For Quick Alerts
  ALLOW NOTIFICATIONS  
  For Daily Alerts

  ಕಾಲಿವುಡ್‌ಗೆ ಕಾಲಿಟ್ಟ ಶಿವ ರಾಜ್‌ಕುಮಾರ್; ಚಿತ್ರೀಕರಣದ ಫೋಟೊ ರಿವೀಲ್

  |

  ಸೆಂಚುರಿ ಸ್ಟಾರ್, ಸ್ಯಾಂಡಲ್‌ವುಡ್ ಕಿಂಗ್ ಎಂದೇ ಖ್ಯಾತಿಯನ್ನು ಪಡೆದಿರುವ ಶಿವ ರಾಜ್‌ಕುಮಾರ್ ಈಗ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಈ ಹಿಂದೆಯಿಂದಲೂ ಹರಿದಾಡುತ್ತಿದ್ದ ಸುದ್ದಿ ಈ ಮೂಲಕ ನಿಜವಾಗಿದೆ. ಹೌದು, ಶಿವ ರಾಜ್‌ಕುಮಾರ್ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಜೈಲರ್ ಸಿನಿಮಾದಲ್ಲಿ ನಟಿಸುತ್ತಿರುವ ಸುದ್ದಿ ಈಗ ನಿಜವಾಗಿದೆ.

  ಚಿತ್ರದ ನಿರ್ಮಾಣ ಸಂಸ್ಥೆಯಾದ ಸನ್ ಪಿಕ್ಚರ್ಸ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಚಿತ್ರೀಕರಣದಲ್ಲಿ ಶಿವ ರಾಜ್‌ಕುಮಾರ್ ಭಾಗವಹಿಸಿರುವುದನ್ನು ಹಂಚಿಕೊಂಡಿದೆ. ನಟ ಶಿವ ರಾಜ್‌ಕುಮಾರ್ ಸಹ ತಾನು ಜೈಲರ್ ಚಿತ್ರೀಕರಣದಲ್ಲಿ ಭಾಗವಹಿಸಿರುವ ವಿಷಯವನ್ನು ಫೋಟೊ ಹಂಚಿಕೊಳ್ಳುವ ಮೂಲಕ ಬಹಿರಂಗಪಡಿಸಿದ್ದಾರೆ.

  ವಿನಯ್ ರಾಜ್‌ಕುಮಾರ್ 'ಪೆಪೆ' ಚಿತ್ರೀಕರಣದ ಕೆಲಸ ಎಲ್ಲಿಗೆ ಬಂತು? ವಿನಯ್ ರಾಜ್‌ಕುಮಾರ್ 'ಪೆಪೆ' ಚಿತ್ರೀಕರಣದ ಕೆಲಸ ಎಲ್ಲಿಗೆ ಬಂತು?

  ಈ ಮೂಲಕ ತಮ್ಮ ಸಿನಿ ವೃತ್ತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ತಮಿಳು ಚಿತ್ರವೊಂದರಲ್ಲಿ ನಟ ಶಿವ ರಾಜ್‌ಕುಮಾರ್ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಜನಿಕಾಂತ್ ನಾಯಕನಾಗಿ ಅಭಿನಯಿಸುತ್ತಿದ್ದು ಈ ಹಿಂದೆ ಡಾಕ್ಟರ್ ಹಾಗೂ ಬೀಸ್ಟ್ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ನಿರ್ದೇಶಕ ನೆಲ್ಸನ್ ದಿಲೀಪ್ ಕುಮಾರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ ಹಾಗೂ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ.

  ಈ ಹಿಂದೆ ಗೌತಮಿ ಪುತ್ರ ಶಾತಕರ್ಣಿ ಎಂಬ ತೆಲುಗು ಚಿತ್ರದಲ್ಲಿ ಕಾಳಹಸ್ತೇಶ್ವರ ಪಾತ್ರವನ್ನು ಮಾಡಿ ಟಾಲಿವುಡ್ ಪ್ರವೇಶಿಸಿದ್ದ ಶಿವ ರಾಜ್‌ಕುಮಾರ್ ಈಗ ಜೈಲರ್ ಮೂಲಕ ಕಾಲಿವುಡ್‌ಗೂ ಪ್ರವೇಶಿಸಿದ್ದಾರೆ.

  English summary
  Shiva Rajkumar's pic from Jailer shooting spot goes viral. Read on
  Thursday, November 17, 2022, 19:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X