಡಿದ್ದ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ ಬೆನ್ನಲ್ಲೇ ಮೆಹಂದಿ ಫೋಟೋ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ ಸಾಯಿ ಪಲ್ಲವಿ

  ಸಾಯಿ ಪಲ್ಲವಿ ಮೆಹಂದಿ ಹಾಕಿ ಮಿಂಚುತ್ತಿದ್ದಾರೆ. ಕೈ ಮತ್ತು ಕಾಲುಗಳಿಗೆ ಹೆಮಂದಿ ಹಾಕಿ ಸಂತಸಪಟ್ಟಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹಳದಿ ಬಣ್ಣದ ಡ್ರೆಸ್ ಧರಿಸಿರುವ ಪ್ರೇಮಂ ಸುಂದರಿಯ ಫೋಟೋಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಮೆಚ್ಚುಗೆ ಹರಿದುಬರುತ್ತಿದೆ. ವಿಶೇಷ ಎಂದರೆ ಮೆಹಂದಿಯನ್ನು ಸ್ವತಃ ಸಾಯಿ ಪಲ್ಲವಿ ಅವರೇ ಹಾಕಿಕೊಂಡಿದ್ದಾರೆ. ಪೋಟೋ ಶೇರ್ ಮಾಡಿ ತಾನೆ ಮೆಹಂದಿ ಹಾಕಿರುವುದಾಗಿ ಬಹಿರಂಗ ಪಡಿಸಿದ್ದಾರೆ.

  ಇತ್ತೀಚಿಗೆ ಸೋದರ ಸಂಬಂಧಿಗಳ ಜೊತೆ ಫೋಟೋ ಶೇರ್ ಮಾಡಿದ್ದ ಸಾಯಿ ಪಲ್ಲವಿ 'ಮದುವೆ ಸ್ಕ್ವಾಡ್' ಎಂದು ಕ್ಯಾಪ್ಷನ್ ನೀಡಿದ್ದರು. ಸಾಯಿ ಪಲ್ಲವಿ ಸಿಂದರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಲಾಕ್ ಡೌನ್ ಬಳಿಕ ಸಾಮಾಜಿಕ ಜಾಲತಾಣದಿಂದ ಅಂತರ ಕಾಯ್ದುಕೊಂಡಿದ್ದ ಸಾಯಿ ಪಲ್ಲವಿ ಮದುವೆ ಸಂಭ್ರಮದ ಫೋಟೋಗಳನ್ನು ಶೇರ್ ಮಾಡುವ ಮೂಲಕ ಮತ್ತೆ ಸಕ್ರೀಯರಾಗಿದ್ದಾರೆ.

  Puneeth Rajkumar ಗೆ ಫ್ರೆಂಡ್ ತರ ಮಾತನಾಡಿಸಿದ ಪುಟಾಣಿ | Filmibeat Kannada

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ಸಾಯಿ ಪಲ್ಲವಿ ಸದ್ಯ ರಾಣಾ ದಗ್ಗುಬಾಟಿ ಜೊತೆ ವಿರಾಟ ಪರ್ವಂ, ನಾಗ ಚೈತನ್ಯ ಜೊತೆ ಲವ್ ಸ್ಟೋರಿ ಮತ್ತು ನಟ ನಾನಿ ಜೊತೆ ಶ್ಯಾಮ್ ಸಿಂಘ ರಾಯ್ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಅಂದುಕೊಂಡಂತೆ ಆಗಿದ್ದರೆ ಲವ್ ಸ್ಟೋರಿ ಸಿನಿಮಾ ಈಗಾಗಲೇ ರಿಲೀಸ್ ಆಗಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಬಿಡುಗಡೆ ತಡವಾಗಿದೆ.

  English summary
  Actress Sai Pallavi flaunts her mehendi in latest pics.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X