For Quick Alerts
  ALLOW NOTIFICATIONS  
  For Daily Alerts

  ದೇಣಿಗೆ ನೀಡಿ, ನನ್ನ ಜೊತೆ ಡ್ಯಾನ್ಸ್ ಮಾಡಿ: ನಟಿ ಶ್ರೀಯಾ ಸರಣ್ ಹೊಸ ಆಫರ್

  |

  ಖ್ಯಾತ ನಟಿ ಶ್ರೀಯಾ ಶರಣ್ ಯಾರಿಗೆ ತಾನೆ ಗೊತ್ತಿಲ್ಲ. ದಕ್ಷಿಣ ಭಾರತೀಯ ಚಿತ್ರಗಳ ಜೊತೆಗೆ ಬಾಲಿವುಡ್ ನಲ್ಲಿಯೂ ಮಿಂಚಿರುವ ಶ್ರೀಯಾ ಸದ್ಯ ಮದುವೆ ನಂತರ ಹೆಚ್ಚಾಗಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಒಂದು ಸಮಯದ ಬಹುಬೇಡಿಕೆಯ ನಟಿ ಶ್ರೀಯಾ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿದ್ದಾರೆ.

  ಬುದ್ಧ ಪೂರ್ಣಿಮೆ ದಿನ ನಟ ಚೇತನ್ ಎಂತಾ ಸುಂದರ ಮಾತನ್ನು ಹೇಳ್ತಾರೆ ಕೇಳಿ | Chethan | Buddha Poornima

  ಸಾಮಾಜಿಕ ಜಾಲತಣದಲ್ಲಿ ಆಕ್ವೀವ್ ಆಗಿರುವ ನಟಿ ಶ್ರೀಯಾ ಅಭಿಮಾನಿಗಳಿಗೆ ಸಖತ್ ಆಫರ್ ಒಂದನ್ನು ನೀಡಿದ್ದಾರೆ. ಶ್ರೀಯಾ ಜೊತೆ ಡ್ಯಾನ್ಸ್ ಮಾಡುವ ಅವಕಾಶ ನಿಮ್ಮನ್ನು ಹುಡುಕಿಕೊಂಡು ಬಂದಿದೆ. ಆರೆ ಶ್ರೀಯಾ ಜೊತೆ ಹೆಜ್ಜೆ ಹಾಕಬೇಕು ಅಂದರೆ ಒಂದು ಕಂಡೀಷನ್ ಇದೆ. ಇದನ್ನು ನೀವು ಫಾಲೋ ಮಾಡಬೇಕು. ಅದೇನು ಅಂತೀರಾ ಮುಂದೆ ಓದಿ...

  ಕೊರೊನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ ಶ್ರೀಯಾ

  ಕೊರೊನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ ಶ್ರೀಯಾ

  ಕೊರೊನಾ ಮಹಾಮಾರಿ ಇಂದು ವಿಶ್ವವನ್ನೆ ನಡುಗಿಸುತ್ತಿದೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಸಾವಿರಾರು ಮಂದಿಯನ್ನು ಬಲಿಪಡೆಯುತ್ತಿದೆ. ಭಾರತದಲ್ಲಿ ಲಾಕ್ ಡೌನ್ ನಿಂದ ಅನೇಕರು ಒಂದೊತ್ತಿನ ಊಟಕ್ಕೂ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಅನೇಕರು ತಮ್ಮದೆ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಈಗ ನಟಿ ಶ್ರೀಯಾ ಶರಣ್ ಸಹ ಬಡವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.

  ಎನ್ ಜಿ ಒ ಜೊತೆ ಕೈ ಜೋಡಿಸಿದ ನಟಿ

  ಎನ್ ಜಿ ಒ ಜೊತೆ ಕೈ ಜೋಡಿಸಿದ ನಟಿ

  ನಟಿ ಶ್ರೀಯಾ ಎನ್ ಜಿ ಒ ಒಂದರ ಜೊತೆ ಕೈಜೋಡಿಸಿದ್ದಾರೆ. ಚೆನ್ನೈನ ಕೈಂಡ್ನೆಸ್ ಫೌಂಡೇಶನ್ ಮತ್ತು ಆಂಡ್ ಚೆನ್ನೈ ಟಾಸ್ಕ್ ಫೋರ್ಸ್ ಅನ್ನೊ ಎನ್ ಜಿ ಒ ಜೊತೆ ಸೇರಿ ಕೊರೊನಾ ರಿಲೀಫ್ ಫಂಡ್ ಗಾಗಿ ದೇಣಿಗೆ ಸಂಗ್ರಹ ಮಾಡಲು ಮುಂದಾಗಿದ್ದಾರೆ.

  ದಾನ ಮಾಡಿ ಡ್ಯಾನ್ಸ್ ಮಾಡಿ

  ದಾನ ಮಾಡಿ ಡ್ಯಾನ್ಸ್ ಮಾಡಿ

  ಕೊರೊನಾ ವಿರುದ್ಧ ಹೋರಾಟಕ್ಕೆ 200 ರೂಪಾಯಿ ದಾನ ನೀಡಿದರೆ, ಅದರಲ್ಲಿ ಇಬ್ಬರು ಅದೃಷ್ಟಶಾಲಿ ಜೊತೆ ಶ್ರೀಯಾ ವಿಡಿಯೋ ಕಾನ್ ನಲ್ಲಿ ಮಾತನಾಡುತ್ತಾರಂತೆ. ಜೊತೆಗೆ ಆನ್ ಲೈನ್ ನಲ್ಲಿಯೆ ಡ್ಯಾನ್ಸ್ ಮಾಡುತ್ತಾರಂತೆ. ಈ ಬಗ್ಗೆ ನಟಿ ಶ್ರೀಯಾ ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಡ್ಯಾನ್ಸ್ ಮೂಲಕ ಬಹಿರಂಗ ಪಡಿಸಿದ್ದಾರೆ.

  ದೀರ್ಘವಾಗಿ ಬರೆದುಕೊಂಡಿರುವ ಶ್ರೀಯಾ

  ದೀರ್ಘವಾಗಿ ಬರೆದುಕೊಂಡಿರುವ ಶ್ರೀಯಾ

  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಶ್ರೀಯಾ "ನಾನು ಚೆನ್ನೈನ ಸಂಸ್ಥೆಯ ಜೊತೆ ಕೊರೊನಾ ವಿರುದ್ಧ ಹೋರಾಡಲು ಕೈ ಜೋಡಿಸಿದ್ದೇನೆ. ಈ ಸಂಸ್ಥೆ ಲಾಕ್ ಡೌನ್ ಸಮಯದಲ್ಲಿ ಕಾರ್ಮಿಕರಿಗೆ, ಅನಾಥರಿಗೆ, ಅಂಗವಿಕಲಿಗೆ ಸಹಾಯ ಮಾಡುತ್ತಿದೆ. ಹೀಗಾಗಿ ಈ ಸಂಸ್ಥೆಗೆ ನೀವು ಕೂಡ 200 ರೂಪಾಯಿ ದೇಣಿಗೆ ನೀಡಿ. ಅದೃಷ್ಟಶಾಲಿ ವಿಜೇತರಿಗೆ ನನ್ನ ಜೊತೆ ಡ್ಯಾನ್ಸ್ ಮಾಡಲು ಮತ್ತು ಯೋಗ ಮಾಡುವ ಅವಕಾಶ ಪಡೆಯಿರಿ. ನೀವು ಮಾಡಬೇಕಾಗಿರುವುದು 200 ರೂಪಾಯಿ ನೀಡಿದ ರಶೀದಿಯನ್ನು give@thekindnessproject.inಗೆ ಇಮೇಲೆ ಮಾಡಿ. ಸ್ಪರ್ಧೆ ಶನಿವಾರದವರೆಗೂ ಇರುತ್ತೆ. ಭಾನುವಾರ ವಿನ್ನರ್ ಯಾರು ಎಂದು ಘೋಷಣೆ ಮಾಡಿ ಸಂಪರ್ಕ ಮಾಡುತ್ತೇನೆ" ಎಂದು ಬರೆದುಕೊಂಡಿದ್ದಾರೆ.

  English summary
  Actress Shriya Saran urges fans to donate money to covid relief Fund.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X