Just In
- 53 min ago
ಡಿ ಬಾಸ್ ದರ್ಶನ್ ಜೊತೆ ಬಾಲಿವುಡ್ ನಟಿ ಕಂಗನಾ ರಣಾವತ್: ಫೋಟೋ ವೈರಲ್
- 2 hrs ago
ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಯಶ್, ಸುದೀಪ್ ಸುಮಲತಾ; ಫೋಟೋ ವೈರಲ್
- 3 hrs ago
ಸುದೀಪ್ ಗೆ ಸಿನಿಮಾ ನಿರ್ದೇಶನ ಮಾಡುವ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದೇನು? ಇಲ್ಲಿದೆ ಮಾಹಿತಿ
- 4 hrs ago
ಕಂಗನಾ ಮೇಲೆ ಕಥೆ ಕದ್ದ ಆರೋಪ; 72 ಗಂಟೆಯೊಳಗೆ ಉತ್ತರ ನೀಡಬೇಕೆಂದ ಲೇಖಕ
Don't Miss!
- Sports
ಭಾರತ vs ಆಸ್ಟ್ರೇಲಿಯಾ: ಶಾರ್ದೂಲ್- ಸುಂದರ್ ಆಟಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಕೊಹ್ಲಿ
- News
ನಾಯಕತ್ವ ಬದಲಾವಣೆ ಹೊಸ ಗಡುವು ಕೊಟ್ಟ ಸಿದ್ದರಾಮಯ್ಯ!
- Automobiles
ಅನಾವರಣವಾಯ್ತು 2021ರ ಎಪ್ರಿಲಿಯಾ ಆರ್ಎಸ್ವಿ4 ಬೈಕುಗಳು
- Finance
ಈ 6 ಕಂಪೆನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯ 1,13,018.94 ಕೋಟಿ ರು. ಹೆಚ್ಚಳ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಲ್ಮಾನ್ ಖಾನ್ ಗೆ ಶ್ರೀಲಂಕಾದ ನಟ ಎಚ್ಚರಿಕೆ ನೀಡಿದ್ದು ಯಾಕೆ?
ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಸದಾ ಸುದ್ದಿಯಲ್ಲಿರುವುದು ಹೊಸದೇನಲ್ಲ. ನಟಿಯರ ಕಾಲೆಳೆಯುವುದರಲ್ಲಿ ನಿಸ್ಸೀಮರಾಗಿರುವ ಸಲ್ಲು, ಈಗ ಶ್ರೀಲಂಕಾದ ನಟರೊಬ್ಬರ ಕೆಂಗಣ್ಣಿಗೆ ಗುರಿಯಾಗಿರುವುದು ವಿಶೇಷ.
ಹಾಗಂತ ಸಲ್ಲು ಲಂಕಾದ ನಟಿಯರ ತಂಟೆಗೆ ಏನಾದ್ರೂ ಹೋದ್ರಾ ಎಂದು ಅಪಾರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ. ವಿಷಯ ಏನಂದರೆ ಸದ್ಯ ಶ್ರೀಲಂಕಾದಲ್ಲಿ ಅಧ್ಯಕ್ಷೀಯ ಚುನಾವಣೆಯ ಪ್ರಚಾರದ ಭರಾಟೆ ಜೋರಾಗಿ ನಡೆಯುತ್ತಿದೆ.
ಶ್ರೀಲಂಕಾದ ಹಾಲಿ ಅಧ್ಯಕ್ಷ ಮಹೇಂದ್ರ ರಾಜಪಕ್ಷೆ ಮತ್ತೆ ಅದೇ ಸ್ಥಾನದ ಆಕಾಂಕ್ಷಿ. ರಾಜಪಕ್ಷೆ ಪರವಾಗಿ ಸಲ್ಮಾನ್ ಖಾನ್ ಶ್ರೀಲಂಕಾದಲ್ಲಿ ಪ್ರಚಾರಕ್ಕೆ ಒಪ್ಪಿಕೊಂಡಿರುವುದು ಸಿಂಹಳೀಯ ನಟನ ಕೋಪಕ್ಕೆ ಕಾರಣವಾಗಿರುವುದು.
ನೀವು ಒಬ್ಬ ಒಳ್ಳೆಯ ನಟ, ನಾನೂ ಕೂಡಾ ನಿಮ್ಮ ಅಭಿಮಾನಿ. ಭ್ರಷ್ಟ ರಾಜಕಾರಣಿಗಳಿಗಾಗಿ ನಿಮ್ಮನ್ನು ನೀವು ಮಾರಿಕೊಳ್ಳಬೇಡಿ ಎಂದು ಲಂಕಾದ ಖ್ಯಾತ ನಟ ಕಮ್ ರಾಜಪಕ್ಷೆ ವಿರೋಧಿ ಬಣದ ರಾಮನಾಯಕೆ, ಸಲ್ಮಾನ್ ಖಾನಿಗೆ ಎಚ್ಚರಿಕೆ ಮಿಶ್ರಿತ ಮನವಿ ಮಾಡಿದ್ದಾರೆ.
ನೀವು ಶ್ರೀಲಂಕಾದಲ್ಲೂ ಜನಪ್ರಿಯ ನಟರು, ನಿಮ್ಮ ಅಭಿಮಾನಿ ಬಳಗದಲ್ಲಿ ನಾನೂ ಒಬ್ಬ. ನೀವು ಪ್ರಚಾರ ಮಾಡಲು ಬಂದ ಪಕ್ಷ ಮತ್ತು ಅದರ ಮುಖಂಡರು ಭ್ರಷ್ಟರು, ದಯವಿಟ್ಟು ನೀವು ಭಾರತಕ್ಕೆ ವಾಪಸ್ ಹೋಗಿ ಎಂದು ರಾಮನಾಯಕೆ, ಸಲ್ಮಾನ್ ಖಾನ್ ಗೆ ಖಡಕ್ ಸಂದೇಶ ರವಾನಿಸಿದ್ದಾರೆ.
ಸಲ್ಮಾನ್ ವಿರುದ್ದ ತಮಿಳು ಮುಖಂಡ ವೈಕೋ ಕೆಂಡಾಮಂಡಲ. ಮುಂದೆ ಓದಿ..

ರಾಜಪಕ್ಷೆ ಅವರ ಪುತ್ರ ನಮಲ್ ರಾಜಪಕ್ಷ
ಅಧ್ಯಕ್ಷ ರಾಜಪಕ್ಷೆ ಅವರ ಪುತ್ರ ನಮಲ್ ರಾಜಪಕ್ಷ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಸಲ್ಮಾನ್ ಖಾನ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಇತ್ತೀಚೆಗೆ ಶ್ರೀಲಂಕಾಕ್ಕೆ ಆಗಮಿಸಿದ್ದರು.

ಜಾಕ್ಲಿನ್ ಜೊತೆ ಸಲ್ಲು
ಕಾರ್ಯಕ್ರಮದಲ್ಲಿ ಸಲ್ಮಾನ್, ಶ್ರೀಲಂಕಾ ಮೂಲದ ನಟಿ ಜಾಕ್ಲಿನ್ ಫೆರ್ನಾಂಡಿಸ್ ಜೊತೆ ಆಗಮಿಸಿದ್ದರು. ಜಾಕ್ಲಿನ್ ಮತ್ತು ಅಧ್ಯಕ್ಷ ರಾಜಪಕ್ಷೆ ಪುತ್ರ ನಮಲ್ ರಾಜಪಕ್ಷೆ ಒಳ್ಳೆಯ ಸ್ನೇಹಿತರು. ಜಾಕ್ಲಿನ್ ಮೂಲಕ ಸಲ್ಮಾನ್ ಖಾನ್ ಅವರನ್ನು ಚುನಾವಣಾ ಪ್ರಚಾರಕ್ಕೆ ಕರೆತರುವ ಪ್ರಯತ್ನ ರಾಜಪಕ್ಷೆ ಅವರದ್ದಾಗಿದೆ, ಇದಕ್ಕೆ ಸಲ್ಮಾನ್ ಒಪ್ಪಿಗೆ ಸೂಚಿಸಿರುವುದೇ ವಿವಾದಕ್ಕೆ ಮೂಲ ಕಾರಣ.

ಆಡಳಿತ ಪಕ್ಷ ಆಯೋಜಿಸಿದ ಕಾರ್ಯಕ್ರಮ
ಶ್ರೀಲಂಕಾದ ಆಡಳಿತ ಪಕ್ಷದ ಯುವ ಘಟಕ ಕಣ್ಣು ಸಂಬಂಧಿ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಈ ಘಟಕದ ಮುಖ್ಯಸ್ಥ ನಮಲ್ ರಾಜಪಕ್ಷೆ. ಈ ಕಾರ್ಯಕ್ರಮವನ್ನು ಲಂಕಾದ ಯುವ ಘಟಕದ ಜೊತೆ ಸಲ್ಮಾನ್ ಖಾನ್ ಅವರ Being Human Foundation ಜಂಟಿಯಾಗಿ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಲ್ಮಾನ್ ಖಾನ್, ಲಂಕಾದ ಅಧ್ಯಕ್ಷ ರಾಜಪಕ್ಷೆ ಅವರನ್ನು ಹಾಡಿ ಹೊಗಳಿದ್ದರು.

ಶ್ರೀಲಂಕಾದಲ್ಲಿ ಅಧ್ಯಕ್ಷೀಯ ಚುನಾವಣೆ
ಇದೇ ಜನವರಿ ಎಂಟರಂದು ಶ್ರೀಲಂಕಾದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ನಿಗದಿತ ಅವಧಿಗಿಂತ ಎರಡು ವರ್ಷ ಮೊದಲು ಅಧ್ಯಕ್ಷ ರಾಜಪಕ್ಷೆ ಜನಾದೇಶ ಪಡೆಯಲು ಮುಂದಾಗಿರುವುದು ವಿಶೇಷ. ಸಲ್ಮಾನ್ ಈಗ ರಾಜಪಕ್ಷೆ ಪರವಾಗಿ ಮತಯಾಚನೆಗೆ ಒಪ್ಪಿಕೊಂಡಿರುವುದು ವಿಪಕ್ಷಗಳ ಕೆಂಗಣ್ಣಿಗೆ ಕಾರಣವಾಗಿದೆ. ಒಂದು ವೇಳೆ ಸಲ್ಮಾನ್ ಚುನಾವಣಾ ಪ್ರಚಾರಕ್ಕೆ ತೆರಳಿದರೆ ಅಲ್ಲಿ ಚುನಾವಣಾ ಪ್ರಚಾರ ನಡೆಸಿದ ಮೊದಲ ಬಾಲಿವುಡ್ ನಟರಾಗುತ್ತಾರೆ.

ವೈಕೋ ಕೆಂಡಾಮಂಡಲ
ಸಲ್ಮಾನ್ ಶ್ರೀಲಂಕಾದಲ್ಲಿ ಚುನಾವಣಾ ಪ್ರಚಾರಕ್ಕೆ ಒಪ್ಪಿಕೊಂಡಿರುವುದಕ್ಕೆ ಎಂಡಿಎಂಕೆ ಮುಖ್ಯಸ್ಥ ವೈಕೋ ಸಲ್ಮಾನ್ ವಿರುದ್ದ ಹರಿಹಾಯ್ದಿದ್ದಾರೆ. ಸಲ್ಮಾನ್ ಒಬ್ಬ ದ್ರೋಹಿ ಎಂದು ಜರಿದಿದ್ದಾರೆ. ಡಿಎಂಕೆ ನಾಯಕ ಇಳಂಗೋವನ್, ಸಲ್ಮಾನ್ ಅವರ ನಿರ್ಧಾರಕ್ಕೆ ನಮ್ಮ ವಿರೋಧವಿದೆ ಎಂದಿದ್ದಾರೆ.