For Quick Alerts
  ALLOW NOTIFICATIONS  
  For Daily Alerts

  ಇಬ್ಬರು ನಟಿಯರನ್ನು ಮನಸಾರೆ ಹೊಗಳಿದ ಸಾಯಿ ಪಲ್ಲವಿ

  |

  ಸಿನಿಮಾ ರಂಗದಲ್ಲಿ ಒಬ್ಬ ನಟಿ ಮತ್ತೊಬ್ಬ ನಟಿಯ ಬಗ್ಗೆ ಕೊಂಕು ನುಡಿಯುವುದು, ಅಸೂಯೆ ಪಟ್ಟುಕೊಳ್ಳುವುದು ಸಾಮಾನ್ಯ. ಹೊಗಳುವುದು ಬಹಳ ಅಪರೂಪ. ಆದರೆ ಆಗೊಮ್ಮೆ-ಈಗೊಮ್ಮೆ ಹೀಗೂ ಆಗುತ್ತಿರುತ್ತದೆ.

  ಚಿತ್ರರಂಗದಲ್ಲಿ ಜನಪ್ರಿಯರಾಗಿರುವ ನಟಿಯರಂತೂ ಅಪ್ಪ-ತಪ್ಪಿಯೂ ಸಹ ನಟಿಯರನ್ನು ಹೊಗಳುವುದಿಲ್ಲ. ಆದರೆ ನಟಿ ಸಾಯಿ ಪಲ್ಲವಿ ಇದಕ್ಕೆ ಅಪವಾದ.

  ಆ ನಟನೊಂದಿಗೆ ನಟಿಸಬೇಕೆಂಬ ಆಸೆ ಇತ್ತು ಎಂದ ಸಾಯಿ ಪಲ್ಲವಿ: ಯಾರು ಆ ನಟ?ಆ ನಟನೊಂದಿಗೆ ನಟಿಸಬೇಕೆಂಬ ಆಸೆ ಇತ್ತು ಎಂದ ಸಾಯಿ ಪಲ್ಲವಿ: ಯಾರು ಆ ನಟ?

  ಸಿನಿಮಾ ಚಿತ್ರೀಕರಣ ಹೊರತುಪಡಿಸಿದರೆ ಇನ್ನಾವ ಸಿನಿಮಾ ಸಂಬಂಧಿ ಕಾರ್ಯಕ್ರಮ, ಪಾರ್ಟಿಗಳಲ್ಲಿ ಪಾಲ್ಗೊಳ್ಳದ ನಟಿ ಸಾಯಿ ಪಲ್ಲವಿ ಸಿನಿಮಾ ರಂಗದಲ್ಲಿ ಹೆಚ್ಚೇನೂ ಗೆಳೆಯರನ್ನು ಹೊಂದಿಲ್ಲ. ಆದರೆ ಎಲ್ಲರ ಸಿನಿಮಾಗಳನ್ನು ಗಮನಿಸುತ್ತಾರಂತೆ ಅವರು.

  ಇತ್ತೀಚೆಗೆ ಸಾಯಿ ಪಲ್ಲವಿ ನೀಡಿದ ಸಂದರ್ಶನದಲ್ಲಿ 'ಮಹಿಳಾ ಪ್ರಾದಾನ್ಯತೆ ಹೆಚ್ಚಿರುವ ಪಾತ್ರಗಳನ್ನು ಪಡೆಯುತ್ತಿದ್ದೀರಿ ಹೇಗೆ?' ಎಂದು ಪ್ರಶ್ನಿಸಲಾಗಿದೆ.

  ಈಗ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ: ಸಾಯಿ ಪಲ್ಲವಿ

  ಈಗ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ: ಸಾಯಿ ಪಲ್ಲವಿ

  ಇದಕ್ಕೆ ಉತ್ತರಿಸಿರುವ ಸಾಯಿ ಪಲ್ಲವಿ, 'ಕೆಲವು ವರ್ಷಗಳ ಹಿಂದೆ ಮಹಿಳೆಯರಿಗೆ ಯಾವ ರೀತಿಯ ಪಾತ್ರ ನೀಡಲಾಗುತ್ತಿತ್ತೊ ಅದಕ್ಕಿಂತಲೂ ಶಕ್ತವಾದ ಪಾತ್ರಗಳು ಇತ್ತೀಚಿನ ದಿನಗಳಲ್ಲಿ ಸೃಷ್ಟಿಯಾಗುತ್ತಿದೆ. ನನಗೂ ಸಹ ಒಳ್ಳೆಯ ಪಾತ್ರಗಳೇ ದೊರಕುತ್ತಿವೆ' ಎಂದಿದ್ದಾರೆ.

  ಅನುಷ್ಕಾ ಶೆಟ್ಟಿ, ನಯನತಾರಾ ಬಗ್ಗೆ ಹೊಗಳಿಕೆ

  ಅನುಷ್ಕಾ ಶೆಟ್ಟಿ, ನಯನತಾರಾ ಬಗ್ಗೆ ಹೊಗಳಿಕೆ

  ಮುಂದುವರೆದು, 'ಇಂಥಹಾ ಬದಲಾವಣೆ ಆಗಲು ಕಾರಣ ಅನುಷ್ಕಾ ಶೆಟ್ಟಿ, ನಯನತಾರಾ ಅಂತಹಾ ನಾಯಕಿಯರು. ನಟಿಯೂ ಸಹ ಸಿನಿಮಾವನ್ನು ಹೆಗಲ ಮೇಲೆ ಹೊತ್ತು ಗೆಲ್ಲಿಸಬಲ್ಲರು ಎಂಬುದನ್ನು ಈ ನಟಿಯರು ನಿರ್ಮಾಪಕರಿಗೆ ತೋರಿಸಿಕೊಟ್ಟರು. ನಿರ್ಮಾಪಕರಿಗೆ ನಟಿಯರ ಶಕ್ತಿಯ ಬಗ್ಗೆ ನಂಬಿಕೆ ಬರುವಂತೆ ಮಾಡಿದರು' ಎಂದಿದ್ದಾರೆ ಸಾಯಿ ಪಲ್ಲವಿ.

  ಪ್ರಕಾಶ್ ರೈ ನೋಡಿ ಭಯ ಪಟ್ಟಿದ್ದರಂತೆ ನಟಿ ಸಾಯಿ ಪಲ್ಲವಿಪ್ರಕಾಶ್ ರೈ ನೋಡಿ ಭಯ ಪಟ್ಟಿದ್ದರಂತೆ ನಟಿ ಸಾಯಿ ಪಲ್ಲವಿ

  ಗಟ್ಟಿಯಾದ ಪಾತ್ರದಲ್ಲಿಯೇ ನಟಿಸಿದ್ದಾರೆ ಸಾಯಿ ಪಲ್ಲವಿ

  ಗಟ್ಟಿಯಾದ ಪಾತ್ರದಲ್ಲಿಯೇ ನಟಿಸಿದ್ದಾರೆ ಸಾಯಿ ಪಲ್ಲವಿ

  ಸಾಯಿ ಪಲ್ಲವಿ ಈ ವರೆಗೆ ನಟಿಸಿರುವ ಎಲ್ಲ ಸಿನಿಮಾಗಳಿಲ್ಲಯೂ ಗಟ್ಟಿಯಾದ ಪಾತ್ರವನ್ನೇ ನಿರ್ವಹಿಸಿದ್ದಾರೆ. ಹಾಡುಗಳಲ್ಲಿ ಮಾತ್ರ ಕಾಣಿಸಿಕೊಳ್ಳುವ 'ಬಬ್ಲಿ ಗರ್ಲ್' ಪಾತ್ರದ ಬದಲಿಗೆ ಕತೆಯಲ್ಲಿ ಪ್ರಮುಖ ಪಾತ್ರವಾಗಿರುವ ನಾಯಕಿಯ ಪಾತ್ರದಲ್ಲಿ ಮಾತ್ರವೇ ನಟಿಸಿದ್ದಾರೆ ಸಾಯಿ ಪಲ್ಲವಿ.

  'ಪಾವ ಕದೈಗಳ್' ಬಗ್ಗೆ ಪ್ರಶಂಸೆ

  'ಪಾವ ಕದೈಗಳ್' ಬಗ್ಗೆ ಪ್ರಶಂಸೆ

  ಸಾಯಿ ಪಲ್ಲವಿ ನಟಿಸಿರುವ ಅಂತಾಲಜಿ ಸಿನಿಮಾ 'ಪಾವ ಕದೈಗಳ್' ಇತ್ತೀಚೆಗಷ್ಟೆ ಬಿಡುಗಡೆ ಆಗಿ ಮೆಚ್ಚುಗೆ ಗಳಿಸಿದೆ. 'ವಿರಾಟ ಪರ್ವಂ' ಸಿನಿಮಾದಲ್ಲಿ ನಕ್ಸಲೈಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ನಟನೆಯ ಲವ್‌ಸ್ಟೋರಿ ಸಿನಿಮಾ ಬಿಡುಗಡೆ ಆಗಲಿದೆ. ನಾನಿ ಜೊತೆಗೆ ಹೊಸ ಸಿನಿಮಾಕ್ಕೆ ಕೈ ಹಾಕಿದ್ದಾರೆ.

  English summary
  Actress Sai Pallavi praised Anushka Shetty and Nayanthara. She said they made producers believe that heroines can bring audience to theater.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X