For Quick Alerts
  ALLOW NOTIFICATIONS  
  For Daily Alerts

  ಹಾಗೆ ಕರೆದಿದ್ದಕ್ಕೆ ಪತ್ರಕರ್ತೆ ಮೇಲೆ ಸಿಟ್ಟಾದ ಸಾಯಿ ಪಲ್ಲವಿ

  |

  ನಟಿ ಸಾಯಿ ಪಲ್ಲವಿ ವಿವಾದಗಳಿಂದ ಸದಾ ದೂರ. ವಿವಾದಗಳಿಂದ ಮಾತ್ರವಲ್ಲ ಮಾಧ್ಯಮಗಳಿಂದಲೂ ಅವರು ತುಸು ದೂರವೇ.

  ತೆಲುಗು ಟಿವಿ ಲೋಕದಲ್ಲಿ ದಾಖಲೆ ಬರೆದಿದ್ಯಂತೆ KGF | TRP | KGF1 | Filmibeat Kannada

  ಯಾರ ಮೇಲೂ ಸಿಟ್ಟಾಗದೆ, ಯಾರ ಬಗ್ಗೆಯೂ ಗಾಸಿಪ್ ಹರಡಿಸದೆ, ಸಿನಿಮಾ ನಟನೆ ಬಿಟ್ಟು ಬೇರಾವುದರಲ್ಲೂ ತಮ್ಮನ್ನು ತೊಡಗಿಸಿಕೊಳ್ಳುವುದಿಲ್ಲ ಅವರು.

  ಆದರೆ ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ಸಾಯಿ ಪಲ್ಲವಿ ಸಿಟ್ಟು ಮಾಡಿಕೊಂಡಿದ್ದಾರೆ. ಸಾಯಿ ಪಲ್ಲವಿ ಅವರನ್ನು ಉದ್ದೇಶಿಸಿ ಸಂದರ್ಶಕಿ ಕರೆದ ಪದಕ್ಕೆ ಸಾಯಿ ಪಲ್ಲವಿ ಅತೀವ ಬೇಸರ ವ್ಯಕ್ತಪಡಿಸಿದ್ದಾರೆ.

  ಸದಾ ಹಸನ್ಮುಖಿಯಾಗಿರುವ ಸಾಯಿ ಪಲ್ಲವಿಗೆ ಸಿಟ್ಟೇಕೆ ಬಂತು. ಸಿಟ್ಟು ಬರುವಂತಹುದು ಏನೆಂದು ಕರೆದರು ಆ ಸಂದರ್ಶಕಿ, ಇಲ್ಲಿದೆ ಪೂರ್ಣ ಮಾಹಿತಿ.

  ತಮಿಳುನಾಡು ಚೆಲುವೆ ಸಾಯಿ ಪಲ್ಲವಿ

  ತಮಿಳುನಾಡು ಚೆಲುವೆ ಸಾಯಿ ಪಲ್ಲವಿ

  ನಟಿ ಸಾಯಿ ಪಲ್ಲವಿ ತಮಿಳು ಹುಡುಗಿ. ಹುಟ್ಟಿದ್ದು ಬೆಳಿದಿದ್ದು ಎಲ್ಲಾ ತಮಿಳುನಾಡಿನಲ್ಲಿ. ಆದರೆ ಆಕೆ ಬೆಳಕಿಗೆ ಬಂದಿದ್ದು ಮಲೆಯಾಳಂ ಸಿನಿಮಾ ಮೂಲಕ ಹಾಗಾಗಿ ಕೆಲವರು ಆಕೆ ಮಲಯಾಳಿ ನಟಿ ಎಂದೇ ಭಾವಿಸಿದ್ದಾರೆ. ಆದರೆ ಇದು ಸಾಯಿ ಪಲ್ಲವಿಗೆ ಇಷ್ಟವಿಲ್ಲ.

  'ಮಲ್ಲು ಹುಡುಗಿ' ಎಂದು ಕರೆದ ಸಂದರ್ಶಕಿ

  'ಮಲ್ಲು ಹುಡುಗಿ' ಎಂದು ಕರೆದ ಸಂದರ್ಶಕಿ

  ಇತ್ತೀಚೆಗೆ ಸಂದರ್ಶಿಕಿಯೊಬ್ಬರು ಸಾಯಿ ಪಲ್ಲವಿಯನ್ನು 'ಮಲ್ಲು ಹುಡುಗಿ' ಎಂದು ಕರೆದಿದ್ದಾರೆ. ಇದರಿಂದ ಸಿಟ್ಟಾದ ಸಾಯಿ ಪಲ್ಲವಿ, ತಾಳ್ಮೆ ಕಳೆದುಕೊಂಡು, ನಾನು ಮಲ್ಲು ಹುಡುಗಿಯಲ್ಲ, 'ತಮಿಳು ಪೊಣ್ಣು' (ತಮಿಳು ಹೆಣ್ಣುಮಗಳು) ಎಂದು ಸಿಟ್ಟಿನಿಂದಲೇ ಹೇಳಿದ್ದಾರೆ.

  ನಾನು ಮಲ್ಲು ಕುಟ್ಟಿ ಅಲ್ಲ: ಸಾಯಿ ಪಲ್ಲವಿ

  ನಾನು ಮಲ್ಲು ಕುಟ್ಟಿ ಅಲ್ಲ: ಸಾಯಿ ಪಲ್ಲವಿ

  ನಾನೂ ಕೆಲವು ಮಲಯಾಳಂ ಸಿನಿಮಾದಲ್ಲಿ ನಟಿಸಿದ್ದೇನೆ, ನನಗೆ ಮಲಯಾಳಂ ಮಾತನಾಡಲು ಬರುತ್ತದೆ ಎಂದ ಮಾತ್ರಕ್ಕೆ ನಾನು 'ಮಲ್ಲು ಕುಟ್ಟಿ' ಆಗುವುದಿಲ್ಲ. ನಾನು ತಮಿಳಿನ ಹುಡುಗಿಯೇ ಎಂದು ಹೇಳಿದ್ದಾರೆ. ಸಾಯಿ ಪಲ್ಲವಿ ಮಾತನ್ನು ತಮಿಳು ಅಭಿಮಾನಿಗಳು ಬೆಂಬಲಿಸಿದ್ದಾರೆ.

  ಪ್ರೇಮಂ ಸಿನಿಮಾ ಮೂಲಕ ನಾಯಕಿಯಾದ ಸಾಯಿ ಪಲ್ಲವಿ

  ಪ್ರೇಮಂ ಸಿನಿಮಾ ಮೂಲಕ ನಾಯಕಿಯಾದ ಸಾಯಿ ಪಲ್ಲವಿ

  ಮಲಯಾಳಂ ಸಿನಿಮಾ ಪ್ರೇಮಂ ಮೂಲಕ ಸಿನಿಮಾರಂಗಕ್ಕೆ ಬಂದ ಸಾಯಿ ಪಲ್ಲವಿ ಕೆಲವೇ ದಿನಗಳಲ್ಲಿ ತಮ್ಮ ಪ್ರತಿಭೆಯಿಂದ ತಮಿಳು, ತೆಲುಗು ಸಿನಿಮಾಗಳಲ್ಲಿಯೂ ಖ್ಯಾತರಾದರು. ಪ್ರೇಮಂ ಗೆ ಮುನ್ನಾ ಎರಡು ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು, ಆದರೆ ಪೂರ್ಣ ಪ್ರಮಾಣದ ಪಾತ್ರ ಮಾಡಿರಲಿಲ್ಲ.

  ಎರಡು ಸಿನಿಮಾ ಬಿಡುಗಡೆಗೆ ತಯಾರಿವೆ

  ಎರಡು ಸಿನಿಮಾ ಬಿಡುಗಡೆಗೆ ತಯಾರಿವೆ

  ಸಾಯಿ ಪಲ್ಲವಿ ಅವರ ಎರಡು ಸಿನಿಮಾ ಬಿಡುಗಡೆಗೆ ತಯಾರಾಗಿದೆ. ರಾಣಾ ದಗ್ಗುಬಾಟಿ ಜೊತೆಗೆ ನಟಿಸಿರುವ ವಿರಾಟ ಪರ್ವಂ ಮತ್ತು ನಾಗ ಚೈತನ್ಯ ಜೊತೆಗೆ ನಟಿಸಿರುವ 'ಲವ್ ಸ್ಟೋರಿ' ಸಿನಿಮಾಗಳು ಲಾಕ್‌ಡೌನ್ ನಂತರ ಬಿಡುಗಡೆ ಆಗಲಿವೆ. ಇದರ ಜೊತೆ ಶ್ಯಾಮ ಸಿಂಗ ರಾಯ್ ಸಿನಿಮಾ ಚಿತ್ರೀಕರಣ ಬಾಕಿ ಇದೆ.

  English summary
  Actress Sai Pallavi gets upset for calling her Mallu girl in an interview. She said i am not Mallu girl i am Tamil girl.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X