For Quick Alerts
  ALLOW NOTIFICATIONS  
  For Daily Alerts

  ಸೇನಾಪತಿ ಈಸ್ ಬ್ಯಾಕ್: ರಾತ್ರೋರಾತ್ರಿ ಮತ್ತೆ ಅಖಾಡಕ್ಕಿಳಿದ 'ಇಂಡಿಯನ್' ತಾತ!

  |

  ಶಂಕರ್ ನಿರ್ದೇಶನದಲ್ಲಿ ಕಮಲ್ ಹಾಸನ್ ನಟಿಸಿದ್ದ ಸೂಪರ್ ಹಿಟ್ ಸಿನಿಮಾ 'ಇಂಡಿಯನ್'. 3 ವರ್ಷಗಳ ಹಿಂದೆ ಈ ಚಿತ್ರದ ಸೀಕ್ವೆಲ್ ಶುರು ಮಾಡಲಾಗಿತ್ತು. ಬಹುಕೋಟಿ ವೆಚ್ಚದಲ್ಲಿ ಒಂದಷ್ಟು ದಿನಗಳ ಕಾಲ ಚಿತ್ರೀಕರಣ ಕೂಡ ನಡೆದಿತ್ತು. ಆದರೆ ಸೆಟ್‌ನಲ್ಲಿ ನಡೆದ ದುರಂತದಿಂದ ಶೂಟಿಂಗ್ ನಿಂತಿತ್ತು. ಕಮಲ್ ಹಾಸನ್ ನಟನೆಯ 'ವಿಕ್ರಂ' ಸಿನಿಮಾ ಬಾಕ್ಸಾಫೀಸ್‌ ಶೇಕ್ ಮಾಡಿದ ಬೆನ್ನಲ್ಲೇ ಮತ್ತೆ 'ಇಂಡಿಯನ್'-2 ಚಿತ್ರಕ್ಕೆ ಜೀವ ಬಂದಿದೆ.

  ಮತ್ತೆ ಪೂಜೆ ಸಲ್ಲಿಸಿ ನಿರ್ದೇಶಕ ಶಂಕರ್ 'ಇಂಡಿಯನ್‌'-2 ಚಿತ್ರೀಕರಣಕ್ಕೆ ಚಾಲನೆ ಕೊಟ್ಟಿದ್ದಾರೆ. ಸಿದ್ದಾರ್ಥ್, ಕಾಜಲ್ ಅಗರ್‌ವಾಲ್, ರಕುಲ್ ಪ್ರೀತ್ ಸಿಂಗ್, ಬಾಬಿ ಸಿಂಹ, ಸಮುದ್ರ ಖನಿ ಸೇರಿದಂತೆ ದೊಡ್ಡ ತಾರಾಗಣ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾದಲ್ಲಿದೆ. ಮಂಗಳವಾರ(ಆಗಸ್ಟ್ 23) ಮಧ್ಯರಾತ್ರಿ ಟ್ವೀಟ್‌ ಮಾಡಿ ಮತ್ತೆ ಸಿನಿಮಾ ಪ್ರಾರಂಭಿಸುತ್ತಿರುವ ಸಂಗತಿಯನ್ನು ಶಂಕರ್ ಅಂಡ್ ಟೀಂ ಕನ್ಫರ್ಮ್‌ ಮಾಡಿದೆ. ಜಬರ್‌ದಸ್ತ್‌ ಪೋಸ್ಟರ್ ರಿಲೀಸ್ ಮಾಡಿ ಅಭಿಮಾನಿಗಳಿಗೆ ಸರ್‌ಪ್ರೈಸ್ ನ್ಯೂಸ್ ಕೊಟ್ಟಿದ್ದಾರೆ.

  ರಾಜಮೌಳಿ- ಪ್ರಶಾಂತ್‌ ನೀಲ್ ಇಬ್ಬರಿಗೆ ಸಮ ಒಬ್ಬ 'ಜಂಟಲ್‌ಮನ್' ಶಂಕರ್!ರಾಜಮೌಳಿ- ಪ್ರಶಾಂತ್‌ ನೀಲ್ ಇಬ್ಬರಿಗೆ ಸಮ ಒಬ್ಬ 'ಜಂಟಲ್‌ಮನ್' ಶಂಕರ್!

  ಚೆನ್ನೈನ ಜಾರ್ಜ್‌ ಟೌನ್‌ನಲ್ಲಿರುವ ಪಳಿಗಂ ಕಾಂಪೌಂಡ್‌ನಲ್ಲಿ ಸೆಟ್‌ ಹಾಕಿ ಸಿನಿಮಾ ಚಿತ್ರೀಕರಣ ಶುರು ಮಾಡಿದ್ದಾರೆ. 'ಇಂಡಿಯನ್'-2 ಹೊಸ ಪೋಸ್ಟರ್ ಜೊತೆಗೆ ಪೂಜೆ ಮಾಡಿರುವ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಂದು ನಡೆದ ದುರಂತದ ನಂತರ ಶಂಕರ್ ಈ ಸಿನಿಮಾ ಸಹವಾಸ ಬಿಟ್ಟು ರಾಮ್‌ಚರಣ್ ಜೊತೆ ಹೊಸ ಸಿನಿಮಾ ಶುರು ಮಾಡಿದ್ದರು. ನಮ್ಮ ಸಿನಿಮಾ ಮುಗಿಯುವ ಮುನ್ನ ಶಂಕರ್ ಬೇರೆ ಸಿನಿಂಆ ಕೈಗೆತ್ತಿಕೊಳ್ಳಬಾರದು ಎಂದು ಲೈಕಾ ಸಂಸ್ಥೆ ಶಂಕರ್ ವಿರುದ್ಧ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ನಿರ್ದೇಶಕರು ರಾಮ್‌ಚರಣ್ ಸಿನಿಮಾ ಜೊತೆ ಜೊತೆಗೆ 'ಇಂಡಿಯನ್'-2 ಸಿನಿಮಾ ಚಿತ್ರೀಕರಣವನ್ನು ಕೂಡ ಮುಗಿಸುವ ಪ್ರಯತ್ನದಲ್ಲಿದ್ದಾರೆ.

   ಕ್ರೇಜ್ ದುರಂತದಲ್ಲಿ 3 ಜನ ಸಾವು

  ಕ್ರೇಜ್ ದುರಂತದಲ್ಲಿ 3 ಜನ ಸಾವು

  ಎರಡು ವರ್ಷಗಳ ಹಿಂದೆ ಚೆನ್ನೈನ ಇವಿಪಿ ಫಿಲ್ಮ್ ಸಿಟಿಯಲ್ಲಿ 'ಇಂಡಿಯನ್'-2 ಚಿತ್ರೀಕರಣ ನಡೆಯುತ್ತಿತ್ತು. ರಾತ್ರಿ ಶೂಟಿಂಗ್ ವೇಳೆ ಲೈಟಿಂಗ್ ವ್ಯವಸ್ಥೆ ಮಾಡುವಾಗ 150 ಅಡಿ ಎತ್ತರದಿಂದ ಕ್ರೇನ್ ಮುರಿದು ಚಿತ್ರತಂಡ ಉಳಿದುಕೊಂಡಿದ್ದ ಟೆಂಟ್ ಮೇಲೆ ಬಿದ್ದಿತ್ತು. ಈ ದುರಂತದಲ್ಲಿ ನಿರ್ದೇಶಕ ಶಂಕರ್ ಆಪ್ತ ಸಹಾಯಕ ಮಧು (29), ಸಹಾಯಕ ನಿರ್ದೇಶಕ ಸಾಯಿಕೃಷ್ಣ (34), ಮತ್ತೊಬ್ಬ ಸಹಾಯಕ ಚಂದ್ರನ್ ಸ್ಥಳದಲ್ಲೇ ಮೃತಟ್ಟಿದ್ದರು. ಅವಘಡದಲ್ಲಿ 10 ಜನ ಸಿನಿಮಾ ಕಾರ್ಮಿಕರು ಗಾಯಗೊಂಡಿದ್ದರು. ಹಾಗಾಗಿ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್‌ ಬಿದ್ದಿತ್ತು.

  ಶಂಕರ್ ವಿರುದ್ಧ ಹೈದರಾಬಾದ್‌ ಕೋರ್ಟ್‌ ಮೊರೆ ಹೋದ ಲೈಕಾ ಪ್ರೊಡಕ್ಷನ್ಶಂಕರ್ ವಿರುದ್ಧ ಹೈದರಾಬಾದ್‌ ಕೋರ್ಟ್‌ ಮೊರೆ ಹೋದ ಲೈಕಾ ಪ್ರೊಡಕ್ಷನ್

   ಭ್ರಷ್ಟಾಚಾರದ ವಿರುದ್ಧ 'ಇಂಡಿಯನ್' ಯುದ್ಧ

  ಭ್ರಷ್ಟಾಚಾರದ ವಿರುದ್ಧ 'ಇಂಡಿಯನ್' ಯುದ್ಧ

  1996ರಲ್ಲಿ ತೆರೆಕಂಡಿದ್ದ 'ಇಂಡಿಯನ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಚಿತ್ರದಲ್ಲಿ ದೇಶದಲ್ಲಿರುವ ಭ್ರಷ್ಟಾಚಾರದ ಬಗ್ಗೆ ಚರ್ಚಿಸಲಾಗಿತ್ತು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶದ ಸೈನಿಕನಾಗಿ ಹೋರಾಡಿದ ಸೇನಾಪತಿ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆ ಈ ಚಿತ್ರದಲ್ಲಿತ್ತು. ಸ್ವಂತ ಮಗನೇ ತಪ್ಪು ಮಾಡಿದ್ದಾನೆ ಎಂದು ತಿಳಿದು ಆತನನ್ನು ಕೊಲ್ಲುವ ಸೇನಾಪತಿಯ ಕಥೆ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಆ ಸಿನಿಮಾ ರಿಲೀಸ್ ಆದ ದಿನದಿಂದಲೂ ಸೀಕ್ವೆಲ್‌ಗಾಗಿ ಅಭಿಮಾನಿಗಳು ಕಾಯುತ್ತಿದ್ದರು. 23 ವರ್ಷಗಳ ನಂತರ ಸಿನಿಮಾ ಕಥೆ ಮುಂದುವರೆಸಲು ನಿರ್ದೇಶಕರು ಮುಂದಾಗಿದ್ದರು.

   ಸೆಪ್ಟೆಂಬರ್‌ನಲ್ಲಿ ಸೆಟ್‌ಗೆ ಕಮಲ್ ಎಂಟ್ರಿ

  ಸೆಪ್ಟೆಂಬರ್‌ನಲ್ಲಿ ಸೆಟ್‌ಗೆ ಕಮಲ್ ಎಂಟ್ರಿ

  ಸದ್ದಿಲ್ಲದೇ ಮತ್ತೆ 'ಇಂಡಿಯನ್'-2 ಸಿನಿಮಾ ಚಿತ್ರೀಕರಣ ಶುರುವಾಗಿದ್ದು, ಕಾಜಲ್ ಅಗರ್‌ವಾಲ್ ಹಾಗೂ ಬಾಬಿ ಸಿಂಹ ಬಣ್ಣ ಹಚ್ಚಿ ಕ್ಯಾಮರಾ ಮುಂದೆ ನಿಂತಿದ್ದಾರೆ. ಕಮಲ್ ಹಾಸನ್ ಸದ್ಯ ಯುಎಸ್ ಪ್ರವಾಸದಲ್ಲಿದ್ದು ಶೀಘ್ರದಲ್ಲೇ ವಾಪಸ್‌ ಆಗಲಿದ್ದಾರೆ. ಸೆಪ್ಟೆಂಬರ್‌ನಲ್ಲಿ ಮತ್ತೆ ಸೇನಾಪತಿ ಅವತಾರದಲ್ಲಿ ಬಣ್ಣ ಹಚ್ಚಲಿದ್ದಾರೆ. ಕೆಲ ದಿನಗಳ ಹಿಂದೆ ಕಮಲ್ 'ವಿಕ್ರಂ' ಸಿನಿಮಾ ಮೂಲಕ ಭರ್ಜರಿ ಕಂಬ್ಯಾಕ್ ಮಾಡಿದ್ದರು. ಹಾಗಾಗಿ 'ಇಂಡಿಯನ್'-2 ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ.

   ಅದ್ಭುತ ತಂತ್ರಜ್ಞರ ಕೈಚಳಕದಲ್ಲಿ 'ಇಂಡಿಯನ್'-2

  ಅದ್ಭುತ ತಂತ್ರಜ್ಞರ ಕೈಚಳಕದಲ್ಲಿ 'ಇಂಡಿಯನ್'-2

  ಲೈಕಾ ಪ್ರೊಡಕ್ಷನ್ಸ್ ಹಾಗೂ ರೆಡ್ ಗೈಂಟ್ ಮೂವೀಸ್‌ ಸಂಸ್ಥೆಗಳು ಜಂಟಿಯಾಗಿ ಈ ಬಹುಕೋಟಿ ವೆಚ್ಚದ ಸಿನಿಮಾ ನಿರ್ಮಾಣ ಮಾಡುತ್ತಿವೆ. ರತ್ನವೇಲು, ರವಿವರ್ಮನ್ ಸಿನಿಮಾಟೋಗ್ರಫಿ, ಅನಿರುದ್ಧ್ ರವಿಚಂದರ್ ಮ್ಯೂಸಿಕ್‌ 'ಇಂಡಿಯನ್'-2 ಚಿತ್ರಕ್ಕಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಹಳ ಅದ್ಧೂರಿಯಾಗಿ ಈ ಸಿನಿಮಾ ಮೂಡಿ ಬರ್ತಿದೆ. ಮುಂದಿನ ವರ್ಷ ಸಮ್ಮರ್‌ನಲ್ಲಿ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೀತಿದೆ.

  English summary
  Shankar Resumes Shoot of Kamal Haasan starrer Indian 2 Movie After 2 Years. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X